ನೀರು ಉಳಿಸಲು, ನಾಲ್ಕು ದಿನ ಆದ್ರೂ ಸ್ನಾನ ಮಾಡಲ್ವಂತೆ ಈ ಕನ್ನಡ ನಟಿ, ಬಿಗ್ ಬಾಸ್ ನ ಸ್ಪರ್ಧಿ!

Published : Jan 03, 2025, 12:08 PM ISTUpdated : Jan 03, 2025, 12:38 PM IST
ನೀರು ಉಳಿಸಲು, ನಾಲ್ಕು ದಿನ ಆದ್ರೂ ಸ್ನಾನ ಮಾಡಲ್ವಂತೆ ಈ  ಕನ್ನಡ ನಟಿ, ಬಿಗ್ ಬಾಸ್ ನ ಸ್ಪರ್ಧಿ!

ಸಾರಾಂಶ

ಕನ್ನಡ ಕಿರುತೆರೆಯಿಂದ ಬಂದು ತೆಲುಗು ಬಿಗ್ ಬಾಸ್‌ನಲ್ಲಿ ಟಾಪ್ 5 ಸ್ಪರ್ಧಿಯಾದ ಪ್ರೇರಣಾ ಕಂಬಂ, ತಮ್ಮ ನೇರ ನಡೆ-ನುಡಿ ಮತ್ತು ಸ್ಪರ್ಧಾತ್ಮಕ ಆಟದಿಂದಾಗಿ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ನಂತರ, ಪತಿ ಶ್ರೀಪಾದ್ ದೇಶಪಾಂಡೆ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪ್ರೇರಣಾ, ದಿನನಿತ್ಯ ಸ್ನಾನ ಮಾಡದಿರುವ ಅಭ್ಯಾಸವನ್ನು ಶ್ರೀಪಾದ್ ಬಹಿರಂಗಪಡಿಸಿದರು. ನೀರು ಉಳಿಸುವ ಉದ್ದೇಶದಿಂದ ಹಾಗೆ ಮಾಡುವುದಾಗಿ ಪ್ರೇರಣಾ ಸಮರ್ಥಿಸಿಕೊಂಡರು.  

ಕನ್ನಡ ಕಿರುತೆರೆ (Kannada smallscreen) ಮೂಲಕ ನಟನೆಗೆ ಎಂಟ್ರಿ ಕೊಟ್ಟು ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಪ್ರೇರಣಾ ಕಂಬಂ (Prerana Kambam).  ತೆಲುಗು ಬಿಗ್ ಬಾಸ್ ನಲ್ಲೂ ಸಖತ್ ಮನರಂಜನೆ ನೀಡಿ, ಟಾಪ್ 5 ಕಂಟೆಸ್ಟ್ಂಟ್ ಆದವರು ಪ್ರೇರಣ. ತಮ್ಮ ಆಟ, ಟಫ್ ಸ್ಪರ್ಧೆ, ನೇರವಾದ ಮಾತು, ಗೇಮ್ ಅಂತ ಬಂದಾಗ ಎಲ್ಲೂ ಬಿಟ್ಟುಕೊಡದೆ ಆಡುವ ರೀತಿ, ಇವೆಲ್ಲವೂ ಆಕೆಗೆ ಅಪಾರ ಅಭಿಮಾನಿಗಳನ್ನು ಹುಟ್ಟಿಕೊಳ್ಳುವಂತೆ ಮಾಡಿದ್ದವು. ಅಷ್ಟೇ ಅಲ್ಲದೇ ಯಶ್ಮಿ ಜೊತೆಗೆ ಆಕೆಯ ಫ್ರೆಂಡ್ ಶಿಪ್ ಹಾಗೂ ಗಂಡನ ಮೇಲಿನ ಪ್ರೀತಿ ಎಲ್ಲವೂ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. 

ಬಿಗ್ ಬಾಸ್ ತೆಲುಗು 8ರ ಫೈನಲ್ಸ್‌ಗೆ ಹೋಗೋ ಸ್ಪರ್ಧಿಗಳು ಯಾರು, ಕನ್ನಡಿಗರಿಗೆ ಸಿಗುತ್ತಾ ಕಿರೀಟ?

ಬಿಗ್ ಬಾಸ್ (Bigg Boss Telugu) ಮನೆಯಿಂದ ಹೊರ ಬಂದಮೇಲೆ ಎಲ್ಲಾ ಕಡೆಯಿಂದಲೂ ಪ್ರೇರಣಾಗೆ ಭರ್ಜರಿ ವೆಲ್ ಕಂ ಸಿಗುತ್ತಿದೆ. ಇದಿಗ ಪ್ರೇರಣ ಹಾಗೂ ಅಕೆಯ ಪತಿ ಶ್ರೀಪಾದ್ ದೇಶಪಾಂಡೆ, ತೆಲುಗು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಶ್ರೀಪಾದ್ ತಮ್ಮ ಪತ್ನಿಯ ಕುರಿತಾದ ಸೀಕ್ರೆಟ್ ಒಂದನ್ನು ಎಲ್ಲರೆದುರು ರಟ್ಟು ಮಾಡಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿರೋದು ಏನು? ಶ್ರೀಪಾದ್ ಹೆಂಡ್ತಿ ಬಗ್ಗೆ ಹೇಳಿದ ಸೀಕ್ರೆಟ್ ಏನು ಹಾಗೂ ಅದಕ್ಕೆ ಪ್ರೇರಣ ಉತ್ತರ ಹೇಗಿತ್ತು ನೋಡೋಣ…. 

