
ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ. ನಕ್ಷತ್ರಾ ಎಂಬ ಕಪ್ಪು ಬಣ್ಣದ ಹುಡುಗಿ ಮತ್ತವಳ ಬದುಕಿನ ಸುತ್ತ ಈ ಸೀರಿಯಲ್ ಕಥೆ ಇದೆ. ಆಗರ್ಭ ಶ್ರೀಮಂತರ ಮನೆಯಲ್ಲಿ ಹುಟ್ಟಬೇಕಿದ್ದ ಇವಳು ಬಡ ಕುಟುಂಬದಲ್ಲಿ ಹುಟ್ಟಿ ಹೀಗಳಿಕೆಯಲ್ಲಿ ಬೆಳೆದು ಕೊನೆಗೂ ತನ್ನ ಜನ್ಮ ರಹಸ್ಯ ಪತ್ತೆಯಾಗಿ ಶ್ರೀಮಂತ ಅಪ್ಪನ ಮನೆ ಸೇರಿದ್ದಾಳೆ. ಅಪ್ಪನ ಕಾರಣಕ್ಕೇ ತಾನು ಪ್ರೀತಿಸುತ್ತಿದ್ದ ಭೂಪತಿಯನ್ನು ಮದುವೆ ಆಗೋದು ಸಾಧ್ಯವಾಗಿದೆ. ಆದರೆ ಈ ಬಲವಂತದ ಮದುವೆ ಭೂಪತಿ ತಾಯಿ ಶಕುಂತಲಾ ದೇವಿಗೆ ಕಿಂಚಿತ್ತೂ ಇಷ್ಟವಿಲ್ಲ. ಮಗ ಭೂಪತಿಗೆ ಇನ್ನೊಂದು ಮದುವೆ ಆದರಷ್ಟೇ ಮನೆಯ ಸುಖ ಸಂತೋಷ ಮರಳಿ ಬರಲು ಸಾಧ್ಯ ಎಂದು ಆಕೆ ತಿಳಿದಿದ್ದಾಳೆ. ಇನ್ನೊಂದೆಡೆ ಈ ಬಲವಂತದ ಮದುವೆ ಮಾಡಿಸಿದ ಚಂದ್ರಶೇಖರ್‌ನನ್ನು ಮುಗಿಸಲು ಭೂಪತಿ ತಮ್ಮ ಮೌರ್ಯ ಹವಣಿಸಿ ಇದೀಗ ಜೈಲು ಸೇರಿದ್ದಾನೆ. ಆದರೆ ಅವನನ್ನು ಕಿಡ್ನಾಪ್ ಮಾಡಿ ಚಂದ್ರಶೇಖರ್‌ನನ್ನು ತಾನೇ ಕೊಲ್ಲಲು ಮುಂದಾಗಿದ್ದಾಳೆ ಲೇಡಿ ಡೆವಿಲ್. ಚಂದ್ರಶೇಖರ್ ಕುಟುಂಬ ಮಾತ್ರ ಅಲ್ಲ, ಭೂಪತಿ ಕುಟುಂಬದಲ್ಲೂ ನಡುಕ ಹುಟ್ಟಿಸಿದ ಈ ಲೇಡಿ ವಿಲನ್ ಯಾರು ಅನ್ನೋದು ಕೊನೆಗೂ ಪತ್ತೆ ಆಗಿದೆ. ಆಕೆ ಮತ್ಯಾರೂ ಅಲ್ಲ, ಸ್ವತಃ ಚಂದ್ರಶೇಖರ್ ತಂಗಿ ಭಾರ್ಗವಿ. ಈಕೆಯೇ ಮಿಲಿಯ ತಾಯಿಯೂ ಹೌದು.
ಇನ್ನೊಂದೆಡೆ ತಾನು ಕೊಡ್ತಿರೋ ಕ್ಲೂ ಅಂತ ಡೆವಿಲ್ ಕೊಟ್ಟಿರೋ ಅಡ್ರೆಸ್, ನಕ್ಷತ್ರಾ ಅಪ್ಪ-ಅಮ್ಮ ಪೂಜೆ ಮಾಡುತ್ತಿರುವ ಬನಶಂಕರಿ ಮೈದಾನ. ಅದಕ್ಕೆ ನಕ್ಷತ್ರಾ ಭಯಗೊಂಡಿದ್ದಾಳೆ. ಡೆವಿಲ್ ನಮ್ಮ ಅಪ್ಪನನ್ನು ಕೊಲ್ಲಲು ಹೋಗಿದ್ದಾಳೆ. ಬೇಗ ಅವರನ್ನು ಕಾಪಾಡಬೇಕು ಎಂದು ಅವರಿರುವ ಜಾಗಕ್ಕೆ ಭೂಪತಿಯನ್ನು ಕರೆದುಕೊಂಡು ಹೋಗಿದ್ದಾಳೆ. ಇನ್ನೊಂದೆಡೆ ತಾನು ಪ್ರಖ್ಯಾತ್‌ನನ್ನು ಕೊಲ್ಲುತ್ತೇನೆ. ಅದನ್ನು ತಡೆಯೋದಕ್ಕೆ ನಿಮಗ್ಯಾರಿಗೂ ಆಗಲ್ಲ ಅಂದಿದ್ದಳು. ತನ್ನ ಮಾತಿನಲ್ಲಿ ಭಾರ್ಗವಿ ಮಿಂಚಿನಂತೆ ಕೆಲಸ ಮಾಡ್ತಿದ್ದಾಳೆ. ನವರಾತ್ರಿ ಹಬ್ಬದ ಪ್ರಯುಕ್ತ ದಹನ ಮಾಡಲು ಇಟ್ಟಿರುವ ರಾವಣ ಗೊಂಬೆ ಹಿಂದೆ ಪ್ರಖ್ಯಾತ್ ನನ್ನು ಕಟ್ಟಿ ಹಾಕಿದ್ದಾಳೆ. ಅದಕ್ಕೆ ಬೆಂಕಿಯ ಬಾಣ ಬಿಡುವ ಮೂಲಕ ಅವನನ್ನು ಕೊಲ್ಲೋ ಪ್ಲ್ಯಾನ್ ಮಾಡಿದ್ದಾಳೆ.
