
ಬಿಗ್ ಬಾಸ್ ಮನೆಯಿಂದ ಲವ್ ಸ್ಮೆಲ್ ಹೊರಬರುತ್ತಿದೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಬಿಗ್ ಬಾಸ್ 10ನೇ ಸೀಸನ್ ಮೊದಲ ದಿನವೇ ಕಾರ್ತಿಕ್ ಮತ್ತು ಸಂಗೀತಾ ಶೃಂಗೇರಿ ನಡುವೆ ಬಹಳಷ್ಟು 'ಕೆಮೆಸ್ಟ್ರಿ' ಕಂಡು ಬರುತ್ತಿತ್ತು. ಬಳಿಕವಂತೂ ಈ ಇಬ್ಬರ ನಡುವೆ ಭಾರೀ ಹೊಂದಾಣಿಕೆ ಮೇಲ್ನೋಟಕ್ಕೇ ತಿಳಿಯುತ್ತಿದೆ. 'ಫಸ್ಟ್ ಒಳ್ಳೇ ಇಂಪ್ರಶನ್' ಎಂಬ ಚರ್ಚೆಯಲ್ಲಿ ಕೂಡ ಸಂಗೀತಾ 'ಕಾರ್ತಿಕ್ ಮಹೇಶ್' ಹೆಸರು ಹೇಳಿದ್ದಾರೆ ಮತ್ತು ಕಾರ್ತಿಕ್ ಸಂಗೀತಾ ಹೆಸರನ್ನೇ ಹೇಳಿದ್ದಾರೆ. ಆಗಲೇ ಇವರಿಬ್ಬರ ಬಗ್ಗೆ ಇನ್ನೊಬ್ಬರು ಸ್ಪರ್ಧಿ ತನಿಶಾ ಕುಪ್ಪಂಡ ಕಣ್ಣಿಂದಲೇ ಸೂಚನೆ ಕೊಟ್ಟಿದ್ದಾರೆ.
ತನಿಶಾ ಅಂದಿನ ಕಣ್ಸನ್ನೆಗೆ ಇಂದು ಅರ್ಥ ಸಿಗುತ್ತಿದೆ. ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ದಿನದಿನಕ್ಕೂ ಕ್ಷಣಕ್ಷಣಕ್ಕೂ ಹತ್ತಿರವಾಗುತ್ತಿದ್ದಾರೆ ಎನ್ನಬಹುದು. ಅವರಿಬ್ಬರ ಲವ್ ಸ್ಟೋರಿ ಅಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದವರ ಗಮನಕ್ಕೂ ಬಂದಿದೆ. ಬಿಗ್ ಬಾಸ್ ವೀಕ್ಷಕರ ವಲಯದಲ್ಲಂತೂ ಅವರಿಬ್ಬರ ಲವ್ ಸ್ಟೋರಿ ಆ 'ದೊಡ್ಮನೆ'ಯಿಂದ ಹೊರಬಂದ ಮೇಲೂ ಕಂಟಿನ್ಯೂ ಆಗಲಿದೆ ಎಂದೇ ಮಾತು ಕೇಳಿ ಬರುತ್ತಿದೆ.
ರಾಮ ರಾಮ ಎಂದು ರಾಮನನ್ನೇ ನಂಬಿರುವ ಸೀತಾ; ನಂಬಿಕೆ ಉಳಿಸಿಕೊಳ್ತಾನಾ ರಾಮ?
ಕೆಲವರಂತೂ, ಈ ಮೊದಲು 'ಚಂದನ್ ಶೆಟ್ಟಿ-ನಿವೇದಿತಾ' ಜೋಡಿ ಬಿಗ್ ಬಾಸ್ ಮನೆಯಲ್ಲಿ ಲವ್‌ಗೆ ಬಿದ್ದು ಹೊರಬಂದ ಬಳಿಕ ಮದುವೆ ಆದ ಉದಾಹರಣೆ ಕಣ್ಣ ಮುಂದೆಯೇ ಇದೆ. ಜತೆಗೆ, ದಿವ್ಯಾ ಉರುಡಗ-ಅರವಿಂದ್ ಕೆಪಿ ಲವ್ ಕೂಡ ಅಲ್ಲೇ ಹುಟ್ಟಿ ಬೆಳೆದಿರುವುದು ಎಂಬುದು ವಿಶೇಷ. ಇದೇ ಹಾದಿಯಲ್ಲಿ ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಲವ್ ಮತ್ತು ಮದುವೆ ನಡೆಯಲಿದೆ ಎಂದು ಭವಿಷ್ಯ ನುಡಿಯತೊಡಗಿದ್ದಾರೆ.
ಸ್ವರ್ಗದಲ್ಲೇ ಮದ್ವೆ ಆಗಿದ್ರೂ ಭೂಮಿ ಮೇಲೆ ಮತ್ತೆ ಆಗೋದ್ಯಾಕೆ? ರಾಜ ರಾಣಿ ನಟ ಶಶಿ ಹೆಗ್ಡೆ ಹೇಳಿದ್ದಾರೆ ಕೇಳಿ!
ಜತೆಗೆ, ಇನ್ನೊಂದು ಜೋಡಿ ಕೂಡ ಗಮನ ಸೆಳೆಯುತ್ತಿದೆ. ಅದು ಈಶಾನಿ ಮತ್ತು ಸ್ನೇಹಿತ್ ಜೋಡಿ! ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಮತ್ತು ಈಶಾನಿ ಅವರಿಬ್ಬರೂ ಪರಸ್ಪರ ಹತ್ತಿರ ಆಗತೊಡಗಿದ್ದಾರೆ. ಈ ಮೂಲಕ ಈ ಸೀಸನ್‌ನಲ್ಲೇ ಎರಡು ಜೋಡಿ ಅಲ್ಲಿ ಲವ್‌ಗೆ ಬಿದ್ದು ಹೊರಗಡೆ ಬಂದು 'ಲವ್ ಬರ್ಡ್ಸ್'ಗಳಾಗಿದ್ದು ಬಳಿಕ ಸಪ್ತಪದಿ ತುಳಿಯಲಿದ್ದಾರೆ ಎಂಬುದು ಬಿಗ್ ಬಾಸ್ ವೀಕ್ಷಕರ ನಡುವೆ ಶುರುವಾಗಿರುವ ಚರ್ಚೆ. ಇದು ನಿಜವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.