ಹೆಣ್ಣು ಮಕ್ಕಳು ಇರುವ ಮನೆಯಲ್ಲಿ ಎಷ್ಟು ಕಷ್ಟ ಇರುತ್ತದೆ..ಜನರು ಎಷ್ಟು ಕೊಂಕು ಮಾತನಾಡುತ್ತಾರೆ ಅನ್ನೋದನ್ನು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಪ್ಯಾಮಿಲಿ ರೌಂಡ್‌ನಲ್ಲಿ ಚೈತ್ರಾ ಕುಂದಾಪುರ ರವರ ತಾಯಿ ಮತ್ತು ಸಹೋದರಿ ಮಾನ್ಯ ಆಗಮಿಸುತ್ತಾರೆ. ಮನೆ ಮಂದಿ ಸೇರಿಕೊಂಡು ಮಗಳಿಗೆ ಕಳಪೆ ಕೊಟ್ಟಿರಬಹುದು ಆದರೆ ನಮಗೆ ಆಕೆ ಉತ್ತಮನೇ ಎಂದು ತಾಯಿ ಚಿನ್ನದ ಪದಕ ಹಾಕುತ್ತಾರೆ. ಆಗ ಚೈತ್ರಾ ಕುಂದಾಪುರ ಭಾವುಕರಾಗುತ್ತಾರೆ.
'ಬಿಗ್ ಬಾಸ್ ಮನೆಯಲ್ಲಿ ಇರುವ ಪ್ರತಿ ಕ್ಷಣವೂ ನಾನು ಇದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತೀನಿ. ಎಲ್ಲ ಮಕ್ಕಳಿಗೂ ಇರುವ ದೊಡ್ಡ ಕನಸು ಏನೆಂದರೆ ಅಪ್ಪ ಅಮ್ಮನಿಂಗೆ ಉತ್ತಮ ಮಕ್ಕಳಾಗಿ ಇರಬೇಕು ಅಂತ. ಜಗತ್ತಿನ ಸಾವಿರ ಮಾತುಗಳು ಸಾವಿರ ಆದರೂ ಸಹ ನನ್ನ ಪೋಷಕರು ಮುಖ್ಯ ಆಗುತ್ತಾರೆ. ನನ್ನ ತಂಗಿ ನೋಡಲು ನನ್ನಂತೆ ಇದ್ದಾಳೆ ಆದರೆ ನನಗಿಂತ ಅಕೆ 10-12 ವರ್ಷ ಚಿಕ್ಕವಳು. ನನ್ನ ತಂಗಿ ಹುಟ್ಟಿದ್ದಾಗ ಮನೆಯಲ್ಲಿ ನಿಜವಾದ ಚಾಲೆಂಜ್ ಶುರುವಾಗುತ್ತದೆ' ಎಂದು ಚೈತ್ರಾ ಕುಂದಾಪುರ ಮಾತನಾಡುತ್ತಾರೆ.
ಯಾರ ಬಾಲವನ್ನು ಹಿಡಿಯೋಕೆ ಹೋಗ್ಬೇಡ,ಅವಳ ಜೊತೆಯಲ್ಲಿರೋದು ಬೇಡ; ಉಗ್ರಂ ಮಂಜುಗೆ ಸಹೋದರಿ ವಾರ್ನಿಂಗ್
'ಈ ಮನೆಯಲ್ಲಿ ಗಂಡು ಮಗು ಇಲ್ಲ ಅಂತ ಮಾತುಗಳು ಶುರುವಾಗುತ್ತದೆ. ಮೂರನೆಯದ್ದೂ ಹೆಣ್ಣು ಆಯ್ತು...ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡಲು ಇವರ ಮನೆಯಲ್ಲಿ ಹೆಣ್ಣು ದಿಕ್ಕಿಲ್ಲ ಅಂತ ಮಾತನಾಡಲು ಶುರು ಮಾಡುತ್ತಾರೆ. ನನ್ನ ತಂಗಿಗೆ ಮಾನ್ಯ ಎಂದು ಹೆಸರು ಇರಲು ಕಾರಣ ಏನು ಅಂದ್ರೆ ಮೂರನೇ ಹೆಣ್ಣು ಮಗುವಿಗೆ ಮಾನ್ಯತೆ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ಅವಳು ಎಲ್ಲೇ ಹೋದರು ಹೆಸರಿನ ಜೊತೆ ಮಾನ್ಯತೆ ಸಿಗಬೇಕು ಅನ್ನೋ ಕಾರಣಕ್ಕೆ ಈ ಹೆಸರು ಇಟ್ಟಿದ್ದು. 