
ಜೀ ಕನ್ನಡದ ಜನಪ್ರಿಯ ಸೀರಿಯಲ್‌ಗಳಲ್ಲೊಂದು 'ಜೊತೆ ಜೊತೆಯಲಿ'. ಈ ಸೀರಿಯಲ್ ಇತ್ತೀಚೆಗೆ ಅನೇಕ ಕಾರಣಗಳಿಗೆ ಸುದ್ದಿಯಲ್ಲಿತ್ತು. ಈ ಸೀರಿಯಲ್‌ನಲ್ಲಿ ಹೀರೋ ಪಾತ್ರ ನಿರ್ವಹಿಸುತ್ತಿದ್ದ ನಟ ಅನಿರುದ್ಧ ಜತ್ಕರ್ ಅವರನ್ನು ಸೀರಿಯಲ್‌ನಿಂದ ಹೊರಗಿಟ್ಟಿದ್ದು ಮುಖ್ಯ ಕಾರಣ. ಇವರ ಬದಲಿಗೆ ಯಾರು ಬರ್ತಾರೆ ಅನ್ನೋ ಗೆಸ್‌ಗಳು ನಡೆದವು. ಕೊನೆಗೆ ಹರೀಶ್ ರಾಜ್ ಈ ಸೀರಿಯಲ್ ಹೀರೋ ಆದರು. ಅವರು ಬಂದ ಮೇಲೂ ಅನಿರುದ್ಧ ಫ್ಯಾನ್ಸ್ ಸೀರಿಯಲ್ ಬೈಕಾಟ್ ಮಾಡೋದಾಗಿ ಹೇಳ್ತಿದ್ರು. ಸದ್ಯಕ್ಕೀಗ ಸೀರಿಯಲ್ ಹೊಸ ಬಗೆಯ ಕಥೆಯೊಂದಿಗೆ ಮುಂದುವರಿಯುತ್ತಿದೆ. ಸ್ಕಿನ್ ಟ್ರಾನ್ಸ್‌ಪ್ಲಾಂಟೇಶನ್ ಮಾಡಿಸಿಕೊಂಡ ಬಂದ ತನ್ನ ಗಂಡ ಗುರುತು ಅನುಗೆ ಇನ್ನೂ ಸಿಕ್ಕಿಲ್ಲ. ತನ್ನ ಗಂಡ ತೀರಿ ಹೋಗಿದ್ದಾರೆ ಅಂತಲೇ ಅವಳು ಭಾವಿಸಿದ್ದಾಳೆ. ಆದರೆ ಹೊಸ ಆರ್ಯವರ್ಧನ ಸಾಮೀಪ್ಯದಲ್ಲಿ ಅವಳಿಗೆ ತನ್ನ ಗಂಡ ಆರ್ಯ ಸಾರ್ ನೆನಪು ತೀವ್ರವಾಗಿ ಕಾಡುತ್ತಿದೆ. ಅದರಿಂದ ಹೊರಬರಲು ಅವಳು ಸಂಜು ಎಂದು ಕರೆಸಿಕೊಳ್ಳುತ್ತಿರುವ ಆರ್ಯವರ್ಧನ್ ಬಗ್ಗೆ ಸಿಟ್ಟು, ನಿರ್ಲಕ್ಷ್ಯ, ಉಡಾಫೆಯ ವರ್ತನೆ ತೋರುತ್ತಿದ್ದಾರೆ. ಆದರೆ ಹೀಗೆ ನೋವಲ್ಲಿ ಬೇಯುತ್ತಿರುವ ಅನು ಈಗ ತನ್ನ ಮನೆಗೆ ಬಂದಿದ್ದಾಳೆ. ಅವಳ ಮುಖದಲ್ಲಿ ಕೊಂಚ ನಗು ತರಿಸಿರುವುದು ತನ್ನ ತಾಯಿ ಪುಷ್ಪ ಹಾಗೂ ತಂದೆಯ ನಡುವಿನ ಪ್ರಸಂಗಗಳು.
ಇಲ್ಲಿ ತಾಯಿ ಪುಷ್ಪಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಲಾವಿದೆಯ ಹೆಸರು ಅಪೂರ್ವ ಶ್ರೀ. ಇವರ ಅನು ತಾಯಿ ಪುಷ್ಪ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಜೀವ ತುಂಬಿದ್ದಾರೆ ಅಂದರೆ ಎಷ್ಟೋ ಜನ ತಮ್ಮ ತಾಯಿಯನ್ನೇ ಈ ಜಾಗದಲ್ಲಿ ಕಲ್ಪಿಸಿಕೊಳ್ಳುವಷ್ಟು. ತನ್ನ ಪತಿ ಸುಬ್ಬು ಜೊತೆಗೆ ಜೋರಿನ ಡೈಲಾಗ್ ಹೊಡೆದು ನಗಿಸುತ್ತಾ, ಸುಬ್ಬುವನ್ನು ಆಗಾಗ ಗೋಳು ಹೊಯ್ಕೊಳ್ತಾ, ಜಗಳ, ಪ್ರೀತಿ (Love) ತೋರಿಸ್ತಾ ಆದರೆ ಒಳಗಿಂದ ಮಮಕಾರ ಇರೋ ಹೆಣ್ಣುಮಗಳಾಗಿ ಈ ಪಾತ್ರವನ್ನು ಸೊಗಸಾಗಿ ಅನುಭವಿಸಿದ ಪುಷ್ಪಾ ಅವರು ವೀಕ್ಷಕರ ಮನಸ್ಸನ್ನೂ ಗೆದ್ದಿದ್ದಾರೆ.
