ಬಿಗ್ ಬಾಸ್ ಕನ್ನಡ 11 ಗ್ರಾಂಡ್ ಫಿನಾಲೆ ಡೇಟ್ ಫಿಕ್ಸ್, ಪಕ್ಕಾ ವಿನ್ನರ್ ಇವರೇನಾ?

By Shriram Bhat  |  First Published Jan 3, 2025, 12:46 PM IST

ಉಗ್ರಂ ಮಂಜು, ಗೌತಮಿ ಅಥವಾ ಮೋಕ್ಷಿತಾ ಇವರುಗಳು ಹೆಸರು ಟಾಪ್‌ ನಲ್ಲಿಲ್ಲ.ಇದೆಲ್ಲದರ ನಡುವೆ ಬಿಗ್‌ಬಾಸ್‌ ಕನ್ನಡ 11ರ  ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳ ಹೆಸರುಗಳು ವೈರಲ್ ಆಗುತ್ತಿವೆ. ಎಂದಿನಂತೆ ಈ ಬಾರಿ ಕೂಡ ಐದು ಮಂದಿಯನ್ನು ಫಿನಾಲೆಗೆ  ಕಳುಹಿಸಲಾಗುವುದು ಎನ್ನಲಾಗಿದೆ....


ಕಲರ್ಸ್ ಕನ್ನಡ ವಾಹಿನಿ ಈ ಬಾರಿಯ ಬಿಗ್ ಬಾಸ್ (Bigg Boss Kannada 11) ಫಿನಾಲೆಯನ್ನು ಎರಡು ವಾರಗಳ ಕಾಲ ಮುಂದೂಡುವ ಪ್ಲಾನ್‌ನಲ್ಲಿದೆ ಎನ್ನಲಾಗುತ್ತಿದೆ. ಏಕೆಂದರೆ, ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11 ಹೊಸ ಟೈಟಲ್ ಕಾರ್ಡ್ ಜೊತೆ ಶುರುವಾಗಿತ್ತು. ಅಷ್ಟೇ ಅಲ್ಲ, ಈ ಬಾರಿ ಬಿಗ್ ಬಾಸ್ ಶೋವನ್ನು 112 ದಿನಗಳ ಬದಲು 120 ದಿನಗಳಿಗೆ ವಿಸ್ತರಿಸಲು ಕಲರ್ಸ್ ವಾಹಿನಿಯ ಬಿಗ್ ಬಾಸ್ ತಂಡ ಪ್ಲಾನ್ ಮಾಡಿದೆಯಂತೆ. ಆದರೆ, ಈಗಾಗಲೇ ಜನವರಿ 26ಕ್ಕೆ ಗ್ರಾಂಡ್ ಫಿನಾಲೆ ನಡೆಸಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಕೂಡ ಇದೆ. 

ಕಳೆದ ಸೀಸನ್ 112 ದಿನಗಳ ಕಾಲ ಬಿಗ್‌ಬಾಸ್‌ ಶೋ ನಡೆದಿತ್ತು. ಅಕ್ಟೋಬರ್ 8ರಂದು ಶುರುವಾಗಿ ಜನವರಿ 28ವರೆಗೂ ನಡೆದಿತ್ತು. ಕಳೆದ 10ರ ಸೀಸನ್‌ನಲ್ಲಿ ಒಟ್ಟು 21 ಜನ ಸ್ಪರ್ಧಿಗಳು ಶೋ ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕಾರ್ತಿಕ್ ವಿನ್ನರ್ ಆದರೆ ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು. ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದ ಸಂಗೀತಾ ಶೃಂಗೇರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಸೆಪ್ಟೆಂಬರ್ 29ಕ್ಕೆ ಶುರುವಾದ ಈ ಬಾರಿಯ ಬಿಗ್‌ಬಾಸ್‌ 11 ನೇ ಸೀಸನ್‌ ಇದೀಗ ಮುಕ್ತಾಯದ ಹಂತ ತಲುಪಿದ್ದು, ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಮನೆ ಮಾಡಿದೆ.

Tap to resize

Latest Videos

ಬಿಗ್‌ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಡೇಟ್‌, ಫೈನಲಿಸ್ಟ್‌ಗಳ ಹೆಸರು ಲೀಕ್‌!

