ಯಾಕೆ ನಾಯಕಿಯರು ಇಷ್ಟೇ ಅಳಬೇಕು ಇಷ್ಟೇ ನಗಬೇಕು ಅಲ್ಲದೆ ತ್ಯಾಗಮಯಿಗಳು ಆಗಬೇಕು: ನಿರ್ದೇಶಕಿ ಸ್ವಪ್ನ ಕೃಷ್ಣ

Published : Feb 28, 2025, 04:08 PM ISTUpdated : Feb 28, 2025, 04:25 PM IST
ಯಾಕೆ ನಾಯಕಿಯರು ಇಷ್ಟೇ ಅಳಬೇಕು ಇಷ್ಟೇ ನಗಬೇಕು ಅಲ್ಲದೆ ತ್ಯಾಗಮಯಿಗಳು ಆಗಬೇಕು: ನಿರ್ದೇಶಕಿ ಸ್ವಪ್ನ ಕೃಷ್ಣ

ಸಾರಾಂಶ

ಮಾರ್ಚ್ 3ರಿಂದ ಕಲರ್ಸ್ ಕನ್ನಡದಲ್ಲಿ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿ ಪ್ರಸಾರವಾಗಲಿದೆ. ಸ್ವಪ್ನ ಕೃಷ್ಣ ನಿರ್ದೇಶನದ ಈ ಧಾರಾವಾಹಿಯು, ಸೋತ ತಂದೆಯನ್ನು ಗೆಲ್ಲಿಸಲು ವಕೀಲೆಯಾಗುವ ಮಗಳ ಕಥೆಯಾಗಿದೆ. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು, ಹೀರೋಯಿನ್‌ಗಳು ಕೇವಲ ಅಳುವ, ನಗುವ ಪಾತ್ರಗಳಿಗೆ ಸೀಮಿತವಾಗಬಾರದು ಎಂಬುದು ನಿರ್ದೇಶಕರ ಆಶಯ. ತಂದೆಗಾಗಿ ತ್ಯಾಗ ಮಾಡುವ ಮಗಳ ವಿಭಿನ್ನ ಕಥೆಯನ್ನು ಇದರಲ್ಲಿ ತೋರಿಸಲಾಗಿದೆ.

ಕಲರ್ಸ್ ಕನ್ನಡ ವಾಹಿಯಲ್ಲಿ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಇದೇ ಮಾರ್ಚ್‌ 3ರಿಂದ ಆರಂಭವಾಗುತ್ತಿದೆ. ಕೆಲಸದಲ್ಲಿ ಸೋತಿರುವ ತಂದೆಯನ್ನು ಗೆಲ್ಲಿಸುವುದಕ್ಕೆ ಲಾಯರ್ ಕೋಟ್ ತೊಟ್ಟು ಮಗಳು ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳುತ್ತಿರುವುದು ಸ್ವಪ್ನ ಕೃಷ್ಣ. ಸದಾ ಡಿಫರೆಂಟ್ ಕಥೆಗಳು ಅಲ್ಲದೆ ಮಹಿಳಾ ಪ್ರಧಾನ ಪಾತ್ರಗಳನ್ನು ಸೃಷ್ಟಿ ಮಾಡುವುದರಲ್ಲಿ ಸ್ವಪ್ನ ಎತ್ತಿದ ಕೈ. ಭಾರ್ಗವಿ ಧಾರಾವಾಹಿ ಬಗ್ಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ. 

'ಗಂಡು ಹೆಣ್ಣು ಅನ್ನುವ ಭೇದ ಇಲ್ಲದೆ ಹೆಣ್ಣು ಮಕ್ಕಳು ಮುಂದೆ ಹೋಗುತ್ತಿದ್ದಾರೆ. ಹಿರಿತೆರೆಯಲ್ಲಿ ಮಾಲಾಶ್ರೀ ಮೇಡಂ ಆಕ್ಷನ್ ಕ್ವೀನ್ ಆಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲೂ ಹೆಚ್ಚಾಗಿ ಆಕ್ಷನ್ ಹೀರೋಯಿನ್‌ಗಳು ಯಾಕೆ ಬರಬಾರದು? ಹೀರೋಯಿನ್‌ಗಳು ಇಷ್ಟೇ ಸೀನ್‌ಗಳಲ್ಲಿ ನಗಬೇಕು ಇಷ್ಟೇ ಸೀನ್‌ಗಳಲ್ಲಿ ಅಳಬೇಕು ಹಾಗೂ ತುಂಬಾ ತ್ಯಾಗಮಯಿಗಳು ಅಗಿರಬೇಕು ಅನ್ನೋ ಟ್ಯಾಗ್‌ಲೈನ್‌ ಇದೆ. ಈ ಎಲ್ಲಾ ಟ್ಯಾಗ್‌ಲೈನ್‌ಗಳನ್ನು ಹೊಡೆದು ಹಾಕಿ ಭಾರ್ಗವಿ ಮುಂದೆ ನಿಂತಿದ್ದಾಳೆ. ಹೀರೋಯಿನ್‌ಗಳಿಗೆ ಇರುವ ಯಾವುದೇ ಪ್ರೋಟೋಕಾಲ್‌ ಇಲ್ಲಿ ಭಾರ್ಗವಿದೆ ಇಲ್ಲ. ಆಡಿಯನ್ಸ್‌ ನಮ್ಮ ಸೀರಿಯಲ್‌ನ ನೋಡಬೇಕು ಅನ್ನೋ ಸ್ವಾರ್ಥವಿದೆ ಅದಕ್ಕೆ ಭಾರ್ಗವಿಯನ್ನು ವಿಭಿನ್ನಾಗಿ ಆಕ್ಷನ್‌ನಲ್ಲೂ ತೋರಿಸುವ ಪ್ರುಯತ್ನ ಮಾಡುತ್ತಿದ್ದೀವಿ' ಎಂದು ಕನ್ನಡ ಖಾಸಗಿ ವೆಬ್‌ ಸಂದರ್ಶನದಲ್ಲಿ ಸ್ವಪ್ನ ಕೃಷ್ಣ ಮಾತನಾಡಿದ್ದಾರೆ.

ನನ್ನ ಹೆಂಡ್ತಿಯರ ಬಗ್ಗೆ ಯಾಕೆ ಕ್ಯೂರಿಯಾಸಿಟಿ, ಮೊದ್ಲು ಯಾರ್ ಕರೀತಾರೆ ಅಲ್ಲಿಗೆ ಹೋಗ್ತೀನಿ: ಅರ್ಜುನ್ ರಮೇಶ್

'ಪ್ರತಿಯೊಬ್ಬ ತಂದೆ ತಾಯಂದಿರೂ ತಮ್ಮ ಮಕ್ಕಳು ಜೀವನದಲ್ಲಿ ಮುಂದೆ ಬರಬೇಕು ತಮ್ಮ ಮಕ್ಕಳು ಹೆಸರು ಮಾಡಬೇಕು ಹಾಗೂ ಜೀವನದಲ್ಲಿ ಮಕ್ಕಳು ಸೋಲಬಾರದು ಅಂತ ಆಸೆ ಕಟ್ಟುಕೊಂಡಿರುತ್ತಾಎ. ಆದರೆ ಭಾರ್ಗವಿ ಜೀವನದಲ್ಲಿ ಸೋತಿರುವ ತನ್ನ ತಂದೆಯನ್ನು ಗೆಲ್ಲಿಸೋದಕ್ಕೆ ಹೋರಾಟ ಮಾಡುತ್ತಿದ್ದಾಳೆ. ಮಕ್ಕಳಿಗೋಸ್ಕರ ತ್ಯಾಗ ಮಾಡುವ ತಂದೆ ತಾಯಿಯನ್ನು ನೋಡಿದ್ದೀವಿ ಆದರೆ ಈಗ ತಂದೆ ತಾಯಂದಿರಿಗೆ ತ್ಯಾಗ ಮಾಡುವ ಮಕ್ಕಳನ್ನು ನೋಡಿದ್ದೀವಿ. ಇಲ್ಲಿ ಇದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನನ ಮಾಡಲಾಗುತ್ತಿದೆ' ಎಂದು ಸ್ವಪ್ನ ಕೃಷ್ಣ ಹೇಳಿದ್ದಾರೆ. 

ಇಷ್ಟು ಗಾಢ ಹಸಿರು ನಿಮಗೆ ಬೇಡವೆಂದ ನೆಟ್ಟಿಗರು: ಶ್ವೇತಾ ಚಂಗಪ್ಪ ಫೋಟೋಸ್ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?