
ನಿಮ್ಮ ಹೆಂಡತಿ ಹೇಗೆ ಇರ್ಬೇಕಪ್ಪ ಅಂತ ಯಾರನ್ನಾದರೂ ಕೇಳಿದ್ದರೆ ಮೊದಲು ಹೇಳುವುದು ಮಂಗಳಗೌರಿ ಮದುವೆ ಧಾರಾವಾಹಿ ಮಂಗಳ ರೀತಿ. ಗಂಡಂಗೆ ಫ್ಯಾಮಿಲಿಗೆ ಎಷ್ಟು ಪ್ರೀತಿ ಕೊಡುತ್ತಾರೆ ಅವಳ ರೀತಿನೇ ಬೇಕು ಎಂದು ಪಟ್ಟು ಹಿಡಿದವರೂ ಇದ್ದಾರೆ. ಇದೇಗ ಮಂಗಳ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಾಲ್ಯದ ಕಥೆ ಹೇಳಿ ಮನೋರಂಜನೆ ಕೊಟ್ಟಿರುವ ಕಾವ್ಯಾ ಈಗ ತಮ್ಮ ಕ್ರಶ್ ಆಂಡ್ ಲವ್ ಸ್ಟೋರಿಗಳನ್ನು ಹಂಚಿಕೊಂಡಿದ್ದಾರೆ.
ಕಾವ್ಯಾ:
'ನಮ್ಮಜ್ಜಿ ಊರಿಂದ ಜಾತ್ರೆಗೆ ಹೋಗಿದ್ದೆ ಅವನು ನೋಡಲು ಯಶ್ ತರ ಇದ್ದ ಅವರ ಫ್ರೆಂಡ್ಸ್ ನನ್ನನ್ನು ಫಾಲೋ ಮಾಡುತ್ತಿದ್ದರು. ಹುಡುಗಿಯರು ಚೆನ್ನಾಗಿ ಇಲ್ಲದವರ ಜೊತೆ ಗುಂಪು ಮಾಡಿ ನಾನು ಚೆನ್ನಾಗಿ ಕಾಣಿಸಬೇಕು ಅಂತ ಇರ್ತಾರೆ ಅಲ್ವಾ ಆ ರೀತಿ ಅವನ ಇದ್ದ. ನಾನು ಒಂದು ಸಲ ನೋಡಿ ಅವರು ನೋಡಿದ್ದರು...ಹಾಗೆ ಅವನ ಫ್ರೆಂಡ್ಸ್ ನೋಡುತ್ತಿದ್ದರು. ನಾನು ಸ್ಮೈಲ್ ಮಾಡಿದೆ ಅಂತ ನನ್ನ ಫ್ಯಾಮಿಲಿ ಗೊತ್ತಾದರೆ ಸರಿಯಾಗಿ ಬೈತ್ತಾರೆ. ಅವರು ಹತ್ತಿರ ಹತ್ತಿರ ಬರುತ್ತಿದ್ದ...ಜಾತ್ರೆಯಲ್ಲಿ ಬೇಗ ಹೋಗಲು ಆಗಲ್ಲ ಹತ್ತಿರ ಬಂದ ನಾನು ಭಯದಲ್ಲಿ ಮುಖ ಮುಚಿಕೊಂಡ್ರೆ ಅವನು ನನ್ನ ಬ್ಯಾಗಿನಲ್ಲಿ ಅವನ ನಂಬರ್ ಬರೆದು ಹಾಕಿದ್ದಾರೆ. ನಂಬರ್ ನೋಡಿ ಅವನನ್ನು ನೋಡಿ ಓದಿ ಹೋದೆ' ಎಂದು ಮೊದಲ ಕ್ರಶ್ ಬಗ್ಗೆ ಕಾವ್ಯಾ ಮಾತನಾಡಿದ್ದಾರೆ.
