ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಕಾವೇರಿ ಅಂತ್ಯ ಹತ್ತಿರವಾಗ್ತಿದೆ. ಮಹಾಲಕ್ಷ್ಮಿ, ಕೀರ್ತಿ ಪರ ನಿಂತಿದ್ದಾಳೆ. ಆದ್ರೆ ತನ್ನ ಹತ್ಯೆಗೆ ಯತ್ನಿಸಿದ್ದು ಯಾರು ಎಂಬುದನ್ನು ಬಾಯಿಂದ ಹೇಳದೆ ಕೈ ತೋರಿಸಿದ್ದಾಳೆ. ಹಾಗಾಗಿ ಅಪರಾಧಿ ಯಾರು ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.
ಕಲರ್ಸ್ ಕನ್ನಡ ಲಕ್ಷ್ಮಿ ಬಾರಮ್ಮ ಸೀರಿಯಲ್ (Colors Kannada Lakshmi Baramma Serial) ನಲ್ಲಿ ಮಹಾಲಕ್ಷ್ಮಿ ಬದುಕಿದ್ದಾಳೆ ಅನ್ನೋದು ವೀಕ್ಷಕರಿಗೆ ನೆಮ್ಮದಿ ತಂದಿದೆ. ಕೋರ್ಟ್ (Court) ಗೆ ಮಹಾಲಕ್ಷ್ಮಿ ಬರ್ತಿದ್ದಂತೆ ಕಾವೇರಿ ಶಾಕ್ ಆದ್ರೆ ವೈಷ್ಣವ್ (Vaishnav) ಖುಷಿಯಾಗಿದ್ದಾನೆ. ತನ್ನ ಹತ್ಯೆಗೆ ಯಾರು ಪ್ರಯತ್ನಿಸಿದ್ದು ಎಂಬ ಪ್ರಶ್ನೆಗೆ ಲಕ್ಷ್ಮಿ ಉತ್ತರ ನೀಡ್ತಿದ್ದಾಳೆ. ಮಹಾಲಕ್ಷ್ಮಿ ರಾವಣನ ಪ್ರತಿಕೃತಿಯೊಳಗೆ ಹೋಗುವಂತೆ ಮಾಡಿ, ಪಟಾಕಿ ಡೀಲರ್ ಬದಲಿಸಿ, ಕೀರ್ತಿ, ಮಹಾಲಕ್ಷ್ಮಿ ಹತ್ಯೆಗೆ ಯತ್ನಿಸಿದ್ದಳು ಎಂದು ಕಾವೇರಿ ಪರ ಲಾಯರ್ ವಾದ ಮಾಡ್ತಿದ್ದಾರೆ. ಕಾವೇರಿ ಹಾಗೂ ಲಾಯರ್ ಹೇಳಿದ್ದನ್ನು ವೈಷ್ಣವ್ ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿದ್ದ. ಹೌದು, ತನ್ನ ಪತ್ನಿಯನ್ನು ಕೀರ್ತಿ ಹತ್ಯೆ ಮಾಡಿದ್ದಾಳೆ ಎಂದು ನಂಬ್ತಿದ್ದ ಸಮಯದಲ್ಲೇ ಮಹಾಲಕ್ಷ್ಮಿ ಎಂಟ್ರಿಯಾಗಿದೆ. ಈಗ ಮಹಾಲಕ್ಷ್ಮಿ ಸರದಿ. ಕಟಕಟೆಗೆ ಬಂದಿರುವ ಮಹಾಲಕ್ಷ್ಮಿ ಏನು ಉತ್ತರ ನೀಡ್ತಾಳೆ ಎಂಬ ಕಾತುರದಲ್ಲಿ ವೈಷ್ಣವ್ ಇದ್ದಾನೆ. ಮಹಾಲಕ್ಷ್ಮಿ ನೋಡ್ತಿದ್ದಂತೆ ಅರ್ಧ ಸತ್ತಿರುವ ಕಾವೇರಿ, ಮಹಾಲಕ್ಷ್ಮಿ ಕೈ ತೋರಿಸ್ತಿದ್ದಂತೆ ಸಂಪೂರ್ಣ ಕುಸಿದಿದ್ದಾಳೆ.
