2 ವರ್ಷ ಪೂರೈಸಿದ ಕನ್ನಡತಿ, 2 ಗಂಟೆಗಳ ಕಾಲ 'ಹವಿ' ಪ್ರೀತಿ ಪಯಣ!

Suvarna News   | Asianet News
Published : Feb 06, 2022, 01:58 PM IST
2 ವರ್ಷ ಪೂರೈಸಿದ ಕನ್ನಡತಿ, 2 ಗಂಟೆಗಳ ಕಾಲ 'ಹವಿ' ಪ್ರೀತಿ ಪಯಣ!

ಸಾರಾಂಶ

ಕೊನೆಗೂ ಹರ್ಷನಿಗೆ ಸರ್ಪ್ರೈಸ್ ಕೊಟ್ಟ ಭುವಿ. ಎರಡು ಗಂಟೆಗಳ ಕಾಲ ಪ್ರೀತಿ ಪಯಣ ಹೀಗಿರಲಿದೆ.....

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ (Kannadathi) ಧಾರಾವಾಹಿ ಎರಡು ವರ್ಷಗಳನ್ನು ಪೂರೈಸಿದೆ. ಆರಂಭದ ದಿನದಿಂದಲೂ ಇಂದಿನವರೆಗೂ ಟಿಆರ್‌ಪಿಯಲ್ಲಿ (TRP) ಮೊದಲ ಸ್ಥಾನ ಪಡೆದುಕೊಂಡಿರುವ ಈ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿ ಪ್ರೇಮ ವೀಕ್ಷಕರ ಗಮನ ಸೆಳೆದಿದೆ. ಹೀಗಾಗಿ ಇಂದು (ಫೆ.6) ಸಂಜೆ ಎರಡು ಗಂಟೆಗಳ ಕಾಲ ಇವರ ಪ್ರೀತಿ ಪ್ರಯಣವನ್ನು ತೋರಿಸಲಾಗುತ್ತದೆ. 

ವಾಹಿನಿ ಬಿಡುಗಡೆ ಮಾಡಿರುವ ಸಣ್ಣ ವಿಡಿಯೋದಲ್ಲಿ ಹರ್ಷನಿಗೆ (Harsha) ಸರ್ಪ್ರೈಸ್ ಕೊಟ್ಟ ಭುವಿ (Bhuvi) ಮಂಡಿಯೂರಿ ಪ್ರಪೋಸ್ ಮಾಡುತ್ತಾಳೆ. ನಾವಿಬ್ಬರೂ ಒಟ್ಟಿಗೆ ಅಜ್ಜ-ಅಜ್ಜಿ ಆಗಬೇಕು. ಮುಂದೊಂದು ದಿನ, ಇಬ್ಬರೂ ಕೈ ಹಿಡಿದುಕೊಂಡು ಒಟ್ಟೊಟ್ಟಿಗೆ ಇಲ್ಲಿಗೆ ಬಂದು, ಇದೇ ರೀತಿ ಜೋರಾಗಿ ಹೆಸರು ಕೂಗಬೇಕು. ಹಾಗೆಯೇ ಒಟ್ಟಿಗೆ ಕೊನೆಯುಸಿರೆಳೆಯಬೇಕು,' ಎಂದು ಭುವಿ ಮಾತನಾಡಿದ್ದಾರೆ. ಹವಿ ಸ್ಪೆಷಲ್ ಎಪಿಸೋಡ್‌ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. 

