
ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ವರ್ಷಕ್ಕೆಂದು ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಅದುವೇ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ (Dancing Championship). ಇಂಟರ್‌ನ್ಯಾಷನಲ್ ಡ್ಯಾನ್ಸರ್ ಮಯೂರಿ (Mayuri Upadhya), ನಟ ವಿಜಯ್ ರಾಘವೇಂದ್ರ (Vijay Raghavedndra) ತೀರ್ಪುಗಾರಿಕೆಯಲ್ಲಿ ನಡೆಯುತ್ತಿರುವ ಈ ಶೋಗೆ ಅಕುಲ್ ಬಾಲಾಜಿ (Akul Balaji) ನಿರೂಪಕ. ಕಾರ್ಯಕ್ರಮದ ಓಪನಿಂಗ್ ಗ್ರ್ಯಾಂಡ್ ಶೋ ಚಿತ್ರೀಕರಣವಾಗಿದ್ದು, ಸ್ಪರ್ಧಿಗಳನ್ನು ಪರಿಚಯ ಮಾಡಿಕೊಡಲಾಗಿದೆ.
ಮಯೂರಿ ಮಾತು:
'ಟಿವಿಯಲ್ಲಿ ನಾನು ಜಡ್ಜ್ (Judge) ಆಗಿ ಕಾಣಿಸಿಕೊಂಡ ನಂತರ ನನಗೆ ಸಿನಿಮಾ ಮತ್ತು ಇನ್ನಿತರ ವಾಹಿನಿಗಳಿಂದ ಆಫರ್‌ಗಳು ಬಂದಿತ್ತು. ಆದರೆ ನಾನೇ ತುಂಬಾ choosy ಆಗಿದ್ದೆ. ಏಕೆಂದರೆ ನಾನು ಕೆಲಸ ಮಾಡುವ ಸ್ಥಳದ ವಾತಾವರಣ (Work Environment) ತುಂಬಾನೇ ಮುಖ್ಯ. ಈ ಹಿಂದೆ ಕೆಲಸ ಮಾಡಿರುವ ವಾಹಿನಿಗಳು ನನ್ನ ಕುಟುಂಬವಿದ್ದಂತೆ, ಹೀಗಾಗಿ ಹೊಸ ಪ್ರಾಜೆಕ್ಟ್‌ನ ಒಪ್ಪಿಕೊಳ್ಳುವಂತೆ ಮಾಡಿದೆ. ಮತ್ತೊಂದು ಹೊಸ ಅನುಭವ ಎಂಜಾಯ್ ಮಾಡಲು ಕಾಯುತ್ತಿರುವೆ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಯೂರಿ ಮಾತನಾಡಿದ್ದಾರೆ.
ವಿವಿಧ ಕ್ಷೇತ್ರಗಳಿಂದ, ಊರುಗಳಿಂದ ಆಗಮಿಸಿ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಜೀವನದಲ್ಲಿ ದೊಡ್ಡ ತಿರುವು ನೀಡುವುದು ಕಿರುತೆರೆ ವೇದಿಕೆಗಳು. 'ವೇದಿಕೆ ಮೇಲೆ ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ವೀಕ್ಷಕರಿಗೆ ಹತ್ತಿರವಾಗುತ್ತಾರೆ. ಅವರ ಕಷ್ಟಗಳು ನಮ್ಮ ಸಪೋರ್ಟ್ ಸಿಸ್ಟಮ್‌ಗಳ (Support System) ಬಗ್ಗೆ ನಮ್ಮ ಜೊತೆಗೂ ಹಂಚಿಕೊಳ್ಳುತ್ತಾರೆ, ಇದರಿಂದ ನಮಗೆ ಅದೆಷ್ಟೋ ನೆನಪುಗಳು ಮತ್ತು ಜೀವನದ ಪಾಠ ಕಲಿಸುತ್ತದೆ. ತೀರ್ಪುಗಾರರಾಗಿ ನಮ್ಮ ಕಾಮೆಂಟ್ ಅವರ ಜೀವನವನ್ನೇ ಬದಲಾಯಿಸುತ್ತದೆ. ನನ್ನ ಹಿಂದಿನ ಕಾರ್ಯಕ್ರಮದಲ್ಲಿ ನಾನು ಸ್ಕಾಲರ್‌ಶಿಪ್ (Scholarship) ಕೊಟ್ಟು ಕೆಲವು ಸ್ಪರ್ಧಿಗಳನ್ನು ನನ್ನ ತಂಡಕ್ಕೆ ಆಹ್ವಾನಿಸಿದ್ದೆ. ಈ ಕೊರೋನಾ ಪ್ಯಾಂಡಮಿಕ್‌ನಿಂದ (Covid19 pandemic) ಲೈವ್ ಶೋಗಳು ಕಡಿಮೆ ಆಗಿವೆ. ರಿಯಾಲಿಟಿ ಶೋಗಳು ಮಾತ್ರ ರಿಯಲ್ ಟ್ಯಾಲೆಂಟ್‌ಗೆ ವೇದಿಕೆ ಕೊಡುತ್ತದೆ,' ಎಂದು ಮಯೂರಿ ಹೇಳಿದ್ದಾರೆ.
