ಸುಳ್ಳು ಹೇಳಿ ಸಿಕ್ಕಾಕೊಂಡ್ರು, ಬಾತ್‌ರೂಮ್‌ನಲ್ಲೇ ವಿಡಿಯೋ ಮಾಡಿದ್ರು; ನಿವೇದಿತಾ ಗೌಡ ಅಂದ್ರೆ ಸುಮ್ನೇನಾ?

Published : Apr 11, 2025, 04:26 PM ISTUpdated : Apr 11, 2025, 04:42 PM IST
ಸುಳ್ಳು ಹೇಳಿ ಸಿಕ್ಕಾಕೊಂಡ್ರು, ಬಾತ್‌ರೂಮ್‌ನಲ್ಲೇ ವಿಡಿಯೋ ಮಾಡಿದ್ರು; ನಿವೇದಿತಾ ಗೌಡ ಅಂದ್ರೆ ಸುಮ್ನೇನಾ?

ಸಾರಾಂಶ

ಬಿಗ್‌ ಬಾಸ್‌ ನಿವೇದಿತಾ ಗೌಡ ಅವರು ಹಠಕ್ಕೆಂದೇ ಬಾತ್‌ರೂಮ್‌ನಲ್ಲೇ ಮತ್ತೆ ವಿಡಿಯೋ ಮಾಡಿದ್ದಾರೆ. ಇದಕ್ಕೂ ಕಾರಣ ಇದೆಯಂತೆ.   

'ಬಿಗ್‌ ಬಾಸ್‌' ಖ್ಯಾತಿಯ ನಿವೇದಿತಾ ಗೌಡ ಅವರು ಬಾತ್‌ರೂಮ್‌ನಲ್ಲೇ ಯಾಕೆ ವಿಡಿಯೋ ಮಾಡ್ತಾರೆ? ಹಾಲ್‌ನಲ್ಲೂ ವಿಡಿಯೋ ಮಾಡಬಹುದು ಅಲ್ವಾ ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದನ್ನೇ ಇಟ್ಕೊಂಡು ನಿವೇದಿತಾ ಮತ್ತೆ ಬಾತ್‌ರೂಮ್‌ನಲ್ಲೇ ವಿಡಿಯೋ ಮಾಡ್ತಿದ್ದಾರೆ. 

ನೆಟ್ಟಿಗರ ಕಾಮೆಂಟ್‌ ಏನು? 
ನಿವೇದಿತಾ ಗೌಡ ಅವರಿಗೆ ನೆಟ್ಟಿಗನೊಬ್ಬ, “ಚಿನ್ನ, ಯಾವಾಗಲೂ ಬಾತ್‌ರೂಮ್‌ನಲ್ಲೇ ಯಾಕೆ ವಿಡಿಯೋ ಮಾಡ್ತೀಯಾ? ಹಾಲ್‌ನಲ್ಲೂ ವಿಡಿಯೋ ಮಾಡು” ಎಂದು ಕಾಮೆಂಟ್‌ ಮಾಡಿದ್ದರು. ಈ ಕಾಮೆಂಟ್‌ ಇಟ್ಕೊಂಡು ನಿವೇದಿತಾ ಗೌಡ ಅವರು “ಚಿನ್ನ ಹಾಲ್‌ನಲ್ಲಿ ಬೆಳಕು ಕಡಿಮೆ” ಎಂದು ಹೇಳಿದ್ದಲ್ಲದೆ, ಮೈಮಾಟ  ತೋರಿಸುವ ವಿಡಿಯೋ ಮಾಡಿದ್ದಾರೆ. 

'ನನ್ನ ಜೀವನದಲ್ಲಿ ಏನೇನೋ ಆಯ್ತು, ಇದು ತಂದೆಗೆ ಕಷ್ಟ ಆಯ್ತು'-ನಿವೇದಿತಾ ಗೌಡ ಮಾತು ಕೇಳಿ ರಜತ್‌ ಕಣ್ಣಲ್ಲೂ ನೀರು...!

