BBK9 ಮುಖವಾಡ ಕಳಚಿಡಿ: ರೂಪೇಶ್ ರಾಜಣ್ಣ ಅಸಲಿ ಮುಖ ಬಿಚ್ಚಿಟ್ಟ ಸುದೀಪ್

Published : Nov 13, 2022, 04:34 PM ISTUpdated : Nov 13, 2022, 04:43 PM IST
BBK9 ಮುಖವಾಡ ಕಳಚಿಡಿ: ರೂಪೇಶ್ ರಾಜಣ್ಣ ಅಸಲಿ ಮುಖ ಬಿಚ್ಚಿಟ್ಟ ಸುದೀಪ್

ಸಾರಾಂಶ

ರೂಪೇಶ್ ರಾಜಣ್ಣ ಹೇಳಿಕೆ ಬಗ್ಗೆ ಸ್ಪಷ್ಟನೆ ಪಡೆದ ಕಿಚ್ಚ ಸದೀಪ್. ಯಾರ ಮುಖವಾಡ ಕಳಚ ಬೇಕು?

ಕಿಚ್ಚ ಸುದಿಪ್ ವೀಕೆಂಡ್ ಮಾತುಕತೆಯಲ್ಲಿ ರೂಪೇಶ್ ರಾಜಣ್ಣ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರದ ನಡೆದ ಫೇಕ್ ಆಂಡ್ ರಿಯಲ್ ಗೇಮ್‌ನಲ್ಲಿ ರೂಪೇಶ್ ರಾಜಣ್ಣ ಮಾತಿನ ಶೈಲಿ ಕೊಟ್ಟ ಉತ್ತರ ಇಡೀ ಮನೆ ಸದಸ್ಯರಿಗೆ ನೋವುಂಟು ಮಾಡಿದೆ. ರೂಪೇಶ್‌ ಸರಿಯಾಗಿ ಸ್ಪಷ್ಟನೆ ಕೊಟ್ಟಿಲ್ಲ ಎಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದ ಕಾರಣ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.  

ಸುದೀಪ್: ಕ್ಯಾಪ್ಟನ್ ರೂಮಿನ ಮೆಟ್ಟಿಲು ಮೇಲೆ ಕುಳಿತುಕೊಂಡು ಒಂದು ಹೇಳಿಕೆ ಕೊಡುತ್ತೀರಿ ಅವಕಾಶ ಸಿಕ್ಕರೆ ಒಬ್ಬೊಬ್ಬರ ಮುಖವಾಡವನ್ನು ಬಿಚ್ಚಿಡುತ್ತೀನಿ. ಈಗ ನಿಮಗೆ ಆ ಅವಕಾಶ ಕೊಡುವೆ ಒಬ್ಬೊಬ್ಬರ ಮುಖವಾಡವನ್ನು ಬಿಚ್ಚಿ.

ರೂಪೇಶ್: ನಾಲ್ಕೈದು ಜನರ ಜೊತೆ ಅಷ್ಟೆ ನನಗೆ ಬೇಸರ ಇರುವುದು ಉಳಿದವರ ಬಗ್ಗೆ ಅಷ್ಟಾಗಿ ಇಲ್ಲ . ಮೊದಲು ರಾಕೇಶ್ ಅಡಿಗೆ ಬಗ್ಗೆ ಮಾತನಾಡುತ್ತೀನಿ. ಯಾರೋ ಒಬ್ಬರ ಜೊತೆ ನನ್ನದೊಂದು ವಿಚಾರ ಆದಾಗ ರಾಕಿ ಬರ್ತಾರೆ ಆ ವಿಚಾರ ತಪ್ಪು ಅಂತ ಹೇಳ್ತಾರೆ. ವಿಚಾರ ಗೊತ್ತಿದ್ದರೆ ಮಾತನಾಡಿ ಎಂದು ಹೇಳುವೆ ಆಗ ವಿಚಾರ ಗೊತ್ತಿಲ್ಲ ಎಂದು ಹೇಳುತ್ತಾರೆ. ಅರುಣ್ ಅವರ ವಿಚಾರದಲ್ಲೂ ರಾಕೇಶ್ ಅದೇ ಮಾಡುತ್ತಾರೆ. ಮಾತನಾಡಿ ಸರಿ ಮಾಡಿಕೊಳ್ಳುವ ಸಮಯದಲ್ಲಿ ನಡುವೆ ಬಂದು ಮೂಗು ತೂರಿಸುತ್ತಾರೆ. ಪದೇ ಪದೇ ಒಬ್ಬರನ್ನು ಪರ ಬಂದು ಮಾತನಾಡುತ್ತಾರೆ. ಎರಡನೇ ವ್ಯಕ್ತಿ ಅನುಪಮಾ ಗೌಡ. ತುಂಬೇ ಸೇಫ್ ಆಗಿ ಗೇಮ್ ಅಡುತ್ತಾರೆ ಇವರನೆಲ್ಲಾ ಯಾಕೆ ಲೆಕ್ಕ ಮಾಡಬೇಕು ಅನ್ನೋ ಮನೋಭಾವದಲ್ಲಿ ಇರ್ಬೋದು. ಮೂರನೇ ವ್ಯಕ್ತಿ ದಿವ್ಯಾ ಉರುಡುಗ. ಹಳೆ ಸೀಸನ್‌ನಲ್ಲಿ ದಿವ್ಯಾ ಅವರನ್ನು ನೋಡಿರುವೆ ಆಗ ನನ್ನ ಮನೆಯವರು ಮತ್ತು ನಾನು ಇಬ್ಬರೂ ಸಪೋರ್ಟ್ ಮಾಡಿದ್ದೀವಿ ಆದರೆ ಇಲ್ಲಿ ನಡೆದ ಘಟನೆಗಳನ್ನು ಕಣ್ಣಾರೆ ಕಂದು ಅವರು ಹೀಗಾ ಅನ್ನೋ ಭಾವನೆ ಬಂತು. ನಾಲ್ಕನೇ ವ್ಯಕ್ತಿ ಅಮೂಲ್ಯ. ಅಮೂಲ್ಯ ಅವರ ವಿಚಾರದಲ್ಲಿ ಅಮೂಲ್ಯ ಏನೇ ಇದ್ದರೂ ಅದು ಕರೆಕ್ಟ್‌ ಏಕೆಂದರೆ ಎದುರು ಇರುವ ವ್ಯಕ್ತಿ ಅಥವಾ ಮತ್ತೊಬ್ಬ ವ್ಯಕ್ತಿ ಏನಾದರೂ ಚರ್ಚೆ ಮಾಡುತ್ತಿದ್ದರೆ ಅದನ್ನು ಕೇಳಿಸಿಕೊಳ್ಳುವುದಿಲ್ಲ ಒಪ್ಪಿಕೊಳ್ಳುವುದಿಲ್ಲ. ಫೇರ್ ಅಂಡ್ ಅನ್‌ಫೇರ್ ವಿಚಾರದಲ್ಲಿ ಎಲ್ಲರಿಗೂ ಹೇಳುತ್ತಾರೆ ಯಾರೂ ಫೇರ್‌ ಇಲ್ಲ ಅಂತ. ಒಬ್ಬರು ಒಂದು ಕಾರಣ ಕೊಟ್ಟರೆ ಇಡೀ ಮನೆ ಒಂದೇ ಉತ್ತರ ಕೊಡುತ್ತಾರೆ ಇದೆಲ್ಲಾ ನನಗೆ ಸರಿ ಅನಿಸುವುದಿಲ್ಲ

BBK9; ಚೀಪ್ ಮೆಂಟಾಲಿಟಿ ನನಗಿಲ್ಲ; ರೂಪೇಶ್‌ ಆರೋಪಕ್ಕೆ ದಿವ್ಯಾ ಉರುಡುಗ ಕಿಡಿ

ಸುದೀಪ್: ಈಗ ನೀವು ಹೇಳಿರುವ ವ್ಯಕ್ತಿಗಳ ಹೆಸರಿನಲ್ಲಿ ಆರ್ಯವರ್ಧನ್‌ ಇಲ್ಲ ಪ್ರಶಾಂತ್ ಸಂಬರಗಿ ಇಲ್ಲ ಕಾವ್ಯಾ ಇಲ್ಲ ವಿನೋದ್ ಇಲ್ಲ..ಇವ್ರು ಯಾರೂ ಮುಖವಾಡ ಹಾಕಿಲ್ಲ?