Jothe jotheyali : ತನ್ನ ಹೆಸರನ್ನು ಆರ್ಯವರ್ಧನ್ ಎಂದು ಎಂಟ್ರಿ ಮಾಡೇಬಿಟ್ಟ ಸಂಜು!
ಈ ಸೀರಿಯಲ್‌ನಲ್ಲಿ ಸದ್ಯ ಪುಷ್ಪಾ ತನ್ನ ಮಗಳಿಗೆ ಇಂಥಾ ಸ್ಥಿತಿ ಬಂದಿರೋ ಬಗ್ಗೆ ಬಹಳ ಬೇಸರದಿಂದಿದ್ದಾಳೆ. ಮಗಳ ಗಂಡ ಆರ್ಯವರ್ಧನ ತೀರಿಕೊಂಡಿದ್ದಾನೆ ಎಂದೇ ತಿಳಿದಿದ್ದಾಳೆ. ಆದರೆ ಸಂಜುವಲ್ಲಿ ಆರ್ಯನ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾಳೆ. ಮಗಳ ಮನಸ್ಸಿಗೆ ನೋವಾಗದ ಹಾಗೆ, ಅವಳು ಸದಾ ಖುಷಿಯಿಂದಿರುವ ಹಾಗೆ ಮಾಡಲು ಹೆಣಗುತ್ತಿದ್ದಾಳೆ.
ಆದರೆ ರಿಯಲ್ ಲೈಫಲ್ಲಿ ಈ ಪುಷ್ಪಾ ಅಂದರೆ ಅಪೂರ್ವ ಅವರ ಬದುಕೂ ಬಹಳ ಕಷ್ಟದಿಂದ ಕೂಡಿತ್ತು. ಅವರಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಆಗಿತ್ತು. ಆದರೆ ಮದುವೆ ಆಗಿ ಮಗಳು ಹುಟ್ಟಿದ ಮೇಲೆ ಇವರ ಗಂಡ(Husband) ಇವರನ್ನು ತೊರೆದು ಹೋಗಿದ್ದಾರೆ. ಈ ವೇಳೆ ಯಾರೂ ಇವರ ನೆರವಿಗೆ ಬಂದಿಲ್ಲ. ಗಂಡನ ಮನೆಯಿಂದಲೂ ಯಾವ ಸಹಾಯವೂ ಸಿಕ್ಕಿಲ್ಲ. ಒಂಟಿಯಾಗಿದ್ದು ಏನೇನೋ ಸಮಸ್ಯೆ ಎದುರಿಸುತ್ತಾ, ಹೊಟ್ಟೆಪಾಡಿಗೆ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ, ಎಷ್ಟೋ ಸಲ ಪಾತ್ರಕ್ಕೆ ಸಂಭಾವನೆಯೂ ಸಿಗದಾಗ ಒಂಟಿಯಾಗಿ ಕೂತು ಕಣ್ಣೀರುಗರೆಯುತ್ತಿದ್ದರು.
ಜೊತೆ ಜೊತೆಯಲಿ: ಆರ್ಯವರ್ಧನ್ ಸುಳಿವು ಕೊಟ್ಟ ಜೋಗವ್ವ
ಇಷ್ಟೆಲ್ಲ ಆದರೂ ತನ್ನ ಪುಟ್ಟ ಮಗಳನ್ನು(Daughter) ಯಾವ ಕೊರತೆಯೂ ಆಗದ ಹಾಗೆ ನೋಡಿಕೊಂಡಿದ್ದಾರೆ. ಚೆನ್ನಾಗಿ ಓದಿಸಿದ್ದಾರೆ. ಅಪೂರ್ವ ಅವರ ಮುಖದಲ್ಲಿ ಮತ್ತೆ ನಗು ಕಾಣಿಸಿಕೊಂಡಿದ್ದು ಜೊತೆ ಜೊತೆಯಲಿ ಸೀರಿಯಲ್(Serial)ನಲ್ಲಿ ಅಭಿನಯಿಸಲು ಪ್ರಾರಂಭಿಸಿದಾಗ. ಅಲ್ಲಿವರೆಗಿನ ಸಿನಿಮಾ(Cinema), ಸೀರಿಯಲ್‌ಗಳಿಂದ ಸಿಗದ ಹೆಸರು, ಹಣ ಇದರಿಂದ ಸಿಗುತ್ತಾ ಹೋಯಿತು. ಅಪೂರ್ವ ಅವರ ಬದುಕು ನೆಮ್ಮದಿ ಕಾಣುವ ಹಾಗಾಯ್ತು.
ಜೀ ಕನ್ನಡದ ಜೀ ಕುಟುಂಬ ಅವಾರ್ಡ್ ಫಂಕ್ಷನ್(Award function)ನಲ್ಲಿ ಇವರ ಮಗಳೇ ಅಮ್ಮ ತುಂಟ ನಗುವಿನ ಹಿಂದಿರುವ ನೋವಿನ ಕಥೆ ಹೇಳಿದರು. ಈ ಕಥೆ ಕೇಳಿ ಅಲ್ಲಿದ್ದ ಸೀರಿಯಲ್ ಮಂದಿ ಕಣ್ಣಲ್ಲಿ ನೀರು ಬಂತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.