Jayaram Karthik: ಅಶ್ವಿನಿ ನಕ್ಷತ್ರದ ಜೆಕೆ ಈಗ ಹೇಗಾಗಿದ್ದಾರೆ ನೋಡಿ!

Published : Nov 13, 2022, 12:36 PM IST
Jayaram Karthik: ಅಶ್ವಿನಿ ನಕ್ಷತ್ರದ ಜೆಕೆ ಈಗ ಹೇಗಾಗಿದ್ದಾರೆ ನೋಡಿ!

ಸಾರಾಂಶ

ಕೆಲವು ವರ್ಷಗಳ ಕೆಳಗೆ 'ಅಶ್ವಿನಿ ನಕ್ಷತ್ರ' ಅನ್ನೋ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆಯ ಸ್ಟಾರ್ ಆಗಿದ್ದವರು ಜೆಕೆ ಅಂದರೆ ಜಯರಾಂ ಕಾರ್ತಿಕ್. ಸದ್ಯ ಜೆಕೆಯ ಲುಕ್ ಬದಲಾಗಿದೆ, ಬಾಡಿ ಸ್ಟೈಲ್ ಚೇಂಜ್ ಆಗಿದೆ. ಹೆಂಗಿದ್ದವ್ರು ಹೆಂಗಾಗಿದ್ದಾರೆ ನೋಡಿ!

ಅಶ್ವಿನಿ ನಕ್ಷತ್ರ ಅನ್ನೋ ಸೀರಿಯಲ್ ಕೆಲವು ವರ್ಷಗಳ ಹಿಂದೆ ಪ್ರಸಾರವಾಗಿ ಸಖತ್ ಜನಪ್ರಿಯತೆ ಪಡೆದಿತ್ತು. ಈ ಸೀರಿಯಲ್ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇಬ್ಬರು ಕಲಾವಿದರು ಪರಿಚಯವಾದ್ರು. ಒಬ್ರು ಜಯರಾಂ ಕಾರ್ತಿಕ್, ಈ ಸೀರಿಯಲ್‌ನಲ್ಲಿ ಜೆಕೆ ಅಂತಲೇ ಫೇಮಸ್ ಆದ ನಟ. ಇನ್ನೊಬ್ಬರು ಮಯೂರಿ. ಈ ಸೀರಿಯಲ್‌ನಲ್ಲಿ ಈಕೆಗೆ ಸಿಕ್ಕ ಪ್ರಸಿದ್ಧಿಯಿಂದ ಸ್ಯಾಂಡಲ್‌ವುಡ್‌ಗೆ ಜಿಗಿದು ಅಲ್ಲೂ ಕೃಷ್ಣಲೀಲಾದಂಥಾ ಸಕ್ಸಸ್‌ಫುಲ್ ಸಿನಿಮಾದಲ್ಲಿ ನಟಿಸಿದರು. ಅಶ್ವಿನಿ ನಕ್ಷತ್ರ ಸೀರಿಯಲ್‌ನಲ್ಲಿ ಜೆಕೆ ಯ ಪಾತ್ರ ಸಖತ್ ಇಂಟರೆಸ್ಟಿಂಗ್ ಆಗಿತ್ತು. ಅದು ಆಂಗ್ರಿಮ್ಯಾನ್ ಪಾತ್ರ. ಸಿಟ್ಟಿನ, ಸೇಡು ತುಂಬಿಕೊಂಡಿದ್ದ ವ್ಯಕ್ತಿಯೊಬ್ಬ ಹುಡುಗಿಯ ದೆಸೆಯಿಂದ ಬದಲಾಗ್ತಾ ಹೋಗೋದು ಈ ಸೀರಿಯಲ್‌ನ ಒನ್‌ಲೈನ್. ಜೆಕೆಗೆ ಆಂಗ್ರಿಮ್ಯಾನ್ ಲುಕ್ ಸಖತ್ತಾಗಿ ಸೂಟ್ ಆಗ್ತಿತ್ತು. ದಿನೇ ದಿನೇ ಅವರ ಫ್ಯಾನ್ ಫಾಲೋವಿಂಗ್ ಹೆಚ್ಚಾಗುತ್ತಲೇ ಹೋಯ್ತು. ಆದರೆ ಯಾವಾಗ ಈ ಸೀರಿಯಲ್ ಸ್ಟಾಪ್ ಆಯ್ತೋ ಆ ಬಳಿಕ ಅವರ ಲಕ್ ಹಾಗೇ ಉಳಿಯಲಿಲ್ಲ. ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರೂ ಸಕ್ಸಸ್ ಕೈ ಹಿಡಿಯಲಿಲ್ಲ. ಒಂದು ಹಂತದಲ್ಲಂತೂ ಅವಕಾಶ ಸಿಕ್ತಿಲ್ಲ ಅಂತ ಅವರು ನೇರವಾಗಿಯೇ ಹೇಳಿ ತಮ್ಮ ಬೇಸರ ತೋಡಿಕೊಂಡಿದ್ದರು.

ಹಿಂದಿ ಸೀರಿಯಲ್‌ ನೋಡಿದವ್ರೂ ಶಭಾಷ್ ಅಂದ್ರು

ಒಂದು ಯಶಸ್ಸಿನ ನಂತರ ಕನ್ನಡದಲ್ಲಿ ಸಕ್ಸಸ್ ಮರೀಚಿಕೆ ಆದಾಗ ಜೆಕೆ ಹೋಗಿದ್ದು ಹಿಂದಿ ಸೀರಿಯಲ್‌ಗೆ. ಅಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಟೆಲಿಕಾಸ್ಟ್ ಆಗುತ್ತಿದ್ದ 'ಸಿಯಾ ಕೆ ರಾಮ್' ಸೀರಿಯಲ್ ಯಲ್ಲಿ ರಾವಣನ ಪಾತ್ರ ಮಾಡೋ ಮೂಲಕ ಮತ್ತೆ ಸಕ್ಸಸ್ ಕಂಡರು. ಇಲ್ಲಿ ಹೀರೋ ಆಗಿ ಮೆರೆಯುತ್ತಿದ್ದವರಿಗೆ ವಿಲನ್ ರೋಲ್ ನಿಭಾಯಿಸೋದು ಆರಂಭದಲ್ಲಿ ಕೊಂಚ ಚಾಲೆಂಜಿಂಗ್ ಅನಿಸಿದರೂ ಅವರ ವಿಲನ್ ರೋಲ್ ಅನ್ನು ಕೂಡ ಜನ ಇಷ್ಟಪಟ್ಟರು. ಸೋನಿ ಚಾನೆಲ್‌ನಲ್ಲಿ ಇವರದೊಂದು ಸೀರಿಯಲ್ ಬರುತ್ತಿದೆ. 'ಆಲಿ ಬಾಬ - ಸಸ್ತಾನ್ ಇ ಕಾಬೂಲ್' ಸೀರಿಯಲ್‌ನಲ್ಲಿ ಇಬ್ಲಿಸ್ ಅನ್ನೋ ಮುಖ್ಯ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ.