ವಿವಿಧ ಕಡೆಗಳಿಂದ  ಸಮೀಕ್ಷೆಯನ್ನು ನಡೆಸಿ ಬಿಗ್‌ ಬಾಸ್‌ ಮನೆಯಲ್ಲಿ ಯಾರು ಇರಬೇಕೆಂದು ತೀರ್ಮಾನಿಸಲಾಗುತ್ತಂತೆ. ಆ ಪ್ರಕಾರ ಉಗ್ರಂ ಮಂಜು, ಗೌತಮಿ ಅಥವಾ ಮೋಕ್ಷಿತಾ  ಇವರುಗಳು ಹೆಸರು ಟಾಪ್‌ ನಲ್ಲಿಲ್ಲ.  ಐವರಲ್ಲಿ ಗ್ರ್ಯಾಂಡ್‌ ಫಿನಾಲೆ ಲಿಸ್ಟ್‌ನಲ್ಲಿ  ಪಕ್ಕಾ ಯಾರು ಇರುತ್ತಾರೆ ಎಂದರೆ ಮೊದಲಿಗೆ ಬರುವ ಹೆಸರು ಸಿಂಗರ್ ಹನುಮಂತ ಲಮಾಣಿ. ಉಳಿದಂತೆ, ತ್ರಿವಿಕ್ರಮ್‌  ಹೆಸರು ಎರಡನೇ ಸ್ಥಾನದಲ್ಲಿದೆಯಂತೆ, 3ನೇ ಹೆಸರು ಉಗ್ರ ಮಂಜು ಮತ್ತು 4ನೇ ಹೆಸರು ರಜತ್‌ ಹಾಗೂ ಐದನೇ ಹೆಸರು ಭವ್ಯಾ ಗೌಡ ಎನ್ನಲಾಗುತ್ತಿದೆ.

ಅಂದಹಾಗೆ, ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್‌ ಕಿಶನ್, ತ್ರಿವಿಕ್ರಮ್‌, ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್, ಧನರಾಜ್‌ ಆಚಾರ್‌ ಹಾಗೂ ಹನುಮಂತು ಒಟ್ಟು 9 ಮಂದಿ ಸ್ಪರ್ಧಿಗಳಿದ್ದಾರೆ. ಇಷ್ಟು ಮಾತ್ರವಲ್ಲ ಇದೆಲ್ಲದರ ನಡುವೆ ಬಿಗ್‌ಬಾಸ್‌ ಕನ್ನಡ 11ರ  ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳ ಹೆಸರುಗಳು ವೈರಲ್ ಆಗುತ್ತಿವೆ. ಎಂದಿನಂತೆ ಈ ಬಾರಿ ಕೂಡ ಐದು ಮಂದಿಯನ್ನು ಫಿನಾಲೆಗೆ  ಕಳುಹಿಸಲಾಗುವುದು ಎನ್ನಲಾಗಿದೆ. ಈ ಸೀಸನ್ ವಿನ್ನರ್ ತ್ರಿವಿಕ್ರಮ್ ಎನ್ನಲಾಗುತ್ತಿದೆ. ಆದರೆ, ಗ್ರಾಂಡ್ ಫಿನಾಲೆ ಬಳಿಕವಷ್ಟೇ ಸತ್ಯ ಸಾಬೀತಾಗಲಿದೆ.

ಹೆತ್ತವರ ಹೆಣಕ್ಕೆ ಬೆಂಕಿ ಇಡಲು ಗಂಡು ದಿಕ್ಕಿಲ್ಲದ ಮನೆ ಎಂದು ಅವಮಾನ ಮಾಡಿದ್ದಾರೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ

ಈ ಬಾರಿ ಬಿಗ್‌ಬಾಸ್‌ ಕನ್ನಡ 11ನೇ ಸೀಸನ್ 17 ವಾರಗಳ ಕಾಲ ನಡೆಸಬೇಕು ಎಂದು ಬಿಗ್‌ಬಾಸ್‌ ತಂಡ ಪ್ಲ್ಯಾನ್‌ ಮಾಡಿದೆಯಂತೆ. ಶೋ ಟಿಆರ್‌ಪಿ ಕೂಡ ಟಾಪ್‌ನಲ್ಲಿದ್ದು, ಜನವರಿ 26ನೇ ತಾರೀಕು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ದಿನ ಭಾನುವಾರ ಹಾಗೂ ಗಣರಾಜ್ಯೋತ್ಸವ ಕೂಡ ಇದೆ. ಒಂದು ವೇಳೆ  112 ದಿನಕ್ಕೆ ಕೊನೆಗೊಂಡರೆ ಜನವರಿ 19ಕ್ಕೆ ಬಿಗ್‌ಬಾಸ್ ಕನ್ನಡ 11ರ ಫಿನಾಲೆ ನಡೆಯಲಿದೆ. ಒಟ್ಟಿನಲ್ಲಿ ಜನವರಿ ಮೂರನೇ ವಾರ ಅಥವಾ 4ನೇ ವಾರ ಬಿಗ್‌ಬಾಸ್‌ ಶೋ ಮುಗಿಯೋದಂತು ಪಕ್ಕಾ. ವಿನ್ನರ್ ಯಾರು, ರನ್ನರ್ ಅಪ್ ಯಾರು ಎಂಬುದು ಜಗತ್ತಿಗೇ ಗೊತ್ತಾಗಲಿದೆ. 
 

click me!