ಕಲರ್ಸ್ ಕನ್ನಡ ತನ್ನ ಪ್ರೋಮೋ (Promo) ಬಿಡುಗಡೆ ಮಾಡಿದೆ. ಅದ್ರಲ್ಲಿ ನಿಮ್ಮ ಹತ್ಯೆಗೆ ಯತ್ನ ನಡೆದಿದ್ದು ಸತ್ಯವಾ ಎಂದು ಜಡ್ಜ್ ಕೇಳುತ್ತಿದ್ದಾರೆ. ಅದಕ್ಕೆ ಉತ್ತರಿಸುವ ಮಹಾಲಕ್ಷ್ಮಿ, ಹೌದು, ನನ್ನ ಹತ್ಯೆಗೆ ಯತ್ನ ನಡೆದಿದೆ. ಆದ್ರೆ ಅದನ್ನು ಮಾಡಿದ್ದು ಕೀರ್ತಿ ಅಲ್ಲ ಎನ್ನುತ್ತಾಳೆ. ಮತ್ತ್ಯಾರು ಹೇಳಿ ಬೇಗ ಎಂದು ವೈಷ್ಣವ್ ಟೆನ್ಷನ್ ನಲ್ಲಿ ಪ್ರಶ್ನೆ ಮಾಡ್ತಿದ್ದಾನೆ. ಇದಕ್ಕೆ ಉತ್ತರ ನೀಡದ ಮಹಾಲಕ್ಷ್ಮಿ ಕೈ ತೋರಿಸಿದ್ದಾಳೆ. ಮಹಾಲಕ್ಷ್ಮಿ ಕಾವೇರಿಗೆ ಕೈ ತೋರಿಸಿದ್ದಾಳೆ ಎಂಬುದು ಇಲ್ಲಿ ಸ್ಪಷ್ಟವಾಗಿಲ್ಲ. ಒಂದಾದ್ಮೇಲೆ ಒಂದು ಟ್ವಿಸ್ಟ್ ಸೀರಿಯಲ್ ಗೆ ಸಿಗ್ತಿರುವ ಕಾರಣ, ಮಹಾಲಕ್ಷ್ಮಿ ಮತ್ತೇನು ಹೊಸ ಆಟ ಶುರು ಮಾಡಿದ್ದಾಳೆ ಎಂಬುದನ್ನು ಕಾದು ನೋಡ್ಬೇಕು.
ಯುಐ ಎಷ್ಟು ಅರ್ಥ ಆಗುತ್ತೆ ಅನ್ನೋ ಕುತೂಹಲ ಇದೆ: ಚಿತ್ರದ ಸಸ್ಪೆನ್ಸ್ ಕಾಯ್ದಿರಿಸಿದ ಉಪ್ಪಿ
ಒಂದ್ವೇಳೆ ಕಾವೇರಿಯನ್ನೇ ಮಹಾಲಕ್ಷ್ಮಿ ತೋರಿಸಿದ್ದರೆ ಇಲ್ಲಿಗೆ ಕಾವೇರಿ ಆಟ ಮುಗಿಯುತ್ತೆ. ಇನ್ಸ್ಟಾ ಪೋಸ್ಟ್ ಗೆ ವೀಕ್ಷಕರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಕಾವೇರಿ ಜೈಲು ಸೇರಿದ್ರೆ ಸೀರಿಯಲ್ ಮುಗಿಯುತ್ತೆ. ಹೊಸ ಸೀರಿಯಲ್ ಗಾಗಿ ಲಕ್ಷ್ಮಿ ಬಾರಮ್ಮ ಮುಗಿಸ್ತಿದ್ದಾರೆ ಎಂದು ವೀಕ್ಷಕರು ಮಾತನಾಡಿಕೊಳ್ತಿದ್ದಾರೆ. ಬಹುತೇಕ ವೀಕ್ಷಕರಿಗೆ ವೈಷ್ಣವ್ ವರ್ತನೆ ಇಷ್ಟವಾಗಿಲ್ಲ. ಇಷ್ಟಾದ್ರೂ ವೈಷ್ಣವ್ ಅಮ್ಮನನ್ನು ಮೂರ್ಖನಂತೆ ನಂಬ್ತಿದ್ದಾನೆ ಎಂಬುದೇ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. ವೈಷ್ಣವ್ ಮೆಮೊರಿ ಕಾರ್ಡ್ ಕಳೆದಿದೆ. ಒಂದು ಸಲ ಕೀರ್ತಿ ಪರ, ಇನ್ನೊಂದು ಸಲ ಅಮ್ಮನ ಪರ ನಿಂತ ವೈಷ್ಣವ್, ಈಗ ಮಹಾಲಕ್ಷ್ಮಿ ಪರ ನಿಲ್ತಾನಾ ನೋಡ್ಬೇಕು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ವೈಷ್ಣವ್ ಗೆ ಸ್ವಂತ ಬುದ್ದಿ ಇಲ್ಲ, ಹಿತ್ತಾಲೆ ಕಿವಿಯಂತೆ ಮಗನನ್ನು ಬೆಳೆಸಿದ್ದಾಳೆ ಕಾವೇರಿ ಅಂತ ವೈಷ್ಣವ್ ತರಾಟೆಗೆ ತೆಗೆದುಕೊಂಡಿದ್ದಾರೆ ವೀಕ್ಷಕರು.
undefined
ಸಿಲ್ಕ್ ಸ್ಮಿತಾ ಬಯೋಪಿಕ್: ಮಾದಕ ಲೋಕದ ರಾಣಿ ಮತ್ತೆ ಬಂದ್ರು!
ಲಕ್ಷ್ಮಿ ಪಾತ್ರಧಾರಿ ಭೂಮಿಗೆ ಮದ್ರಾಸ್ ಐ ಆಗಿದೆ. ಬರಿಗಣ್ಣಿನಲ್ಲಿ ನೋಡೋದು ಕಷ್ಟ. ಹಾಗಾಗಿ ಅವರು ಗ್ಲಾಸ್ ಹಾಕಿದ್ದಾರೆ. ಇದನ್ನೇ ನಿರ್ದೇಶಕರು ಹೊಸ ಸ್ಟೈಲ್ ನಲ್ಲಿ ತೋರಿಸಿದ್ದಾರೆ. ಅದನ್ನು ವೀಕ್ಷಕರು ತಪ್ಪಾಗಿ ತಿಳಿದುಕೊಳ್ತಿದ್ದಾರೆ ಅಂತ ವೀಕ್ಷಕರೊಬ್ಬರು ಬರೆದಿದ್ದಾರೆ. ಕಾವೇರಿಗೆ ಶಿಕ್ಷೆ ಆಗ್ಬೇಕು ಅಂದ್ರೆ ಕೋರ್ಟ್ ಗೆ ಸಾಕ್ಷ್ಯ ಬೇಕು. ಕೀರ್ತಿಯನ್ನು ಕಾವೇರಿ ತಳ್ಳಿದ ವಿಡಿಯೋ ಮಹಾಲಕ್ಷ್ಮಿ ಬಳಿ ಇರಬೇಕು. ಹಾಗಾಗಿಯೇ ಆಕೆ ಧೈರ್ಯವಾಗಿ ಎಲ್ಲವನ್ನೂ ಹೇಳುತ್ತಿದ್ದಾಳೆ ಅಂತ ಒಬ್ಬರು ಹೇಳಿದ್ರೆ, ಕಾವೇರಿ ಕಥೆ ಮುಗಿಸಿ, ಕೀರ್ತಿಗೆ ಮತ್ತೆ ನೆನಪಿನ ಶಕ್ತಿ ತರಿಸುವ ಕೆಲಸಕ್ಕೆ ಮಹಾಲಕ್ಷ್ಮಿ ಕೈ ಹಾಕ್ತಾಳೆ, ಈ ಸೀರಿಯಲ್ ಸದ್ಯಕ್ಕೆ ಮುಗಿಯೋದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.