ಧರೆಗಿಳಿದ ಮಾಡರ್ನ್​ ಶಿವ-ಪಾರ್ವತಿಯರು: ನಿಮಗ್ಯಾವುದೂ ಕನ್ನಡ ಹಾಡು ಸಿಗಲಿಲ್ವಾ ಎಂದು ಕೇಳಿದ ನೆಟ್ಟಿಗರು

Published : Feb 28, 2025, 02:23 PM ISTUpdated : Feb 28, 2025, 02:49 PM IST
ಧರೆಗಿಳಿದ ಮಾಡರ್ನ್​  ಶಿವ-ಪಾರ್ವತಿಯರು: ನಿಮಗ್ಯಾವುದೂ ಕನ್ನಡ ಹಾಡು ಸಿಗಲಿಲ್ವಾ ಎಂದು ಕೇಳಿದ ನೆಟ್ಟಿಗರು

ಸಾರಾಂಶ

ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಿಶನ್ ಬಿಳಗಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಇಬ್ಬರೂ ಸೇರಿ ಡ್ಯೂಯೆಟ್ ಹಾಡುಗಳಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಶಿವರಾತ್ರಿಯಂದು ಶಿವ-ಪಾರ್ವತಿಯರಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಿಶನ್ ಡ್ಯಾನ್ಸರ್ ಆಗಿದ್ದು, ಡ್ಯಾನ್ಸ್ ದಿವಾನಿ ವಿಜೇತರಾಗಿದ್ದಾರೆ. ನಮ್ರತಾ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಹಿಮಾ ಪಾತ್ರದಿಂದ ಪ್ರಸಿದ್ಧಿ ಪಡೆದಿದ್ದಾರೆ. ಇವರಿಬ್ಬರ ಸ್ನೇಹದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಕಿಶನ್‌ ಬಿಳಗಲಿ ಇದಾಗಲೇ ಸೋಷಿಯಲ್​  ಮೀಡಿಯಾದಲ್ಲಿ ಕಿಚ್ಚು ಹೊತ್ತಿಸುತ್ತಿದ್ದಾರೆ. ಇದಾಗಲೇ ಇಬ್ಬರೂ ಸೇರಿ ಕೆಲವು ಡ್ಯೂಯೆಟ್​  ಹಾಡಿದ್ದು, ಅದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇವರಿಬ್ಬರು ರವಿಚಂದ್ರನ್‌ ನಟನೆಯ ಶಾಂತಿಕ್ರಾಂತಿ ಸಿನಿಮಾದ "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಹಾಡು, ಸಪ್ತಸಾಗರದಾಚೆ ಎಲ್ಲೋ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದೀಗ ಮೊನ್ನೆ ಶಿವರಾತ್ರಿಯ ನಿಮಿತ್ತ ಈ ಜೋಡಿ ಶಿವ-ಪಾರ್ವತಿಯರನ್ನೇ ಧರೆಗಿಳಿಸಿದರು. ಇವರ ಪರ್​ಫಾರ್ಮೆನ್ಸ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದ್ಭುತ ನಟನೆಯಿಂದ ಮೋಡಿ ಮಾಡಿದೆ ಜೋಡಿ. 


ಅಂದಹಾಗೆ ಕಿಶನ್​ ಅವರು ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​. ಡಾನ್ಸ್​ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್​ಲೆಟ್​ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈಲ್​ ಆಗಿತ್ತು. 

ನಿನ್ನಂಥ ಮಗಳನ್ನು ಹೆತ್ತ ನಿನ್ನ ಅಪ್ಪ-ಅಮ್ಮ ಆ*ಹತ್ಯೆ ಮಾಡ್ಬೋಬೇಕು ಅಂದ ಆತ... ನಮ್ರತಾ ಗೌಡ ನೋವಿನ ನುಡಿ
 
