ನಟಿ ನಿವೇದಿತಾ ಗೌಡ ಬೀಚ್ನಲ್ಲಿ ಇರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ತರ್ಲೆ ನೆಟ್ಟಿಗರು ಮಾತ್ರ ಇದನ್ನು ನೋಡಿ ಸುಮ್ಮನೆ ಇರ್ತಾರಾ? ಏನೆಲ್ಲಾ ಹೇಳಿದ್ದಾರೆ ನೋಡಿ!
ಬಿಗ್‌ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ತಮ್ಮಷ್ಟಕ್ಕೆ ತಾವು ಜಾಲಿಯಾಗಿ ರೀಲ್ಸ್ ಮಾಡುತ್ತಿದ್ದರೂ, ನೆಟ್ಟಿಗರಿಗೆ ಮಾತ್ರ ಅದರಲ್ಲಿಯು ನಿವೇದಿತಾ ಅವರ ಮಾಜಿ ಪತಿ ಚಂದನ್ ಶೆಟ್ಟಿ ಫ್ಯಾನ್ಸ್ಗೆ ನಿವೇದಿತಾ ಕಂಡರೆ ಆಗಿ ಬರುತ್ತಲೇ ಇಲ್ಲ. ನಿವೇದಿತಾ ಅವರು ಎಷ್ಟೇ ಒಳ್ಳೆಯ ರೀಲ್ಸ್ ಮಾಡಿದರೂ, ಗೊಂಬೆಯಂತೆ ಕಾಣಿಸುವ ವಿಡಿಯೋ ಶೇರ್ ಮಾಡಿದರೂ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಅದರಲ್ಲಿಯೂ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್ ಮಟ್ಟಿಗೂ ಬಂದು ನಿಂತಿದ್ದಾರೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ.
ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಇದೀಗ ಬೀಚ್ನಲ್ಲಿ ನಿವೇದಿತಾ ಅವರು ಡೀಸೆಂಟ್ ಆಗಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇಲ್ಲಿ ಅವರ ಬಟ್ಟೆ ಬೀಚ್ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಹಲವರು ಹಾರ್ಟ್ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದಾರೆ! ಮತ್ತೋರ್ವ ನೆಟ್ಟಿಗ, ಪ್ರಚಾರಕ್ಕಾಗಿ ಈಕೆ ಪೂನಂ ಪಾಂಡೆ ರೀತಿ ಮಾಡಿದರೂ ಅಚ್ಚರಿ ಇಲ್ಲ ಎಂದು ಕಮೆಂಟ್ ಹಾಕಿದ್ದಾನೆ!
undefined
ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್ ಗರಂ...
ಅಷ್ಟಕ್ಕೂ ನಟಿ ಪೂನಂ ಪಾಂಡೆ ಸದ್ಯ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದ್ದಾರೆ. ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಹೋಗಿದ್ದ ಸಂದರ್ಭದಲ್ಲಿ ಪೂನಂ ಪಾಂಡೆ ಕೆಳಗಿನ ಒಳ ಉಡುಪು ಧರಿಸದ್ದೇ ಇದ್ದುದು ಕ್ಯಾಮೆರಾ ಮುಂದೆ ಬಟಾ ಬಯಲಾಗಿತ್ತು. ನಂತರ ನಟಿ ಈ ಬಗ್ಗೆ ಸ್ಪಷ್ಟನೆ ಕೊಟ್ಟರೂ, ನಡೆಯುವುದೆಲ್ಲವೂ ನಡೆದಾಗಿಬಿಟ್ಟಿತ್ತು. ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ಹಲ್ಚಲ್ ಸೃಷ್ಟಿಸುತ್ತಿದೆ. ನಟಿ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ. ಹಿಂದೆ ಗರ್ಭಕೋಶದ ಕ್ಯಾನ್ಸರ್ನಿಂದ ಸತ್ತಿರುವುದಾಗಿ ನಟಿಸಿ ಸದ್ದು ಮಾಡಿದ್ದ ಪೂನಂ ಪಾಂಡೆಯ ಹೆಸರು ಜನರು ಮರೆಯುತ್ತಾ ಬಂದ ನಂತರ ಮತ್ತೆ ಚರ್ಚೆಯಲ್ಲಿ ಉಳಿಯುವುದಕ್ಕಾಗಿ ಅಂಡರ್ವೇರ್ ಧರಿಸದೇ ಬಂದಿರಲಿಕ್ಕೂ ಸಾಕು ಎನ್ನುವ ವಾದವೂ ಇದೆ. ಪೂನಂ ಪಾಂಡೆ ವಿಷಯ ಏನೇ ಇರಲಿ. ಆದರೆ ಆಕೆಯನ್ನು ನಟಿ ನಿವೇದಿತಾರಿಗೆ ಹೋಲಿಕೆ ಮಾಡಿ ಕೆಲವು ತರ್ಲೆ ನೆಟ್ಟಿಗರು ಮಜಾ ತೆಗೆದುಕೊಳ್ಳುತ್ತಿರುವುದಕ್ಕೆ ಆಕ್ಷೇಪವೂ ವ್ಯಕ್ತವಾಗುತ್ತಿದೆ.
