
ಚಿತ್ರಗೀತೆ ಬರಹಗಾರ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್ ಅಧ್ಯಕ್ಷ ಪ್ರಸೂನ್ ಜೋಶಿ ಹಾಗೂ ಬಾಲಿವುಡ್‌ನ ನಟಿ ಸ್ವರಾ ಭಾಸ್ಕರ್ ಮಧ್ಯೆ ಒಂದು ಸಂಗತಿ ವಿವಾದದ ಹೊಗೆಯಾಡಿಸಿದೆ. ಸ್ವರಾ ಭಾಸ್ಕರ್ ಅವರು ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರ ಆಗುತ್ತಿರುವ 'ರಸ್‌ಭರಿ' ಎಂಬ ಶೋದಲ್ಲಿ ಪ್ರಮುಖ ಪಾತ್ರದಲ್ಲಿ (ಟೀಚರ್) ಕಾಣಿಸಿಕೊಂಡಿದ್ದಾರೆ. ಈ ಶೋದಲ್ಲಿ ಒಬ್ಬಳು ಪುಟ್ಟ ಹುಡುಗಿಯನ್ನು ಕೆಲವು ವಯಸ್ಕರ ಮುಂದೆ ಮಾದಕ ಹಾಡೊಂದಕ್ಕೆ ಕುಣಿಸಲಾಗಿದೆ. ಈಗ ಅದು ವಿವಾದಕ್ಕೆ ಕಾರಣವಾಗಿದೆ.
ಪ್ರಸೂನ್ ಜೋಶಿ ಟ್ವೀಟ್ ಮಾಡಿರುವುದು ಹೀಗೆ:
ವಯಸ್ಕರು ಕುಳಿತುಕೊಂಡು ಕುಡಿಯುತ್ತಿರುವಾಗ, ಅವರ ಮುಂದೆ ಸಣ್ಣ, ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಪ್ರಚೋದಕವಾಗಿ ಕುಣಿಯುತ್ತಿರುವಂತೆ ತೋರಿಸುವ ಕಂಟೆಂಟ್ 'ರಸ್‌ಭರಿ'ಯಲ್ಲಿ ಪ್ರದರ್ಶನವಾಗಿದೆ. ಇದು ಬೇಜವಾಬ್ದಾರಿಯ ದೃಶ್ಯ. ಈ ಶೋನ ಆಯೋಜಕರು ಮತ್ತು ವೀಕ್ಷಕರು ಇಂಥದ್ದರ ಬಗ್ಗೆ ಪುನಃ ಯೋಚಿಸಬೇಕು. ಇದು ಅಭಿವ್ಯಕ್ತಿ ಸ್ವಾತಂತ್ರ್ಯವೋ ಅಥವಾ ದುರ್ಬಳಕೆಯ ಸ್ವಾತಂತ್ರ್ಯವೋ? ಮನರಂಜನೆಗಾಗಿ ಮಕ್ಕಳನ್ನು ಬಳಸುವ ಹಪಹಪಿಕೆಯಿಂದ ದೂರ ಇರೋಣ- ಇದು ಪ್ರಸೂನ್ ಜೋಶಿ ಟ್ವೀಟ್.
ಇದಕ್ಕೆ ಸ್ವರಾ ಭಾಸ್ಕರ್ ನೀಡಿರುವ ಪ್ರತಿಕ್ರಿಯೆ ಹೀಗಿದೆ- ಸರ್, ನೀವು ಈ ದೃಶ್ಯವನ್ನು ಅಪಾರ್ಥ ಮಾಡಿಕೊಂಡ ಹಾಗಿದೆ. ನೀವು ವ್ಯಾಖ್ಯಾನ ಮಾಡಿದ್ದಕ್ಕಿಂತ ಈ ದೃಶ್ಯ ಸಂಫೂರ್ಣ ವಿರುದ್ಧವಾಗಿದೆ. ಇಲ್ಲಿ ಮಗು ಕುಣಿಯುತ್ತಿರುವುದು ಸಪೂರ್ಣ ತನ್ನದೇ ಇಚ್ಛೆಯಿಂದ. ಆದರೆ ಅದನ್ನು ನೋಡಿ ಆಕೆಯ ತಂದೆ ಮುಜುಗರಕ್ಕೆ ಒಳಗಾಗುತ್ತಾನೆ. ಹುಡುಗಿ ಮುಕ್ತವಾಗಿ ತನ್ನಿಷ್ಟದಂತೆ ಕುಣಿಯುತ್ತಿದ್ದಾಳೆ. ಸಮಾಜ ಇದನ್ನು ನೋಡಿ ಏನು ಅರ್ಥ ಮಾಡಿಕೊಳ್ಳಬಹುದು ಅಥವಾ ತನ್ನನ್ನು ಲೈಂಗಿಕವಾಗಿ ಕಾಣಬಹುದು ಎಂಬ ಕಲ್ಪನೆಯೂ ಆಕೆಗೆ ಇಲ್ಲ. ಇದಿಷ್ಟೇ ಆ ದೃಶ್ಯ- ಎನ್ನುತ್ತಾಳೆ ಸ್ವರಾ.
