BB15: ಗೀತಾ ಕಪೂರ್ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು, ಉಮರ್‌ ರಿಯಾಜ್‌ಗೆ ನ್ಯಾಯ ಬೇಕಿದೆ!

By Suvarna NewsFirst Published Jan 11, 2022, 6:01 PM IST
Highlights

ಬಿಗ್ ಬಾಸ್‌ ಟ್ರೋಫಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದ ಸ್ಪರ್ಧಿಯನ್ನು ನ್ಯಾಷನಲ್‌ ಟಿವಿಯಲ್ಲಿ ಅವಮಾನಿಸಿದ ಗೀತಾ ಕಪೂರ್ ವಿರುದ್ಧ ನೆಟ್ಟಿಗರು ಕಿಡಿ. 
 

ಹಿಂದಿ ಜನಪ್ರಿಯ ಬಿಗ್ ಬಾಸ್ ಸೀಸನ್ 15 ರಿಯಾಲಿಟಿ ಶೋನಿಂದ ವೈದ್ಯ ಉಮರ್ ರಿಯಾಜ್ ಎಲಿಮಿನೇಟ್ ಆಗಿದ್ದಾರೆ. ವಿನ್ನರ್ ಟ್ರೋಫಿ ಪಡೆಯುವ ಸಾಮರ್ಥ್ಯ ಇರುವ ಸ್ಪರ್ಧಿ ಇದ್ದಕ್ಕಿದ್ದಂತೆ ಎಲಿಮಿನೇಟ್ ಆಗಿರುವ ವಿಚಾರ ಕೇಳಿ ನೆಟ್ಟಿಗರು, ಮಾಜಿ ಸ್ಪರ್ಧಿ ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಶಾಕ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. 

ವೀಕೆಂಡ್‌ ಕಾರ್ಯಕ್ರಮಕ್ಕೆ ಆಗಮಿಸಿದ ಗೀತಾ ಕಪೂರ್‌ ಉಮರ್‌ ಬಗ್ಗೆ ಕಾಮೆಂಟ್ ಮಾಡುತ್ತಾರೆ. 'ನಿನ್ನಷ್ಟು ಕೋಪ ಇರುವ ವ್ಯಕ್ತಿಗಳಿಂದ ನಾನು ಎಂದೂ ಜೀವನದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ನನಗೆ ಭಯ ಆಗುತ್ತಿದೆ. ನಿನ್ನಂಥವರು ತಾಳ್ಮೆ ಕಳೆದುಕೊಂಡು ನನಗೆ ಏನಾದರೂ ಮಾಡಿದರೆ? ನಿನ್ನ ವೃತ್ತಿ ಜೀವನಕ್ಕೆ ಬೇಕಿರುವಷ್ಟು ತಾಳ್ಮೆ ನಿನಗಿಲ್ಲ,' ಎಂದು ವೇದಿಕೆ ಮೇಲೆ ಮಾತನಾಡಿದ್ದಾರೆ. ಅಂದೇ ಉಮರ್ ಎಲಿಮಿನೇಟ್ ಕೂಡ ಆಗಿದ್ದಾರೆ. ಲೈವ್‌ ಚಾಟ್ ಮಾಡುವ ಮೂಲಕ ರಾಜೀವ್‌ ಮತ್ತು ಹಿಮಾಂಶಿ ಉಮರ್ ಬಗ್ಗೆ ಮಾತನಾಡಿದ್ದಾರೆ. 

Breakup: 5 ವರ್ಷ ಪ್ರೀತಿಗೆ ಬ್ರೇಕ್ ಹಾಕಿದ ನಟಿ Deepthi Sunaina ಮತ್ತು ಬಿಗ್ ಬಾಸ್ Shanmukh Jaswanth!