ಠಕ್ಕರ್‌ ಕೊಡೋ ಥರ ವಿಡಿಯೋ!
ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ರೀಲ್ಸ್ ಮಾಡಿಯೋ ಅಥವಾ ಬೋಲ್ಡ್‌ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಎಷ್ಟೋ ಪಡ್ಡೆಹುಡುಗರು ಇವರ ಪೋಸ್ಟ್‌ ನೋಡಲು ಕಾಯುತ್ತಿರುತ್ತಾರೆ. ಇನ್ನು ಆ ಪೋಸ್ಟ್‌ಗಳಿಗೆ ಬರುವ ಕಾಮೆಂಟ್‌ಗಳ ಬಗ್ಗೆ ಕೇಳಬೇಕೆ? ನಿವೇದಿತಾ ಗೌಡ ಅವರಿಗೆ ಸಿಕ್ಕಾಪಟ್ಟೆ ನೆಗೆಟಿವ್‌ ಕಾಮೆಂಟ್ಸ್‌ ಬಂದರೂ ಕೂಡ ಅವರು ಅದನ್ನು ನೋಡೋದಿಲ್ಲ ಎಂದು ಹೇಳಿದ್ದರು. ಆದರೆ ಈ ಬಾರಿ ಕಾಮೆಂಟ್‌ ನೋಡಿ ಠಕ್ಕರ್‌ ಕೊಡೋ ಥರ ವಿಡಿಯೋ ಮಾಡಿದ್ದಾರೆ.

ಭಾರತದಲ್ಲೇ ಇಲ್ಲ ಚಂದನ್ ಶೆಟ್ಟಿ, ಎಲ್ಲಿಗೆ ಹೋಗಿದಾರೆ, ಹೋಗಿ ಅಲ್ಲೇನ್ ಮಾಡ್ತಿದಾರೆ?

ಕಾಮೆಂಟ್‌ ನೋಡಲ್ಲ ಅಂತ ಸುಳ್ಳು ಹೇಳಿದ್ರಾ? 
ನಿವೇದಿತಾ ಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ನೆಗೆಟಿವ್ ಕಾಮೆಂಟ್ ಬರೋದುಂಟು. ಈ ಬಗ್ಗೆ ಮಾತನಾಡಿದ್ದ ನಿವೇದಿತಾ ಗೌಡ ಅವರು, “ನಾನು ಸೋಶಿಯಲ್ ಮೀಡಿಯಾದಲ್ಲಿ ನನ್ನ ಪೋಸ್ಟ್‌ಗೆ ಬರುವ ಯಾವುದೇ ಕಾಮೆಂಟ್ ನೋಡೋದಿಲ್ಲ. ಒಮ್ಮೆ ಕಾಮೆಂಟ್ ನೋಡಿದಾಗ ಬೇಸರ ಆಯ್ತು. ವೈಯಕ್ತಿಕ ವಿಷಯಗಳಿಗೆ ಕಾಮೆಂಟ್ ಮಾಡೋದು ಅವರ ಮನಸ್ಥಿತಿ ಹೇಗಿದೆ ಅಂತ ತೋರಿಸುತ್ತದೆ. ನಾನು ಆ ಕಾಮೆಂಟ್‌ಗಳನ್ನು ಅಷ್ಟೊಂದು ಸೀರಿಯಸ್‌ ಆಗಿ ತಗೋಳೋದಿಲ್ಲ. ನನ್ನಿಷ್ಟದ ಪ್ರಕಾರ ನಾನು ಜೀವನ ಮಾಡ್ತೀನಿ, ಯಾರದೋ ಇಷ್ಟಕ್ಕೋಸ್ಕರ ನಾನು ಜೀವನ ಮಾಡಲ್ಲ. ನನ್ನನ್ನು ಕೆಲವರು ದ್ವೇಷಿಸಿದರೆ, ಇನ್ನೂ ಕೆಲವರು ಪ್ರೀತಿಸುತ್ತಾರೆ. ಆದರೆ ಅವರೆಲ್ಲರೂ ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್ ಹಾಕಲ್ಲ, ನೀವು ಅಂದ್ರೆ ನನಗೆ ತುಂಬ ಇಷ್ಟ ಅಂತ ಹೇಳಲ್ಲ. ಆದರೆ ಎಲ್ಲೋ ಭೇಟಿಯಾದಾಗ ನನ್ನ ಜೊತೆ ಒಂದು ಫೋಟೋ ತಗೊಳ್ತಾರೆ, ಖುಷಿಯಿಂದ ಮಾತಾಡ್ತಾರೆ. ಕಾಮೆಂಟ್ ಹಾಕೋರು ಕೆಟ್ಟದನ್ನೇ ಹುಡುಕ್ತಾರೆ, ಕೆಟ್ಟದನ್ನಷ್ಟೇ ಸ್ವೀಕರಿಸುತ್ತಾರೆ. ಅದಕ್ಕೇ ನಾನು ನನ್ನ ಕೆಲಸ ಮಾಡ್ತೀನಿ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದರೂ ಕೂಡ, ಕಾಮೆಂಟ್‌ ನೋಡಲ್ಲ” ಎಂದು ಹೇಳಿದ್ದರು. 

