BBK9 ಬಾಣಗಳು ಬೇಕಾದಷ್ಟಿದ್ರೂ ನೇಹಾ ಗೌಡ ಬಿಲ್ಲು ಕಳೆದುಕೊಂಡಿದ್ದಾರೆ: ಸುದೀಪ್

Published : Oct 18, 2022, 04:04 PM IST
BBK9 ಬಾಣಗಳು ಬೇಕಾದಷ್ಟಿದ್ರೂ ನೇಹಾ ಗೌಡ ಬಿಲ್ಲು ಕಳೆದುಕೊಂಡಿದ್ದಾರೆ: ಸುದೀಪ್

ಸಾರಾಂಶ

ನೇಹಾ ಆಟ ಶುರು ಮಾಡಿಲ್ವಾ? ವೀಕೆಂಡ್ ಮಾತುಕಥೆಯಲ್ಲಿ ಸಿಕ್ತು ಉತ್ತರ....

ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ಮೇಕಪ್ ಮ್ಯಾನ್ ರಾಮ್‌ಕೃಷ್ಣ ಪುತ್ರಿ ನೇಹಾ ಗೌಡ ಇದೀಗ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿದ್ದಾರೆ. ತುಂಬಾ ಕಾಮ್ ಆಂಡ್ ಕಂಪೋಸ್ ಆಗಿ ಆಟವಾಡುತ್ತಿರುವ ನೇಹಾ ನಾಲ್ಕು ವಾರವೂ ನಾಮಿನೇಟ್ ಆಗಲು ಕಾರಣವೇನು? ಟಾಸ್ಕ್‌ ಕೈ ಹಿಡಿಯದಿರಲು ಕಾರಣವೇನು? ಎಲ್ಲಿ ಏನು ತಪ್ಪಾಗುತ್ತಿದೆ ಎಂದು ಕಿಚ್ಚ ಸುದೀಪ್ ವೀಕೆಂಡ್ ಮಾತುಕಥೆಯಲ್ಲಿ ವಾರದ ಟಾಸ್ಕ್‌ ಚರ್ಚೆ ಮಾಡಿದ್ದಾರೆ. 

ಸುದೀಪ್: ಬಾಣಗಳು ಬೇಕಾದಷ್ಟು ಇದ್ರೂ ಕೂಡ ನೇಹಾ ಅವ್ರು ಬಿಲ್ಲು ಕಳೆದುಕೊಂಡಿದ್ದಾರೆ?

ಕೆಲವರು ಯಸ್ ಕೆಲವರು ನೋ ತೋರಿಸಿದ್ದಾರೆ. ಯಾಕೆ ಈ ರೀತಿ ಆಗುತ್ತಿದೆ ಎಂದು ಸ್ವತಃ ನೇಹಾ ಸ್ಪಷ್ಟನೆ ಕೊಟ್ಟಿದ್ದಾರೆ.

ಪ್ರಶಾಂತ್: ಪ್ರತಿ ಸಲ ಕಳಪೆ ಮತ್ತು ಅತ್ಯುತ್ತಮ ಬಂದಾಗ ನೇಹಾ ಜಾರಿಕೊಳ್ಳುತ್ತಾರೆ. ವಾರವಿಡೀ ಕಾಣಿಸಿಕೊಳ್ಳುವುದಿಲ್ಲ ಆದರೂ ಅವರಿಗೆ ಯಾರೂ ಕಳಪೆ ಕೊಡುತ್ತಿಲ್ಲ . ನೇಹಾ ಅವರಲ್ಲಿರುವ ಟ್ಯಾಲೆಂಟ್ ಯಾವುದು ಹೊರಗೆ ಬರುವುದಿಲ್ಲ ಸುಮ್ಮನೆ ಹುಡುಗಿಯರ ಜೊತೆ ಓಡಾಡಿಕೊಂಡು ಇರುತ್ತಾರೆ ಅಷ್ಟು ಬಿಟ್ಟರೆ ಏನೂ ಮಾಡುವುದಿಲ್ಲ.

ದೀಪಿಕಾ ದಾಸ್: ನಾನು ನೋಡಿದ ಹಾಗೆ ನೇಹಾ ಇಲ್ಲ. ಎಲ್ಲಿ ಹೇಗೆ ಮಾತನಾಡಬೇಕು ಎಷ್ಟು ಸ್ಟ್ರೇಟ್ ಆಗಿರಬೇಕು ಎಂದು ನೇಹಾಗೆ ಗೊತ್ತು. ಎಲ್ಲಿಯೂ ಹೊಸಬರ ರೀತಿ ಇರುವುದಿಲ್ಲ. ಅವರೇ ಹೇಳಿದ್ದಾರೆ ಹಳೆ ಸೀಸನ್ ನೋಡಿರುವೆ ಅಂತ ಹೀಗಾಗಿ ಗೇಮ್ ಆಡುವುದಕ್ಕೆ ಬರುತ್ತೆ. ಬಾಣ ಕಳೆದುಕೊಂಡಿಲ್ಲ ಆಟ ಶುರು ಮಾಡುಲ್ಲ ಅನಿಸುತ್ತದೆ.

BBK9 ಕ್ಯಾಪ್ಟನ್‌ ರೂಮಲ್ಲಿ ರೂಪೇಶ್‌- ಸಾನ್ಯಾ ನಡುವೆ ಏನಾಯ್ತು: ಕಂಫರ್ಟ್‌ ಝೋನ್‌ನಲ್ಲಿ ತಬ್ಬಿಕೊಳ್ಳುವುದು ತಪ್ಪಲ್ಲ?

