
ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮನೇ ದಿ ಕಪಿಲ್ ಶರ್ಮಾ ಶೋ (The Kapil Sharma Show). ಬಾಲಿವುಡ್ ಟಾಪ್ ಸೆಲೆಬ್ರಿಟಿಗಳು ತಮ್ಮ ಸಿನಿಮಾ ಪ್ರಚಾರ ಮಾಡಲು ಮೊದಲು ಆಯ್ಕೆ ಮಾಡಿಕೊಳ್ಳುವುದೇ ಈ ಕಾರ್ಯಕ್ರಮವನ್ನು. ಕಪಿಲ್ ಶರ್ಮಾ ಶೋನಲ್ಲಿ ಸಿನಿಮಾ ಬಗ್ಗೆ ಮಾತನಾಡಿದರೆ, ಖಂಡಿತ ವೀಕ್ಷಕರೂ ನೋಡುತ್ತಾರೆ ಎನ್ನುವ ನಂಬಿಕೆ ನಿರ್ಮಾಪಕರಲ್ಲಿದೆ. ಹೀಗಾಗಿ ಕಪಿಲ್ ಶರ್ಮಾ ಶೋ ಅತಿ ಹೆಚ್ಚು ಟಿಆರ್‌ಪಿ (TRP Channel) ಮಾತ್ರವಲ್ಲದೇ ಕೋಟಿಯಲ್ಲಿ ಲಾಭ ಪಡೆಯುತ್ತಿದೆ.
ಈ ವಾರ ಪ್ರಸಾರವಾಗುತ್ತಿರುವ ಎಪಿಸೋಡ್‌ನಲ್ಲಿ ನೀವು ನಿರ್ದೇಶಕ ಸಾಜಿದ್ ನಾಡಿಯಾಡ್ವಾಲಾ ಅವರ ಪತ್ನಿ ವಾರ್ದಾ ನಾಡಿಯಾಡ್ವಾಲಾ, ನಟ ಟೈಗರ್ ಶ್ರಾಫ್ (Tiger Shroff), ಕೃತಿ ಸನೂನ್ (Kriti Sanon) ಮತ್ತು ಆಹಾ ಶೆಟ್ಟಿ ಆಗಮಿಸಲಿದ್ದಾರೆ. ಬಾಲ್ಯದ ಕನಸು ಮತ್ತು ಸಿನಿಮಾಗಳ ಬಗ್ಗೆ ಮಾತನಾಡುವಾಗ ಕಪಿಲ್ 'ಬೆಳೆಯುವ ವಯಸ್ಸಿನಲ್ಲಿ ತುಂಬಾನೇ ವಿಚಿತ್ರ ಕನಸುಗಳು ಬರುತ್ತವೆ. ಆದರಲ್ಲೂ ಮಕ್ಕಳಿದ್ದಾಗ ಏನೇ ನೋಡಿದ್ದರೂ ಅದೇ ಆಗಬೇಕು. ಶೋಲೆ (Sholey) ಸಿನಿಮಾ ನೋಡಿ ನನಗೆ ಡಕಾಯಿತ (Dacoit) ಆಗಬೇಕು ಅನಿಸಿತ್ತು,' ಎಂದಿದ್ದಾರೆ.
ಕಪಿಲ್ ಮತ್ತು ಸಿನಿಮಾ ಸೆಲೆಬ್ರಿಟಿಗಳು ಮಾಡುವ ಪ್ರತಿಯೊಂದೂ ಹಾಸ್ಯಕ್ಕೂ ಮೊದಲು ನಗುವುದು,ಟಾಂಟ್ ಕೊಡುವುದು ಆರ್ಚನಾ ಸಿಂಗ್ (Archana Singh). 'ಯಾರು ಇಲ್ಲ ಅಂತ ಹೇಳಿದ್ದು? ಈಗಲೂ ನೀನು ಡಕಾಯಿತನೇ. ಇಡೀ ಸೋನಿ ವಾಹಿನಿಯನ್ನು ಲೂಟಿ ಮಾಡುತ್ತಿರುವೆ. ದೊಡ್ಡ ಡಕಾಯಿತ ನೀನು,' ಎಂದು ಹೇಳುದ್ದಾರೆ. ತಕ್ಷಣ ಕಪಿಲ್ ' ಓ ನಾನು ಒಬ್ಬನೇ ಲೂಟ್ ಮಾಡುತ್ತಿರುವ ಡಕಾಯಿತನೇ? ನೀವು ಈ ಶೋಗೆ ಊಟ ಮಾಡಲು ಬರುತ್ತಿರುವುದಾ?' ಎಂದು ಕಾಲೆಳೆಯುತ್ತಾರೆ. ಕಪಿಲ್ ಶರ್ಮಾ ಜನಪ್ರಿಯತೆ ಪಡೆದುಕೊಂಡ ಸಮಯದಿಂದಲೂ ಅವರ ಸಂಭಾವನೆ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ವರ್ಷಗಳಿಂದ ಒಂದು ಶೋ ನಡೆಸಿಕೊಂಡು ಕೋಟಿಯಲ್ಲಿ ಸಂಪಾದಿಸಿ ಕೋಟಿಗಟ್ಟಲೆ ಬೆಲೆ ಬಾಳುವ ಮನೆ ಕಟ್ಟಿಸಿರುವ ಏಕೈಕ ಹಿಂದಿ ನಿರೂಪಕ ಕಪಿಲ್ ಶರ್ಮಾ ಎಂದರೆ ತಪ್ಪಾಗೋಲ್ಲ.