 ಇನ್ನು ನಮ್ರತಾ ಗೌಡ ಅವರ ಕುರಿತು ಹೇಳುವುದೇ ಬೇಡ. ಬಿಗ್​ಬಾಸ್​ 10 ಮೂಲಕ ಸಕತ್​  ಫೇಮಸ್​ ಆಗಿರುವವರು ಇವರು.  ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಆಗಿರುವ ನಮ್ರತಾ  1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನಮ್ರತಾ ಅದಾದ ಬಳಿಕ  ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು. ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದರು. ಈಗ ಎಲ್ಲಕ್ಕಿಂತಲೂ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಬಿಗ್​ಬಾಸ್​ 10. ಇಲ್ಲಿ ಇವರು ಮತ್ತು ಸ್ನೇಹಿತ್​ ಸ್ನೇಹ ಸಾಕಷ್ಟು ಸದ್ದು ಕೂಡ ಮಾಡಿತ್ತು.   

ಈ ಹಿಂದೆ ಸಂದರ್ಶನವೊಂದರಲ್ಲಿ ಈ ಜೋಡಿ ಮಾತನಾಡುತ್ತಾ ತಮ್ಮ ಫ್ರೆಂಡ್​ಷಿಪ್​ ಬಗ್ಗೆ ಹೇಳಿಕೊಂಡಿದ್ದರು.  ಮನೆ ಪಕ್ಕದಲ್ಲೇ ಇದ್ದರೂ ನಮ್ರತಾ ನನಗೆ ಕರೆ ಮಾಡುವುದಿಲ್ಲ, ತಿಂಡಿ ತಿನ್ನಲು ಸುತ್ತಾಡಲು ಬೇರೆ ಬೇರೆ ಸ್ನೇಹಿತರು ಇದ್ದಾರೆ ನಾನು ಲೆಕ್ಕನೇ ಇಲ್ಲ ಎಂದು ಕಿಷನ್ ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ಮೊಬೈಲ್​ ಫೋನ್​ನಲ್ಲಿ ನಮ್ರತಾ ಹೆಸರನ್ನು ಹೇಗೆ ಸೇವ್​ ಮಾಡಿಕೊಂಡಿದ್ದೇನೆ ಎನ್ನುವ ಬಗ್ಗೆ ಮಾತನಾಡಿದ್ದರು.  ಸಾಮಾನ್ಯವಾಗಿ ನಮ್ರತಾ ಮಾತಿಗೆ ಮುಂಚೆ  What the Fu** ಪದವನ್ನು ಬಳಸುತ್ತಾರೆ ಹೀಗಾಗಿ ನಾನು ಆಕೆ ನಂಬರ್‌ನ ನಮ್ರತಾ F** ಎಂದೇ ಸೇವ್ ಮಾಡಿಕೊಂಡಿದ್ದೀನಿ ಎಂದು ಕಿಷನ್ ಹೇಳಿದ್ದರು. ಆಗ ಹುಸಿಮುನಿಸು ತೋರಿದ್ದ ನಮ್ರತಾ,  ಅಯ್ಯೋ ನಮ್ಮ ಸ್ನೇಹದ ಬಗ್ಗೆ ಮಾತನಾಡಿ ಅಂದ್ರೆ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದಿದ್ದರು.  

ಮೇಕಪ್​ ಇಲ್ಲದ ಮುಖ ತೋರಿಸಲು ನಾಚಿಗೊಂಡ ಬಿಗ್​ಬಾಸ್​ ನಮ್ರತಾ! ಬಣ್ಣ ರಹಿತ ತನಿಷಾರನ್ನೂ ನೋಡಿಬಿಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್‌ ಲವ್‌ಬರ್ಡ್ಸ್‌ ಸೂರಜ್‌-ರಾಶಿಕಾ ಬ್ರೇಕಪ್‌? ಉಂಗುರ ತೊಡಿಸಿದ ಬೆನ್ನಲ್ಲೇ ಶುರುವಾಯ್ತು ಅನುಮಾನ!
ಒಬ್ಬಂಟಿಯಾಗಿ ಥೈಲ್ಯಾಂಡ್ ಹೊರಟ ಭವ್ಯಾ ಗೌಡಾಗೆ Indigo ಸಿಬ್ಬಂದಿಗಳಿಂದ ಸರ್ಪ್ರೈಸ್