ರೂಪೇಶ್ ರಾಜಣ್ಣ:  ನನ್ನ ಜೊತೆ ಸಮಯ ಕಳೆದಿರುವ ವ್ಯಕ್ತಿ ನನ್ನ ಗಮನಕ್ಕೆ ಬಂದಿಲ್ಲ ನನ್ನ ಹಿಂದೆ ನನಗೆ ಏನೂ ಗೊತ್ತಿಲ್ಲ..

ಸುದೀಪ್: ಹಾಗೆ ಹೇಳಬೇಕು ಈಗ ನೀವು ಹೆಸರು ತೆಗೆದುಕೊಂಡಿರುವ ವ್ಯಕ್ತಿಗಳು ನಿಮ್ಮ ಹಿಂದೆ ಚೆನ್ನಾಗಿದ್ದಾರೆ. ನೀವು ಹೇಳಿರುವ ಮಾತನ್ನು ನಾನು ಪದೇ ಪದೇ ಕೇಳುತ್ತಿರುವುದು ..ಎಲ್ಲರ ಮುಖವಾಡ ಅಂತ ಹೇಳಿದಕ್ಕೆ ಕೇಳುತ್ತಿರುವುದು ..ನೀವು ಹೇಳಿರುವುದು ನನಗೆ ಓಕೆ ಆದರೆ ಸ್ಪಷ್ಟನೆ ಕೇಳುತ್ತಿರುವೆ.

BBK9: ರೂಪೇಶ್ ರಾಜಣ್ಣ ಮಾತಿಗೆ ಬಿಕ್ಕಿ ಬಿಕ್ಕ ಅತ್ತ ದಿವ್ಯಾ ಉರುಡುಗ; ಇಲ್ಲಿ ಯಾರ್ ರಿಯಲ್ ಯಾರ್ ಫೇಕ್?

ರೂಪೇಶ್ ರಾಜಣ್ಣ: ನನ್ನ ಎದುರಿಗೆ ಕಂಡಾಗ ಮಾತ್ರ ಹೇಳಬಹುದು. ಪ್ರಶಾಂತ್ ನನ್ನ ಹಿಂದೆ ಏನು ಮಾಡುತ್ತಾರೆ ಗೊತ್ತಿಲ್ಲ ಆದರೆ ಏನೇ ಇದ್ದರೂ ನೇರವಾಗಿ ಜಗಳ ಮಾಡುವ ಮೂಲಕ ಎದುರಿಗೆ ಹೇಳಿ ಬಿಡುತ್ತಾರೆ. ನಮ್ಮಿಬ್ಬರ ನಡುವೆ ಜಗಳ ಆಗುತ್ತೆ ಎಲ್ಲಾ ಎದುರಿಗೆ ನಡೆಯುತ್ತದೆ. ಇನ್ನು ರೂಪೇಶ್ ಶೆಟ್ಟಿ ಜೊತೆ ಸಂಬಂಧ ಶುದ್ಧವಾಗಿದೆ. ಕಾವ್ಯಾ ಜೊತೆ ಮಾತನಾಡಿರುವುದು ತೀರ ಕಡಿಮೆ. ವಿನೋದ್ ಇತ್ತೀಚಿಗೆ ಕ್ಲೋಸ್ ಆಗಿದ್ದಾರೆ. ಆರ್ಯವರ್ಧನ್‌ ಜೊತೆ ನಿನ್ನೆ ಜಗಳ ಮಾಡಿದೆ ವೋಟ್‌ಗಾಗಿ ವ್ಯಕ್ತಿಗಳನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ಹೇಳಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?