90ರ ದಶಕದಲ್ಲಿ ಹುಟ್ಟಿರುವವರ ಫ್ಯಾಮಿಲಿಯಲ್ಲಿ ಎರಡು ಮೂರು ಹೆಣ್ಣು ಮಕ್ಕಳಿದ್ದೀವಿ ಅವರ ಫ್ಯಾಮಿಲಿಯಲ್ಲಿ ಖಂಡಿತಾ ಗಂಡು ಮಕ್ಕಳು ಇಲ್ಲ ಅನ್ನೋ ಮಾತುಗಳನ್ನು ಕೇಳಿರುತ್ತಾರೆ. ನನ್ನ ಸುತ್ತ ಇರುವ ಜನರು ಈ ರೀತಿ ಮಾತನಾಡಿರಲಿಲ್ಲ ಅಂದಿದ್ರೆ ಖಂಡಿತಾ ನಾನು ಈ ಮನೆಗೆ ಮಗನಾಗಬೇಕು ಅನ್ನೋ ಯೋಚನೆ ಮಾಡುತ್ತಿರಲಿಲ್ಲ. ನಾನು ರೆಬೆಲ್ ಆಗಬೇಕು ಎಂದು ಯಾವತ್ತೂ ಯೋಚನೆ ಮಾಡುತ್ತಿರಲಿಲ್ಲ' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಚೈತ್ರಾ ಕುಂದಾಪುರ ನಿಜವಾದ ವಯಸ್ಸು ಲೀಕ್ ಮಾಡಿದ ನೆಟ್ಟಿಗರು; ಎಲ್ಲರೂ ಫುಲ್ ಶಾಕ್
'ನಾನು ಯಾವತ್ತೂ ಅಮ್ಮನನ್ನು ದೇವರು ಅಂದುಕೊಂಡಿಲ್ಲ ಏಕೆಂದರೆ ನಾನು ದೇವರನ್ನು ಸದಾ ಬೈಯುತ್ತೀನಿ. ದೇವರಿಗಿಂತ ಹೆಚ್ಚಾಗಿ ಮುಂದೆ ನಿಂತ ಸಾಕಿದ್ದು ನನ್ನ ಅಮ್ಮ. ಈಗನ ಜನರೇಷನ್ ಅವರಿಗೆ ಹೆಣ್ಣು ಮಕ್ಕಳು ಬೇಕು ಅನ್ನೋದು ಸಹಜ ಆದರೆ ಆಗ ತುಂಬಾ ಕಷ್ಟ ಇತ್ತು. ಮನೆಯಲ್ಲಿ ಹೆಣ್ಣು ಮಗು ಹುಟ್ಟಿದಾಗ ಅಪ್ಪನಾದವನು ಎಷ್ಟು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು, ತೆಗೆದುಕೊಳ್ಳದೇ ಹೋದರೆ ಒಂದು ಫ್ಯಾಮಿಲಿ ಹೇಗಾಗುತ್ತದೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದು ನಾನು ನನ್ನ ಅಕ್ಕ ಅನುಭವಿಸಿದ್ದೀನಿ. ಜೈಲಿಂದ ನಾನು ವಾಪಸ್ ಮನೆಗೆ ಹೋದಾಗಲೂ ನೀನು ತಪ್ಪು ಮಾಡಿಲ್ಲ ಅನ್ನೋ ಭರವಸೆ ನನಗಿದೆ ಎಂದು ಅನ್ನ ಹಾಕಿದರು' ಎಂದಿದ್ದಾರೆ ಚೈತ್ರಾ.
ಸಿಂಪಲ್ ಸೀರೆ, ಹಣೆಯಲ್ಲಿ ಕುಂಕುಮ; ಚೈತ್ರಾ ಕುಂದಾಪುರ ನಿಜಕ್ಕೂ ಮೇಕಪ್ ಹಾಕಲ್ವಾ?