ಅದೇ ಇನ್ನೊಂದೆಡೆ, ನಿವೇದಿತಾ, ಇತ್ತೀಚೆಗೆ ವಾಣಿ ಎನ್ನುವ ಸ್ನೇಹಿತೆಯ ಜೊತೆ ಹೆಚ್ಚಾಗಿ ಕಾಣಿಸಿಕೊಳ್ತಿರೋದನ್ನೂ ನೋಡಲಾಗ್ತಿಲ್ಲ ನೆಟ್ಟಿಗರಿಗೆ. ಈ ಸ್ನೇಹಿತೆಯ ಜೊತೆ ನಿವೇದಿತಾ ಒಮ್ಮೆ ಬಾತ್‌ರೂಮ್‌ನಲ್ಲಿ, ಇನ್ನೊಮ್ಮೆ ಬೆಡ್‌ರೂಮ್‌ನಲ್ಲಿ... ಹೀಗೆ ಮೈಚಳಿ ಬಿಟ್ಟು ಡಾನ್ಸ್ ಮಾಡುತ್ತಿರುತ್ತಾರೆ. ಇಲ್ಲಿಯವರೆಗೆ ಡೀಸೆಂಟ್ ಬಟ್ಟೆ ಧರಿಸುತ್ತಿದ್ದ ಅವರ ಸ್ನೇಹಿತೆ ಕೂಡ ನಿವೇದಿತಾ ಹಾದಿಯನ್ನೇ ಹಿಡಿದಿರುವ ಕಾರಣ ಕಮೆಂಟಿಗರು ನಾಲಿಗೆ ಹರಿಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಸ್ನೇಹಿತೆ ಜೊತೆ ಬೆಡ್‌ರೂಮ್‌ನಲ್ಲಿ ನಿವೇದಿತಾ ತುಂಟಾಟವಾಡಿದ್ದರು. ಸುಮ್ಮನೇ ಸ್ನೇಹಿತೆಯನ್ನು ಅಪ್ಪಿಕೊಂಡಿದ್ದರು. ಇಬ್ಬರೂ ಸ್ನೇಹಿತೆಯರು ತುಂಬಾ ಕ್ಲೋಸ್ ಫ್ರೆಂಡ್ಸ್ ರೀತಿಯಲ್ಲಿ ನಗುತ್ತಿದ್ದಾರೆ. ಆದರೆ ಇದಕ್ಕೂ ನೆಟ್ಟಿಗರು ಸುಮ್ಮನೇ ಬಿಟ್ಟಿಲ್ಲ. ಬೆಡ್‌ರೂಮ್‌ನಲ್ಲಿ ಈ ಪರಿಯ ಚೆಲ್ಲಾಟ ಮಾಡಿದ್ರೆ ಇದನ್ನು ಏನು ಅಂದುಕೊಳ್ಳಬೇಕು ಎಂದು ಪ್ರಶ್ನಿಸಿದ್ರು. ಅದರಲ್ಲಿಯೂ ನಿವೇದಿತಾ ಸ್ನೇಹಿತೆಯ ಬಟ್ಟೆಯ ಬಟನ್ ಬಿಚ್ಚುವಂತೆ ಮಾಡಿದ್ದು, ಇದಕ್ಕೆ ಸಕತ್ ನೆಗೆಟಿವ್ ಕಮೆಂಟ್ಸ್ ಬಂದಿತ್ತು. ಇನ್ನು ಕೆಲವರು ಇಬ್ಬರು ಸ್ನೇಹಿತೆಯರು ಸುಮ್ಮನೇ ಎಂಜಾಯ್ ಮಾಡಬಾರದಾ? ಅದಕ್ಕೂ ಕೆಟ್ಟ ಕಮೆಂಟ್ಸ್ ಯಾಕೆ ಎಂದು ಕಮೆಂಟ್ಸ್ ಹಾಕುತ್ತಿರುವವರ ವಿರುದ್ಧ ಕಿಡಿ ಕಾರಿದ್ದೂ ಇದೆ.
ಸ್ನೇಹಿತೆ ಎತ್ತಿದ ರಭಸಕ್ಕೆ ಕಾಣಬಾರದ್ದೆಲ್ಲಾ ಕಂಡೋಯ್ತು! ವೈರಲ್ ವಿಡಿಯೋ ಝೂಮ್ ಮಾಡಿ ಮಾಡಿ ನೋಡ್ತಿರೋ ನೆಟ್ಟಿಗರು!