ನೇಹಾ ಗೌಡ:  100% ಅಂತ ನಾನು ಹೇಳುವುದಿಲ್ಲ ಆದರೆ ನಾನು ನನ್ನ ಸಂಪೂರ್ಣ ಶ್ರಮ ಹಾಕುತ್ತಿರುವೆ. ಕೆಲವೊಂದು ಸಲ ಹೇಗಾಗುತ್ತದೆ ಅಂದ್ರೆ ಇಲ್ಲಿ ಆಗಲೇ ಅನುಭವ ಹೊಂದಿರುವವರು ಇರುವುದರಿಂದ ಅವರಿಗೆ ತುಂಬಾ ಪ್ರಶ್ನೆ ಕೇಳ್ತೀನಿ ತಪ್ಪಿದ್ದರೆ ಅಲ್ಲೇ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೀನಿ. ನನ್ನ ಬಗ್ಗೆ ಇಲ್ಲಿ ಇರುವವರಿಗೆ ಈ ರೀತಿ ಅಭಿಪ್ರಾಯ ಇರುವುದಿಂದ ನಾನು ಕಂಡಿತಾ ನಾನು ಬದಲಾಗುತ್ತೀನಿ. ಯಾರಿಗೂ ನನ್ನ ಬದಲಾವಣೆ ಅನಿಸಬಾರದು.

ಹೆಣ್ಣು ಮಗುವನ್ನು ದತ್ತು?:

 ನೇಹಾ ಹಾಗೂ ಅವರ ಪತಿ ಚಂದನ್, ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ನೇಹಾ ಮಗು ದತ್ತು ಪಡೆದುಕೊಳ್ಳುವ ಆಸೆ ಬಗ್ಗೆ ಹಂಚಿಕೊಂಡಿದ್ದರು.'ನನಗೆ ಎಂದಿಗೂ ಪ್ರಾಮುಖ್ಯತೆ ನನ್ನ ಕುಟುಂಬ ಹಾಗೂ ಅ ಸಂಬಂಧವನ್ನು ಉಳಿಸಿಕೊಂಡು ಕಾಪಾಡಿಕೊಂಡು ಹೋಗುವುದು. ಹೆಣ್ಣು ಮಗು ದತ್ತು ಪಡೆದುಕೊಳ್ಳುವ ಆಲೋಚನೆ ಹಲವು ವರ್ಷಗಳಿಂದ ನನ್ನ ತಲೆಯಲ್ಲಿತ್ತು. ನನ್ನ ಕುಟುಂಬದ ಜೊತೆಗೂ ನಾನು ಹಂಚಿ ಕೊಂಡಿರಲಿಲ್ಲ. ರಾಜಾ ರಾಣಿ ವೇದಿಕೆ ಮೇಲೆ ನಾನು ಇದನ್ನು ಹಂಚಿಕೊಂಡಾಗ ಚಂದನ್‌ಗೆ ಆಶ್ಚರ್ಯ ಆಯ್ತು. ಚಂದನ್ ಸದಾ ನನ್ನ ಆಯ್ಕೆಗಳನ್ನು ಒಪ್ಪಿಕೊಳ್ಳುವ ವ್ಯಕ್ತಿ,' ಎಂದು ನೇಹಾ ಹೇಳಿದ್ದಾರೆ. ಈಗ ನನಗೆ ಅದರ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಏಕೆಂದರೆ ಈಗಾಗಲೇ ಆಕೆ ಇಂಡಿಪೆಂಡೆಂಟ್ ಆಗಿದ್ದಾಳೆ. ತನ್ನದೇ ಕ್ಷೇತ್ರದಲ್ಲಿ ಒಳ್ಳೇಯ ಕೆಲಸ ಮಾಡುತ್ತಿದ್ದಾಳೆ. ನನ್ನ ಕೈಲಾಗುವಷ್ಟು ನಾನು ಸಹಾಯ ಮಾಡಿದೆ. ಆಕೆ ಶ್ರಮದಿಂದ ಜೀವನ ನಡೆಸುತ್ತಿದ್ದಾಳೆ. ನಾನು ಇಂಡಸ್ಟ್ರಿ ಹಾಗೂ ಅದರ ಹೊರತು ಅನೇಕ ಹೆಣ್ಣು ಮಕ್ಕಳನ್ನು ನೋಡಿದ್ದೇನೆ. ಎಷ್ಟು ಕಷ್ಟ ಪಡುತ್ತಾರೆ. ನಾನು ಅದೃಷ್ಟ ಮಾಡಿದ್ದೆ, ನನ್ನ ಕುಟುಂಬ ಸದಾ ನನ್ನ ಪರವಾಗಿತ್ತು. ಇದೇ ಪ್ರೀತಿ ಹಾಗೂ ವಾತ್ಸಲ್ಯವನ್ನು ನಾನು ಬೇರೆ ಹೆಣ್ಣು ಮಕ್ಕಳಿಗೆ ನೀಡಬೇಕು. ಅವರೂ ಅಪ್ಪ ಅಮ್ಮನ ಪ್ರೀತಿ ಏನೆಂದು ತಿಳಿದುಕೊಳ್ಳಬೇಕು' ಎಂದಿದ್ದರು ನೇಹಾ.

BBK9 ಊರು ಜಾತ್ರೆಯಲ್ಲೊಬ್ಬ ಕ್ರಶ್, ತಿರುಪತಿಯಲ್ಲೊಬ್ಬ ಕ್ರಶ್; ಮಂಗಳಗೌರಿ ಕಾವ್ಯಾ ಶಾಕಿಂಗ್ ಲವ್

ರಾಜಾ ರಾಣಿ ಸೀಶನ್ 1ರ ವಿನ್ನರ್ ಕಿರೀಟವನ್ನು ನೇಹಾ ಮತ್ತು ಪತಿ ಚಂದನ್ ಪಡೆದುಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?