ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋದು ಇದಕ್ಕೇ ತಾನೆ?

By Suchethana D  |  First Published May 13, 2024, 3:52 PM IST

ಪೂರ್ಣಿಯನ್ನು ಸುಲಭದಲ್ಲಿ ಅಕ್ಕ ಎಂದು ಒಪ್ಪಿಕೊಂಡು ಬಿಟ್ಟಳಾ ದೀಪಿಕಾ? ಇಂಥ ಮೋಸಗಾತಿಯನ್ನು ನಂಬುತ್ತಿರುವ ಮುಗ್ಧೆ ಕುರಿತು ನೆಟ್ಟಿಗರು ಹೇಳ್ತಿರೋದೇನು? 
 


ಎಷ್ಟೋ ಮಂದಿ ಯಾವುದ್ಯಾವುದೋ ಸಂದರ್ಭಗಳಲ್ಲಿ ಮೋಸ ಹೋಗುವುದು ಇದೆ. ಅರಿಯದೇ ಮೋಸ ಹೋಗುವವರು ಒಂದೆಡೆಯಾದರೆ, ಸ್ವಲ್ಪವೂ ಬುದ್ಧಿ ಉಪಯೋಗಿಸದೇ ಯಾರದ್ದೋ ಮಾತನ್ನು ನಂಬಿ ಮೋಸ ಹೋಗುವ ದೊಡ್ಡ ವರ್ಗವೇ ಇದೆ. ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಮೋಸ ಮಾಡುವುದು, ಮನೆಯಲ್ಲಿರುವ ವಸ್ತುಗಳನ್ನು ಮುಟ್ಟಿ ಚಿನ್ನ ಮಾಡಿಕೊಡುವುದಾಗಿ ಹೇಳುವುದು, ಯಾವುದೋ ಲಿಂಕ್​ ಕಳುಹಿಸಿ ಅದನ್ನು ಓಪನ್​ ಮಾಡಿದರೆ ಒಂದಿಷ್ಟು ಹಣ ಬ್ಯಾಂಕ್​ಗೆ ಜಮೆ ಆಗುತ್ತದೆ ಎನ್ನುವುದು... ಹೀಗೆ ತೀರಾ ಕ್ಷುಲ್ಲಕ ಎನ್ನುವ ಕಥೆಗಳನ್ನು ಹೇಳಿ ಸುಶಿಕ್ಷಿತರು ಎಂದುಕೊಂಡವರನ್ನೇ ಮೋಸದ ಜಾಲಕ್ಕೆ ಬೀಸುವ ಸುದ್ದಿಗಳನ್ನು ದಿನನಿತ್ಯವೂ ಕೇಳುತ್ತಲೇ ಇರುತ್ತೇವೆ. ಅದರಲ್ಲಿಯೂ ಈಗ ಸೈಬರ್​ ಕ್ರೈಮ್​ ಕುರಿತು ಇಂಥ ಮೋಸ ಹೆಚ್ಚುತ್ತಲೇ ಸಾಗಿದೆ. ಅದಕ್ಕೇ ಹೇಳುವುದು, ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎನ್ನುವುದು. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿಯೂ ಇದೇ ರೀತಿ ಆಗಿದೆ.

ಇಲ್ಲಿ ಪೂರ್ಣಿ ತೀರಾ ಮುಗ್ಧೆ. ದೀಪಿಕಾ ಕುತಂತ್ರಿ. ದೀಪಿಕಾ ಎಂಥವಳು ಎಂದು ತಿಳಿದರೂ, ಪೂರ್ಣಿ ಆಕೆಯ ಮಾತನ್ನು ನಂಬಿ ಮೂರ್ಖಳಾಗಿದ್ದಾಳೆ. ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ನೆಟ್ಟಿಗರು ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋದು ಇದಕ್ಕೇ ತಾನೆ ಎನ್ನುತ್ತಿದ್ದಾರೆ. ಈ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಅನಾಥೆಯಾಗಿರುವ ಪೂರ್ಣಿಯೇ ತಮ್ಮ ಮಗಳು ಎಂದು ದೀಪಿಕಾ ಅಪ್ಪ ಕರೆದುಕೊಂಡು ಬಂದಿದ್ದಾನೆ. ಅವನಿಗೆ ಬೇಕಿರುವುದು ಪೂರ್ಣಿ ಅಲ್ಲ, ಬದಲಿಗೆ ಅವಳ ಹೆಸರಿಗೆ ಇರುವ ಆಸ್ತಿ.  ಇದ್ಯಾವುದರ ಅರಿವೂ ಇಲ್ಲದ ಪೂರ್ಣಿ, ತನ್ನ ಅಪ್ಪ-ಅಮ್ಮ ಸಿಕ್ಕ ಖುಷಿಗೆ ಎಲ್ಲವನ್ನೂ ನಂಬುತ್ತಿದ್ದಾಳೆ.