ಸದ್ಯ ʼಬಾಯ್ಸ್‌ v/s ಗರ್ಲ್ಸ್‌ʼ ಶೋನಲ್ಲಿ ನಿವೇದಿತಾ ಗೌಡ ಅವರು ಭಾಗವಹಿಸಿದ್ದಾರೆ. ಈ ಹಿಂದಿನ ಎಪಿಸೋಡ್‌ನಲ್ಲಿ ಅವರು “ನನ್ನ ಜೀವನದಲ್ಲಿ ಕೆಟ್ಟ ಘಟನೆ ನಡೆಯಿತು. ಆಗ ನನ್ನ ತಂದೆ ನನ್ನ ಜೊತೆಗೆ ಇದ್ದರು. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ ಅಂತ ಹೇಳಿದರು. ನನ್ನ ಲೈಫ್‌ ಹೀಗಾಯ್ತು ಅಂತ ಅವರಿಗೆ ಬೇಜಾರು ಆಗಿದೆ. ಅದು ನಿಜಕ್ಕೂ ಅವರಿಗೆ ಕಷ್ಟದ ಹಂತ ಆಗಿತ್ತು” ಎಂದು ನಿವೇದಿತಾ ಹೇಳಿದ್ದರು.

ʼಬಿಗ್‌ ಬಾಸ್ʼ‌ ಶೋನಲ್ಲಿ ಚಂದನ್‌ ಶೆಟ್ಟಿ, ನಿವೇದಿತಾ ಗೌಡ ಭಾಗವಹಿಸಿದ್ದರು. ಇವರಿಬ್ಬರ ನಡುವೆ ಸ್ನೇಹ ಶುರುವಾಗಿ, ಆಮೇಲೆ ಪ್ರೀತಿಗೆ ತಿರುಗಿತ್ತು. ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಿತ್ತು. ಅದಾಗಿ ನಾಲ್ಕು ವರ್ಷದ ಬಳಿಕ ಈ ಜೋಡಿ ಡಿವೋರ್ಸ್‌ ಪಡೆದಿದೆ. ಅಂದಹಾಗೆ ಡಿವೋರ್ಸ್‌ ಬಳಿಕವೂ ಇವರಿಬ್ಬರು ʼಮುದ್ದು ರಾಕ್ಷಸಿʼ ಸಿನಿಮಾ ಕೆಲಸದಲ್ಲಿ ಭಾಗಿಯಾಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