ಇನ್ನೊಬ್ಬ ನೋಡುಗರು ಎತ್ತಿದ ಆಕ್ಷೇಪಗಳಿಗೂ ಸ್ವರಾ ತನ್ನ ಇನ್ನೊಂದು ಟ್ವೀಟ್‌ನಲ್ಲಿ ಉತ್ತರ ನೀಡಿದ್ದಾಳೆ- ಇದು ಜನಪ್ರಿಯ ಪರಿಕಲ್ಪನೆಗಳನ್ನು ಗೇಲಿ ಮಾಡುವ ಒಂದು ದೃಶ್ಯ. ನಮ್ಮ ಸಮಾಜದಲ್ಲಿ ಮಕ್ಕಳ ಸ್ಥಾನದ ಬಗ್ಗೆ ಇರುವ ಪರಿಕಲ್ಪನೆಗಳನ್ನು ಇದು ವ್ಯಂಗ್ಯ ಮಾಡುತ್ತಿದೆ ಹಾಗು ಈ ದೃಶ್ಯದ ಒಳಗಡೆ ಹುದುಗಿರುವ ಅಂತರಾರ್ಥಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಸ್ವರಾ ಉತ್ತರಿಸಿದ್ದಾಳೆ.
ಕರಣ್- ಆಲಿಯಾ ಭಟ್ ಪರ ನಿಂತ ಸ್ವರಾ ಭಾಸ್ಕರ್; ಸುಶಾಂತ್ ಡೆತ್ ನೋಟ್ ಬರ್ದಿದ್ನಾ?...
ಸ್ವರಾ ಭಾಸ್ಕರ್‌ಗೆ ಬಾಲಿವುಡ್‌ನಲ್ಲಿ ಕಂಗನಾ ರನೌತ್, ದೀಪಿಕಾ ಮುಂತಾದವರಿಗೆ ಇರುವ ಬಗೆಯ ಒಂದು ವಿಶಿಷ್ಟ ಸ್ಥಾನವಿದೆ. ಆಕೆ ತನ್ನ ಸೌಂದರ್ಯದಿಂದ ಮಾತ್ರವಲ್ಲ ಬುದ್ಧಿವಂತಿಕೆಯಿಂದಲೂ ಖ್ಯಾತಳಾಗಿದ್ದಾಳೆ. ಹೀಗಾಗಿ ಆಕೆ ಏನು ಹೇಳುತ್ತಾಳೆ ಎಂಬುದನ್ನು ಜನ ಕುತೂಹಲದಿಂದ ನೋಡುತ್ತಾರೆ. ಆದರೆ ಸ್ವರಾ ನೀಡಿದ ಈ ಉತ್ತರದಲ್ಲಿ ವೆಬ್ ಸೀರೀಸ್ ಅನ್ನು ಸಮರ್ಥಿಸುವ ವಾದ ಸರಣಿ ಕಾಣುತ್ತಿದೆಯೇ ಹೊರತು ಸತ್ಯವೇನೂ ಕಾಣಿಸುತ್ತಿಲ್ಲ ಎಂದು ಕೆಲವು ಹೇಳಿದ್ದಾರೆ.
ಸುಶಾಂತ್ ಅಗಲಿಕೆ ನೋವು; ನಾಲ್ವರು ಮಕ್ಕಳ ಆತ್ಮಹತ್ಯೆ ...
ಇಷ್ಟಕ್ಕೂ ಪ್ರಸೂನ್ ಜೋಶಿ ಕೇಳಿದ್ದು, ಕುಡುಕರ ಮುಂದೆ ಹುಡುಗಿ ಕುಣಿಯುವುದನ್ನು ಸಮಾಝ ಹೇಗೆ ನೋಡುತ್ತದೆ ಎಂಬುದನ್ನಲ್ಲ. ಅಂಥ ದೃಶ್ಯವನ್ನು ಸೀರೀಸ್‌ನಲ್ಲಿ ತೋರಿಸಲೇಬೇಕಾದ ಪ್ರಮೇಯ ಇದೆಯೇ, ಅದನ್ನು ಕೈಬಿಟ್ಟರೆ ಏನಾದರೂ ತೊಂಧರೆ ಆಗುತ್ತಿತ್ತೇ, ಇಂಥ ದೃಶ್ಯಗಳಿಂದ ಮಕ್ಕಳನ್ನು ದೂರವಿಡಲು ಸಾಧ್ಯವಿರಲಿಲ್ಲವೇ ಎಂಬ ಅರ್ಥದಲ್ಲಿ. ಈಗಾಗಲೇ ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಅಸಹ್ಯವಾಗಿ ಬಳಸಿಕೊಳ್ಳಲಾಗುತ್ತಿದೆ. ಅಂಥ ಹೊತ್ತಿನಲ್ಲಿ ಇಂಥದೊಂದು ದೃಶ್ಯ ಬೇಕಿತ್ತೇ ಎಂಬುದು ಅದರ ಅಭಿಪ್ರಾಯ. ಇದು ಸ್ವರಾಗೆ ಅರ್ಥವಾಗಿಲ್ಲವೆಂದು ಕಾಣುತ್ತದೆ.
ಟಿಕ್‌ಟಾಕ್ ಸ್ಟಾರ್, ಡ್ಯಾನ್ಸರ್ ಸಿಯಾ ಕಕ್ಕರ್ ಆತ್ಮಹತ್ಯೆ ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.