
ಹಾಯ್ ಫ್ರೆಂಡ್.....ಎಂದು ಏರು ಧ್ವನಿಯಲ್ಲಿ ಕಿರುಚುತ್ತಾ ರೀಲ್ಸ್ ಮಾಡುವ ರೇಶ್ಮಾ ಆಫ್ ಕ್ವೀನ್ ಉರ್ಫ್ ರೇಶ್ಮಾ ಆಂಟಿ ಕಣ್ಣೀರಿಟ್ಟಿದ್ದಾರೆ. ಕಲರ್ಸ್ ಕನ್ನಡ ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಸ್ಪರ್ಧಿಸುತ್ತಿರುವ ರೇಶ್ಮಾ ತವರು ಮನೆಯವರು ಮಾತನಾಡಿಸುತ್ತಿಲ್ಲ ಅದಕ್ಕೆ ರೀಲ್ಸ್ ಕಾರಣ ಎಂದು ಹೇಳಿದ್ದರು. ರೇಶ್ಮಾ ಜೀವನದಲ್ಲಿ ಎಷ್ಟು ಕಷ್ಟಗಳನ್ನು ನೋಡಿದ್ದಾರೆ ಅಯ್ಯೋ ಪಾಪ ಎಂದು ಕಾಮೆಂಟ್ ಮಾಡುತ್ತಿದ್ದವರಿಗೆ ತಮ್ಮ ಜೀವನದ ರಿಯಲ್ ಸ್ಟೋರಿ ಹಂಚಿಕೊಂಡಿದ್ದಾರೆ.
ಕೆಲಸ ಹುಡುಗಿ ಕೊಂಡು ಮನೆ ಬಿಟ್ಟು ಬಂದ ರೇಶ್ಮಾ ತಂದೆಯ ಸ್ನೇಹಿತರ ಸಹಾಯದಿಂದ ಪಿಜಿಯಲ್ಲಿ ವಾಸಿಸುತ್ತಾರೆ. ಕೇವಲ 2 ತಿಂಗಳಿನಲ್ಲಿ ಪತಿ ಪರಿಚಯವಾಗುತ್ತಾರೆ. ಆದರೆ ಗರ್ಭಿಣಿ ಆದ ಮೇಲೆ ತಿಳಿಯುತ್ತದೆ ಆತನಿಗೆ ಆಗಲೇ ಮದುವೆಯಾಗಿ 10 ವರ್ಷ ಆಗಿರುತ್ತದೆ. ವರ್ಷದೊಳಗೆ ಗಂಡು ಮಗುವಿಗೆ ಜನ್ಮ ನೀಡುತ್ತಾರೆ ಅದಾದ ಮತ್ತೊಂದು ವರ್ಷಕ್ಕೆ ಮಗಳು ಹುಟ್ಟುತ್ತಾಳೆ. ಅತ್ತೆ ಕಾಟ ಇದ್ದ ಕಾರಣ ತಾಯಿ ಸಹಾಯ ಪಡೆದು ಬಾಣಂತ ಮಾಡಿಸಿಕೊಳ್ಳುತ್ತಾರೆ. ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಎದುರಾದಾಗ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿಂದ ದುಡಿಯಲು ಶುರು ಮಾಡಿದವಳು ಇಲ್ಲಿವರೆಗೂ ದುಡಿಯುತ್ತಿರುವೆ, ನನ್ನ ಗಂಡ ಕೆಲಸ ಮಾಡುವುದಿಲ್ಲ ಎಂದು ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಭಾವುಕರಾಗಿದ್ದಾರೆ.
ದಿನಕ್ಕೆ ಮೂರ್ನಾಲ್ಕು ವೈರಲ್ ವಿಡಿಯೋ ಹಾಕೋ ರೇಶ್ಮಾ; ಆಂಟಿ ತುಂಬಾ ತುಂಟಿ ಎಂದ ನೆಟ್ಟಿಗರು!
ನನ್ನ ಗಂಡ ಎರಡು ದಿನದ ಮೇಲೆ ಕೆಲಸ ಮಾಡುವುದಿಲ್ಲ ನಾನೇ ದುಡಿದು ಸಾಕಬೇಕು ಅಂತಾರೆ. ಕುಡಿದು ಬಂದು ಜಗಳ ಮಾಡುತ್ತಾರೆ ನನಗೆ ಹುಷಾರಿಲ್ಲ ಎಂದು ಹೇಳಿದರೂ ನೋಡಲ್ಲ. ಜನರ ಮುಂದೆ ಹೇಗಿರುತ್ತಾರೆ ನನ್ನ ಜೊತೆ ಹಾಗೆ ಇರುವುದಿಲ್ಲ. ಅಪ್ಪ ಅಮ್ಮ ಮನೆಗೆ ಬಾರದಂತೆ ಮಾಡಿದ್ದಾರೆ....ಒಂಥರಾ ಬೇವರ್ಸಿ ಅನಾಥೆ ರೀತಿ ಇದ್ದೀನಿ. ಒಂದು ವಾರ ಆದ್ಮೇಲೆ ಮಕ್ಕಳನ್ನು ನೋಡುತ್ತಿರುವೆ. ರೀಲ್ಸ್ ಮಾಡಬಾರದು ಕೆಟ್ಟದು ಎಂದು ಅಮ್ಮ ಮಾತನಾಡುವುದು ಬಿಟ್ಟರು. ಅಪ್ಪ ಬಿಟ್ಟು ಯಾರೂ ನನ್ನ ಜೊತೆ ಮಾತನಾಡುತ್ತಿಲ್ಲ. ಕಷ್ಟ ಪಟ್ಟು ಜೀವನ ಮಾಡುತ್ತಿರುವೆ ದುಡಿದು ದುಡಿದು ಇದುವರೆಗೂ ಸುಖ ಅಂದ್ರೆ ಏನೆಂದು ಗೊತ್ತಿಲ್ಲ...ನಾಯಿ ತರ ದುಡಿಮೆ ಮಾಡಿದ್ದೀನಿ ಎಂದು ರೇಶ್ಮಾ ಕಣ್ಣೀರಿಟ್ಟಿದ್ದಾರೆ.
ಅಮ್ಮನಿಗೆ ಚಿನ್ನದ ಉಂಗುರ ಕೊಡಿಸಿದ ವರುಣ್ ಆರಾಧ್ಯ; ಶೋಕಿ ಕಮ್ಮಿನೇ ಆಗಿಲ್ಲ ಎಂದು ಕಾಲೆಳೆದ ನೆಟ್ಟಿಗರು!
ಇವತ್ತಿಗೂ ಮನೆಯಲ್ಲಿ ಕುಳಿತುಕೊಂಡು ಊಟ ಮಾಡುತ್ತಾರೆ ನಮ್ಮ ಯಜಮಾನರು ನಾನು ಹೊರಗೆ ಹೋಗಿ ಕೆಲಸ ಮಾಡಬೇಕು. ಗಂಡಸಿನ ರೀತಿ ದುಡಿಯಬೇಕು ಆದರೆ ಅವರು ಸುಮ್ಮನೆ ಇರುತ್ತಾರೆ. ನನಗೆ ಬೇಸರ ಆಗುವ ರೀತಿ ಕೆಲಸ ಮಾಡುತ್ತಾರೆ ಅವರಿಗೆ ಇರುವ ಕೇಡು ಬುದ್ಧಿ ಕಡಿಮೆ ಆಗಿಲ್ಲ ಎಂದು ರೇಶ್ಮಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.