BBK9; ಬಿಗ್ ಮನೆಯಲ್ಲಿ ಮಕ್ಕಳದ್ದೇ ದರ್ಬಾರು, ಮಗುವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಮಯೂರಿ
ಒಂದು ಕ್ರಶ್ ಕಥೆ ಹೇಳಿ ಸುಮ್ಮನಾಗದ ಕಾವ್ಯಾ ತಿರುಪತಿಯಲ್ಲಿ ನಡೆದ ಮತ್ತೊಂದು ಸ್ಟೋರಿ ರಿವೀಲ್ ಮಾಡುತ್ತಾರೆ. 'ಬೆಟ್ಟ ಹತ್ತುವಾಗ ಆದ ಕ್ರಶ್ ಇದು. ಯಾವ ಲೆವೆಲ್‌ಗೆ ಇತ್ತು ಅಂದ್ರೆ ತಿರುಪತಿ ಬೆಟ್ಟ ಹತ್ತಿ ದರ್ಶನ ಮಾಡ್ಕೊಂಡು ಕೆಳಗಡೆ ಪದ್ಮಾವತಿ ದೇವಸ್ಥಾನಕ್ಕೆ ಹೋಗಿ ಅಲ್ಲಿಗೆ ಕಪಿಲಾ ತೀರ್ಥದಲ್ಲಿ ನೋಡೆ ಅದಾದ ಮೇಲೆ ಪಾಪನಾಶದಲ್ಲೂ ಅವನೇ ಇದ್ದಾರೆ. ಅವನು ನನ್ನನ್ನು ಫಾಲೋ ಮಾಡ್ತಿದ್ದಾನಾ ನಾನು ಅವನನ್ನು ಫಾಲೋ ಮಾಡ್ತಿದ್ದೀನಾ ಗೊತ್ತಾಗಲಿಲ್ಲ. ನಾನು ಎಲ್ಲೇ ನೋಡಿದ್ದರೂ ನನಗಿಂತ ಮೊದಲು ನಿಂತಿರುತ್ತಾನೆ. ದೇವಸ್ಥಾನದಿಂದ ಹೊರಗೆ ಬಂದು ನನ್ನ ಕೈಗೆ ಲಡ್ಡು ಕೊಟ್ಟ ಅದನ್ನು ನೋಡಿ ನನ್ನ ಅಮ್ಮ ಯಾರು ಕೊಟ್ರು ಅಂತ ಕೇಳಿದ್ರು ನಾನು ಅಲ್ಲೇ ಇದ್ದ ಆಂಟಿ ಕೊಟ್ಟಿದ್ದು ಅಂತ ಹೇಳಿದೆ. ಇವಳು ಒಳಗೆ ಹೋಗಿಲ್ಲ ಹೇಗೆ ಲಡ್ಡು ಬಂತು ಅಂತ ಯೋಚನೆ ಮಾಡುತ್ತಿದ್ದಾರೆ' ಎಂದು ರೋಚಕ ಕ್ರಶ್ ಕಥೆಯನ್ನು ಹಂಚಿಕೊಳ್ಳುತ್ತಾರೆ.
'ತಿರುಪತಿಯಲ್ಲಿ ಬಳೆ ಶಾಪಿಂಗ್ ಮಾಡುವಾಗ ಅವನು ಅವನ ಸ್ನೇಹಿತರು ಬಂದು ನನ್ನ ಮೊಬೈಲ್‌ಗೆ ನಂಬರ್ ಕೊಟ್ಟು ಹೋದ. ನನ್ನ ಕೈಯಲ್ಲಿ ಆಂಟಿ ಬ್ಯಾಗ್ ಇದೆ ಅವನು ಅದಕ್ಕೆ ನಂಬರ್ ಹಾಕಿ ಹೋಗಿದ್ದಾನೆ. ಆಂಟಿ ಬಂದು ಬ್ಯಾಗ್ ಕೇಳಿದ್ದರು. ಅವನ ಕಡೆ ಹೋಗಬೇಕಾ ಆಂಟಿನ ಬ್ಯಾಗ್ ಕೇಳಬೇಕಾ ಗೊತ್ತಾಗುತ್ತಿಲ್ಲ' ಎಂದಿದ್ದಾರೆ ಕ್ಯಾವ್ಯಾ.