ಫಸ್ಟ್ ಡೇ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಮೇಘನಾ ರಾಜ್ (Meghana Raj) ಪಾಲ್ಗೊಳ್ಳಲ್ಲಿದ್ದಾರೆ. ವಾಹಿನಿ ಸಣ್ಣ ಪ್ರೋಮೋ ಕೂಡ ಬಿಡುಗಡೆ ಮಾಡಿದೆ. 'ಜೀವನದಲ್ಲಿ ಅನೇಕ ಮೊದಲುಗಳು ಇರುತ್ತವೆ. ಮೊದಲ ಬಾರಿ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗಿ. ಕಲರ್ಸ್ ಕನ್ನಡ, ಸೃಜನ್ ಲೋಕೇಶ್ (Srujan Lokesh), ಮತ್ತು ಲೋಕೇಶ್ ಪ್ರೊಡಕ್ಷನ್‌ಗೆ ಧನ್ಯವಾದಗಳು. ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ನನ್ನನ್ನು ಸೆಲೆಬ್ರಿಟಿ ಜಡ್ಜ್ ಆಗಿ ಬರ ಮಾಡಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಪ್ರತಿಯೊಬ್ಬ ಟ್ಯಾಲೆಂಟೆಡ್ ಸ್ಪರ್ಧಿಗೂ ಧನ್ಯವಾದಗಳು. ವಿಜಯ್ ರಾಘವೇಂದ್ರ (Vijay Raghavendra) ಮತ್ತು ಮಯೂರಿ (Mayuri) ಅವರ ಜೊತೆ ಸಮಯ ಕಳೆಯುವುದು ತುಂಬಾನೇ ಸಂತೋಷವಾಗಿದೆ. ನಿರೂಪಕ ಅಕುಲ್ ಬಾಲಾಜಿ, ನೀವು ಕೂಡ ಸೂಪರ್,' ಎಂದು ಮೇಘನಾ ಬರೆದುಕೊಂಡಿದ್ದಾರೆ.
ಸದ್ಯಕ್ಕೆ ಎರಡು ಜೋಡಿಗಳು ಯಾರೆಂದು ಮಾತ್ರ ರಿವೀಲ್ ಮಾಡಲಾಗಿದೆ. ಕಿರುತೆರೆ ನಟ ಸೂರಜ್ (Soorja) ಹಲವು ವರ್ಷಗಳ ನಂತರ ಮತ್ತೆ ಡ್ಯಾನ್ಸ್ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಸೂರಜ್‌ಗೆ ಜೋಡಿಯಾಗಿ ಹನಿಶಾ ಕಾಣಿಸಿಕೊಳ್ಳಲಿದ್ದಾರೆ. ಡ್ಯಾನ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಧಾರಾವಾಹಿಗೆ ಗುಡ್‌ಬೈ ಹೇಳಿದ್ದ ಚಂದನಾ ಅನಂತಕೃಷ್ಣ (Chandana Anantha Krishna) ಅವರಿಗೆ ಅಕ್ಷತಾ (Akshatha) ಜೋಡಿಯಾಗಿದ್ದಾರೆ. ಈ ಎರಡೂ ಜೋಡಿಗಳು ವಾಹಿನಿ ಪೇಜ್‌ನಿಂದ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.