ಹೊಸ ಪ್ರೇಮ್ ಕಹಾನಿ.., ಸ್ನೇಹಿತ್-ಈಶಾನಿ ಮಧ್ಯೆ ಲವ್ at ಫಸ್ಟ್ ಸೈಟ್..!?

Published : Oct 12, 2023, 07:39 PM ISTUpdated : Oct 12, 2023, 08:03 PM IST
ಹೊಸ ಪ್ರೇಮ್ ಕಹಾನಿ.., ಸ್ನೇಹಿತ್-ಈಶಾನಿ ಮಧ್ಯೆ ಲವ್ at ಫಸ್ಟ್ ಸೈಟ್..!?

ಸಾರಾಂಶ

ಸ್ನೇಹಿತ್ ಗೌಡ ಕನ್ನಡದ ಕಿರುತೆರೆ, ಅಂದರೆ ಸೀರಿಯಲ್ ನಟ, ಕಲಾವಿದ. ಈಶಾನಿ ಮೈಸೂರು ಮೂಲದ ದುಬೈನಲ್ಲಿ ಹುಟ್ಟಿ ಬೆಳೆದಿರುವ ಸಿಂಗರ್ (Rapper). ಇದೀಗ ಈ ಇಬ್ಬರೂ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಾಗಿ 'ದೊಡ್ಮನೆ' ಪ್ರವೇಶಿಸಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಹೊಸದೊಂದು 'ಲವ್ ಸ್ಟೋರಿ 2023' ಸುದ್ದಿ ಬಂದಿದೆ.  ಅದು ಸ್ನೇಹಿತ್ ಗೌಡ ಮತ್ತು ಈಶಾನಿ ಅವರದು. Rapper Ishani and Snehith Gowda ಅವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಪರಸ್ಪರ ಲವ್ವಲ್ಲಿ ಬಿದ್ದಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಕಾರ್ತಿಕ್ ಮಹೇಶ್ ಮತ್ತು ಸಂಗೀತಾ ಶೃಂಗೇರಿ ಲವ್ ಮ್ಯಾಟರ್ ಬೆನ್ನಲ್ಲೇ ಇದೀಗ ಸ್ನೇಹಿತ್-ಈಶಾನಿ 'ಲವ್ ಕಹಾನಿ' ಸುದ್ದಿ ಕರುನಾಡಿನ ತುಂಬಾ ಹಬ್ಬುತ್ತಿದೆ. 

ಸ್ನೇಹಿತ್ ಗೌಡ ಕನ್ನಡದ ಕಿರುತೆರೆ, ಅಂದರೆ ಸೀರಿಯಲ್ ನಟ, ಕಲಾವಿದ. ಈಶಾನಿ ಮೈಸೂರು ಮೂಲದ ದುಬೈನಲ್ಲಿ ಹುಟ್ಟಿ ಬೆಳೆದಿರುವ ಸಿಂಗರ್ (Rapper). ಇದೀಗ ಈ ಇಬ್ಬರೂ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಾಗಿ 'ದೊಡ್ಮನೆ' ಪ್ರವೇಶಿಸಿದ್ದಾರೆ. ಅಲ್ಲಿ ಅವರಿಬ್ಬರ ಮಧ್ಯೆ ಲವ್ @ ಫಸ್ಟ್ ಸೈಟ್ ಆಗಿಬಿಟ್ಟಿದೆ ಎನ್ನಲಾಗುತ್ತಿದೆ. ಅವರಿಬ್ಬರ ಹೊಂದಾಣಿಕೆ ಮೋಡ್ ನೋಡಿದ ವೀಕ್ಷಕರು ಅವರಿಬ್ಬರ ಮಧ್ಯೆ ಪ್ರೇಮ್ ಕಹಾನಿ ಶುರುವಾಗಿರುವುದು ಪಕ್ಕಾ ಎನ್ನುತ್ತಿದ್ದಾರೆ. 

ರಾಮ ರಾಮ ಎಂದು ರಾಮನನ್ನೇ ನಂಬಿರುವ ಸೀತಾ; ನಂಬಿಕೆ ಉಳಿಸಿಕೊಳ್ತಾನಾ ರಾಮ?

ಒಂದೇ ಬಿಗ್ ಬಾಸ್ ಮನೆಯಲ್ಲಿ ಎರಡೆರಡು ಪ್ರೇಮ್ ಕಹಾನಿಯೇ ಎಂದು ಹುಬ್ಬೇರಿಸಬೇಡಿ. ಹೌದು, ಶುರುವಾದಂತಿದೆ ಮಾಡುವುದೇನು? ಈ ಮೊದಲ ಸೀಸನ್‌ಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದೊಂದು ಲವ್ ಸ್ಟೋರಿ ಕೇಳಿ ಬಂದಿತ್ತು. ಆದರೆ ಈ ಸೀಸನ್‌ನಲ್ಲಿ ಎರಡು ಲವ್ ಸ್ಟೋರಿ ಶುರುವಾಗಿದೆ. ಹಳೆಯ ಸೀಸನ್‌ಗಳ ಲವ್ ಜೋಡಿ ನಿಮಗೆಲ್ಲ ಗೊತ್ತಿರುವಂತೆ, ಚಂದನ್ ಶೆಟ್ಟಿ-ನಿವೇದಿತಾ ಹಾಗೂ ದಿವ್ಯಾ-ಅರವಿಂದ್ ಜೋಡಿಗಳು. ಇದೀಗ ಈ ಎರಡು ಪ್ರೇಮ ಪ್ರಕರಣಗಳು ಸುದ್ದಿ ಆಗತೊಡಗಿವೆ. 

ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದ್ಯಾ ಲವ್ವಿ ಡವ್ವಿ; ಸಂಗೀತಾ-ಕಾರ್ತಿಕ್ ಮಧ್ಯೆ ಕುಚ್ ಕುಚ್...?!

ಒಟ್ಟಿನಲ್ಲಿ, ಈ ಸೀಸನ್ ಬಿಗ್ ಬಾಸ್ ಕನ್ನಡದ 'ಪ್ರೀಮಿಯರ್' ಶೋ' ಸಂಚಿಕೆಯಲ್ಲಿ ನಟ ಸುದೀಪ್ ಹೇಳಿರುವಂತೆ , ಬಿಗ್ ಬಾಸ್ ಮನೆ ಇದೀಗ 'ಮ್ಯಾಟ್ರಿಮೋನಿಯಲ್ ವೇದಿಕೆ'ಯಾಗಿ ಬದಲಾಗುತ್ತಿದೆಯೇ? ಹೌದು ಎನ್ನಬಾರದು ಎಂದರೂ ಇಲ್ಲ ಎನ್ನಲು ಯಾವ ಸಾಕ್ಷಿಯೂ ಇಲ್ಲ. ಈ ಮೊದಲು ಒಂದು ಲವ್ ಸ್ಟೋರಿಗೆ ಸೀಮಿತವಾಗಿದ್ದ ಬಿಗ್ ಬಾಸ್ ಮನೆ ಇದೀಗ ಎರಡು ಲವ್ ಸ್ಟೋರಿಗೆ ಸಾಕ್ಷಿಯಾಗಿದೆ. ಹೀಗೆ ಮುಂದುವರಿದರೆ ಅದಿನ್ನೆಷ್ಟು ನಂಬರ್ ತಲುಪುತ್ತೋ ಏನೋ?!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Brahmagantu Serial ದೀಪಾ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು? ದೂರು ಕೊಟ್ಟೋರು ಯಾರು?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!