'ಹರ್ಷ ಮತ್ತು ಭುವಿ ಪ್ರೀತಿಯಲ್ಲಿ ಮತ್ತು ಕನ್ನಡತಿ ಧಾರಾವಾಹಿ ಕಥೆಯಲ್ಲಿ ದೊಡ್ಡ ಟ್ವಿಸ್ಟ್‌ ಬರಲಿದೆ. Performance-wise, ಬಹಳಷ್ಟು ವ್ಯತ್ಯಾಸಗಳನ್ನು ನೋಡಬಹುದು. ನನ್ನ ಆನ್‌ ಸ್ಕ್ರೀನ್‌ ಕ್ಯಾರೆಕ್ಟರ್‌ ಅನ್ನು ಎಲ್ಲರೂ ಇಷ್ಟ ಪಡುತ್ತಾರೆ. ಯಾವುದೇ ವಯಸ್ಸಿನ ಬೇದವಿಲ್ಲದೆ ಪ್ರೀತಿ ತೋರಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ,' ಎಂದು ಇ-ಟೈಮ್ಸ್‌ ನೀಡಿರುವ ಸಂದರ್ಶನದಲ್ಲಿ ಹರ್ಷ ಪಾತ್ರಧಾರಿ ಕಿರಣ್ ರಾಜ್ ಮಾತನಾಡಿದ್ದಾರೆ.

 

'ಕನ್ನಡತಿ ಧಾರಾವಾಹಿ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಪ್ರಾಜೆಕ್ಟ್. ಇದು ನನಗೆ  job satisfaction ಕೊಡುತ್ತದೆ. ನನಗೇ ಗೊತ್ತಿಲ್ಲ, ಹೇಗೆ ಕನ್ನಡತಿ ಧಾರಾವಾಹಿ ನನ್ನ ದಿನ ನಿತ್ಯದಲ್ಲಿ ಒಂದು ಭಾಗವಾಗಿದೆ ಎಂದು. ಈ ಪ್ರಾಜೆಕ್ಟ್‌ನಲ್ಲಿರುವುದುಕ್ಕೆ ಸಂತೋಷವಾಗುತ್ತಿದೆ'ಎಂದು ಭುವಿಯಾಗಿ ವೀಕ್ಷಕರ ಹೃದಯದಲ್ಲಿ ದೊಡ್ಡ ಸ್ಥಾನ ಗಳಿಸಿದ ರಂಜಿನಿ ರಾಘವನ್ ಮಾತನಾಡಿದ್ದಾರೆ. 

Kannadathi Serial: ಕನ್ನಡತಿಯ ಟೀಚರ್ ರಂಜನಿಯ ಡಿಫರೆಂಟ್ ಸೀರೆ ಲುಕ್ಸ್ ಇವು

'ತುಂಬಾ ದಿನಗಳು ಕಳೆದಿವೆ. ಜನರು #Havi ಜೋಡಿಯನ್ನು ತೆರೆ ಮೇಲೆ ನೋಡಿ. ಹೀಗಾಗಿ ವೀಕ್ಷಕರಿಗೆಂದು ಸ್ಪೆಷಲ್ ಸೆಗ್ಮೆಂಟ್ ಮಾಡಲಾಗಿದೆ. ನಮ್ಮಿಬ್ಬರಿಗೂ ಸೋಷಿಯಲ್ ಮೀಡಿಯಾದಲ್ಲಿ (Social Media) ತುಂಬಾನೇ ಮೆಸೇಜ್ ಬರುತ್ತಿವೆ. ನಮ್ಮಿಬ್ಬರ ಪ್ರೀತಿಯಲ್ಲಿ ಕೊರತೆ ಕಾಣಿಸುತ್ತಿರುವುದು, ಹೀಗಾಗಿ ಹರ್ಷ ಮತ್ತು ಭುವಿ ಪ್ರೀತಿ ಆಚರಿಸಲು ಇದೊಂದು ಸಂಚಿಕೆ. ಎರಡು ಗಂಟೆಗಳ ಕಾಲ ಇದು ಕ್ಯೂಟ್ ರೊಮ್ಯಾಂಟಿಕ್ (Cute romance) ಸಂಚಿಕೆ ಆಗಲಿದೆ,' ಎಂದು ಇಬ್ಬರೂ ಹೇಳಿದ್ದಾರೆ. 

