ಮದುವೆ ಆಗೋ ಹುಡುಗಿ ಹೆಸರು, ಮದುವೆ ಪ್ಲ್ಯಾನ್, ಪರ್ಸನಲ್ ಲೈಫ್ ಬಗ್ಗೆ ರಿವೀಲ್ ಮಾಡಿದ ಒಳ್ಳೆ ಹುಡುಗ ಪ್ರಥಮ್.
ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಟ ಹಾಗೂ ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಎಂಗೇಜ್ ಆಗಿರುವ ಫೋಟೋ ಅಪ್ಲೋಡ್ ಮಾಡಿ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಹುಡುಗ ಮುಖ ತೋರಿಸಿ, ಹೆಸರು ಏನು? ಏನು ಓದಿದ್ದಾರೆ ಎಲ್ಲಿ ಕೆಲಸ ಮಾಡುತ್ತಿದ್ದಾರೆ ಹೇಗೆ ಪರಿಚಯ ಅಂತ ಸಾಕಷ್ಟು ಪ್ರಶ್ನೆಗಳು ಹರಿದು ಬಂದಿತ್ತು.
'ಹುಡುಗಿ ಹೆಸರು ಭಾನುಶ್ರೀ. ಅವ್ರು ಅಷ್ಟು ಮಾತನಾಡುವುದಿಲ್ಲ ನನ್ನಷ್ಟು ಯೋಚನೆ ಮಾಡಲ್ಲ ಅದರಿಂದ ಟ್ಯಾಲೆಂಟ್ ಅಷ್ಟಾಗಿ ಏನೂ ಇಲ್ಲ ಸುಮಾರು. ನೇರವಾಗಿ ಹೇಳುವೆ..ಸಿದ್ಧರಾಮಯ್ಯ ಅವರ ಶ್ರೀಮತಿ ರವಿಚಂದ್ರನ್ ಅವರ ಶ್ರೀಮತಿ ಹೇಗಿದ್ದಾರೋ ಆ ತರ ಇರುವ ಹುಡುಗಿ ನೋಡಿ ಮದುವೆ ಮಾಡಿಕೊಂಡಿರುವೆ. ಅತಿಯಾಗಿ ಸೋಷಿಯಲ್ ಮೀಡಿಯಾ ತಲೆ ಕೆಡಿಸಿಕೊಳ್ಳುವುದು ಅಲ್ಲೇನೋ ಕಾಮೆಂಟ್ ನೋಡಿ ತಲೆ ಕೆಡಿಸಿಕೊಂಡು ಕುಳಿತು ಬಿಡುವುದು ಇದ್ಯಾವುದು ಇಲ್ಲ. ತುಂಬಾ ದೊಡ್ಡ ಸುದ್ದಿಯಾಗಿ ಯಾರಾದರೂ ಅವರ ಕಿವಿ ಕೇಳಿ ಅದು ಸುದ್ದಿ ಆಗಿದರೆ ಮಾತ್ರ ಗೊತ್ತಾಗಬೇಕು ಅಂತಹ ಹುಡುಗಿ ಮದುವೆ ಮಾಡಿಕೊಳ್ಳುತ್ತಿರುವೆ. ಸಂತೋಷವಾಗಿ ಬದುಕುವುದಕ್ಕೆ ಏನು ಬೇಕು ಅದು ಭಾನುಶ್ರೀ ಬಳಿ ಇದೆ ಎಕ್ಸಟ್ರಾ ತೆಗೆದುಕೊಳ್ಳುವುದಕ್ಕೆ ರೆಡಿಯಾಗಿಲ್ಲ. ಯಾವುದೋ ಟಿಕ್ ಟಾಕ್ ರೀಲ್ಸ್ ನೋಡಿದರೆ ನಾನು ಖುಷಿಯಾಗಿರುವೆ ಅನ್ನೋ ಮೈಂಡ್ ಸೆಟ್‌ನಲ್ಲಿ ಅವರು ಇಲ್ಲ ವಿಚಿತ್ರವಾಗಿ ಕುಣಿಯುವವರನ್ನು ನೋಡುವ ಹುಚ್ಚು ಇಲ್ಲ ಯಾವುದೋ ಕಾಮಿಡಿ ನೋಡಿ ನಗುವ ಅಗತ್ಯವಿಲ್ಲ ಇರುವುದರಲ್ಲಿ ಕಾಮಿಡಿ ಹುಡುಕಿಕೊಂಡು ನೆಮ್ಮದಿಯಾಗಿದ್ದಾರೆ' ಎಂದು ಕನ್ನಡ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ್ದಾರೆ.
ಒಳ್ಳೆ ಹುಡುಗ ಪ್ರಥಮ್ ಮದ್ವೆ ಆಗೋ ಹುಡುಗಿ ಫೋಟೋ ಲೀಕ್!
