ಈಗ ನನ್ನ ಫೀಟ್‌ನೆಸ್, ಲುಕ್ ಹಾಗೂ ಪಾತ್ರಗಳ ಆಯ್ಕೆಗಳ ಬಗ್ಗೆ ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೀಗಾಗಿ ಈಗ ನಾನು ಪಾತ್ರ ಪೋಷಣೆ ಮಾಡುವ ಮೊದಲು ಆಯ್ಕೆಯಲ್ಲೇ ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ..
ಸ್ಯಾಂಡಲ್‌ವುಡ್ ನಟಿ, ಸಿಹಿ ಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ (Hitha Chandrashekar) ತಮ್ಮ ನಟನೆಯ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟಿ ಹಿತಾ 'ನನಗೆ ಮುಂಬೈನಲ್ಲಿ ನೀವು ಕೇಳಿದ ಪ್ರಶ್ನೆ ಸರಿ ಎಂಬಂತಹ ಅನುಭವ ಆಗಿದ್ದು ನಿಜ. ನಾನು ಒಂದು ಜಾಹೀರಾತಿನಲ್ಲಿ ಅಭಿನಯಿಸಿದ್ದೆ. ಅದೇ ನಿರ್ದೇಶಕರು ಸಿನಿಮಾ, ಸೀರಿಯಲ್ ಎಲ್ಲದಕ್ಕೂ ತಮ್ಮ ಮ್ಯಾನೇಜರ್ ಮೂಲಕ ಕಾಸ್ಟಿಂಗ್ ಮಾಡುತ್ತಿದ್ದರು. ಆದರೆ ನನ್ನನ್ನು ಬೇರೆ ಯಾವುದಕ್ಕೂ ಕರೆಯದೇ ಕೇವಲ ಆಡ್‌ಗೆ ಮಾತ್ರ ಕಾಸ್ಟಿಂಗ್ ಮಾಡುತ್ತಿದ್ದರು.
ನನಗೆ ಅದೇ ತುಂಬಾ ವಿಚಿತ್ರವಾಗಿ ತೋರುತ್ತಿತ್ತು. ಏಕೆಂದರೆ, ನಾನು ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಜೀವನ ಪೂರ್ತಿ ಅದನ್ನೇ ಮಾಡಿಕೊಂಡು ಇರಬೇಕಾ? ನಾನು ಒಂದು ಅಮ್ಮನ ಪಾತ್ರವನ್ನು ಮಾಡಿದರೆ ಮತ್ತೆ ಮತ್ತೆ ಅದೇ ಪಾತ್ರದ ಅವಕಾಶ ಬರುತ್ತೆ, ಅದನ್ನೇ ಮಾಡಬೇಕಾ? ಆದರೆ, ಅವಕಾಶಗಳೇ ಹಾಗೆ ಬರುತ್ತವೆ. ಕೆಲವೊಮ್ಮೆ ನಾವು ಯಾವುದೋ ಒಂದು ಪಾಯಿಂಟ್‌ನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ನಮ್ಮ ಪಾತ್ರಗಳ ಆಯ್ಕೆಗಳನ್ನು ಬದಲಾಯಿಸಬೇಕು. ನಾವು ಬದಲಾವಣೆಗೆ ತೆರೆದುಕೊಂಡರೆ, ಆಗ ಬದಲಾವಣೆ ಆಗಬಹುದು.
ವಿಜಯ್ ದೇವರಕೊಂಡ ಕೂಲ್ ಮ್ಯಾನ್, ರೌಡಿ ಅಲ್ಲ; ವೈರಲ್ ಆಯ್ತು ಮೃಣಾಲ್ ಠಾಕೂರ್ ಮಾತು!
ನಾನು ಈಗ ನನ್ನ ಫೀಟ್‌ನೆಸ್, ಲುಕ್ ಹಾಗೂ ಪಾತ್ರಗಳ ಆಯ್ಕೆಗಳ ಬಗ್ಗೆ ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೀಗಾಗಿ ಈಗ ನಾನು ಪಾತ್ರ ಪೋಷಣೆ ಮಾಡುವ ಮೊದಲು ಆಯ್ಕೆಯಲ್ಲೇ ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ ಅಚ್ಚ ಕನ್ನಡದ ನಟಿ ಹಿತಾ ಚಂದ್ರಶೇಖರ್. ಅಂದಹಾಗೆ, ನಟಿ ಚಂದ್ರಶೇಖರ್ ಅವರು ಸಿಹಿ ಕಹಿ ಚಂದ್ರ ಹಾಗೂ ಸಿಹಿ ಕಹಿ ಗೀತಾ ದಂಪತಿ ಮಗಳು, ನಟ-ನಿರೂಪಕ ಕಿರಣ್ ಚಂದ್ರಶೇಖರ್ ಪತ್ನಿ.
ಕಿಯಾರಾ ಹಾಡಿ ಹೊಗಳಿದ ಮೃಣಾಲ್ ಠಾಕೂರ್, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ನಾ ಕೇಳ್ಬೇಡಿ!
