BB7: ಮೊದಲ ದಿನವೇ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಪೃಥ್ವಿ ಬಕ್ರ!

By Web Desk  |  First Published Nov 5, 2019, 12:13 PM IST

ಎಫ್ ಎಂ ರೇಡಿಯೋದಲ್ಲಿ ಕೇಳುಗರಿಗೆ ತಮಾಷೆ ರೀತಿಯಲ್ಲಿ ಬಕ್ರ ಮಾಡುವ ಆರ್ ಜೆ ಪೃಥ್ವಿಗೆ ಬಿಗ್ ಬಾಸ್ ಮನೆ ಮಂದಿಯೆಲ್ಲಾ ಸೇರಿ ಬಕ್ರ ಮಾಡಿದ್ದಾರೆ. ಹೊತ್ತಲ್ಲದ ಹೊತ್ತಲ್ಲಿ ನೀರಿಗೆ ಬಿದ್ದು ಕನ್ಫ್ಯೂಸ್ ಆದ ವೈಲ್ಡ್‌ ಕಾರ್ಡ್‌ ಸ್ಪರ್ಧಿ!


 

ಬಿಗ್‌ ಬಾಸ್‌ ಮನೆಗೆ ಪ್ರವೇಶಿಸುವಾಗಲೇ ಕೈಯಲ್ಲೊಂದು ಎಲಿಮಿನೇಶನ್‌ ಕಾರ್ಡ್‌ ಹಿಡಿದು ಬಂದರು ಆರ್ ಜೆ ಪೃಥ್ವಿ. ಪೃಥ್ವಿ ಅನಿರೀಕ್ಷಿತ ಆಗಮನದಿಂದ ಮನೆಮಂದಿಯೆಲ್ಲಾ ಒಂದು ಕ್ಷಣ ಗಾಬರಿಯಾದರು.

Tap to resize

Latest Videos

undefined

ಬಿಗ್ ಬಾಸ್ ಪ್ರಿಯಾಂಕಾ ರಿಯಲ್ ಲೈಫ್‌ ಬ್ಯಾಕ್‌ಗ್ರೌಂಡ್ ಗೊತ್ತಾ? ಇಲ್ಲಿದೆ ನೋಡಿ

 

ಮಾತಲ್ಲೇ ಮನೆ ಕಟ್ಟುತ್ತಾ, ಜೀವನದಲ್ಲಿ ಏನಾದ್ರೂ ಡಿಫರೆಂಟ್‌ ಆಗಿ ಸಾಧನೆ ಮಾಡಬೇಕೆಂದು ಬಂದ ಪೃಥ್ವಿ ಈಗ ಕರುನಾಡ ಮಾತಾಗಿದ್ದಾರೆ. ಯಾಕೆ ಗೊತ್ತಾ?

 

Fever 104 ಎಫ್‌ಎಂ ನಲ್ಲಿ ಆರ್ ಜೆ ಆಗಿರುವ ಪೃಥ್ವಿ ಯಾರೆಂದು ಅನೇಕರಿಗೆ ಗೊತ್ತಿರುತ್ತದೆ. ಅವರ ಧ್ವನಿ ಕೇಳದೇ ಅನೇಕರಿಗೆ ದಿನ ಆರಂಭವಾಗುವುದೇ ಇಲ್ಲ.

'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?

 

ವೇದಿಕೆ ಮೇಲೆ ಡಿಫರೆಂಟ್ ಆಗಿ ನೈಟಿ ಧರಿಸಿ ಬೋಳು ತಲೆ, ಉದ್ದ ಮೀಸೆ ಮತ್ತು ದಾಡಿಯಿಂದ ವಿಚಿತ್ರ ಮ್ಯಾನರಿಸಂನಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು ಪೃಥ್ವಿ. ಪಟ ಪಟ ಮಾತನಾಡುವ ಪೃಥ್ವಿಯ ಲುಕ್‌ ನೋಡಿ ಶಾಕ್ ಆದ ಕಿಚ್ಚ ಏನಿದು ಲುಕ್‌ ಎಂದು ಕೇಳಿದ್ದಕ್ಕೆ 'ಗಂಡಸರ ಫ್ಯಾಷನ್‌ ತುಂಬಾ ಬೋರ್‌ ಅಗಿದೆ. ಸ್ವಲ್ಪ ಸ್ಟೈಲ್ ಬದಲಾಯಿಸಿಕೊಳ್ಳಬೇಕು ಅಂತ ಈ ರೀತಿ ಬದಲಾಯಿಸಿಕೊಂಡಿದ್ದೀನಿ' ಎಂದು ಉತ್ತರಿಸುತ್ತಾರೆ.

 

ಮನೆಯಲ್ಲಿ ಮೊದಲ ದಿನ ಎಲ್ಲರೊಂದಿಗೆ ಮಾತನಾಡಿಕೊಂಡು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪೃಥ್ವಿಯನ್ನು ಬಕ್ರ ಮಾಡಬೇಕೆಂದು ಮನೆ ಮಂದಿ ನಿರ್ಧರಿಸುತ್ತಾರೆ. ಸ್ಯಾಂಡಲ್‌ವುಡ್‌ ಕಲಾಕಾರ್ ಹರೀಶ್ ರಾಜ್ ಮಿಮಿಕ್ರಿ ಮಾಡುವುದರಲ್ಲಿ ಎತ್ತಿದ ಕೈ. ತಮ್ಮ ಧ್ವನಿಯಲ್ಲಿ ಬಿಗ್ ಬಾಸ್ ರೀತಿಯಲ್ಲಿ 'ಪೃಥ್ವಿ ನೀವು ಈ ಕೂಡಲೇ ಸ್ವಿಮ್ಮಿಂಗ್ ಪೂಲ್‌ಗೆ ಹಾರಬೇಕು ' ಎಂದು ಹೇಳುತ್ತಾರೆ. ಮೊದಲಿಗೆ ಶಾಕ್‌ನಲ್ಲಿ ನಿಂತ ಪೃಥ್ವಿ ಮೂರನೇ ಆದೇಶ ನೀಡುವುದರಷ್ಟರಲ್ಲಿ ನೀರಿಗೆ ಹಾರುತ್ತಾರೆ.

ಬಿಗ್ ಬಾಸ್ ಸ್ಟೈಲ್‌ವಾಲಿ; ರಿಯಲ್ ಲೈಫ್‌ನಲ್ಲಿ ಯಾಕಿಂಗೆ?

ಹಾರಿದ ನಂತರ ಮನೆ ಮಂದಿಯೆಲ್ಲಾ ಇದು ಬಿಗ್ ಬಾಸ್‌ ಅಲ್ಲ ನಾವು ಮಾಡಿರುವ ತಮಾಷೆ ಎಂದು ಗೇಲಿ ಮಾಡುತ್ತಾರೆ.

click me!