
ಹಿಂದಿ ವಾಹಿನಿಗಳಲ್ಲಿ ಪ್ರಸಾರವಾಗುವ ಪ್ರತಿಯೊಂದು ರಿಯಾಲಿಟಿ ಶೋಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ, ವಿಶೇಷತೆ ಪಡೆದುಕೊಂಡಿರುತ್ತದೆ. ಯಾವ ಜಾತಿ ಭೇದವಿಲ್ಲದೇ ಪ್ರತಿಭೆಗಳಿಗೆ ಅವಕಾಶ ನೀಡುತ್ತಾರೆ. ಕೆಲವೊಮ್ಮೆ ಪ್ರತಿಭಾವಂತರು ಬಡತನದಲ್ಲಿ ಬೆಳೆದಿರುತ್ತಾರೆ, ಇವರ ಬಹುತೇಕ ಖರ್ಚು ವೆಚ್ಚಗಳನ್ನು ಕಾರ್ಯಕ್ರಮದವರೇ ನೋಡಿಕೊಳ್ಳುತ್ತಾರೆ. ಆದರೆ ಇವರಿಗೆ ನೀಡುವ ಸಪೋರ್ಟ್ ಪದೇ ಪದೇ ಹೈಲೈಟ್ ಆದರೆ, ಇನ್ನಿತ್ತರ ಸ್ಪರ್ಧಿಗಳ ಟ್ಯಾಲೆಂಟ್‌ಗೆ ಬೆಲೆ ಕಡಿಮೆ ಆಗುತ್ತದೆ, ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಧ್ವನಿ ಎತ್ತುತ್ತಿದ್ದಾರೆ.
ಹೌದು! ಹಿಂದಿ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ತಾಯಿ ಮಗುವನ್ನು ಎತ್ತಿಕೊಂಡು ಅದ್ಭುತವಾಗಿ ಹಾಡಿರುವ ವಿಡಿಯೋ ಬಹುತೇಕರು ನೋಡಿರುತ್ತೀರಿ. ಮಗು ಯಾರ ಬಳಿಯೂ ಹೋಗುವುದಿಲ್ಲ. ತುಂಬಾನೇ ಅಳುತ್ತದೆ. ನಮಗೆ ಯಾರ ಸಪೋರ್ಟ್ ಇಲ್ಲ. ನಾನೇ ನೋಡಿಕೊಳ್ಳಬೇಕು, ಎಂದು ಹೇಳಿ ಆಕೆಯನ್ನು ಎತ್ತಿಕೊಂಡು ಹಾಡು ಹಾಡಿದ್ದಾರೆ. ಅವರೇ ಸಂಜನಾ ಭಟ್. ವೇದಿಕೆಯ ಮೇಲೆ ಸಂಜನಾ ಆಗಮಿಸಿದ ದಿನದಿಂದಲೂ ಟಿಆರ್‌ಪಿ (TRP) ಗಗನ ಮುಟ್ಟಿದೆ. ಎಲ್ಲಿ ನೋಡಿದರೂ ಆಕೆ ಮಗು ಎತ್ತಿಕೊಂಡು ಹಾಡುತ್ತಿರುವುದನ್ನು ನೋಡಬಹುದು. ಅನೇಕ ಸೆಲೆಬ್ರಿಟಿಗಳು ಸಂಜನಾ ನೋಡುವುದಕ್ಕೆಂದು ಶೋಗೆ ಬಂದಿರುವೆ ಎಂದು ಕೂಡ ಹೇಳಿದ್ದಾರೆ.
ಸಂಜನಾ ಹಾಡು ಹೇಳುವಾಗ ಪತಿ ದೇವೇಂದ್ರ ಕೂಡ ಸ್ಟೇಜ್ ಪಕ್ಕದಲ್ಲಿ ಕುಳಿತು ಕೊಂಡಿರುತ್ತಾರೆ. ಪ್ರತಿ ಸಲವೂ ಸಂಜನಾ ಹಾಡಿದ ನಂತರ ಪತಿಯನ್ನು ಕರೆದು ಮಾತನಾಡಿಸುತ್ತಾರೆ. ವಾರಕ್ಕೊಂದು ವಿಚಾರ ಹಿಡಿದುಕೊಂಡು ಆಕೆ ಬಗ್ಗೆ ಮಾತನಾಡಿ ಟಿಆರ್‌ಪಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಇನ್ನಿತರೆ ಸ್ಪರ್ಧಿಗಳ ಮೇಲೆ ಪರಿಣಾಮ ಬೀರುತ್ತಿದೆ., ಅವರು ಹಾಡಿರುವುದನ್ನು ಮಾತ್ರ ತೋರಿಸುತ್ತಾರೆ ತೀರ್ಪುಗಾರರು ಕೊಡುವ ಕಾಮೆಂಟ್ಸ್ ಕಡಿಮೆ ಮಾಡಿ, ತೋರಿಸುತ್ತಿದ್ದಾರೆ ಎನ್ನುವ ಆರೋಪ ಮಾಡಲಾಗಿತ್ತು.
