
1988ರಲ್ಲಿ Pestonjee ಚಿತ್ರದ ಮೂಲಕ ವೈದ್ಯನಾಗಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಪೊಲೀಸ್, ವಿಲನ್, ಪ್ರೊಫೆಸರ್, ತಾತ, ಅಪ್ಪ ಹೀಗೆ ವಿವಿಧ ಪಾತ್ರಗಳನ್ನು ಮಾಡುತ್ತ150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಆನಂತರ 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟ ಶಿವಾಜಿ ಸತಮ್ ಅವರು ಇದೇ ಮೊದಲ ಬಾರಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ ಹಾಗೆ ತನ್ನ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
ಶಿವಾಜಿ ಸತಮ್ ಅವರ ಕಿರುತೆರೆ ವೃತ್ತಿ ಜೀವನದಲ್ಲಿ ದೊಡ್ಡ ಬ್ರೇಕ್ ತಂದುಕೊಟ್ಟಿದ್ದು ಸಿಐಡಿ. ಈ ಧಾರಾವಾಹಿ ಶಿವಾಜಿ ಸತಮ್ ಬಗ್ಗೆ ಜನರಿಗಿದ್ದ ಇಮೇಜ್ ಬದಲಾಯಿಸಿದೆ. ಸಿಐಡಿ ಸಿನಿಮಾ ಅಂತ್ಯವಾಗುತ್ತಿದೆ ಎನ್ನುವ ವಿಚಾರ ತಿಳಿದಾಗ ನಿಮ್ಮ ರಿಯಾಕ್ಷನ್ ಹೇಗಿತ್ತು ಎಂದು ಟೈಮ್ಸ್ ಸಂದರ್ಶನಲ್ಲಿ ಕೇಳಿದ್ದಾರೆ. 'ಶುಕ್ರವಾರ ನನಗೆ ಹೇಳಿದ್ದರು ಸೋಮವಾರ ನಮ್ಮ ಕೊನೆ ಚಿತ್ರೀಕರಣದ ದಿನವಾಗುತ್ತದೆ ಎಂದು. ನಮ್ಮ ನಿರ್ಮಾಪಕರಿಗೂ ಗೊತ್ತಿರಲಿಲ್ಲ ಈ ವಿಚಾರ. ಈ ಸಮಯ ನಮಗೆ ಬರುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು ಏಕೆಂದರೆ ನಮ್ಮ ಶೋ ಸಮಯವನ್ನು ಪದೇ ಪದೇ ಬದಲಾಯಿಸುತ್ತಿದ್ದರು. 10 ಗಂಟೆಯಿಂದ 10.30 ಮಾಡಿದ್ದು ಆಮೇಲೆ 10.40 ಮಾಡಿದ್ದು ಕೊನೆಗೆ 11 ಗಂಟೆ ಆಯ್ತು. ಇದೆಲ್ಲಾ ನೋಡಿ ನಮಗೂ ಬೇಸರ ಆಗುತ್ತಿತ್ತು. ಏನೋ ಸಮಸ್ಯೆ ಆಗುತ್ತಿದೆ ಎಂದು ಎಲ್ಲರಿಗೂ ಫೀಲ್ ಆಗುವುದಕ್ಕೆ ಶುರುವಾಯ್ತು. ನಾವು ಇವರಿಗೆ ಬೇಡವೆನೋ ಎನ್ನುವ ಭಾವನೆ ಶುರುವಾಯ್ತು ಆಮೇಲೆ ಈ ವಿಚಾರ ತಿಳಿಯಿತು' ಎಂದು ಶಿವಾಜಿ ಸತಮ್ ಹೇಳಿದ್ದಾರೆ.
'ಸಿಐಡಿ ನಿಲ್ಲಿಸಬೇಕು ಎನ್ನುವುದು ವಾಹಿನಿಯ ನಿರ್ಧಾರ ಆಗಿತ್ತು. ಹೇಗೆ ಅಂದ್ರೆ ನಾನು ನೀವು ಮಾತಾಡುತ್ತಿದ್ದೀವಿ. ತಕ್ಷಣ ನೀವು ನನ್ನ ಹೊರ ದಬ್ಬುತ್ತೀರ. ಆಗ ಹೇಗಾಗಬೇಕು ಹೇಳಿ? ನನ್ನ 24 ವರ್ಷದ ಜರ್ನಿಯನ್ನು ಇದಕ್ಕೆಂದು ಮುಡಿಪಾಗಿಟ್ಟಿರುವೆ ಅದರಲ್ಲಿ 2 ವರ್ಷ ಇದರ ಮೇಕಿಂಗ್ ನಡೆಯಿತು. 24ವರ್ಷ ನನ್ನ ಜೀವನದ ದೊಡ್ಡ ಭಾಗ. CID ಎಂದು ನನ್ನ ಜೀವನದಿಂದ ದೂರವಾಗುವುದಿಲ್ಲ' ಎಂದು ಶಿವಾಜಿ ಸತಮ್ ಹೇಳಿದ್ದಾರೆ.