'ಈ ಸಂಚಿಕೆಗೆ ನಾವಿಬ್ಬರು ನಮ್ಮ ಬೆಸ್ಟ್‌ ಶ್ರಮ ಹಾಕಿದ್ದೀವಿ. ಇಲ್ಲಿ ನಾವಿಬ್ಬರೂ ಮಾತ್ರವಲ್ಲ ಕನ್ನಡತಿ ಧಾರಾವಾಹಿಯ ಪಾತ್ರಗಳು ಕೂಡ ತೆರೆ ಮೇಲೆ ಬೆಸ್ಟ್‌ ಪ್ರದರ್ಶನ ನೀಡಿದೆ. ಇದೊಂದು ಟೀಂ ವರ್ಕ್. ನಾವು ನಮ್ಮ ಕೆಲಸಕ್ಕೆ ನಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುತ್ತಿದ್ದೇವೆ. ವೀಕ್ಷಕರು ಕೂಡ ಅದೇ ರೀತಿ ಈ ಜೋಡಿಯನ್ನು ಒಪ್ಪಿಕೊಂಡಿದ್ದಾರೆ. ರಿಯಾಲಿಟಿಗಳನ್ನು ಮಾತ್ರ ಕಥೆಯಲ್ಲಿ ತೋರಿಸಲಾಗಿದೆ ಹೀಗಾಗಿ ಪ್ರತಿಯೊಬ್ಬಕೂ ಪಾತ್ರಕ್ಕೆ ಮತ್ತು ಘಟನೆಗಳಿಗೆ ರಿಲೇಟ್ ಮಾಡಿಕೊಳ್ಳುತ್ತಿದ್ದಾರೆ,' ಎಂದು ಇಬ್ಬರೂ ಮಾತನಾಡಿದ್ದಾರೆ.

ರೆಡ್ ಡ್ರೆಸ್ ಹಾಕಿ ದೃಷ್ಟಿಯಾಯ್ತು..! ಕನ್ನಡತಿ ನಟಿ ರಂಜನಿಗೆ ಹೈ ಫಿವರ್..!

'ನನ್ನ ಆನ್‌ಸ್ಕ್ರೀನ್ ಕ್ಯಾರೆಕ್ಟರ್ ಜನರಿಗೆ ಇಷ್ಟು ಬೇಗ ಹತ್ತಿರವಾಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಪುಟ್ಟ ಮಕ್ಕಳಾಗಿರಲಿ ಅಥವಾ ಹಿರಿಯರವರೆಗೂ ನಾವು ಎಲ್ಲೇ ಹೋದರೂ ಬಂದು ಮಾತನಾಡಿಸುತ್ತಾರೆ. ಪಾತ್ರದ ಬಗ್ಗೆ ಹೇಳುತ್ತಾರೆ. ನಾವು ಪಬ್ಲಿಕ್‌ನಲ್ಲಿ ಒಬ್ಬರೇ ಕಾಣಿಸಿಕೊಂಡರೂ, ಇನ್ನೊಬ್ಬರು ಎಲ್ಲಿ ಎಂದು ಕೇಳುತ್ತಾರೆ, ವೀಕ್ಷಕರಿಗೆ ನಾವು ಸದಾ ಜೊತೆಯಗಿರಬೇಕು ಎಂದು ಇಷ್ಟ. ನಾವು ರೀಲ್‌ ಲೈಫ್‌ ಮತ್ತು ರಿಯಲ್ ಲೈಫಲ್ಲಿ ಬೇರೆ ಎಂಬುವುದು ಜನರಿಗೆ ಅರ್ಥ ಆಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ,' ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಗಿಲ್ಲಿ ನಟನ ಅಸಲಿ ವಯಸ್ಸು ರಿವೀಲ್‌ ಆಯ್ತು! ಕಾವ್ಯ ಶೈವ Age ಎಷ್ಟು?
BBK 12: ಮುಗ್ಧೆಯೂ ಅಲ್ಲ, ಪಾಪವೂ ಅಲ್ಲ, ಇಷ್ಟು ದ್ವೇಷವೇ?; ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty