
ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ ಕನ್ನಡತಿ. ಇದಕ್ಕಿರುವ ಫ್ಯಾನ್ಸ್ ಹೆಚ್ಚು. ಈ ಸೀರಿಯಲ್ ಗೆ ಕ್ಲಾಸ್ ಮತ್ತು ಮಾಸ್ ಎರಡೂ ಬಗೆಯ ಆಡಿಯನ್ಸ್ ಇರೋದು ವಿಶೇಷ. ಪ್ರೈಮ್ ಟೈಮಲ್ಲಿ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಸೀರಿಯಲ್ ಇದು. ಆದರೆ ಈ ಸೀರಿಯಲ್‌ನಲ್ಲಿ ರೋಲರ್ ಕೋಸ್ಟರ್ ರೈಡ್‌ನಂಥಾ ಅನುಭವ ಸಾಮಾನ್ಯ. ಖುಷಿಯಿಂದ ಕುಣೀತಿರೋ ಮರುಕ್ಷಣವೇ ಯಾವುದೋ ಅಪಾಯ ಹೊಂಚು ಹಾಕುತ್ತಲೇ ಇರುತ್ತೆ. ಹೀಗಾಗಿ ಈ ಸೀರಿಯಲ್ ಫ್ಯಾನ್ಸ್ ನಿರಾಳರಾಗಿ ಸೀರಿಯಲ್ ನೋಡೋ ಹಾಗಿಲ್ಲ. ಮನೆಯವರೆಲ್ಲ ಖುಷಿಯಿಂದ ಸಮಯ ಕಳೆಯುತ್ತಿರುವಾಗಲೇ ಒಂದೇ ಸಾನ್ಯಾ ಏನಾದ್ರೂ ಮಾಡ್ತಾಳೆ, ಇಲ್ಲವೇ ವರೂಧಿನಿ ಹರ್ಷ ಭುವಿಯನ್ನು ಬೇರೆ ಮಾಡಲು ಏನೋ ಸ್ಕೆಚ್ ಹಾಕ್ತಾಳೆ. ಅವೆರಡರ ಜೊತೆಗೆ ರತ್ನಮಾಲಾ ಅನಾರೋಗ್ಯ ಇದ್ದೇ ಇರುತ್ತೆ. ಇದೀಗ ಈ ಸೀರಿಯಲ್‌ನಲ್ಲಿ ಹೊಸ ಬೆಳವಣಿಗೆಯೊಂದು ಆಗಿದೆ. ಸಾನ್ಯಾ ಹರ್ಷನನ್ನು ಜೈಲಿಗಟ್ಟುವಲ್ಲಿ ಯಶಸ್ವಿ ಆಗಿದ್ದಾಳೆ ಹರ್ಷ ಕಂಬಿ ಎಣಿಸುತ್ತಿರುವಂತೆ ಇತ್ತ ರತ್ನಮ್ಮನಿಗೆ ಭ್ರಮೆ ಆವರಿಸಿದೆ. ಅವರು ಸಾನ್ಯಾಳನ್ನೇ ಭುವಿ ಅಂದುಕೊಂಡು ಮಾತಾಡುತ್ತಿದ್ದಾರೆ. ಇನ್ನು ಅವರ ಕಣ್ಣಿಗೆ ಭುವಿ ಸಾನ್ಯಾ ಥರ ಕಂಡ್ರೆ ಏನು ಮಾಡೋದೋ ದೇವರೇ ಬಲ್ಲ.
ನವರಾತ್ರಿ ಹಬ್ಬದ ವೇಳೆಗೆ ಸಾನ್ಯಾ ಹರ್ಷನ ಬಳಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು. ಹರ್ಷನ ಬಳಿ ಸಾನಿಯಾ ಕಳಿಸಿದ ಹುಡುಗ ನೀಲೇಶ್ ಬಂದು ಸಾನ್ಯಾ ಬಗ್ಗೆ ಎಲ್ಲಾ ಸತ್ಯ ಹೇಳ್ತಾನೆ. ಭುವಿ ಮತ್ತು ರತ್ನಮಾಲಾ ಅವರ ವಿರುದ್ಧ ಪ್ಲಾನ್ ಮಾಡಿಕೊಂಡು ಬಂದ ತಾನು ಅವರಿಂದಲೇ ಬುದ್ಧಿ ಕಲಿತೆ ಎಂದು ಹೇಳ್ತಾನೆ. ಸಾನಿಯಾ ಬಗ್ಗೆ ನೀಲೇಶ್ ಹೇಳಿದ ಸತ್ಯವನ್ನೆಲ್ಲಾ ಹರ್ಷ ಕೇಳಿಸಿಕೊಂಡು ತುಂಬ ಕೋಪಗೊಂಡಿದ್ದ. ಅದೇ ಸಿಟ್ಟಲ್ಲಿ ಗನ್ ಹಿಡಿದು ತಂದು, ನಿನ್ನ ಸುಮ್ನೆ ಬಿಡಲ್ಲ ಎಂದು ಸಾನಿಯಾಗೆ ಹರ್ಷ ಹೇಳಿದ್ದ. ಅವಳ ತಲೆಗೆ ಗನ್ ಹಿಡಿದು ಅವಳ ಬಾಯಿಂದ ಸತ್ಯ ಬಾಯ್ಬಿಡಿಸಿದ್ದಾನೆ.
ಜೊತೆ ಜೊತೆಯಲಿ ಸೀರಿಯಲ್ ಪುಷ್ಪ ರಿಯಲ್ ಮಗಳು ಹೇಳಿದ ನೋವಿನ ಕಥೆ
ಹರ್ಷ ಹೀಗೆ ಸಾನ್ಯಾ ಹಣೆಗೆ ಗನ್ ಹಿಡಿದಿರೋದರ ವಿಡಿಯೋ ಬೇರೆ ಇದೆ. ಹರ್ಷ ಗನ್ ಹಿಡಿದ ಕಾರಣಕ್ಕೆ ಎಂದೂ ಬಗ್ಗದ ಸಾನ್ಯಾ ಭಯದಲ್ಲಿ ಎಲ್ಲಾ ಸತ್ಯ(Truth) ಬಾಯ್ಬಿಟ್ಟಿದ್ದಾಳೆ. ಈ ಸಮಯದಲ್ಲಿ ಭುವಿಯನ್ನು ಕೆಲಸದಿಂದ ತೆಗಿಸಲು ಸಾನಿಯಾಳೇ ಪ್ಲ್ಯಾನ್(Plan) ಮಾಡಿದ್ದು ಎಂದು ಮನೆಯವರಿಗೆಲ್ಲಾ ಗೊತ್ತಾಗುತ್ತೆ. ಇದರಿಂದ ಭುವಿ ಸಹ ತುಂಬಾ ಬೇಜಾರು ಮಾಡಿಕೊಂಡಿರುತ್ತಾಳೆ. ಇತ್ತ ಪೊಲೀಸ್ ನವರು ಹರ್ಷ ಬಳಿ ಬಂದು ಮಾಡನಾಡಿದ್ದಾರೆ. ಸಾನಿಯಾಗೆ ಗನ್ ಹಿಡಿದಿದ್ದು ಮರ್ಡರ್ ಅಟೆಮ್ಟ್ ಆಗುತ್ತೆ. ಸಾನಿಯಾ ದೂರು ಕೊಟ್ರೆ ನೀವು ಜೈಲಿಗೆ ಹೋಗ ಬೇಕಾಗುತ್ತೆ ಎಂದು ಹೇಳ್ತಾರೆ. ಅದನ್ನು ಕೇಳಿಸಿಕೊಂಡ ಹರ್ಷ ಏನೂ ಮಾತನಾಡದೇ ಸುಮ್ಮನಿದ್ದಾನೆ. ಆದ್ರೆ ಹರ್ಷ ಮತ್ತು ಪೊಲೀಸ್ ಮಾತನಾಡುವುದನ್ನು ಸಾನಿಯಾ ಕೇಳಿಸಿಕೊಂಡಿದ್ದಾಳೆ. ಇಲ್ಲೀವರೆಗೆ ಎಲ್ಲ ಅವಮಾನವನ್ನು ಸಹಿಸಿಕೊಂಡಿದ್ದ ಸಾನಿಯಾ, ಅಮ್ಮಮ್ಮನ ಆರೋಗ್ಯ(Health) ಹದಗೆಟ್ಟ ಸಮಯವನ್ನು ಬಳಸಿಕೊಂಡು ಹರ್ಷನ ವಿರುದ್ಧ ಮಸಲತ್ತು ಮಾಡಿದ್ದಾಳೆ. ಹರ್ಷನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ತನ್ನನ್ನು ಕೊಲ್ಲಲು ಬಂದಿದ್ದ ಎಂದು ದೂರಿನಲ್ಲಿ ಬರೆದು ಕೊಟ್ಟಿದ್ದಾಳೆ.
Ramachari: ಶರ್ಮಿಳಾ ಕೊಲೆಗೆ ಮಾನ್ಯತಾ ಪ್ಲಾನ್, ಆದರೆ ಬಲಿಯಾಗ್ತಿರೋದು ಚಾರು!
ಸಾನಿಯಾ ದೂರು ಕೊಟ್ಟ ನಂತರ ಹರ್ಷ ಜೈಲು ಸೇರಿದ್ದಾನೆ. ಏನೂ ಮಾತನಾಡದೇ ಮೌನವಾಗಿದ್ದಾನೆ. ಇತ್ತ ಅಮ್ಮಮ್ಮ ಆರೋಗ್ಯ ಹದಗೆಟ್ಟಿದೆ. ಅಮ್ಮ ಭ್ರಮೆ (Illusion)ಯಲ್ಲಿ ಬಿದ್ದಿದ್ದಾರೆ. ಸಾನ್ಯಾ ಎದುರು ಕಂಡಾಗ ಅವಳನ್ನೇ ತನ್ನ ಸೊಸೆ ಭುವಿ ಅಂತ ತಿಳಿದು ಪ್ರೀತಿ(Love)ಯಿಂದ ಮಾತಾಡಿದ್ದಾರೆ. ಎಲ್ಲಾ ಅಧಿಕಾರ ನಿನಗೇ ವಹಿಸುತ್ತೇನೆ ಎಂದಿದ್ದಾರೆ. ಹರ್ಷನ ಬಗ್ಗೆ, ಆತನ ಸಿಟ್ಟಿನ ಬಗ್ಗೆ ಹೇಳಿದ್ದಾರೆ. ಸಾನ್ಯಾಗೆ ಕನ್‌ಫ್ಯೂಶನ್ಸ್(Confusion) ಆಗಿದೆ. ತನ್ನ ಎದುರಿಗೇ ಅತ್ತೆ ಹರ್ಷನಿಗೆ ಬೈಯ್ಯೋದು ಕಂಡು ಅವಳು ಗೊಂದಲದಲ್ಲಿ ಬಿದ್ದಿದ್ದಾಳೆ. ಅಮ್ಮಮ್ಮ ಇದೇ ಮನಸ್ಥಿತಿಯಲ್ಲಿ ಸಾನ್ಯಾಗೆ ತನ್ನೆಲ್ಲ ಆಸ್ತಿಯನ್ನೂ ಹಂಚುತ್ತಾಳಾ? ಸಾನ್ಯಾಳನ್ನ ಭುವಿ ಅಂತ ನೋಡಿದವಳು ಭುವಿಯನ್ನು ಇನ್ನು ಹೇಗೆ ನೋಡಬಹುದು? ಇದರಿಂದ ಏನೆಲ್ಲ ಹಾನಿಯಾಗಬಹುದು, ಜೈಲು ಸೇರಿರೋ ಹರ್ಷನ ಕಥೆ ಏನು ಇದನ್ನೆಲ್ಲ ತಿಳಿಯಲು ಮುಂದಿನ ಸಂಚಿಕೆಗೆ ಕಾಯಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.