ಮೊದಲ ರಾತ್ರಿಯಲ್ಲೂ ತಾಂಡವ್​ಗೆ ಭಾಗ್ಯಳದ್ದೇ ಚಿಂತೆ! ಮಗ ಸತ್ತ ಎಂದು ತಣ್ಣೀರು ಸುರಿದುಕೊಂಡ ಕುಸುಮಾ...

Published : Feb 28, 2025, 01:52 PM ISTUpdated : Feb 28, 2025, 02:34 PM IST
ಮೊದಲ ರಾತ್ರಿಯಲ್ಲೂ ತಾಂಡವ್​ಗೆ ಭಾಗ್ಯಳದ್ದೇ ಚಿಂತೆ! ಮಗ ಸತ್ತ ಎಂದು ತಣ್ಣೀರು ಸುರಿದುಕೊಂಡ ಕುಸುಮಾ...

ಸಾರಾಂಶ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ತಾಂಡವ್ ಶ್ರೇಷ್ಠಾಳನ್ನು ಮದುವೆಯಾಗುತ್ತಾನೆ. ಭಾಗ್ಯ ತಾಳಿಯನ್ನು ಹಿಂದಿರುಗಿಸುತ್ತಾಳೆ. ಇದರಿಂದ ತಾಂಡವ್ ಅಹಂಗೆ ಪೆಟ್ಟು ಬೀಳುತ್ತದೆ. ತಂದೆ ತಾಯಿ ತಾಂಡವ್‌ನನ್ನು ಸತ್ತಂತೆ ಭಾವಿಸುತ್ತಾರೆ. ಲಕ್ಷ್ಮಿ ತಾಂಡವ್‌ನನ್ನು ಎಚ್ಚರಿಸುತ್ತಾಳೆ. ಭಾಗ್ಯಳ ನಿರ್ಧಾರ ಮತ್ತು ಕುಟುಂಬದ ಪ್ರತಿಕ್ರಿಯೆ ತಾಂಡವ್‌ನನ್ನು ಚಿಂತೆಗೀಡು ಮಾಡುತ್ತವೆ. ಸೀರಿಯಲ್ ಅಹಂಕಾರ ಮತ್ತು ಹೆಂಡತಿಯ ಸಹನೆಯನ್ನು ಪ್ರಶ್ನಿಸುತ್ತದೆ.

ಭಾಗ್ಯಲಕ್ಷ್ಮಿ ಸೀರಿಯಲ್​ ಮಹತ್ವದ ತಿರುವು ಪಡೆದುಕೊಂಡಿದೆ. ಇಲ್ಲಿಯವರೆಗೆ ಪತ್ನಿಗೆ ಮಾನಸಿಕ ಟಾರ್ಚರ್​ ಕೊಡುತ್ತಲೇ ಲವರ್​ ಶ್ರೇಷ್ಠಾ ಜೊತೆ ಎಂಜಾಯ್ ಮಾಡುತ್ತಿದ್ದ ತಾಂಡವ್​, ಶ್ರೇಷ್ಠಾಳ ಕುತಂತ್ರದ ಅರಿವು ಇಲ್ಲದೇ ಈಗ ಆಕೆಯನ್ನು ಮದುವೆಯಾಗಿದ್ದಾನೆ. ತಾಳಿಯೇ ಸರ್ವಸ್ವ ಎಂದುಕೊಂಡು ಮಾತನಾಡುತ್ತಿದ್ದ ಭಾಗ್ಯ ಈಗ ತಾಳಿಯನ್ನು ಗಂಡನ ಕೈಗೆ ಇಟ್ಟಿದ್ದಾಳೆ.  ಪತ್ನಿಗೆ ಬೆಲೆ ಇಲ್ಲದ ಮೇಲೆ ತಾಳಿಗೇನು ಬೆಲೆ, ಇದು ಹೇಗಿದ್ದರೂ ಶ್ರೇಷ್ಠಾಳಿಗೆ ಸೇರಿದ್ದು, ಅವಳಿಗೇ ಕಟ್ಟಿ ಎಂದು ಹೇಳಿ ಹೋಗಿದ್ದಾಳೆ. ಭಾಗ್ಯಳ ಈ ನಿರ್ಧಾರಕ್ಕೆ ಆಕೆಯ ಅಮ್ಮ ವಿರೋಧ ವ್ಯಕ್ತಪಡಿಸಿದರೂ ಅತ್ತೆ ಕುಸುಮಾ ಸೊಸೆಯ ಪರ ನಿಂತಿದ್ದಾಳೆ. ಇದನ್ನು ನೋಡಿದ ತಾಂಡವ್​ಗೆ ಖುಷಿಯಾಗುವ ಬದಲು ಇಗೋ ಹರ್ಟ್​ ಆಗಿದೆ. ಭಾಗ್ಯಳಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸುತ್ತಿದ್ದಾನೆ. ತನ್ನ ಪ್ರೇಯಸಿ ಜೊತೆ ಮದ್ವೆಯಾದರೂ ಆ ಖುಷಿ ಮಾಯವಾಗಿದೆ. ಈಗಲೂ ಭಾಗ್ಯಳ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ.

ಇದೀಗ ಶ್ರೇಷ್ಠಾ ಜೊತೆ ಮೊದಲ ರಾತ್ರಿ ಆಚರಿಸಿಕೊಳ್ಳಲು ರೆಡಿಯಾಗಿದ್ದಾನೆ ತಾಂಡವ್​. ಇದಕ್ಕಾಗಿ ಶ್ರೇಷ್ಠಾ ಎಲ್ಲಾ ರೀತಿಯ ತಯಾರಿಯನ್ನೂ ಮಾಡಿದ್ದಾಳೆ. ಆದರೆ ಅದನ್ನು ನೋಡಿದರೂ ಭಾಗ್ಯಳದ್ದೇ ನೆನೆಪು ಕಾಡ್ತಿದೆ ತಾಂಡವ್​ಗೆ. ಅವಳು ತೆಗೆದುಕೊಟ್ಟಿರುವ ತಾಳಿಯನ್ನು ತನ್ನ ಬಳಿಯೇ ಇಟ್ಟುಕೊಂಡಿರುವ ತಾಂಡವ್​ಗೆ ಅವಳಿಗೆ ಹೇಗೆ ಧೈರ್ಯ ಬಂತು ತಾಳಿ ಬಿಚ್ಚಿಕೊಡಲು ಎನ್ನುವ ಅಹಂ ಕಾಡುತ್ತಿದೆ. ತಾಳಿಯೇ ಸರ್ವಸ್ವ ಎಂದುಕೊಂಡಿದ್ದ ಭಾಗ್ಯ, ಅದನ್ನು ತೆಗೆದುಕೊಟ್ಟಿದ್ದಾಳೆ ಎಂದರೆ ಮುಂದೆ ಆಕೆ ಏನೋ ಮಹತ್ವದ ಉದ್ದೇಶ ಇಟ್ಟುಕೊಂಡಿದ್ದಾಳೆ ಎನ್ನುವುದು ಆತನ ಭಾವನೆ. ಅವನಿಗೆ ಅಹಂ ಅಡ್ಡಿ ಬಂದಿದೆ. ಭಾಗ್ಯಳ ಮುಂದೆ ತಾನು ಸೋತಂತೆ ಅನ್ನಿಸುತ್ತಿದೆ. ಭಾಗ್ಯ ತಾಳಿ ಕೊಟ್ಟಿರುವುದನ್ನು ಆತನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ.

'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ವಿಡಿಯೋ ಇಲ್ಲಿದೆ...

ಅದೇ ಇನ್ನೊಂದೆಡೆ, ತಾಂಡವ್​ ಅಪ್ಪ ಮತ್ತು ಅಮ್ಮ ತಮ್ಮ ಮಗ ತಮ್ಮ ಪಾಲಿಗೆ ಸತ್ತ ಎಂದುಕೊಂಡು ಮೈಮೇಲೆ ತಣ್ಣೀರು ಸುರಿದುಕೊಂಡಿದ್ದಾರೆ. ಭಾಗ್ಯಳಿಗೆ ಇನ್ನು ನೀನೇ ನಮಗೆ ಮಗಳು, ನಮಗೆ ಯಾವ ಮಗನೂ ಇಲ್ಲ. ಅವನು ನಮ್ಮ ಪಾಲಿಗೆ ಸತ್ತ ಎಂದಿದ್ದಾರೆ. ಅದೇ ಮತ್ತೊಂದೆಡೆ, ಭಾಗ್ಯಳ ತಂಗಿ ಲಕ್ಷ್ಮೀ ಬಂದು ತಾಂಡವ್​ಗೆ ಟಾಂಟ್​  ಕೊಟ್ಟು ಹೋಗಿದ್ದಾಳೆ. ನನ್ನ ಅಕ್ಕ ಖುಷಿಯಾಗಿ ಇರ್ತಾಳೆ, ನೀವು ಈ ಭಾಗ್ಯಳ ಜೊತೆ ಸಂಸಾರ ಮಾಡುವುದು ತುಂಬಾ ಸುಲಭ ಎಂದುಕೊಂಡಿದ್ದರೆ ಅದು ತಪ್ಪು. ಸಂಸಾರ ಮಾಡುವುದು ಲವ್​ ಮಾಡಿದಷ್ಟು ಸುಲಭ ಅಲ್ಲ, ಅದು ನಿಮಗೆ ಅರ್ಥವಾಗುತ್ತದೆ. ಆಗ ದಯವಿಟ್ಟು ಮತ್ತೊಮ್ಮೆ ನನ್ನ ಅಕ್ಕನ ಬಾಳಿನಲ್ಲಿ ವಾಪಸ್​ ಬರಬೇಡಿ ಎಂದು ಹೇಳಿ ಹೋಗಿದ್ದಾಳೆ.

ಇವೆಲ್ಲವುಗಳಿಂದಲೂ ತಾಂಡವ್​ಗೆ ಬರಸಿಡಿಲು ಬಡಿದಂತಾಗಿದೆ. ಅಪ್ಪ-ಅಮ್ಮ ತಣ್ಣೀರಿನಿಂದ ಸ್ನಾನ ಮಾಡಿರುವ ವಿಷಯ ಇನ್ನೂ ತಿಳಿದಿಲ್ಲ. ಆದರೆ ಭಾಗ್ಯ ತಾಳಿ ಬಿಚ್ಚಿಕೊಟ್ಟಿರುವುದು ಹಾಗೂ ಲಕ್ಷ್ಮೀ ಬಂದು ಹೇಳಿದ ಮಾತುಗಳನ್ನು ತಾಂಡವ್​ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಅಪ್ಪ- ಅಮ್ಮ ಮಾಡಿದ್ದನ್ನು ನೋಡಿ ಇನ್ನೇನು ಮಾಡುತ್ತಾನೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಅಹಂಕಾರ ಎನ್ನುವುದು ಮನುಷ್ಯನನ್ನು ಯಾವ ಪರಿಯಲ್ಲಿ ನುಂಗಿಹಾಕುತ್ತದೆ ಎನ್ನುವುದಕ್ಕೆ ಹಾಗೂ ಗಂಡನ ಟಾರ್ಚರ್​ ತೀರಾ ಅತಿಯಾದಾಗ ಹೆಂಡತಿಯಾದವಳು ಹೇಗೆ ಸುಮ್ಮನೆ ಇರಬಾರದು ಎನ್ನುವ ಉದಾಹರಣೆಗಳಿಗೆ ಈ ಸೀರಿಯಲ್​ ಸಾಕ್ಷಿಯಾಗಿದೆ. ಜೊತೆ ತಾಳಿ ಬಿಚ್ಚಿಕೊಟ್ಟು ಬಂದಾಗ ನೆರೆಹೊರೆಯ ಮಹಿಳೆಯರೇ ಹೇಗೆಲ್ಲಾ ಕೊಂಕು ನುಡಿಯುತ್ತಾರೆ, ಅದನ್ನು ಕೂಡ ಮಹಿಳೆ ಹೇಗೆ ಸಹಿಸಿಕೊಳ್ಳಬೇಕು ಎನ್ನುವುದನ್ನೂ ಸೀರಿಯಲ್​ ತೋರಿಸಿಕೊಡುತ್ತಿದೆ. 

ಸಿನಿಮಾದಿಂದ ಸೀರಿಯಲ್​ಗೆ ಬಂದ್ರೂ 45 ವರ್ಷದಿಂದ ಸುಧಾರಾಣಿ ಬೆನ್ನು ಬಿಡದ 'ಮಾವ': ವಿಡಿಯೋ ವೈರಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!