'ಇರಲಿ ಬಿಡಿ ಖುಷಿಯಾಗಿ ಯಾಕೆ ಎಳೆದುಕೊಂಡು ಮಾಧ್ಯಮ ಮುಂದೆ ತರುವುದು? ಸೋಷಿಯಲ್ ಮೀಡಿಯಾದಲ್ಲಿ ಜನ ಹುಚ್ಚರಾಗಿದ್ದಾರೆ ನೋಡಿ ಇದು ನನ್ನ ಮಗು ನನ್ನ ಮಗು ನಡೆಯುತ್ತಿದೆ ಇದು ನೋಡಿ ಹಾಗೆ ಹೀಗೆ ಅಂತ ಸುದ್ದಿ ಮಾಡುತ್ತಾರೆ ಆದರೆ ನಾವು ಇದ್ಯಾವುದು ಮಾಡುವುದಿಲ್ಲ ಏಕೆಂದರೆ 140 ಕೋಟಿ ಜನಸಂಖ್ಯೆ ಇದೆ ಯಾರು ಹುಟ್ಟಿಸದೇ ಇರುವುದನ್ನು ನಾನು ಹುಟ್ಟಿಸಿರುತ್ತೀನಾ? ನಾನು ಹುಲಿ ಸಿಂಹ ಹುಟ್ಟಿಸಿದರೆ ತೋರಿಸಬೇಕು. ಮದ್ವೆ ಆದ್ಮೇಲೆ ನಿಮಗೆ ಹೇಗೆ ಮಗು ಆಗುತ್ತೋ ಹಾಗೆ ನಂಗು ಆಗೋದು ಅದೊಂದು ವಿಚಾರ ಜನರಿಗೆ ತಿಳಿಸಬೇಕು ತಿಳಿಸೋಣ ಅಷ್ಟೆ' ಎಂದು ಪ್ರಥಮ್ ಹೇಳಿದ್ದಾರೆ.
'ಒಂದು ವರ್ಷದಿಂದ ಕಾದಿರುವೆ ಮೊನ್ನೆ ನೋಡಿದೆ ನಿನ್ನೆ ಎಂಗೇಜ್‌ಮೆಂಟ್ ಆಯ್ತು ಮದುವೆ ವಿಚಾರಕ್ಕೆ ಕರೆದಾಗ ಮತ್ತೊಂದು ಸಲ ಹೋಗಿ ನೋಡುವೆ ಮದುವೆ ಸಂಸಾರ ಮಾಡಬೇಕು ಜೊತೆಗಿರಬೇಕು ಜೊತೆಗಿರುತ್ತೀವಿ ಅದು ಬಿಟ್ಟರೆ ಹುಡುಗಿ ಹಿಂದೆ ಹೋಗುವುದು ಸಂಜೆ ಸಿಗುತ್ತೀರಾ ಅಂತ ಕೇಳಲ್ಲ..ಭಾನುಶ್ರೀ ಬಳಿ ಫೋನ್ ಇಲ್ಲ. ನಾನು ಹೇಳುತ್ತಿರುವುದು ಸತ್ಯ. ತೀರ ಸಣ್ಣ ಕುಟುಂಬ ಒಳ್ಳೆ ಜನ. ನಾವು ಅದ್ಧೂರಿಯಾಗಿ ಮದುವೆಯಾಗಿದ್ದೀವಿ ಅಲ್ಲ ಎಷ್ಟು ಅದ್ಧೂರಿಯಾಗಿ ಬದುಕುತ್ತೀವಿ ಅನ್ನೋದು ಮುಖ್ಯ. ಎಂಗೇಜ್‌ಮೆಂಟ್ ಆದ ಅರ್ಧ ಗಂಟೆಯಲ್ಲಿ ಮುಂಬೈಗೆ ಕೆಲಸದ ಮೇಲೆ ಹೋಗಿದೆ ಸಿನಿಮಾ ಮುಗಿಸಿಕೊಂಡು ಬಂದೆ' ಎಂದಿದ್ದಾರೆ ಪ್ರಥಮ್.
'ನನ್ನ ಎಂಗೇಜ್‌ಮೆಂಟ್ ಊಟ ಯಾರಿಗೂ ಹಾಕಿಸಿಲ್ಲ 138 ಜನ ಇರುವ ವೃದ್ಧಾಶ್ರಮ ಇದೆ ಅಲ್ಲಿ ಊಟ ಹಾಕಿಸುತ್ತಿರುವೆ. ಮದುವೆ ಎಲ್ಲಿ ಮಾಡುತ್ತಾರೋ ಅಲ್ಲಿ. ನಾವು ಅದ್ಧೂರಿಯಾಗಿ ಮಾಡುತ್ತಿಲ್ಲ ಯಾರನ್ನು ಕರೆಯುತ್ತಿಲ್ಲ ಅವರು ಮಾಡಿಕೊಟ್ಟಂತೆ. ನನ್ನ ಶ್ರೀಮತಿ ತುಂಬಾ ಸಿಂಪಲ್ ಡಿಗ್ರಿ ಮಾಡುವವರೆಗೂ ಮೊಬೈಲ್ ತೆಗೆದುಕೊಂಡಿರಲಿಲ್ಲ ಮಾಸ್ಟರ್ ಡಿಗ್ರಿ ಮಾಡುವಾಗ ಫೋನ್ ಬಳಸುತ್ತಿದ್ದಾರೆ ಅದು ಅಣ್ಣನ ಮೊಬೈಲ್. ಒಳ್ಳೆಯದಾಗಲಿ ಎಂದು ವಿಶ್ ಮಾಡಿ' ಎಂದು ಪ್ರಥಮ್ ಹೇಳಿದ್ದಾರೆ.