ಈ ಹಿಂದೆ ಶಾರ್ಕ್ ಟ್ಯಾಂಕ್ ಭಾರತದ ‘ಶಾರ್ಕ್’ ಅನುಪಮ್ ಮಿತ್ತಲ್ (Anupam Mittal) ಅಮಿತಾಭ್ ಬಚ್ಚನ್ ಮತ್ತು ಕಪಿಲ್ ಶರ್ಮಾ ಹೇಗೆ ಸೋನಿ ವಾಹಿನಿ ಜೊತೆ ಸೇರಿಕೊಂಡು ಹಣ ಸಂಪಾದಿಸುತ್ತಿದ್ದಾರೆ, ಎಂದು ಹೇಳಿದ್ದರು. ನಿರೂಪಕ ಸಿದ್ಧಾರ್ಥ ಖಾಸಗಿ ಸಂದರ್ಶನವೊಂದರಲ್ಲಿ 'ನಿಮ್ಮ ಸ್ವಂತ ಕಾರ್ಯಕ್ರಮಕ್ಕೆ ವಾಹಿನಿ ಬಂಡವಾಳ ಹಾಕುವುದಕ್ಕೆ ಯೋಚನೆ ಮಾಡಿತ್ತು. ಆದಾಯದ ಕಥೆ ಎನು?' ಎಂದು ಕೇಳಿದ್ದರು. ಆಗ ಅನುಪಮ್ ' ನೀವು ಹೇಳಿದ್ದು ಸರಿ, ಆದರೆ ವಾಹಿನಿ ಏನು ಮಾಡುವುದಕ್ಕೆ ಆಗುತ್ತೆ? ಅಮಿತಾಭ್ ಬಚ್ಚನ್ (Amithab Bachchan) ಮತ್ತು ಕಿಪಿಲ್ ಶರ್ಮಾ ವಾಹಿನಿ ಮಾಡುತ್ತಿರುವ ಲಾಭದ ಅರ್ಧ ಅವರೇ ತೆಗೆದುಕೊಳ್ಳುತ್ತಾರೆ. ಉಳಿದಿರುವ ಸಣ್ಣ ಹಣದಲ್ಲಿ ಸಂಸ್ಥೆ ನಡೆಸಬೇಕು. ಜನರಿಗೆ ಸಂಬಳ ನೀಡಬೇಕು,' ಎಂದು ಹೇಳಿದ್ದಾರೆ.
ಸೋನಿ ವಾಹಿನಿಯಲ್ಲಿ ಅಮಿತಾಭ್ Kaun Banega Crorepati ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ಈಗಾಗಲೇ 13 ಸೀಸನ್ ಮುಗಿಸಿದ್ದರೂ, ತಮ್ಮ ಕಾರ್ಯಕ್ರಮಕ್ಕೆ ಕಾಲ್ ಶೀಟನ್ನು ಅಮಿತಾಭ್ ಬೇರೆ ವಾಹಿನಿಗೆ ನೀಡಿಲ್ಲ. ಹಾಗೇ ಅವರು ಕೂಡ ಜಂಪ್ ಆಗುವುದಕ್ಕೆ ರೆಡಿ ಇಲ್ಲ, ಕಪಿಲ್ ಕೂಡ ಅದೇ ಹಾದಿಯಲ್ಲಿ ಇರುವುದಕ್ಕೆ ಇವರಿಬ್ಬರ ಸಂಭಾವನೆ ಮತ್ತು ಪ್ರಾಫಿಟ್ ಬಗ್ಗೆ ಅನೇಕರಿಗೆ ಕುತೂಹಲವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.