Kannadathi serial: ರತ್ನಮಾಲಾ ಸ್ಥಾನಕ್ಕೆ ಬಂದೇ ಬಿಟ್ಲು ಭುವಿ! ಇನ್ಮೇಲೆ ಸ್ಟೋರಿನೇ ಚೇಂಜ್..
ಡೆವಿಲ್ ಅರ್ಥಾತ್ ಭಾರ್ಗವಿಯ ರಿಯಲ್ (Real)ರೂಪದ ದರ್ಶನವಾಗಿದೆ. ‘ಲಕ್ಷಣ’ ಧಾರಾವಾಹಿಯ ಆರಂಭದಿಂದಲೂ ಭಾರ್ಗವಿ ಕ್ಯಾರೆಕ್ಟರ್(Chrecter) ಮೇಲೆ ವೀಕ್ಷಕರಿಗೆ ಅನುಮಾನ ಇತ್ತು. ಈಗ ಮಿಲಿಯ ತಾಯಿಯೇ ಭಾರ್ಗವಿ ಎಂದು ವೀಕ್ಷಕರ ಡೌಟ್ ನಿಜವಾಗಿದೆ. ಮನೆಯಲ್ಲೇ ಶತ್ರು(Enemy)ವನ್ನ ಸಾಕಿ ಸಲಹುತ್ತಿದ್ದಾರೆ ಚಂದ್ರಶೇಖರ್.
ಪ್ರಖ್ಯಾತ್‌ನನ್ನು ರಾವಣನ ಗೊಂಬೆಗೆ ಕಟ್ಟಿ ಸಾಯಿಸಿರುವ ಭಾರ್ಗವಿ ಕಾಳಿ ದೇವಿಯಂತೆ ನರ್ತಿಸಿದ್ದಾಳೆ. ಅಷ್ಟೇ ಅಲ್ಲ ಚಂದ್ರಶೇಖರ್ ವಂಶವನ್ನೇ ನಿರ್ವಂಶ ಮಾಡೋ ಶಪಥ ಮಾಡಿದ್ದಾಳೆ.
Kannadathi Kiranraj: ನೀಲ ಕುರಂಜಿ ನಡುವೆ ಕನ್ನಡತಿ ಹರ್ಷ ಕಿರಣ್‌ರಾಜ್
ಆದರೆ ಈ ಪ್ರೀತಿ(Love)ಯಿಂದ ಅಣ್ಣ ಅಂತ ಕರೆಯುವ ಚಂದ್ರಶೇಖರ್ ಮೇಲೆ ಭಾರ್ಗವಿಯ ದ್ವೇಷಕ್ಕೆ ಏನು ಕಾರಣ. ತನ್ನಣ್ಣ ಚಂದ್ರಶೇಖರ್ ಮೇಲೆ ಭಾರ್ಗವಿಗೆ ಯಾಕೆ ಅಷ್ಟು ಸಿಟ್ಟಿದೆ, ಮಿಲಿ ತನ್ನ ಮಗಳು ಅನ್ನೋದನ್ನು ಯಾಕೆ ಮುಚ್ಚಿಟ್ಟಿದ್ದಾಳೆ. ಇದನ್ನೆಲ್ಲ ಭೂಪತಿ ಪ್ರಶ್ನೆ(Question) ಮಾಡ್ತಿದ್ದಾನೆ. ತಿಳಿಯಲಿದೆ. ಭಾರ್ಗವಿ ಪಾತ್ರದಲ್ಲಿ ಪ್ರಿಯಾ ಷಠಮರ್ಶಣ ಅಭಿನಯಿಸಿದ್ದಾರೆ. ಚಂದ್ರಶೇಖರ್ ಆಗಿ ಕೀರ್ತಿ ಭಾನು, ಆರತಿ ಪಾತ್ರದಲ್ಲಿ ದೀಪಾ ಅಯ್ಯರ್, ಶ್ವೇತಾ ಆಗಿ ಸುಕೃತಾ ನಾಗ್, ನಕ್ಷತ್ರ ಆಗಿ ವಿಜಯಲಕ್ಷ್ಮೀ, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್ ಅಭಿನಯಿಸುತ್ತಿದ್ದಾರೆ. ಜಗನ್ ಅವರ ನಿರ್ದೇಶನ(Direction) ಈ ಸೀರಿಯಲ್‌ಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.