'ಸಿಐಡಿ ನನ್ನ ಜೀವನದ ಮುಂದುವರೆದ ಭಾಗದಲ್ಲಿ ಇರುವುದಿಲ್ಲ ಎಂದು ನನಗೆ ಅನಿಸಲಿಲ್ಲ ಆದರೆ ವಾಹಿನಿಯ ಲೈಫ್‌ನಲ್ಲಿಲ್ಲ ಅಷ್ಟೆ ಅನಿಸಿದ್ದು. ಈಗಲೂ ಜನರು ನನ್ನನ್ನು ACP Pradyuman ಎಂದು ಕರೆಯುತ್ತಾರೆ. ಇದೊಂದೆ ಹೆಸರಲ್ಲ ಕೂಡ. ಜನರು ತುಂಬಾನೇ ಪ್ರೀತಿ ಮತ್ತು ಗೌರವ ಕೊಡುತ್ತಾರೆ ನನಗೆ ಖುಷಿಯಾಗುತ್ತದೆ. ಅದೆಷ್ಟೋ ಮಂದಿ ಸಿಐಡಿ ಶೋಯಿಂದ ಜೀವನ ಕಟ್ಟಿಕೊಂಡರು. ಅತಿ ಕಡಿಮೆ ಟಿಆರ್‌ಪಿ ಪಡೆಯುವ ಧಾರಾವಾಹಿಗಳನ್ನು ವಾಹಿನಿ ಪ್ರಸಾರ ಮಾಡುತ್ತಿತ್ತು ಆದರೆ ಸಿಐಡಿ ನ ಮಾತ್ರ ಯಾಕೆ ರಿಜೆಕ್ಟ್ ಮಾಡಿದರು ಎಂದು ಈಗಲೂ ಅರ್ಥವಾಗಿಲ್ಲ. ತಮ್ಮ ತಂಡದಲ್ಲಿ ಕೆಲಸ ಮಾಡಿ ಸ್ಪಾಟ್ ಬಾಯ್‌ಯಿಂದ ಹಿಡಿದು ಪ್ರತಿಯೊಬ್ಬ ಕಲಾವಿದನ ಜೊತೆಗೆ ನಾನು ಈಗಲೂ ಸಂಪರ್ಕದಲ್ಲಿದ್ದೀವಿ' ಎಂದಿದ್ದಾರೆ ಶಿವಾಜಿ ಸತಮ್.
'ಸಿಐಡಿ ತಂಡದಲ್ಲಿ ಕೆಲವೊಬ್ಬರು 16 ವರ್ಷಗಳ ಕಾಲ ನಮ್ಮ ಜೊತೆ ಕೆಲಸ ಮಾಡಿದ್ದಾರೆ. ನಮ್ಮನ್ನು ನಂಬಿದ್ದಾರೆ. ನಮ್ಮ ಸಂಬಂಧ ಗಟ್ಟಿಯಾಗಿದೆ ಈಗಲೂ ನನ್ನ ಕೋ-ಸ್ಟಾರ್‌ಗಳು ಅವರ ಪ್ರಾಜೆಕ್ಟ್‌ಗಳಲ್ಲಿ ಆಫರ್ ನೀಡುತ್ತಾರೆ ಆದರೆ ಸಂತೋಷದಿಂದ ನಿರಾಕರಿಸುವೆ. ಬೇರೆ ತಂಡದ ಜೊತೆ ಅದೇ ಎಪಿಸಿನ ಮಾಡಲು ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಾನು ಜಾಹೀರಾತು ಮತ್ತು ಮರಾಠಿ ಕಿರುಚಿತ್ರಗಳಲ್ಲಿ ನಟಿಸುತ್ತಿರುವೆ. ಹಾಗೇ ಒಂದು ಬಿಗ್ ಬಜೆಟ್ ಮರಾಠಿ ಸಿನಿಮಾ ಕೂಡ ಮಾಡಿದ್ದೀವಿ' ಎಂದಿದ್ಧಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.