ಭಾಗ್ಯಲಕ್ಷ್ಮಿ ಸೀರಿಯಲ್‌ನ ಶೂಟಿಂಗ್ ಸೆಟ್‌ನಲ್ಲಿ ಶ್ರೇಷ್ಠಾಳನ್ನು ತಾಂಡವ್ ಎತ್ತಿಕೊಳ್ಳುವಾಗ ಏನಾಯ್ತು? ಮೇಕಿಂಗ್ ವಿಡಿಯೋ ಶೇರ್ ಮಾಡಿದ್ದಾರೆ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್.
ಶೂಟಿಂಗ್ ಸಮಯದಲ್ಲಿ ಏನೇನೋ ಅನಾಹುತ ಸಂಭವಿಸುವುದು ನಡೆದೇ ಇರುತ್ತದೆ. ಸಿನಿಮಾ ಆಗಲಿ, ಸಿರಿಯಲ್ ಆಗಲೀ, ಶೂಟಿಂಗ್ ಮಾಡುವ ಭರದಲ್ಲಿ ಅನಾಹುತ ಆಗುವುದು ಸಹಜ. ಇದೇ ರೀತಿ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ ಅವರನ್ನು ತಾಂಡವ್ ಪಾತ್ರಧಾರಿ ಸುದರ್ಶನ್ ರಂಗನಾಥ್ ಅವರು ಎತ್ತಿಕೊಳ್ಳಲು ಹೋದಾಗ ಏನಾಯ್ತು ಎನ್ನುವುದನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್ ಅವರು ಶೇರ್ ಮಾಡಿಕೊಂಡಿದ್ದಾರೆ. ಪತ್ನಿ ಭಾಗ್ಯಳಿಗೆ ಸಿಕ್ಕಿರೋ ಟಿಕೆಟ್‌ನಲ್ಲಿ ಲವರ್ ಶ್ರೇಷ್ಠಾಳನ್ನು ಕರೆದುಕೊಂಡು ತಾಂಡವ್ ಜಾಲಿ ಟ್ರಿಪ್‌ಗೆ ಹೋಗಿದ್ದ ದೃಶ್ಯಗಳಿವೆ. ಆ ಸಂದರ್ಭದಲ್ಲಿ ಶ್ರೇಷ್ಠಾ ತನ್ನನ್ನು ಎತ್ತಿಕೊಳ್ಳುವಂತೆ ತಾಂಡವ್‌ಗೆ ಹೇಳುತ್ತಾಳೆ. ಅವಳನ್ನು ಎತ್ತಿಕೊಳ್ಳಲು ತಾಂಡವ್‌ಗೆ ಆಗುವುದಿಲ್ಲ. ಆಗ ಶ್ರೇಷ್ಠಾ ಕೋಪ ಮಾಡಿಕೊಳ್ಳುತ್ತಾಳೆ. ಅವಳ ಕೋಪವನ್ನು ತಣಿಸಲು ತಾಂಡವ್ ಕಷ್ಟಪಟ್ಟು ಎತ್ತಿಕೊಂಡಾಗ ಬಿದ್ದು ಹೋಗುತ್ತಾನೆ. ಇದರ ಶೂಟಿಂಗ್ ಹೇಗೆ ಮಾಡಲಾಗಿತ್ತು ಎನ್ನುವುದನ್ನು ಈ ವಿಡಿಯೋದಲ್ಲಿ ಸುಷ್ಮಾ ತೋರಿಸಿದ್ದಾರೆ.