Tap to resize

Latest Videos

ಆ ನಟಿ ಕೈಕೊಟ್ಟಾಗ ಹೃದಯವೇ ಕಿತ್ತುಬಂತು, ಆಮೇಲೆ ಅದೃಷ್ಟದ ಬಾಗಿಲೇ ತೆರೆಯಿತು: ನಟ ಮಿಥುನ್​ ಚಕ್ರವರ್ತಿ

ದೀಪಿಕಾಳ ಅಪ್ಪ ಜನಾರ್ದನ ಕೂಡ ಪೂರ್ಣಿಯನ್ನು ತನ್ನ ಮಗಳು ಎಂಬಂತೆ ಹೇಳಿ, ಆಕೆಯ ಬಳಿ ಕ್ಷಮೆ ಕೋರಿದ್ದಾನೆ. ಆದರೆ ಮುಗ್ಧೆ ಪೂರ್ಣಿಗಾಗಲೀ, ಆಕೆಯ ಅಮ್ಮ ಪಂಕಜಳಿಗಾಗಲೀ ಈ ವಿಷಯ ಗೊತ್ತೇ ಆಗುತ್ತಿಲ್ಲ. ಇತ್ತ ಪೂರ್ಣಿಗೆ ಅಪ್ಪ ಈ ರೀತಿಯ ಮುತುವರ್ಜಿ ವಹಿಸುತ್ತಿರುವುದನ್ನು ದೀಪಿಕಾ ಸಹಿಸಿಕೊಳ್ಳುತ್ತಿಲ್ಲ. ದಿಢೀರ್​ ಎಂದು ಅಪ್ಪ ಬದಲಾಗಿದ್ದು ಯಾಕೆ ಎಂದು ಅವಳಿಗೆ ತಿಳಿಯುವುದೇ ಇಲ್ಲ. ಕೊನೆಗೆ, ದೀಪಿಕಾಳನ್ನು ಒಳಗೆ ಕರೆದುಕೊಂಡು ಹೋಗುವ ಜನಾರ್ದನ ಆಸ್ತಿಗಾಗಿ ಹೀಗೆಲ್ಲಾ ಮಾಡುತ್ತಿರುವುದಾಗಿ ಹೇಳುತ್ತಾನೆ. ಇದನ್ನು ಕೇಳಿ ದೀಪಿಕಾ ಪೂರ್ಣಿಯನ್ನು ತನ್ನ ಒಡಹುಟ್ಟಿದ ಅಕ್ಕನ ರೀತಿಯಲ್ಲಿ ಮಾತನಾಡಿಸುತ್ತಿದ್ದಾಳೆ.

ಇದರ ಪ್ರೊಮೊ ಅನ್ನು ಜೀ ಕನ್ನಡ ವಾಹಿನಿ ರಿಲೀಸ್​  ಮಾಡಿದೆ. ಇದರ ಬಗ್ಗೆ ವೀಕ್ಷಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಎಲ್ಲಾ ಸೀರಿಯಲ್​ಗಳಲ್ಲಿಯೂ ಇದೇ ಗೋಳಾಯಿತು ಎನ್ನುತ್ತಿದ್ದಾರೆ. ಒಂದು ಮನೆಯನ್ನು ಹೇಗೆ ಹಾಳು ಮಾಡಬೇಕು ಅಂತ ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿರುವ ಸೀರಿಯಲ್​ಗಳೇ ಹೆಚ್ಚಾಗಿವೆ ಎನ್ನುತ್ತಿದ್ದಾರೆ. ಈ ತರ ಮೋಸದ ಕಥೆಯನ್ನು ತೋರಿಸಿದ್ರೇ ಇದನ್ನು ನೋಡಿ ಮನೆಯ ಅಕ್ಕ ತಂಗಿಯರು ಕಲಿಯುತ್ತಾರೆ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಇನ್ನು ಕೆಲವರು ಮಾತ್ರ ಮೋಸ ಹೋಗುವವರು ಇರುವವರೆಗೂ ಹೇಗೆ ಮೋಸ ಮಾಡುವವರು ಇರುತ್ತಾರೆ ಎನ್ನುವುದನ್ನು ಈ ಸೀರಿಯಲ್​ ನೋಡಿ ಕಲಿಯಬೇಕು ಎನ್ನುತ್ತಿದ್ದಾರೆ. 

ಒಂದೂವರೆ ಲಕ್ಷ ಬೆಲೆಯ ಡ್ರೆಸ್​ನಲ್ಲಿ ಮಿಂಚಿದ ದಿಶಾ ಪಟಾನಿ : ಡ್ರೆಸ್ಸೇ ಕಾಣಿಸ್ತಿಲ್ವಲ್ಲಾ ಕೇಳೋದಾ ಫ್ಯಾನ್ಸ್​!

 

click me!