ಒಮ್ಮೆ ನಟಿ ಹಿತಾ ಚಂದ್ರಶೇಖರ್ ಚಿತ್ರರಂಗದಲ್ಲಿರುವ 'ನೆಪೋಟಿಸಂ' ಬಗ್ಗೆ ಮಾತನಾಡಿ ಭಾರೀ ಗಮನ ಸೆಳೆದಿದ್ದರು. 'ನಾವು ಸ್ಟಾರ್ ಕಿಡ್ ಆಗಿರುವ ಮೂಲಕ ನಮಗೆ ಸಿಕ್ಕ ಸವಲತ್ತುಗಳನ್ನು ನಾವು ಒಪ್ಪಿಕೊಂಡಾಗ ಮಾತ್ರ ಈ ನೆಪೋಟಿಸಂ ಬಗ್ಗೆ ಮಾತು ಕಡಿಮೆಯಾಗಲು ಅಥವಾ ನಿಲ್ಲಲು ಸಾಧ್ಯ. ಏಕಂದರೆ ನನ್ನ ವಿಷಯವನ್ನೇ ತೆಗೆದುಕೊಂಡರೂ ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಬೇಸಿಕ್ ಎಜ್ಯುಕೇಶನ್ ಆಗಲೀ, ಲೈಫ್‌ಗೆ ಬೇಕಾದ ಯಾವುದೇ ಸೌಲಭ್ಯ ಕೇಳಿದ ತಕ್ಷಣ ದೊರೆತಿದೆ. ನನ್ನ ಅಪ್ಪ-ಅಮ್ಮ ನನಗೆ ಯಾವುದರಲ್ಲಿ ಕೊರತೆ ಮಾಡಿಲ್ಲ. ನಾನು ಸಿಹಿಕಹಿ ಚಂದ್ರು ಹಾಗೂ ಗೀತಾ (Sihi kahi Chandru and Geetha)ಸ್ಟಾರ್ ದಂಪತಿ ಮಗಳು.
ವಿಷ್ಣುವರ್ಧನ್ ಕಾರುಗಳು ಈಗೆಲ್ಲಿವೆ? ಯಾರು ಬೇಕಾದ್ರೂ ನೋಡ್ಬಹುದಂತೆ ಹೌದಾ?
ಕೇಳಿದ್ದು ಕೇಳಿದಾಗ ದೊರಕಿ ನಾನು ಯಾವುದಕ್ಕಾಗಿಯೂ ದುಡಿದು ಗಳಿಸಬೇಕಾದ ಅನಿವಾರ್ಯತೆ ಇರಲಿಲ್. ಆ ಮೂಲಕ ನಾನು ನನ್ನ ಕೆರಿಯರ್ ಬಗ್ಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು. ಅದೇ ನನ್ನ ಅಪ್ಪ-ಅಮ್ಮನ ಬಳಿ ಸಾಕಷ್ಟು ಹಣ ಇರದಿದ್ದರೆ, ಹೆಸರು ಅಂತಸ್ತು ಇರದಿದ್ದರೆ ನಾನು ಸ್ವತಃ ಅದಕ್ಕಾಗಿ ಕಷ್ಟ ಪಡಬೇಕಾಗುತ್ತಿತ್ತು. ಆದ್ದರಿಂದ ಯಾರೇ ಸ್ಟಾರ್ ಕಿಡ್ ಆಗಲೀ, ತಾವು ಚಿತ್ರರಂಗದ ಹಿನ್ನೆಲೆಯಿಂದ ಬಂದಿರುವ ಬಗ್ಗೆ ಹೆಮ್ಮೆ ಪಡಬೇಕು ಎನ್ನುವುದಕ್ಕಿಂತ ಹೌದು, ನನ್ನ ಬ್ಯಾಕ್‌ಗ್ರೌಂಡ್ ಇಲ್ಲೇ ಇರುವುದರಿಂದ ನನಗೆ ಅನುಕೂಲವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು.
ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿದ್ದ ನಟಿ ಮೊನಿಷಾ ಸತ್ತಿದ್ದು ಹೇಗೆ? ಬೆಂಗಳೂರು ನಂಟು ಏನಿತ್ತು?
ಸ್ಟಾರ್ ಕಿಡ್‌ಗಳಿಗೆ ಬೇರೆಯವರಿಗಿಂತ ಖಂಡಿತವಾಗಿಯೂ ಅನುಕೂಲತೆಗಳು ಜಾಸ್ತಿ ಇವೆ. ಆದರೆ, ಅದೊಂದರಿಂದಲೇ ಮಕ್ಕಳೂ ಕೂಡ ದೊಡ್ಡ ಸ್ಟಾರ್ ಆಗಿ ಬೆಳೆದುಬಿಡಬಹುದು ಎನ್ನುವುದು ಸುಳ್ಳು. ಅದು ಮತ್ತೆ ಅವರ ಸಾಧನೆ-ಶ್ರದ್ಧೆಯ ಮೇಲೆ ಅವಲಂಬಿತ. ಆದರೆ, ಖಂಡಿತವಾಗಿಯೂ ಅನುಕೂಲಕರ ಎಂಬುದನ್ನು ಅಲ್ಲಗಳೆಯಬಾರದು. ಹಾಗೆ ನೆಪೋಟಿಸಂ ಇಲ್ಲವೇ ಇಲ್ಲ ಎಂದಾಗಲೇ ಅದರ ಬಗ್ಗೆ ಮಾತುಗಳು, ಚರ್ಚೆಗಳು ಶುರುವಾಗುವುದು, ಬೆಳೆಯುವುದು, ಅತಿರೇಕಕ್ಕೆ ಹೋಗುವುದು' ಎಂದಿದ್ದಾರೆ ಹಿತಾ ಚಂದ್ರಶೇಖರ್.
ನಾವು ಒಬ್ರೇ ಅಲ್ವಲ್ಲಾಇಲ್ಲಿ ಆಟ ಆಡೋರು, ಎದ್ರುಗಡೆನೂ ಇರ್ತಾರೆ; ಕೆಜಿಎಫ್ ಸ್ಟಾರ್ ಯಶ್!