ಬಿಗ್‌ಬಾಸ್‌ ಕನ್ನಡ 11: ಗೌತಮಿ ವಿರುದ್ಧ ಮನೆಯಲ್ಲಿ ಆರೋಪಗಳ ಸುರಿಮಳೆ

By Gowthami K  |  First Published Dec 3, 2024, 11:58 PM IST

ಬಿಗ್‌ಬಾಸ್‌ ಕನ್ನಡ 11ರ 65ನೇ ದಿನದಂದು ಗೌತಮಿ ವಿರುದ್ಧ ಮನೆಯ ಸದಸ್ಯರು ಆರೋಪಗಳ ಸುರಿಮಳೆಗೈದಿದ್ದಾರೆ. ನೆಗೆಟಿವಿಟಿ ಹರಡುತ್ತಾರೆ, ಉಗ್ರಂ ಮಂಜು ಜೊತೆಗೆ ಮಾತ್ರ ಇರುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಮಂಜು ಇಲ್ಲದೆ ಗೌತಮಿ ಇಲ್ಲಿಯವರೆಗೆ ಬರಲು ಸಾಧ್ಯವಿಲ್ಲ ಎಂದು ಹನುಮಂತ ಹೇಳಿದ್ದಾರೆ.


ಬಿಗ್‌ಬಾಸ್‌ ಕನ್ನಡ 11 ಬರೋಬ್ಬರಿ 65ನೇ ದಿನಕ್ಕೆ ಕಾಲಿಟ್ಟಿದೆ. ಧನ್‌ರಾಜ್‌ 10ನೇ ವಾರ ಮನೆಯ ಕ್ಯಾಪ್ಟನ್‌ ಆಗಿದ್ದು, ಮನೆಯಲ್ಲಿ ಎರಡು ಟೀಂ ಮಾಡಿ ಮಸ್ತ್ ಮಜಾ ಟಿವಿ ಮತ್ತು ಧೂಳ್ ಧಮಕಾ ಟಿವಿ ಎಂದು ಹೆಸರಿಟ್ಟಿದ್ದಾರೆ.

 ಎರಡೂ ವಾಹಿನಿಗಳಿಗೆ ಈ ವಾರದ ಮೂರನೇ ಟಾಸ್ಕ್‌ ಯೋಗ್ಯತೆಗೆ ಸವಾಲ್‌  ಅನ್ನು ಬಿಗ್ಬಾಸ್‌ ನೀಡಿದ್ದರು. ಇದರಲ್ಲಿ ಯೋಗ್ಯರಲ್ಲದೆ ಕಳಪೆ ಸದಸ್ಯನನ್ನು ಆಯ್ಕೆ ಮಾಡಿ ಸಮರ್ಥಕನೋರ್ವ ಕಳಪೆ ಎಂದು ವಿರೋಧ ತಂಡ ಆಯ್ಕೆ ಮಾಡಿದ ಸದಸ್ಯನನ್ನು ಸಮರ್ಥಿಸಿಕೊಳ್ಳಬೇಕು.

Latest Videos

undefined

ಬಿಎಚ್‌ಇಎಲ್‌ನಲ್ಲಿ 84 ಸಾವಿರ ರೂ. ವರೆಗೆ ಸಂಬಳದ ಉದ್ಯೋಗ! ಈಗಲೇ ಅರ್ಜಿ ಹಾಕಿ!

ಸುರೇಶ್ ತಂಡದಿಂದ ಗೌತಮಿ ಅವರನ್ನು ಕಳಪೆ ಸದಸ್ಯ  ಎಂದು ಧನ‌ರಾಜ್ ಆಯ್ಕೆ ಮಾಡಿದರು. ವಿರುದ್ಧ ತಂಡದಿಂದ ಚೈತ್ರಾ ಅವರು ಕಳಪೆ ಎಂದು ಸುರೇಶ್ ಆರಿಸಿದರು.ಗೌತಮಿ ಅವರು ಸಮರ್ಥ ಎಂದು ವಾದಿಸಲು ಮಂಜಣ್ಣ, ಚೈತ್ರಾ ಅವರು ಸಮರ್ಥ ಎಂದು ವಾದಿಸಲು ಮೋಕ್ಷಿತಾ ಬಂದರು. ಉಸ್ತುವಾರಿಗಳಾಗಿ ತ್ರಿವಿಕ್ರಮ್ ಮತ್ತು ರಜತ್‌ ಅವರಿದ್ದರು.

