ಕಾಟನ್ ಕ್ಯಾಂಡಿ ಸಿಕ್ಕಾಪಟ್ಟೆ ಇಷ್ಟ ಪಡುವವರು ಕೋರಮಂಗಲದಲ್ಲಿರವ ಈ ಜಾಗಕ್ಕೆ ಒಮ್ಮೆ ವಿಸಿಟ್ ಕೊಡಬೇಕು ಎನ್ನುತ್ತಾರೆ ನಿವಿ. ಬ್ರೈನ್ ಪಾಪ್ ನಿಜಕ್ಕೂ ಎನ್ ಮಾಡುತ್ತದೆ....
ಕನ್ನಡ ಕಿರುತೆರೆ ಬಾರ್ಬಿ ಡಾಲ್, ಬಿಗ್ ಬಾಸ್ ಸ್ಪರ್ಧಿ ಹಾಗೂ ಗಿಚ್ಚಿ ಗಿಲಿಗಿಲಿ ವಿನ್ನರ್ ನಿವೇದಿತಾ ಗೌಡ ಯುಟ್ಯೂಬ್ ಚಾನೆಲ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೇರ್ ಸ್ಟೈಲ್, ಮೇಕಪ್, ಶಾಪಿಂಗ್ ಹಾಗೂ ಶೂಟಿಂಗ್ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳುತ್ತಾರೆ. ಹೀಗಿರುವಾಗ ನಿವಿ ಡಿಫರೆಂಟ್ ಆಗಿರುವ ಕಾಟನ್ ಕ್ಯಾಂಡಿ ಸೇವಿಸಬೇಕು ಎಂದು ಕೊರಮಂಗಲದಲ್ಲಿರುವ ಕ್ಯಾಂಡಿ ಅಂಗಡಿಗೆ ಭೇಟಿ ನೀಡಿ ಇಡೀ ದಿನ ಎಂಜಾಯ್ ಮಾಡುತ್ತಾರೆ.
'ನಾನು ತುಂಬಾ ಇಷ್ಟ ಪಡುವ ಕಾಟನ್ ಕ್ಯಾಂಡಿ ತಿನ್ನಲು ಕೋರಮಂಗಲ ಕಡೆ ಪ್ರಯಾಣ ಮಾಡುತ್ತಿರುವೆ. ರಸ್ತೆಯಲ್ಲಿ ಪ್ರಯಾಣ ಮಾಡುತ್ತಿರುವ ಕ್ಯಾಂಡಿ ಕಂಡರೆ ಬಿಡುವುದಿಲ್ಲ ಎಷ್ಟೇ ಟ್ರಾಫಿಕ್ ಇದ್ದರೂ ಮೊದಲು ನಿಲ್ಲಿಸಿ ಕ್ಯಾಂಡಿ ಖರೀದಿಸುವೆ. ಮೈಸೂರಿನಲ್ಲಿ ಎಕ್ಸಿಬಿಷನ್‌ಗಳು ಹೆಚ್ಚಿಗೆ ನಡೆಯುತ್ತಿತ್ತು ಸಕ್ಕರೆ ಹಾಕಿ ರೌಂಡ್ ಮಾಡಿ ಪಿಂಕ್ ಬಣ್ಣದ ದೊಡ್ಡ ಕ್ಯಾಂಡಿ ಕೊಡುತ್ತಿದ್ದರು ಆಗ ಎರಡೂ ಕೈಗಳಲ್ಲಿ ಎರಡು ಕ್ಯಾಂಡಿ ಹಿಡಿದುಕೊಂಡು ಹೋಗುತ್ತಿದ್ದೆ. ಡಿಫರೆಂಟ್ ಆಗಿರುವ ಸ್ಥಳದಲ್ಲಿ ಕ್ಯಾಂಡಿ ಸೇವಿಸುತ್ತಿರುವ ಹೀಗಾಗಿ ಪಿಂಕ್ ಬಣ್ಣದ ಔಟ್‌ಫಿಟ್‌ಗೆ ಪಿಂಕ್ ಬ್ಯಾಗ್‌ನ ಮ್ಯಾಚ್ ಮಾಡುವೆ'ಎಂದು ಮಾತನಾಡುವ ಮೂಲಕ ನಿವಿ ವಿಡಿಯೋ ಆರಂಭಿಸಿದ್ದಾರೆ.
ನಿವೇದಿತಾ ಗೌಡ ಅಡುಗೆ ತಿಂದು ಆಂಬ್ಯುಲೆನ್ಸ್ ಕೇಳಿದ ಕ್ಯಾಮೆರಾ ಮ್ಯಾನ್; ವಿಡಿಯೋ ವೈರಲ್!