BBK9 ಅನುಪಮಾ ಗೌಡ ಸ್ವಿಮ್ ಸ್ಯೂಟ್ ಫೋಟೋ ವೈರಲ್; ಆಟ ಈಗ ಶುರು ಎಂದ ನೆಟ್ಟಿಗರು
ಗಿರಿರಾಜ ಕೋಳಿ ಮೊಟ್ಟೆ ಇಟ್ಟ ತಕ್ಷಣ ಕದ್ದು ಕುಡಿಯುತ್ತಿದ್ದೆ:
'ನಾನು ಎರಡು ಮೂರು ವರ್ಷದ ಮಗುವಿದ್ದಾಗ ಅಜ್ಜಿ ಮನೆಯಲ್ಲಿ ನನ್ನನ್ನು ಬಿಟ್ಟರು. ಅವರ ಮನೆಯಲ್ಲಿ ಇಬ್ಬರು ಆಂಟಿ ಇದ್ದರು. ಒಬ್ಬರಿಗೆ ಮದುವೆ ಆಗಿತ್ತು ಒಬ್ಬರಿಗೆ ಆಗಿರಲಿಲ್ಲ. ನಮ್ಮ ತಾತ ಹೋಟೆಲ್ ನಡೆಸುತ್ತಿದ್ದರು ಹೀಗಾಗಿ ಆಂಟಿ ಹುಲ್ಲು ಕೊಯ್ಯುವುದಕ್ಕೆ ಹೋಗುತ್ತಿದ್ದರು ನಾನು ಬರ್ತೀನಿ ಅಂತ ಹಠ ಮಾಡುತ್ತಿದ್ದೆ. ಒಂದು ರೂಪಾಯಿ ಕೊಟ್ಟು ಬೋಟಿ ತಗೊಂಡು ಬಾ ಅಂತ ಕಳುಹಿಸುತ್ತಿದ್ದರು ..ಅವರ ಚಪ್ಪಲಿ ನಾನೇ ಹಾಕೊಂಡ್ರೆ ಅವರು ಹೋಗಲ್ಲ ಅಂತ ನಾನು ಹಾಕಿಕೊಳ್ಳುತ್ತಿದ್ದೆ. ದೊಡ್ಡ ಚಪ್ಪಲಿ ಅಂದ್ರೆ ನಿಧಾನಕ್ಕೆ ನಡೆಯುತ್ತಿದ್ದೆ. ನಾನು ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಅವರು ಇರುತ್ತಿರಲಿಲ್ಲ' ಎಂದು ಬಾಲ್ಯದ ಕಥೆಯನ್ನು ಕಾವ್ಯಶ್ರೀ ಹೇಳುತ್ತಾರೆ.
'ಬೋಟಿ ತಿನ್ನುತ್ತ ಪಡಸಾಲೆಯಲ್ಲಿ ಮಲಗುತ್ತಿದ್ದೆ. ಅಲ್ಲೊಂದು ಗಿರಿ ರಾಜ ಕೋಳಿ ಇತ್ತು ತುಂಬಾ ದಪ್ಪ ಇತ್ತು ಅದು ಮೊಟ್ಟೆ ಇಟ್ಟ ತಕ್ಷಣ ಸೌಂಡ್ ಮಾಡುತ್ತಿತ್ತು ನನಗೆ ಅದು ಅಲರಾಂ. ಮೊಟ್ಟೆ ಇಟ್ಟ ತಕ್ಷಣ ಹೋಗಿ ಓಪನ್ ಮಾಡು ಕುಡಿ. ಮೊಟ್ಟೆ ಎಷ್ಟು ಅಭ್ಯಾಸ ಮಾಡಿಕೊಂಡಿದ್ದೆ ಅಂದ್ರೆ ಪಕ್ಕದ ಮನೆ ಪಡಸಾಲೆ ಇಟ್ಟರೂನೂ ನಾನು ಹೋಗಿ ಮೊಟ್ಟೆ ಕುಡಿಯುತ್ತಿದ್ದೆ. ಆಂಟಿ ಬಂದು ಮೊಟ್ಟೆ ಎಲ್ಲಿ ಅಂತ ಕೇಳಿದರೆ ಕುಡಿದೆ ಅನ್ನುತ್ತಿದ್ದೆ ಇನ್ನೊಂದು ಸಲ ನನಗೆ ಗೊತ್ತಿಲ್ಲ ಎನ್ನುತ್ತಿದ್ದೆ' ಎಂದು ಅರುಣ್ ಸಾಗರ್, ವಿನೋದ್ ಗೊಬ್ಬರಗಾಲ, ಪ್ರಶಾಂತ್ ಸಂಬರಗಿ, ದರ್ಶ್ ಮತ್ತು ರಾಕೇಶ್ ಜೊತೆ ಮಾತನಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.