ವರ್ಕೌಟ್ ಮಾಡುವಾಗ ಹೃದಯಾಘಾತ; 'ಕಸೌಟಿ ಜಿಂದಗಿ ಕಿ' ಖ್ಯಾತಿಯ ನಟ ಸಿದ್ದಾಂತ್ ನಿಧನ

ಜಿಮ್ ಅಂದ್ರೆ ಪ್ರಾಣ

ಶೂಟಿಂಗ್ ಇಲ್ಲಾಂದರೆ ಜೆಕೆ ಜಿಮ್‌ನಲ್ಲೇ ಸಿಕ್ತಾರೆ. ವರ್ಷಾನುಗಟ್ಟಲೆ ಜಿಮ್‌ನಲ್ಲಿ ಬಾಡಿ ಹುರಿಗಟ್ಟಿಸಿದ್ದಾರೆ. ಸದ್ಯಕ್ಕೆ ಅವರ ಬಾಡಿ ಬಿಲ್ಡಿಂಗ್ ನೋಡಿ ಪ್ರೊಫೆಶನಲ್ ಬಾಡಿ ಬಿಲ್ಡರ್ಸ್ ದಂಗಾಗಿದ್ದಾರೆ. ಆ ಲೆವೆಲ್ ಗೆ ಜೆಕೆ ಬಾಡಿ ಬಿಲ್ಡಿಂಗ್ ಮಾಡಿದ್ದಾರೆ. ಆಗಾಗ ಇನ್‌ಸ್ಟಾದಲ್ಲಿ ಜಿಮ್ ವರ್ಕೌಟ್ ವೀಡಿಯೋಗಳನ್ನು ಜೆಕೆ ಪೋಸ್ಟ್ ಮಾಡುತ್ತಿರುತ್ತಾರೆ. ಇವರ ಒಂದು ಜಿಮ್ ವೀಡಿಯೋಗಾಗಿ ಕಾಯುವ ಅಭಿಮಾನಿಗಳೂ ಇವರಿಗಿದ್ದಾರೆ. ಫಿಟ್‌ನೆಸ್‌ನಲ್ಲಿ ನೀವೇ ನಮಗೆ ಸ್ಫೂರ್ತಿ ಅಂತ ಸಾಕಷ್ಟು ಜನ ಫ್ಯಾನ್ಸ್ ಮೆಸೇಜ್ ಮಾಡ್ತಾ ಇರ್ತಾರೆ. ಕೆಲವು ಕನ್ನಡಗಿರು ಇಷ್ಟು ಸಮಯ ಎಲ್ಲಿದ್ರಿ ಸಾರ್, ನಿಮ್ಮನ್ನು ಈ ಹೊಸ ಅವತಾರ್ ನಲ್ಲಿ ನೋಡಿ ಭಾಳ ಖುಷಿ ಆಯ್ತು ಅಂತ ಕಮೆಂಟ್ ಮಾಡ್ತಿದ್ದಾರೆ.

 

ಜೆಕೆಗೆ ಮತ್ತೆ ಬ್ರೇಕ್ ಬೇಕಿದೆ!

ಸದ್ಯ ಜೆಕೆ ಜಿಮ್‌ನಲ್ಲಿ ವರ್ಕೌಟ್ ಮಾಡೋದು ನೋಡಿದ್ರೆ ಯಾವುದೋ ಸಿನಿಮಾದ ಪಾತ್ರಕ್ಕಾಗಿ ಇದನ್ನೆಲ್ಲ ಮಾಡ್ತಿದ್ದಾರ ಅನ್ನೋ ಡೌಟ್ ಬರೋದು ಸಹಜ. ಆ ಬಗ್ಗೆ ಜೆಕೆ ಏನೂ ಸುಳಿವು ನೀಡಿಲ್ಲ. ಬದಲಾಗಿ ಬಾಡಿ ಬಿಲ್ಡಿಂಗ್ ಬಗ್ಗೆಯೇ ಬರೆದಿದ್ದಾರೆ. ಇದರಿಂದಲೇ ಸದ್ಯಕ್ಕೆ ಮನಃಶಾಂತಿ ಸಿಕ್ಕಿದೆ ಎಂಬಂಥಾ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಜೆಕೆಗೆ ಮುಂದಾದರೂ ಒಳ್ಳೆ ಬ್ರೇಕ್ ಸಿಗಲಿ ಅಂತ ಜನ ಆಶಿಸುತ್ತಿದ್ದಾರೆ.

ಸಕತ್ ಹಾಟ್ ಮಗಾ ಅಂತಾ ಕೇಳುಗರ ಹೃದಯದ ಕದ ತಟ್ಟುವ ಆರ್‌ಜೆ ವಿಕ್ಕಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!