
ಧಾರಾವಾಹಿ ಅಂದ್ರೆ ಮನೆಗೆ ಬರೋ ಅತಿಥಿಯಂತೆ. ಅದರೊಟ್ಟಿಗೆ ಬಹುತೇಕ ಹೆಂಗಳೆಯರು ವಿಭಿನ್ನವಾಗಿ ಕನೆಕ್ಟ್ ಆಗಿರುತ್ತಾರೆ. ಪಾತ್ರಧಾರಿಗಳೊಂದಿಗೆ, ಪಾತ್ರಗಳನ್ನು ನಿಭಾಯಿಸುವ ನಟರೆಂದರೆ ಇವರಿಗೆ ಅಚ್ಚುಮೆಚ್ಚು. ಕಥೆಯಲ್ಲಿ, ಕಲಾವಿದರ ಬದಲಾವಣೆಯಲ್ಲಿ ತುಸು ವ್ಯತ್ಯಾಸವಾದರೂ ಇವರಿಗೆ ಸಹಿಸೋದಿ ಕಷ್ಟ. ಮೊನ್ನೆ 'ಕನ್ನಡತಿ' ಧಾರಾವಾಹಿಯ ಭುವಿ ಪಾತ್ರಧಾರಿ ರಂಜನಿ ರಾಘವನ್ ಕೊರೋನಾ ಪಾಸಿಟಿವ್ ಬಂದು ಒಂದು ವಾರ ಇಲ್ಲದಿರುವಾಗಲೂ ಅದೆಷ್ಟೋ ಅಭಿಮಾನಿಗಳು ಈ ಸೀರಿಯಲ್ ಅನ್ನೇ ನೋಡಿರಲಿಲ್ಲ ಎನ್ನುತ್ತಾರೆ. ಹಾಗೆಯೇ ಪ್ರಸಿದ್ಧಿ ಧಾರಾವಾಹಿ ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಿಸುವ ಕುಂಕುಮ ಭಾಗ್ಯ ಸೀರಿಯಲ್ ಸಹ ತನ್ನದೇ ಫ್ಯಾನ್ಸ್ ಹೊಂದಿದೆ. ಅದರಲ್ಲಿಯೂ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಶಬೀರ್ ಅಹ್ಲುವಾಲಿಯಾ (ಅಭಿಷೇಕ್) ಮತ್ತು ಸೃಷ್ಟಿ ಜಾ ಅವರೊಂದಿಗೆ (ಪ್ರಗ್ಯಾ) ಇಂಥದ್ದೇ ಬಾಂಧವ್ಯ ಬೆಳೆಯಿಸಿಕೊಂಡಿದ್ದರು. ಈಗವರೇ ಇಲ್ಲವೆಂದರೆ ಬೇಜಾರು ಆಗೋಲ್ವಾ?
ಹಲವು ವರ್ಷಗಳಿಂದ ಹಿಂದಿ ಕಿರುತೆರೆ ವೀಕ್ಷಕರಿಗೆ ನಾನ್ ಸ್ಟಾಪ್ ಮನೋರಂಜನೆ (Entertainment) ನೀಡುತ್ತಿರುವುದು 'ಕುಂಕುಮ ಭಾಗ್ಯ' (Kunkuma Bhagya) ಧಾರಾವಾಹಿ. ಅತ್ತೆ- ಸೊಸೆ ಜಗಳ ಪ್ರೀತಿ (Love) ನಡುವೆ ಗಂಡ-ಮಗನ ಪೇಚಾಟ ಹೇಗಿರಲಿದೆ, ಎಂದು ಈ ಧಾರಾವಾಹಿಯಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಸುಮಾರು 1000ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯಲ್ಲಿ ಕೆಲವು ದಿನಗಳಿಂದ ನಾಯಕ ಮತ್ತು ನಾಯಕಿಯನ್ನು ತೋರಿಸದ ಕಾರಣ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಆರಂಭದಿಂದಲೂ ಧಾರಾವಾಹಿಯನ್ನು ನೋಡುವ ವೀಕ್ಷಕರಿಗೆ ಪಾತ್ರಧಾರಿಗಳು ಬದಲಾದರೆನೇ ಸ್ವಲ್ಪ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಅಪಘಾತವಾಗಿ, ಸೀರಿಯಲ್‌ನ ಪ್ರಮುಖ ಪಾತ್ರಧಾರಿಗಳು ಕೋಮಾಗೆ ಹೋಗಿದ್ದಾರೆಂದು ತೋರಿಸಿ, ಎರಡು ಮೂರು ತಿಂಗಳಿಂದ ಪ್ರಮುಖ ಪಾತ್ರಧಾರಿಗಳನ್ನು ತೋರಿಸದೇ ಹೋದರೆ ಯಾರಿಗೆ ತಾನ ಸಿಟ್ಟು ಬರೋಲ್ಲ ಹೇಳಿ? ಈಗ ಆಗಿರುವುದು ಅದೇನೆ.
