ಮೂಲೆಯಲ್ಲಿ ಕೂತ್ಕೊಂಡು ನನ್ನ ವಿಡಿಯೋ ಮಾಡ್ಬೇಡಿ ನೀವು ಎಂಥಾ ಚಪರ್‌ಗಳು: ವರ್ತೂರ್ ಸಂತೋಷ್

Published : May 13, 2024, 04:11 PM IST
ಮೂಲೆಯಲ್ಲಿ ಕೂತ್ಕೊಂಡು ನನ್ನ ವಿಡಿಯೋ ಮಾಡ್ಬೇಡಿ ನೀವು ಎಂಥಾ ಚಪರ್‌ಗಳು: ವರ್ತೂರ್ ಸಂತೋಷ್

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರ ಮೇಲೆ ಗರಂ ಆದ ವರ್ತೂರ್ ಸಂತೋಷ್. 

ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಬಿಗ್ ಬಾಸ್ ಸೀಸನ್‌ 10ರಲ್ಲಿ ಸ್ಪರ್ಧಿಸಿ ವಿನ್ನರ್‌ಗಿಂತ ಹೆಚ್ಚು ಜನಪ್ರಿಯೆ ಪಡೆದರು. ಸಂತೋಷ್‌ನ ಭೇಟಿ ಮಾಡಲು ಸುಮಾರು ಎರಡು ಮೂರು ಗಂಟೆ ಕಾಯಬೇಕು. ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ವೈಯಕ್ತಿಕ ಜೀವನ ಕೆಲವೊಂದು ವಿಚಾರ ದೊಡ್ಡದಾಗುತ್ತಿದೆ. ಆರ್‌ಜೆ ರಾಕೇಶ್‌ ಯುಟ್ಯೂಬ್ ಸಂದರ್ಶನದಲ್ಲಿ ವರ್ತೂರ್ ಪ್ರತಿಕ್ರಿಯೆ ನೀಡಿದ್ದಾರೆ. 

'ಇದುವರೆಗೂ ನಾವು ಏನೇ ನಿರ್ಧಾರ ತೆಗೆದುಕೊಂಡರೂ ಅದು ದೊಡ್ಡವರ ಮಾತಿನಂತೆ. ನನ್ನ ಕುಟುಂಬದಲ್ಲಿ ಭಾಗ ಆಗಿರುವುದು ನಮ್ಮ ಅಕ್ಕ ಪಕ್ಕದವರಿಗೂ ಗೊತ್ತಾಗಿಲ್ಲ. ನಮ್ಮ ದೊಡ್ಡಪ್ಪ ಹೆಣ್ಣು ನೋಡಿಕೊಂಡು ಬರುವಾಗ ಮಾತು ಕೊಟ್ಟಿಬಿಟ್ಟರು ಅದಿಕ್ಕೆ ಮದುವೆ ಮಾಡಿಕೊಂಡೆ. ನಾನು ಹುಡುಗಿಯನ್ನು ಭೇಟಿ ಮಾಡಿರಲಿಲ್ಲ. ಮಿಸ್‌ ಮ್ಯಾಚ್ ಆಗುತ್ತದೆ...ಎಲ್ಲರ ಜೀವನದಲ್ಲೂ ಪಾಸಿಂಗ್ ಕ್ಲೌಡ್ ಇದ್ದೇ ಇರುತ್ತದೆ. ವೈಯಕ್ತಿಕ ವಿಚಾರಗಳನ್ನು ಪಬ್ಲಿಕ್‌ನಲ್ಲಿ ಚರ್ಚೆ ಮಾಡಬಾರದು ಯಾಕೆ ಅಂದ್ರೆ ನನ್ನ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ' ಎಂದು ವರ್ತೂರ್ ಸಂತೋಷ್ ಮಾತನಾಡಿದ್ದಾರೆ.

ಆ ತಪ್ಪಿಗೆ ಕ್ಷಮೆ ಕೇಳುತ್ತಾ ತಾಯಿಯ ಪಾದ ಪೂಜೆ ಮಾಡಿದ ವರ್ತೂರ್ ಸಂತೋಷ್!

'ಅಲ್ಲಿ ಒಬ್ಬ ಮಸಿ ಬಳೆಯುತ್ತೀನಿ ಎಂದು ಹೇಳಿದ್ದ ನಾನು ಅಲ್ಲಿಗೆ ಹೋದಾಗ 10 ಸಾವಿರ ಜನರಿದ್ದರು ಅವನು ಬಂದಿದ್ದರೆ ಧರಿಸಿರುವ ಬಟ್ಟೆಯಲ್ಲಿ ಒಂದು ತುಂಡು ಕೂಡ ಮನೆಗೆ ಹೋಗುತ್ತಿರಲಿಲ್ಲ. ಒಬ್ಬರ ಮೇಲೆ ಅಪಪ್ರಚಾರ ಮಾಡಬೇಡಿ ನೀವು ಎಷ್ಟು ಚಪರ್ ಎಂದು ತೋರಿಸುತ್ತದೆ. ಯಾಕೆ ನಾನು ಇಷ್ಟು ನೇರವಾಗಿ ಮಾತನಾಡುತ್ತೀನಿ ಅಂದ್ರೆ ನನ್ನ ಸ್ಥಾನದಲ್ಲಿ ನಿಂತು ಯೋಚನೆ ಮಾಡಬೇಕು. ನನ್ನ ಜೀವನದಲ್ಲಿ ದುಡ್ಡು ಮತ್ತು ಊಟದಲ್ಲಿ ಇಲ್ಲ ಆದರೆ ನನಗೆ ಜವಾಬ್ದಾರಿ ತುಂಬಾ ಇತ್ತು' ಎಂದು ವರ್ತೂರ್ ಸಂತೋಷ್ ಹೇಳಿದ್ದಾರೆ. 

ಬಿಡಣ್ಣ!! ಕಾಲಾಯ ತಸ್ಮೈ ನಮಃ ಅಷ್ಟೆ: ಜಗ್ಗೇಶ್‌ ಹೇಳಿಕೆಗೆ ಉತ್ತರ ಕೊಟ್ಟ ವರ್ತೂರ್ ಸಂತೋಷ್!

'ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ನನ್ನ ದೊಡ್ಡಪ್ಪ ಒಂದು ಮಾತು ಹೇಳಿದ್ದರು. ಮದುವೆ ವಿಚಾರವಾಗಿ ಅವರ ಬಗ್ಗೆ ಯಾವ ಮೀಡಿಯಾದಲ್ಲೂ ಮಾತನಾಡಬಾರದು ನಾವು ಇದ್ದೀವಿ ನಾವು ನೋಡಿಕೊಳ್ಳುತ್ತೀವಿ ಅಂದ್ರು. ನಮ್ಮ ಮನೆಯಲ್ಲಿ ನೂರಾರು ವಿಚಾರಗಳಿಗೆ ನ್ಯಾಯ ಆಗಿದೆ...ಅನ್ನ ಹಾಕುವ ಮನೆ ನಮ್ಮ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಲ್ಲ' ಎಂದಿದ್ದಾರೆ ವರ್ತೂರ್.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!