BBK9 2 ತಟ್ಟೆ ಊಟ, 9 ಮೊಟ್ಟೆ: ರೂಪೇಶ್ ಶೆಟ್ಟಿ ವಿರಹದ ಬಗ್ಗೆ ಕಾಲೆಳೆದ ಕಿಚ್ಚ ಸುದೀಪ್

Published : Nov 13, 2022, 02:56 PM ISTUpdated : Nov 13, 2022, 02:59 PM IST
BBK9 2 ತಟ್ಟೆ ಊಟ, 9 ಮೊಟ್ಟೆ: ರೂಪೇಶ್ ಶೆಟ್ಟಿ ವಿರಹದ ಬಗ್ಗೆ ಕಾಲೆಳೆದ ಕಿಚ್ಚ ಸುದೀಪ್

ಸಾರಾಂಶ

ನಿಜಕ್ಕೂ ಸಾನ್ಯ ಮಿಸ್‌ ಮಾಡಿಕೊಳ್ಳುತ್ತಿದ್ದಾರಾ ರೂಪೇಶ್‌ ಶೆಟ್ಟಿ? ವೀಕೆಂಡ್ ಮಾತುಕತೆಯಲ್ಲಿ ರೂಪಿ ಕಾಲೆಳೆದ ಕಿಚ್ಚ ಸುದೀಪ್...

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಈಗ 50 ದಿನಗಳನ್ನು ಪೂರೈಸಿದೆ. 18 ಸ್ಪರ್ಧಿಗಳಲ್ಲಿ ಈಗಾಗಲೆ 6 ಮಂದಿ ಹೊರ ಬಂದಿದ್ದಾರೆ. ಈ ವಾರ ಎಲಿಮಿನೇಷನ್‌ನಲ್ಲಿ ಟಫ್‌ ಫೈಟ್ ಇದೆ...ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್‌ ಮತ್ತು ಆರ್ಯವರ್ಧನ್‌ ನಡುವೆ ಯಾರು ಮನೆಗೆ ಹೋಗುತ್ತಾರೆ ಎಂದು ಇಂದು ನಡೆಯುವ ಎಲಿಮಿನೇಷನ್‌ನಲ್ಲಿ ತಿಳಿದು ಬರುತ್ತದೆ. ವೀಕೆಂಡ್ ಮಾತುಕತೆಯಲ್ಲಿ ಕಿಚ್ಚ ಸುದೀಪ್ ವಾರವಿಡೀ ನಡೆಯುವ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ, ಯಾರೂ ಗಮನಿಸಿರದ ವಿಚಾರಗಳನ್ನು ರಿವೀಲ್ ಮಾಡುವ ಮೂಲಕ ತಪ್ಪುಗಳ ಮನವರಿಕೆ ಮಾಡುತ್ತಾರೆ. ರೂಪೇಶ್‌ ಶೆಟ್ಟಿ ಕಾಲೆಳೆದಿದ್ದಾರೆ ಕಿಚ್ಚ..... 

'ಬಿಗ್ ಬಾಸ್‌ ಮನೆಯಲ್ಲಿ ಅತಿ ಹೆಚ್ಚು ಮೊಟ್ಟೆ ತಿನ್ನುವುದು ಯಾರು ದೀಪಿಕಾ ದಾಸ್?' ಎಂದು ಸುದೀಪ್ ಪ್ರಶ್ನೆ ಮಾಡುತ್ತಾರೆ ಆಗ ದೀಪಿಕಾ ದಾಸ್ 'ಎಲ್ಲರಿಗೂ ಸಮಪಾಲು ಊಟ ಸಿಗುತ್ತದೆ ಆದರೆ ಕಳೆದ ವಾರ ಸಿಕ್ಕಿರುವ ಮಾಹಿತಿ ಪ್ರಕಾರ ರೂಪೇಶ್ ಶೆಟ್ಟಿ ಅತಿ ಹೆಚ್ಚು ತಿಂದಿದ್ದಾರೆ ಎನ್ನಬಹುದು. ಸಾನ್ಯ ಮೊಟ್ಟೆ ಆರ್ಯವರ್ಧನ್ ಮೊಟ್ಟೆ ಜೊತೆ ಅವರ ಮೊಟ್ಟೆನೂ ತಿಂದಿದ್ದಾರೆ.' ಎಂದಿದ್ದಾರೆ.

ಸುದೀಪ್: 'ರೂಪೇಶ್ ಶೆಟ್ಟಿ ಅವರೇ ತುಂಬಾ ಬೇಸರ ಆದಾಗ ನಾವು ಇಷ್ಟ ಪಟ್ಟವರು ದೂರ ಆದರು ಅಂದುಕೊಂಡಾಗ ದಾಡಿ ಬಿಡದವರು ದಾಡಿ ಬಿಡುತ್ತಾರೆ ನಿದ್ರೆ ಮಾಡುವವರು ನಿದ್ರೆ ಬಿಡುತ್ತಾರೆ ಅನ್ನ ತಿನ್ನೋರು ಅನ್ನ ಬಿಡುವುದನ್ನು ನೋಡಿದ್ದೀನಿ ಆದರೆ ಈಗ ಎರಡು ಎರಡು ತಟ್ಟೆ ಅನ್ನ ತಿನ್ನೋವರು ಅವರ ಹೆಸರಿನಲ್ಲಿ ಊಟ ಮಾಡುವುದು ಹೊಟ್ಟೆ ತುಂಬಾ ತಿನ್ನುವುದು ...ಅದು ಅತ್ಕೊಂಡು ಅತ್ಕೊಂಡು ಹೆಸರು ಹೇಳ್ಕೊಂಡು ತಿನ್ನೋದು ....ನಿಮ್ಮದೊಂದು ಪ್ಲೇಟ್‌ ಪಕ್ಕದಲ್ಲಿ ಒಂದು ಪ್ಲೇಟ್ ..ನನಗೆ ಏನ್ ಅರ್ಥ ಅಗುತ್ತಿಲ್ಲ ಅಂದ್ರೆ ನಾವೆಲ್ಲ ಊಟ ಬಿಟ್ಟು ನಿದ್ರೆ ಬಿಟ್ಟು ಎಷ್ಟು ಯಾಮಾರಿ ಬಿಟ್ವಿ ಲೈಫಲ್ಲಿ. ಎಲ್ಲರಿಗೂ ಇದೊಂದು ಉದಾಹರಣೆ ಸರ್...ಒಬ್ಬರನ್ನು ಮಿಸ್ ಮಾಡಿಕೊಂಡರೆ ಈ ರೀತಿ ಮಿಸ್ ಮಾಡಿಕೊಳ್ಳಬೇಕು ಅಂತ...ಅವರ ಭಾಗದ ಮೊಟ್ಟೆ ಸ್ವಾಹ ಪ್ರೀತಿಯಲ್ಲಿ ಅವರ ಅನ್ನ ಸ್ವಾಹ ..ಎಮೋಷನ್‌ನಲ್ಲಿ ಎರಡು ತಟ್ಟೆ ಇಟ್ಟಾಗ ಯಾರೂ ಕೇಳುವಂತಿಲ್ಲ...ಸ್ವಾಹ...' 

BBK9 ನಾನು ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಬೆದರಿಕೆ, ದೂರು ದಾಖಲು

ರೂಪೇಶ್‌ ಶೆಟ್ಟಿ: 'ಸುದೀಪ್ ಸರ್ ನಾನು ಎರಡು ತಟ್ಟೆ ಬಳಸುತ್ತಿದೆ ನಿಜ ಆದರೆ ನನ್ನ ತಟ್ಟೆಯಿಂದ ಸ್ವಲ್ಪ ತೆಗೆದು ಆ ತಟ್ಟೆಗೆ ಹಾಕುತ್ತಿದ್ದೆ'

ಸುದೀಪ್: ನಾನು ಕೇಳಿದನ್ನು ಬಿಟ್ಟು ಬೇರೆ ಉತ್ತರ ಕೊಡುತ್ತಿದ್ದೀರಿ. ಇದನ್ನು ಸೆಲೆಕ್ಟಿವ್ ಇಯರಿಂಗ್ ಎಂದು ಹೇಳುತ್ತಾರೆ.

ರೂಪೇಶ್: ಇಲ್ಲ ಸರ್ ನಾನು ದಾಡಿ ಬಿಟ್ಟಿದ್ದೀನಿ ನೋಡಿ..ನಿದ್ರೆ ಕಡಿಮೆ ಮಾಡೋದು ನಾನು. ನಾನು ಊಟ ಬಿಟ್ರೂ ಊಟ ನನ್ನನ್ನು ಬಿಡುವುದಿಲ್ಲ ಹೀಗಾಗಿ ಜಾಸ್ತಿ ತಿನ್ನುತ್ತೀನಿ..

ಸಾನ್ಯ ಎಲಿಮಿನೇಟ್ ಆಗುವ ಸಮಯದಲ್ಲಿ ರೂಪೇಶ್‌ ಒಂದು ಮನವಿಯನ್ನು ಮುಂದಿಡುತ್ತಾರೆ. ಅದುವೇ ವಾರ ವಾರವೂ ಕೆಂಪು  ಟೀ-ಶರ್ಟ್‌ ಮೇಲೆ s ಅಕ್ಷರವನ್ನು ಬರೆದು ಕಳುಹಿಸು ನಾನು ಅದನ್ನು ಧರಿಸಬೇಕು ಎಂದು. ಮಾತು ಕೊಟ್ಟಂತೆ ಸಾನ್ಯ ಕೆಂಪು ಟಿ-ಶರ್ಟ್‌ ಮೇಲೆ ಬರೆದು ಹಾರ್ಟ್‌ ಸಿಂಬಲ್ ಹಾಕಿದ್ದಾರೆ. ಸಾನ್ಯಗಾಗಿ ಪ್ರೀತಿಯಿಂದ ಹಾಡು ಬರೆದಿದ್ದಾರೆ ರೂಪಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?