ಕುಂಕುಮ ಭಾಗ್ಯ ಧಾರಾವಾಹಿ ಸ್ಟಾರ್ ಶಬೀರ್ ಅಹ್ಲುವಾಲಿಯಾ ಉರ್ಫ್ ಅಭಿಷೇಕ್ ಮತ್ತು ಸೃಷ್ಟಿ ಝಾ ಉರ್ಫ್ ಪ್ರಗ್ಯಾ ಕಾಣಿಸುತ್ತಿಲ್ಲ. ಇವರೇ ಈ ಧಾರಾವಾಹಿಯ ಹೈಲೈಟ್. #AbhiGya ಎಂದು ಕೂಡ ವೀಕ್ಷಕರು ಟ್ಯಾಗ್ ಕ್ರಿಯೇಟ್ ಮಾಡಿದ್ದರು. ಧಾರಾವಾಹಿ ಕಥೆಯಲ್ಲಿ ಇಬ್ಬರಿಗೂ ಅಪಘಾತವಾಗಿ ಕೋಮಾಗೆ ಜಾರಿದ್ದಾರೆ ಎಂದು ತೋರಿಸಲಾಗುತ್ತಿದೆ.
ಕೋಮಾಗೆ ಜಾರಿದ್ದಾರೆ ಸರಿ. ಆದರೆ ಅವರನ್ನು ತೋರಿಸಿ. ಅದರ ಸುತ್ತ ಕಥೆ ಮಾಡಬೇಕು. ಆದರೆ ಆಸ್ಪತ್ರೆಯಲ್ಲಿರುವವರನ್ನು ಯಾರೂ ತೋರಿಸುತ್ತಿಲ್ಲ. ಬೇರೆ ಏನೋ ಕಥೆ ಬರುತ್ತಿದೆ, ಎಂದು ನೆಟ್ಟಿಗರು ಟ್ಟಿಟರ್‌ನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. 'ಕೆಕೆಬಿಯಲ್ಲಿ ಅಭಿಮಾನಿಗಳಿಗೆಂದು #AbhiGya ಭಾಗಿಯಾಗಿದ್ದರು. ನಾನು ಇಲ್ಲಿ ತ್ರಿಷಾಗೆ ಏನೋ ಹೇಳಬೇಕಿದೆ. ನೋಡಿ #AbhiGya ಬಿಟ್ಟ ನಂತರ ನಿಮ್ಮ TRP ಹೆಚ್ಚಾಗುತ್ತಿದೆ ಅಂದ್ರೆ ಅದು ನಿಮಗೆ ದೊಡ್ಡ ಲಾಸ್. ಏಕ್ತಾ ಕಪೋರ್ (Ekta Kapoor) ಬೇಕೆಂದು #AbhiGyaಗೆ ಅವಮಾನ ಮಾಡುತ್ತಿದ್ದಾರೆ. Zee TVಗೆ ನಮ್ಮ ಸ್ಟಾರ್ ಜೊತೆ ಕೆಲಸ ಮಾಡುವ ಯೋಗ್ಯತೆ ಇಲ್ಲ. ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ' ಎಂದು ಟ್ಟೀಟ್ ಮಾಡಿದ್ದಾರೆ.
ಅಸಲಿ ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಇಬ್ಬರೂ ಸ್ಟಾರ್‌ಗಳು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಅವರು ಮತ್ತೆ ಹಿಂದಿರುಗಿ ಬರುವಂತೆ ವಾಹಿನಿ ಮಾತುಕತೆ ನಡೆಸುತ್ತಿದೆ. ಆದರೂ ಅವರು ಬರುತ್ತಿಲ್ಲ, ಎಂದು ಹೇಳಲಾಗಿದೆ. ಹಾಗೇ ಇದಕ್ಕೆ ಕಾರಣ ಏಕ್ತಾ ಎಂಬುವುದು ಎಲ್ಲರಿಗೂ ಗೊತ್ತಿದೆ. 'ನಾವು ಎಂದಿಗೂ ನಿಮ್ಮ ಕ್ಷಮಿಸುವುದಿಲ್ಲ. ನಾನು ಯಾವತ್ತೂ ಈ ಧಾರಾವಾಹಿ ನೋಡುವುದಿಲ್ಲ. #AbhiGya ಅವರಿಗೆ ಜೀವನದಲ್ಲಿ ಬೆಸ್ಟ್ ಕಾದಿದೆ. ಹಾಳಾಗಿ ಹೋಗು ಏಕ್ತಾ,' ಎಂದು ನೆಟ್ಟಿಗರು ಟ್ಟೀಟ್ ಮಾಡುತ್ತಿದ್ದಾರೆ.
ಟ್ರೆಂಡ್ ಆಗುತ್ತಿರುವ ಟ್ವೀಟಿನಲ್ಲಿ ಕೇವಲ ಕುಂಕುಮ ಭಾಗ್ಯವನ್ನು ಮಾತ್ರವಲ್ಲ, ಇನ್ನು ಏಕ್ತಾ ಕಪೂರ್ ನಿರ್ಮಾಣದ ಸೀರಿಯನ್ ಅನ್ನೇ ನೋಡುವುದಿಲ್ಲ ಎಂದು ಜನರು ಬೈದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಧಾರಾವಾಹಿಯೊಂದಿಗೆ ಜನರೂ ಹೀಗೂ ಕನೆಕ್ಟ್ ಆಗುತ್ತಾರೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.