65 ದಿನದ ಸಂಚಿಕೆಯಲ್ಲಿ ಮನೆಯಲ್ಲಿ ಇರಲು ಯಾರಿಗೆ ಅರ್ಹತೆ ಇಲ್ಲ ಎಂದು ವಾದ ನಡೆದಾಗ  ಶಿಶಿರ್, ಹನುಮಂತು ಮತ್ತು ಮೋಕ್ಷಿತಾ ಅವರು ಗೌತಮಿ  ಅವರನ್ನು ಟಾರ್ಗೆಟ್‌ ಮಾಡಿ ಮಾತನಾಡಿದ್ದಾರೆ. ಪಾಸಿಟಿವಿಟಿ ಎಂದು ಹೇಳಿಕೊಂಡು ನೆಗೆಟಿವಿಟಿಯ ಸುತ್ತ ಗೌತಮಿ ಓಡಾಡಿಕೊಂಡಿದ್ದಾರೆ. ಇತ್ತೀಚೆಗೆ ಶುಗರ್​ ಕೋಟೆಡ್​ ಮಾತುಗಳು ಜಾಸ್ತಿ ಎಂದಿದ್ದಾರೆ.

ಭಾರತದಲ್ಲಿ ₹100 ಕೋಟಿ ಸಂಭಾವನೆ ಪಡೆಯುವ 8 ನಟರು, ದಕ್ಷಿಣದವರೆಷ್ಟು ಮಂದಿ?

ಮೋಕ್ಷಿತಾ ಯುವರಾಣಿ ಆದಾಗ ಹೇಳಿದಂತೆ ಕೇಳುವುದಿಲ್ಲ ಎಂದು ಗೌತಮಿ ನಿರಕರಿಸಿದರು. ಆಗ ಯಾಕೆ ಅವರಲ್ಲಿ ಪಾಸಿಟಿವಿಟಿ ಬರಲಿಲ್ಲ.ಟಾಸ್ಕ್‌ ರೀತಿ ನೋಡಲಿಲ್ಲ ಏಕೆ ಎಂದು ಚೈತ್ರಾ ಕುಂದಾಪುರ ಅವರು ಪ್ರಶ್ನಿಸಿದರು. ಗೌತಮಿ ಕೇವಲ ತಪ್ಪನ್ನು ಕಂಡುಹಿಡಿಯುವುದು ಹೊರತು ಅವರ ತಪ್ಪು ಅವರಿಗೆ ಗೊತ್ತಾಗಲ್ಲ ಎಂದು ಮೋಕ್ಷಿತಾ ಪ್ರಶ್ನಿಸಿದರು. ಇನ್ನು ಹನುಮಂತ ಕೂಡ ಪ್ರಶ್ನೆ ಎತ್ತಿ ಮಂಜು ಇಲ್ಲದೆ ಗೌತಮಿ ಇಲ್ಲಿಯವರೆಗೆ ಬರಲ ಸಾಧ್ಯವಾಗುತ್ತಿರಲಿಲ್ಲ ಎಂದರು. ಇದೆಲ್ಲದನ್ನು ಮಂಜು ಸಮರ್ಥಿಸಿಕೊಂಡರು. ಗೆಳತಿಯನ್ನು ಬಿಟ್ಟು ಕೊಡಲಿಲ್ಲ.

ಬಿಗ್ ಬಾಸ್ ಮನೆಯ ಒಳಗೆ  ಪಾಸಿಟಿವ್‌ ಆಗರ್ತಿನಿ ಎಂದಿರುವ  ಗೌತಮಿ ಜಾದವ್ ಅವರ ಬಗ್ಗೆ ಮನೆಯಲ್ಲಿ ನೆಗೆಟಿವಿಟಿ ಆರಂಭವಾಗಿದೆ. ಯಾವಾಗಲೂ ಉಗ್ರಂ ಮಂಜು ಜೊತೆಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ ಆ ಕಾರಣದಿಂದ ಕೆಲವು ಟೀಕೆಗಳಿಗೂ ಗುರಿಯಾಗಿದ್ದಾರೆ. ಗೌತಮಿ ಅವರು ಮಂಜು ಅವರನ್ನು ತನಗೆ ಬೇಕಾದಂತೆ ಆಡಿಸುತ್ತಾರೆ ಎಂಬ ಆರೋಪಗಳು ಇವೆ.

click me!