ಪದೇ ಪದೇ ಡ್ರೋಣ ಪ್ರತಾಪ್‌ನ ಟಾರ್ಗೆಟ್ ಮಾಡುತ್ತಿರುವ ಮೂವರು ಈಗ ಟ್ರೋಲಿಗರಿಗೆ ಆಹಾರ. ಆಟ ಆಡಲ್ಲ ಸಾಧನೆ ಮಾಡಿಲ್ಲ ನೀವೇ ವೇಸ್ಟ್ ಎಂದ ನೆಟ್ಟಿಗರು....
ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ವಿಶೇಷ ಅತಿಥಿಯಾಗಿ ಶಾಸಕ ಪ್ರದೀಪ್ ಈಶ್ವರ್ ಆಗಮಿಸಿದ್ದರು ಈಗ ಲಾರ್ಡ್ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕೆಲವು ಗಂಟೆಗಳ ಸಮಯ ಕಳೆದರೂ ಅವರಿಗೆ ಸಣ್ಣ ಪುಟ್ಟ ಕಿವಿ ಮಾತುಗಳನ್ನು ಹೇಳಿ ಎಚ್ಚರಿ ಕರೆ ನೀಡಿದ್ದಾರೆ. ಹೌದಲ್ವಾ ನಾನು ಸೈಲೆಂಟ್ ಆಗಿದ್ದೀನಿ ಕೆಲಸ ಮಾಡಬೇಕು ಮಾತನಾಡಬೇಕು ಹಾಗೆ ಹೀಗೆ ಎಂದು ಎಲ್ಲರಲ್ಲೂ ಒಂದು ಯೋಚನೆ ಬಂದಿದೆ. ಆದರೆ ಈಗ ಹೇಳಬೇಕಿರುವ ವಿಚಾರ ಟ್ರೋಲಿಗರ ಬಗ್ಗೆ....
ಹೌದು! ತಮ್ಮ ವೃತ್ತಿ ಜೀವನದ ಏರುಪೇರುಗಳಿಂದ ಡ್ರೋನ್ ಪ್ರತಾಪ್ ಸಾಕಷ್ಟು ಅವಮಾನಗಳು ಮತ್ತು ಟ್ರೋಲ್‌ಗಳನ್ನು ಎದುರಿಸಿದ್ದಾರೆ. ಜನರಿಗೆ ನಾನು ಯಾರು ನನ್ನ ಜೀವನ ಹೇಗಿದೆ ನನ್ನ ವ್ಯಕ್ತಿತ್ವ ಏನು ಅನ್ನೋದನ್ನು ಅರ್ಥ ಮಾಡಿಸಲು ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಪ್ರತಾಪ್‌ಗೆ ಮಾತನಾಡಲು ಬಿಡದೆ ನಾನ್ ಸ್ಟಾಪ್ ಟಾಂಗ್ ಮತ್ತು ಟಾಂಟ್ ಮಾಡುತ್ತಿರುವ ತುಕಾಲಿ ಸಂತೋಷ್, ನಟ ಸ್ನೇಹಿತ್ ಮತ್ತು ವಿನಯ್ ಗೌಡರ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. ಜೀವನದಲ್ಲಿ ನೀವು ಏನು ಸಾಧನೆ ಮಾಡಿದ್ದೀರಾ ಅಂತ ಆತನನ್ನು ಅಷ್ಟು ಪ್ರಶ್ನೆ ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ.
ನಕಲಿ ಮಂಜಿನಲ್ಲಿ ಅಣ್ಣಾವ್ರ 'ಪ್ರೇಮ ಕಾಶ್ಮೀರ' ಹಾಡಿಗೆ ಪಬ್ಲಿಕ್‌ನಲ್ಲಿ ಡ್ಯಾನ್ಸ್ ಮಾಡಿದ ಆನಂದ್- ಯಶಸ್ವಿನಿ!
ತಪ್ಪು ಮಾಡಿದವರಿಗೆ ಆ ದೇವರೇ ಕ್ಷಮೆ ನೀಡಿ ಮತ್ತೊಮ್ಮೆ ಜೀವನ ಹೊಸದಾಗಿ ಶುರು ಮಾಡಲು ಅವಕಾಶ ನೀಡುತ್ತಾನೆ ಅಂದ ಮೇಲೆ ಯಾಕೆ ನಾವು ಅವಕಾಶ ಕೊಡಬಾರದು ಎಂದು ಪ್ರೆಸ್‌ಮೀಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ್ದರು. ಹೀಗಿರುವಾಗ ತುಕಾಲಿ, ಸ್ನೇಹಿತ್ ಮತ್ತು ವಿನಯ್ ಯಾರು? ಯಾಕೆ ಪದೇ ಪದೇ ಕೊಂಕು ಮಾತನಾಡುತ್ತಿರುವುದು? ದೇವರ ಪಾತ್ರ ಮಾಡಿದ ಮಾತ್ರಕ್ಕೆ ವಿನಯ್ ದೊಡ್ಡ ಸಾಧಕನೇ? ಕ್ಯಾಪ್ಟನ್ ಆಗಲು ಒಂದ ಅವಕಾಶದ ಟಾಸ್ಕ್ ಮತ್ತು ಲಾರ್ಡ್ ಪ್ರಥಮ್ ಕೊಟ್ಟ ಟಾಸ್ಕ್ ಎರಡೂ ಮಾಡಲು ಆಗಲಿಲ್ಲ ಇನ್ನು ಸ್ಟ್ರಾಂಗ್ ವ್ಯಕ್ತಿ ಅಂತ ಯಾಕೆ ಬಿಲ್ಡಪ್?
ಬಿಕಿನಿ ಸೋನು ಒಪ್ಕೊಂಡಿದ್ದೀರಾ ಅಂದ್ಮೇಲೆ ಪ್ರತಾಪ್‌ಗೆ ಒಂದು ಚಾನ್ಸ್ ಕೊಡ್ರೋ:ಡ್ರೋನ್ ಪರ ನೆಟ್ಟಿಗರು!
ಇನ್ನು ತುಕಾಲಿ ಸಂತೋಷ್ ಹೆಸರಿಗೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾರೆ. ತಮಾಷೆ ಮಾಡಬೇಕು ನಿಜ ಆದರೆ ಒಬ್ಬರನ್ನು ಕೆಳಗೆ ಹಾಕಿ ತಮಾಷೆ ಮಾಡುವುದು ಎಷ್ಟು ಸರಿ? ಒಬ್ಬರಿಗೆ ಅವಮಾನ ಮಾಡಿ ತಾವು ಮೇಲೆ ಬರುವುದು ಎಷ್ಟು ಸರಿ? ಎಂದು ಟ್ರೋಲ್‌ಗಳಲ್ಲಿ ಹಾಕುತ್ತಿರುವ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕ್ಯಾಪ್ಟನ್ ಆಗಿ ಇದಕ್ಕೆಲ್ಲಾ ಸಾಥ್ ಕೊಡುತ್ತಿರುವ ಸ್ನೇಹಿತ್‌ಗೆ ಮೊದಲು ಕಳಪೆ ಕೊಡಬೇಕು..ತಾನು ಮಾಡಬೇಕಿರುವ ಕೆಲಸ ಬಿಟ್ಟು ಎಲ್ಲಾ ಮಾಡುತ್ತಿದ್ದಾನೆ ಎಂದು ಮೊದಲ ವಾರದ ಕ್ಯಾಪ್ಟನ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.