ಒಂದು ಎಪಿಸೋಡ್‌ನಲ್ಲಿ ನಮ್ಮ ಮದುವೆ ದಿನ ಯಾವ ವಿಡಿಯೋ ಅಥವಾ ಫೋಟೋ ತೆಗೆದಿಲ್ಲ. ನಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ ಯಾವ ನೆನಪು ಕೂಡ ಇಲ್ಲ, ಎಂದು ಸಂಜನಾ ಹೇಳಿಕೊಂಡಿದ್ದರು. ರಿಯಾಲಿಟಿ ಶೋ ತಂಡದವರು ಸರಿಗಮಪ ವೇದಿಕೆ ಮೇಲೆ ಇವರಿಬ್ಬರಿಗೂ ಮತ್ತೆ ಮದುವೆ ಮಾಡಿಸಿದ್ದರು. ಈ ಮದುವೆಗೆ ನೇಹಾ ಕಕ್ಕರ್, ರೋಹನ್ ಪ್ರೀತ್ ಸಿಂಗ್ ಸಾಕ್ಷಿಯಾಗಿದ್ದರು. ಇದನ್ನು ದೊಡ್ಡದಾಗಿ ಹೈಲೈಟ್ ಮಾಡಿದ್ದರು. ಮತ್ತೊಂದು ಎಪಿಸೋಡ್‌ನಲ್ಲಿ ಸಂಜನಾ ಮಗು ನೆಮ್ಮದಿಯಾಗಿ ಮಲಗಬೇಕು ಎಂದು ತೊಟ್ಟಿಲು ಕೂಡ ತರಿಸಿಕೊಡಲಾಗಿತ್ತು. ಇವರು ಜೀವನದಲ್ಲಿ ಒಮ್ಮೆಯೂ ಏರೋಪ್ಲೇನ್ ಮತ್ತು ಎಲಿಕಾಫ್ಟರ್ ಹತ್ತಿಲ್ಲ ಎಂದು ಹೇಳಿಕೊಂಡಿದ್ದಕ್ಕೆ, ಗಾಯಕ ಕುಮಾರ್ ಸಾನು ಇವರಿಗೆ ಚಾಪರ್ ರೈಡ್ ಆಫರ್ ಮಾಡಿದ್ದರು. ಇಬ್ಬರೂ ಚಾಪರ್ ಹತ್ತಿದ್ದು, ಮಜಾ ಮಾಡಿದ್ದು ಪ್ರತಿಯೊಂದು ಕ್ಷಣವನ್ನೂ ಟಿವಿಯಲ್ಲಿ ತೋರಿಸಿದ್ದರು.
ಇದು ಇಲ್ಲಿದೆ ನಿಂತಿಲ್ಲ. ನಟಿ ಮಧು ಕಾರ್ಯಕ್ರಮಕ್ಕೆ ಸ್ಪೆಷಲ್ ಅತಿಥಿಯಾಗಿ, ಆಗಮಿಸಿ ದುಬಾರಿ ಸೀರೆಯನ್ನು ಸಂಜನಾಗೆ ಕೊಟ್ಟರು. ಮತ್ತೊಂದು ಸಂಚಿಕೆಯಲ್ಲಿ ಸಂಜನಾ ಅದನ್ನು ಧರಿಸಿಕೊಂಡು ಬಂದಾಗ ಪತಿ ರಿಯಾಕ್ಷನ್, ಅವರ ಮಾತುಗಳು ಎಲ್ಲವನ್ನೂ ಹೈಲೈಟ್ ಮಾಡಲಾಗಿತ್ತು. ನಟಿ ಊರ್ಮಿಳಾ ಮತ್ತು ನಟ ಧರ್ಮೇಂದ್ರ ಕೂಡ ಸಂಜನಾ ಮಗುವಿಗೆ ಆಟಿಕೆಗಳನ್ನು ನೀಡಿದ್ದರು. ಸಂಜನಾ ಜೀವನದ ಗ್ರಾಫ್ ಮೇಲೆ ಏರುತ್ತಿದ್ದಂತೆ, ಹಿಂದಿ ಮಿಥಾಯಿ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡುವುದಕ್ಕೆ ಅವಕಾಶ ಗಿಟ್ಟಿಸಿಕೊಂಡರು.
ಪ್ರತಿ ರಿಯಾಲಿಟಿ ಶೋನೂ ಈ ರೀತಿ ಸೆಂಟಿಮೆಂಟ್ ಗೇಮ್ ಆಡುತ್ತದೆ, ಆದರೆ ಸಂಜನಾ ವಿಚಾರದಲ್ಲಿ ಎಲ್ಲವೂ ಅತಿರೇಕವಾಗಿದೆ ಎಂದು ವೀಕ್ಷಕರು ಮತ್ತು ಇನ್ನಿತರೆ ಸ್ಪರ್ಧಿಗಳ ಸಪೋರ್ಟ್ ಮಾಡುವವರು ಕಾಮೆಂಟ್ ಮಾಡುತ್ತಿದ್ದಾರೆ. ಬಡವರಿಗೆ ಪ್ರೋತ್ಸಾಹ ನೀಡಿ ಆದರೆ ನಿಜವಾದ ಕಲೆಯನ್ನು ತುಳಿಯ ಬೇಡಿ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.