ರಶ್ಮಿಕಾ ಮಂದಣ್ಣ ನನ್ನ ರೂಮ್ ಮೇಟ್, ಅರ್ಧರಾತ್ರಿ ರೋಡಲ್ಲಿ ಹೀಗೆ ಇದ್ವಿ ಬಿಗ್‌ಬಾಸ್‌ ಪ್ರೇರಣಾ ಬಿಚ್ಚಿಟ್ಟ ರಹಸ್ಯ!

ನಿರೂಪಕಿ ಪ್ರೇರಣ ಕುರಿತು ನಿಮಗಿರುವ ಕಂಪ್ಲೇಂಟ್ ಹೇಳುವಂತೆ ಶ್ರೀಪಾದ್ ಬಳಿ ಹೇಳಿದಾಗ, ಶ್ರೀಪಾದ್  (Sreepad Deshpande) ಎಲ್ಲರೂ ಬೆಳಗ್ಗೆ ಎದ್ದ ಹಾಗೆ ಸ್ನಾನ ಮಾಡ್ತಾರೆ. ಸ್ನಾನ ಮಾಡಿದ ನಂತರವಷ್ಟೇ ಹೊರಗಡೆ ಹೋಗ್ತಾರೆ. ಆದರೆ ಇವಳು ಎರಡು ದಿನ, ಮೂರು ದಿನ, ನಾಲ್ಕು ದಿನ ಸ್ನಾನ ಮಾಡದೇ ಇರುತ್ತಾಳೆ ಎಂದಿದ್ದಾರೆ. ಅದಕ್ಕೆ ನಿರೂಪಕಿ ಆಕೆಯಿಂದ ದೂರ ಹೋಗಿ ನಿಂತು ಛೀ ಎನ್ನುತ್ತಾ, ಇವತ್ತಾದ್ರೂ ಸ್ನಾನ ಮಾಡಿದ್ಯಾ ಅಂತ ಕೇಳಿದ್ದಾರೆ, ಅದಕ್ಕೆ ಪ್ರೇರಣಾ ಹೌದು, ಇಲ್ಲಿ ಬರೋದಕ್ಕೂ ಮುನ್ನ ಸ್ನಾನ ಮಾಡಿದೆ ಎಂದಾಗ, ಶ್ರೀಪಾದ್, ಹೌದು, ಅವಳು ಸ್ನಾನ ಮಾಡಿರೋದಕ್ಕೆ ಒಟ್ಟಿಗೆ ಇವತ್ತು ಬಂದೆ ಎಂದಿದ್ದಾರೆ. 

ಪ್ರೀತಿಸಿದವನೊಂದಿಗೆ ಸಪ್ತಪದಿ ತುಳಿದ ರಂಗನಾಯಕಿ ನಟಿ ಪ್ರೇರಣಾ!

ಇದಕ್ಕೆ ಉತ್ತರಿಸಿದ ಪ್ರೇರಣ, ನಾನು ಕೆಲಸಕ್ಕೆ ಹೋಗದಿದ್ದರೆ, ಮನೆಯಲ್ಲಿಯೇ ಕುಳಿತುಕೊಳ್ಳುತ್ತೇನೆ, ಮನೆಯಲ್ಲಿ ಇರೋದು ಅಂದ್ರೆ ರಿಲ್ಯಾಕ್ಸ್ ಆಗಿ ಇರೋದು. ರಿಲ್ಯಾಕ್ಸ್ ಆಗಿರೋದಕ್ಕೆ ಸ್ನಾನ ಯಾಕೆ ಮಾಡಬೇಕು. ನೀರನ್ನು ಉಳಿಸಬೇಕು ಎಂದು ಹೇಳಿದ್ದಾರೆ. ನಾವು ಇಂಡಿಪೆಂಡೆಂಟ್ ಮನೆಯಲ್ಲಿ ಇದ್ದೀವಿ, ಹಾಗಾಗಿ ನಮ್ಮ ಫ್ಯಾಮಿಲಿಗಾಗಿ ನಾನು ನೀರನ್ನು ಉಳಿಸುತ್ತಿದ್ದೇನೆ ಎಂದಿದ್ದಾರೆ ಪ್ರೇರಣ, ಅದಕ್ಕೆ ಶ್ರೀಪಾದ್ ನಾನು ನಿನ್ನ ಹತ್ತಿರ ಬರಬೇಕು ಅಂದ್ರೆ ನೀನು ಸ್ನಾನ ಮಾಡಬೇಕು ಅಂದಿದ್ದಕ್ಕೆ, ನಾನು ಸ್ನಾನ ಮಾಡದೇ ಇದ್ರೂ ನೀನು ಹತ್ತಿರ ಬರ್ತಿಯಲ್ವಾ ಶ್ರೀಪಾದ್ ಎಂದು ಪ್ರೇರಣ ಕೇಳಿದ್ದಾರೆ. ಮದುವೆ ಆಗಿದೆ ಅಲ್ವಾ ? ಇನ್ನೇನು ಮಾಡಕ್ಕಾಗುತ್ತೆ ಎಂದು ಪ್ರೇರಣಾರನ್ನು ಗಟ್ಟಿಯಾಗಿ ಹಿಡಿದು ತಮಾಷೆ ಮಾಡಿದ್ದಾರೆ ಶ್ರೀಪಾದ್. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?