
ಶೈನ್ ಶೆಟ್ಟಿ, ಚೈತ್ರಾ ಕೊಟ್ಟೂರು, ರಾಜು ತಾಳಿಕೋಟೆ, ಭೂಮಿ ಶೆಟ್ಟಿ, ದೀಪಿಕಾ ಈ ವಾರ ನಾಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಹೋಗುವಾಗ ದುನಿಯಾ ರಶ್ಮಿ ನೇರವಾಗಿ ನಾಮಿನೇಟ್ ಮಾಡಿರುವ ಪ್ರಿಯಾಂಕಾ ಮತ್ತು ಈ ವಾರ ಮನೆಯ ಕ್ಯಾಪ್ಟನ್ ಹರೀಶ್ ಅವರಿಂದ ನೇರವಾಗಿ ಚಂದನ್ ಆಚಾರ್ ನಾಮಿನೇಟ್ ಆಗಿದ್ದಾರೆ.
ಈ ಮೂಲಕ ಒಂದೇ ಒಂದು ವಾರ ನಾಮಿನೇಟ್ ನಿಂದ ಬಚಾವಾಗಿದ್ದ ಚೈತ್ರಾ ಕೊಟ್ಟೂರು ಮತ್ತೆ ನಾಮಿನೇಟ್ ಆಗಿದ್ದಾರೆ. ಇದಕ್ಕೂ ಮೊದಲು ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯಿತು.
ಮಲಗಲೆಂದೇ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ
ನಾಮಿನೇಶನ್ ಬಳಿಕ ರಾಜು ತಾಳಿಕೋಟೆ ಒಂದು ಸ್ವಲ್ಪ ಅಸಮಾಧಾನದಿಂದ ಇದ್ದಂತೆ ಕಂಡರು. ಇದೆಲ್ಲದವರ ನಡುವೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ಸಹ ನೀಡಿದ್ದರು. ಮಧ್ಯಾಹ್ನದ ಅಡುಗೆಯನ್ನು ಗಾಯಕ ವಾಸುಕಿ ವೈಭವ್ ಸಿದ್ಧಮಾಡಬೇಕು. ಚಂದನಾ ಸಹಾಯ ಮಾತ್ರ ಮಾಡಬಹುದು ಎಂದು ಸೂಚಿಸಿದ್ದರು. ಕುಕ್ಕರ್ ಮುಚ್ಚಳ ಹಾಕಲು ವಾಸುಕಿ ಒದ್ದಾಡಿದ್ದು ಒಂದಿಷ್ಟು ನಗೆ ಬುಗ್ಗೆ ಹರಡಿಸಿತು.
ಮನೆಯಿಂದ ಹೊರಗೆ ಒಂದಿಷ್ಟು ಸಾಮಾನುಗಳನ್ನು ಇರಿಸಿ ಅವುಗಳನ್ನು ಕೌಂಟ್ ಮಾಡಿ ತಿಳಿಸಲು ಬಿಗ್ ಬಾಸ್ ಆದೇಶಿಸಿದ್ದರು. ಅದರಂತೆ ಕ್ಯಾಪ್ಟನ್ ಆಯ್ಕೆಗೆ ಸಾಲಿನಲ್ಲಿದ್ದ ಹರೀಶ್ ರಾಜ್, ಚಂದನ್ ಆಚಾರ್ ಮತ್ತು ಪ್ರಿಯಾಂಕಾ ಹರಸಾಹಸ ಮಾಡಿ ಮನೆಯ ಏರಿಯಾದಲ್ಲಿದ್ದ ಚೆಂಡುಗಳು, ಬಾಂಬು ತುಂಡು ಲೆಕ್ಕ ಸೇರಿದಂತೆ ಇತರ ವಸ್ತುಗಳ ಲೆಕ್ಕ ಹೇಳಬೇಕಾಗಿತ್ತು. ಅಂತಿಮವಾಗಿ ಹರೀಶ್ ರಾಜ್ ನಾಯಕರಾಗಿ ಆಯ್ಕೆಯಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.