
BB ಮನೆಯ ಸೋಮಾರಿ, ದುರಹಂಕಾರಿ ಹಾಗೂ ಕೋಪಿಷ್ಟೆ ಎಂದು ಕರೆಸಿಕೊಂಡಿರುವ ಪ್ರಿಯಾಂಕಾ ಏನಾದ್ರೂ ಮಾಡಿ ಮನೆಯೊಳಗಿರುವವರ ಅಭಿಪ್ರಾಯವನ್ನು ಬದಲಾಯಿಸಬೇಕೆಂದು ದರ್ಬಾರ್ ಟಾಸ್ಕ್‌ನಲ್ಲಿ ನಡೆಸಿದ ಆಡಳಿತ ಅವರಿಗೆ ಸಕ್ಸಸ್ ತಂದು ಕೊಟ್ಟಿದೆ.
ಬಿಗ್ ಬಾಸ್ ಪ್ರಿಯಾಂಕಾ ರಿಯಲ್ ಲೈಫ್ ಬ್ಯಾಕ್‌ಗ್ರೌಂಡ್ ಗೊತ್ತಾ? ಇಲ್ಲಿದೆ ನೋಡಿ
ಕಿಚ್ಚ ಸುದೀಪ್ ನಡೆಸುವ 'Yes or No' ಗೇಮ್‌ನಲ್ಲಿ ಸ್ಪರ್ಧಿಗಳು ಮನೆಯಲ್ಲಿರುವ ಒಬ್ಬ ಸೋಮಾರಿ ವ್ಯಕ್ತಿಯ ಹೆಸರು ಹೇಳಬೇಕಿತ್ತು. ಈ ವೇಳೆ ಎಲ್ಲರೂ ತೆಗೆದುಕೊಂಡ ಹೆಸರೇ ಪ್ರಿಯಾಂಕಾ. ಯಾವುದೇ ವಿಚಾರವಾದರೂ ಮೂಗಿನ ನೇರಕ್ಕೆ ಉತ್ತರಿಸುವ ಪ್ರಿಯಾಂಕಾ ಸುದೀಪ್ ಎದುರೇ 'ನಾನು ಇದನ್ನು ಒಪ್ಪಿಕೊಳ್ಳುವುದಿಲ್ಲ. ಮನೆಯಲ್ಲಿ ನನ್ನ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ. ಬೇರೆಯವರ ಕೆಲಸ ನನಗೇಕೆ' ಎಂದು ಉತ್ತರಿಸಿದ್ದರು. ಪ್ರಿಯಾಂಕಾ ಮಾತನಾಡುವ ಶೈಲಿಯೇ ಹಾಗೆ. ನೋಡುವ ನೋಟದಲ್ಲೇ ಆಕೆಯ ಉತ್ತರ ಇರುತ್ತದೆ. ಇದೇ ಕಾರಣಕ್ಕೆ ಪ್ರಿಯಾಂಕ ಎರಡು ಮೂರು ವಾರಗಳಿಂದ ನಾಮಿನೇಟ್ ಆದರು.
ಬಿಗ್ ಬಾಸ್ ಮನೆಯ ಮೇಕಪ್ ರೂಂ ಸೀಕ್ರೆಟ್ ರಿವೀಲ್; ಹೇಗಿದೆ ನೋಡಿ!
ಕಳೆದ ವಾರ ಬಿಗ್ ಬಾಸ್ ಮನೆಯ ದರ್ಬಾರ್ ಟಾಸ್ಕ್ ನಲ್ಲಿ ಪ್ರಿಯಾಂಕಾ ರಾಣಿಯಾಗಿ ಆಯ್ಕೆಯಾದರು. ಸಿಂಹಾಸನ ಸ್ವೀಕರಿಸುತ್ತಿದ್ದಂತೆ ಮನೆ ನಡೆಸುವ ಆಡಳಿತ ಶೈಲಿಯನ್ನೇ ಬದಲಾಯಿಸಿದ್ದರು. ಶಿಕ್ಷೆಯಿಂದ ಒಬ್ಬರ ಮನಸ್ಸಿಗೆ ನೋವಾಗಬಾರದೆಂದು ತಮಾಷೆಯ ರೀತಿಯಲ್ಲೇ ಉತ್ತರ ನೀಡುತ್ತಿದ್ದರು. ಇದನ್ನು ಗಮನಿಸಿದ ಪ್ರೇಕ್ಷಕರಿಗೆ ಆಕೆಯ ಮೇಲಿದ್ದ ಅಭಿಪ್ರಾಯವೇ ಬದಲಾಗಿ ಹೋಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.