'ಅಂಗಡಿ ಪ್ರವೇಶಿಸುತ್ತಿದ್ದಂತೆ ಮಾಲೀಕರ ಅನುಮತಿ ಪಡೆದುಕೊಂಡು ಕಾಟನ್ ಕ್ಯಾಂಡಿ ಮಾಡುವುದು ಹೇಗೆಂದು ನಿವಿ ಕಲಿತುಕೊಂಡಿದ್ದಾರೆ. ಕೈಯಲ್ಲಿ ಹಿಡಿದುಕೊಂಡು ಕಾಟನ್ ಕ್ಯಾಂಡಿ ಮಾಡುವಾಗ ಸಕ್ಕರೆ ಖಾಲಿ ಆಗುತ್ತದೆ ಮತ್ತೊಮ್ಮೆ ಆರಂಭಿಸಿ ಒಂದು ಆಕಾರಕ್ಕೆ ನಿವಿ ತರುತ್ತಾರೆ. 'ಹೇರ್ ಕಟ್ ಮಾಡಿಸಿಲ್ಲ ಅಂದ್ರೆ ಹೇಗಿರುತ್ತೆ ಕೂದಲು ಆ ರೀತಿ ಕ್ಯಾಂಡಿ ಮಾಡಿರುವೆ' ಎಂದು ನಿವಿ ತಮ್ಮ ಬಗ್ಗೆ ತಾವೇ ಹಾಸ್ಯ ಮಾಡಿಕೊಂಡಿದ್ದಾರೆ. ಕೊನೆ ಕೊನೆಯಲ್ಲಿ ನಿವಿ ಮಾಡಿದ ಕ್ಯಾಂಡಿ ಡ್ಯಾಮೇಜ್ ಆಗಿರುವ ಕಾರಣ ಅದನ್ನೇ ತಿಂದರು. ಗೊಂಬೆ ಶೇಪ್ ಮಾಡಿಕೊಟ್ಟು ನಂತರ ನಿವಿ ಎಂಜಾಯ್ ಮಾಡಿದ್ದಾರೆ.
ಹಾಸಿಗೆಯಿಂದ ಎದ್ದೇಳಲು ಆಗಲ್ಲ, ಟೂತ್‌ಬ್ರಶ್‌ನಲ್ಲಿ ಉಗುರು ಕ್ಲೀನ್ ಮಾಡುವೆ: ನಿವೇದಿತಾ ಗೌಡ
'ಮತ್ತೊಂದು ವೆರೈಟಿ ಟ್ರೈ ಮಾಡಲು ಮುಂದಾದ ನಿವಿ ಕ್ಯಾಂಡಿ ನಡುವೆ ಐಸ್ ಕ್ರೀಂ, ಚಾಕೋಲೆಟ್, ಮ್ಯಾಜಿಕ್ ಪಾಪ್ ಸೇರಿದಂತೆ ಹವಲು ರುಚಿ ರುಚಿ ಐಟಂ ಸೇರಿಸಿಕೊಳ್ಳುತ್ತಾರೆ. 'ಮೈಸೂರಿನಲ್ಲಿ ಒಮ್ಮೆ ನಾನು ಮ್ಯಾಜಿಕ್ ಪಾಪ್ ಸೇವಿಸಿದೆ ಆಗ ಅದರ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ ನನ್ನ ಬ್ರೈನ್ ಪಾಪ್ ಆಗುತ್ತಿದೆ ಅಂದುಕೊಂಡು ಫುಲ್ ಹೆದರಿಕೊಂಡು ಸತ್ತು ಹೋಗುವೆ ಅಂದುಕೊಂಡಿದ್ದೆ. ಮ್ಯಾಜಿಕ್ ಪಾಪ್ ಬಗ್ಗೆ ಅವರಿಗೆ ಹೇಳಿರಲಿಲ್ಲ ಆದರೆ ಅಂದು ನನ್ನ ಲಾಸ್ಟ್ ದಿನ ಎಂದು ಎಂಜಾಯ್ ಮಾಡಿಕೊಂಡು ಖುಷಿಯಾಗಿದ್ದೆ. ಎರಡು ದಿನಗಳ ನಂತರ ಅದು ಚಾಕೋಲೇಟ್ ಎಂದು ತಿಳಿಯಿತ್ತು' ಎಂದು ನಿವಿ ಎಂಜಾಯ್ ಮಾಡಿದ್ದಾರೆ.
ವಿಡಿಯೋ ಶೂಟ್ ಮಾಡುವ ಸಮಯದಲ್ಲಿ ಅಭಿಮಾನಿಗಳು ಬಂದು ನಿವಿ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ನಾವು ನಿಮ್ಮ ಅಭಿಮಾನಿ ನಿಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ತಪ್ಪದೆ ಪ್ರತಿಯೊಂದು ವಿಡಿಯೋ ನೋಡುತ್ತೀವಿ ಎಂದಿದ್ದಾರೆ. ಕನ್ನಡಗರ ಪ್ರೀತಿಗೆ ನಿವಿ ಫಿದಾ ಆಗಿದ್ದಾರೆ.