ಇನ್ನು ಈಸೀರಿಯಲ್ ವಿಷಯಕ್ಕೆ ಬರುವುದಾದರೆ, ಇದಾಗಲೇ ಎಲ್ಲರಿಗೂ ತಿಳಿದಿದ್ದ ತಾಂಡವ್-ಶ್ರೇಷ್ಠಾಳ ಗುಟ್ಟು ಭಾಗ್ಯಳಿಗೂ ತಿಳಿದಿದೆ. ಮದುವೆ ವಾರ್ಷಿಕೋತ್ಸವದಂದೇ ಎಲ್ಲರನ್ನೂ ಕರೆಸಿ ತನಗೆ ತಿಳಿದಿರುವ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಅಲ್ಲಿ ಶ್ರೇಷ್ಠಾಳೂ ಆಗಮಿಸಿದ್ದಳು. ಕೊನೆಗೆ ಹೇಗೋ ಎಲ್ಲವೂ ತಿಳಿದ ಮೇಲೆ ಇನ್ನೇನು? ತಾಂಡವ್, ಭಾಗ್ಯಳಿಗೆ ನಿನ್ನ ಜೊತೆ ಇರಲು ಸಾಧ್ಯವೇ ಇಲ್ಲ ಎಂದಿದ್ದಾನೆ. ಮಾತಿಗೆ ಮಾತುಬೆಳೆದು, ಭಾಗ್ಯ ನಿಮ್ಮ ಸಹಾಯ ಇಲ್ಲದೇ ನಾನು ಹೇಗೆ ಎಲ್ಲರನ್ನೂ ಸಾಕಬಲ್ಲೆ ಎನ್ನುವುದನ್ನು ತೋರಿಸುತ್ತೇನೆ ಎಂದು ಮಕ್ಕಳು, ಅತ್ತೆ-ಮಾವನನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ. ಮುಂದೇನು ಎನ್ನುವ ಕುತೂಹಲ ಸದ್ಯದ್ದು.
ಕಳೆದ ವಾರ ಗಂಡ-ಹೆಂಡ್ತಿ ಗೋವಾಕ್ಕೆ ಹೋಗಿದ್ರು: ನಟಿ ಶೋಭಿತಾ ಸಾವಿಗೆ ನಟ ಹರ್ಷ ಹೇಳಿದ್ದೇನು?
ಇನ್ನು ನಟಿ ಸುಷ್ಮಾ ಕೆ.ರಾವ್ ಕುರಿತು ಹೇಳುವುದಾದರೆ, ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ ಇವರು. ಆಗಾಗ್ಗೆ ಶೂಟಿಂಗ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಶ್ರೇಷ್ಠಾಳ ಮೇಲೆ ಬೂದಿ ಎರೆಚುವ ಶೂಟಿಂಗ್ ಸಮಯದ ಮೇಕಿಂಗ್ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಶ್ರೇಷ್ಠಾ ಪಾತ್ರಧಾರಿ ಕಾವ್ಯ ಗೌಡ ಅವರ ಮೇಲೆ ಬೂದಿ ಎರೆಚಲಾಗಿತ್ತು. ಅದೆಲ್ಲಾ ಕಣ್ಣಿಗೂ ಬಿದ್ದು ಕಾವ್ಯಾ ಪಡಬಾರದ ಕಷ್ಟ ಪಟ್ಟರು. ಅಷ್ಟೇ ಅಲ್ಲದೇ ಡ್ರೆಸ್ ಒಳಗೆ ಎಲ್ಲಾ ಬೂದಿ ಸೇರಿಕೊಂಡು ಪೇಚಿಗೂ ಸಿಲುಕಿದರು. ಒಂದು ದೃಶ್ಯವನ್ನು ಪ್ರೇಕ್ಷಕರ ಮುಂದೆ ತೋರಿಸುವ ಮುನ್ನ ನಟ-ನಟಿಯರು ಪಡುವ ಕಷ್ಟಗಳ ಬಗ್ಗೆ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇದರಲ್ಲಿ ಸುಷ್ಮಾ ಮಾಮೂಲಿನಂತೆ ಜೋಕ್ ಮಾಡುತ್ತಲೇ ಇದ್ದರೂ, ಬೂದಿ ಮೆತ್ತಿಕೊಂಡ ಕಾವ್ಯಾ ಪರದಾಡಿದ್ದರು. ಈಗಲೂ ಕಾವ್ಯಾ ಬಿದ್ದು ನೋವಾಗಿದ್ದರೂ ನಗುತ್ತಿದ್ದಾರೆ.
ಅಂದಹಾಗೆ ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್ ರೋಲ್ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪುಟ್ಟಕ್ಕನ ಮಕ್ಕಳು ಕಂಠಿ ನಿಗೂಢ ಕಣ್ಮರೆ ! ಪೊಲೀಸ್ ಇಲಾಖೆಯಿಂದ ಹೀಗೊಂದು ನೋಟಿಸ್ ಜಾರಿ...