'ತೇಜಸ್ವಿ ಸ್ವಲ್ಪ ಹೊತ್ತು ಆದರೂ ಕಾಯಬೇಕಿತ್ತು. 24 ಗಂಟೆ ಉಮರ್‌ ನನ್ನ ಬಗ್ಗೆ ಮಾತನಾಡುತ್ತಿದ್ದ, ಎಂದು ತೇಜಸ್ವಿ ಹೇಳಿದ್ದಾರೆ. ಆದರೆ ಅವಳ ಬೆಸ್ಟ್‌ ಫ್ರೆಂಡ್ ಮನೆಯಿಂದ ಹೊರಗಡೆ ಹೋದಾಗ ಆಕೆಗೆ ಏನೂ ಅನಿಸಿಲ್ಲ. ಸುಮ್ಮನೆ ಆದರೂ ಒಂದು ತೊಟ್ಟು ಕಣ್ಣೀರು ಬಂದಿಲ್ಲ. ಅಷ್ಟರಲ್ಲಿ ಉಮರ್ ಬಗ್ಗೆ ಮಾತನಾಡಿಕೊಂಡು ಕೂತಿದ್ದಾಳೆ. ಯಾರೂ ತೇಜಸ್ವಿ ಪರ ನಿಲ್ಲದಿದ್ದಾಗ, ಉಮರ್ ಆಕೆಯನ್ನು ಸಪೋರ್ಟ್ ಮಾಡಿದ್ದಾನೆ. ಆಕೆಯನ್ನು ವಿಐಪಿ ಎಂದು ಆಯ್ಕೆ ಕೂಡ ಮಾಡಿದ್ದ. ಆಕೆಯ ಯಾವುದೇ ಗಿಲ್ಟ್‌ ಇಲ್ಲ, ಅಲ್ಲಿ ರಾಖಿ ಮಾಡಿರುವ ಮೊಟ್ಟೆ ಬ್ರೇಡ್‌ ವಿತರಣೆಯಲ್ಲಿ ಬ್ಯುಸಿಯಾಗಿದ್ದಾಳೆ,' ಎಂದು ರಾಜೀವ್ ಹೇಳಿದ್ದಾರೆ. 

'ತೇಜಸ್ವಿಯಿಂದ ನಾವು ಉಮರ್ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ. ವೀಕೆಂಡ್‌ ಕ ವಾರ್‌ನಲ್ಲಿ ಉಮರ್ ಈವರೆಗೂ ತೇಜಸ್ವಿಯನ್ನು ಸಪೋರ್ಟ್‌ ಮಾಡಿಲ್ಲ, ಎಂದು ಹೇಳಿದ್ದು ದೊಡ್ಡ ತಪ್ಪು. ಆಕೆ ಮನೆಯಲ್ಲಿ ದೊಡ್ಡ ಗೇಮ್ ಆಡುತ್ತಿದ್ದಾಳೆ. ತೇಜಸ್ವಿ ಪರ ಗೀತಾ ಕಪೂರ್ ಕೂಡ ನಿಂತುಕೊಂಡು, ಉಮರ್‌ಗೆ ಮಾತನಾಡುವ ಅವಕಾಶ ಕೂಡ ಕೊಟ್ಟಿಲ್ಲ. ನಾನು ವೈದ್ಯ. ನಾವು ನಮ್ಮ ಕೆಲಸ ಮಾಡುತ್ತೇವೆ, ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳುವುದಿಲ್ಲ ಎಂದು ಉಮರ್ ಉತ್ತರ ನೀಡುವಾಗ, ಗೀತಾ ಕಪೂರ್ ಆತನನ್ನು ತಡೆಯುತ್ತಾರೆ. ಇದು ತಪ್ಪು ಎಂದು ಹಿಮಾಂಶಿ ಹೇಳಿದ್ದಾರೆ. 

Dancing Chamionship ಇಶಿತಾಗೂ ಮುರುಗಾನಂದಗೂ ಯಾವುದೇ ಸಂಬಂಧವಿಲ್ಲ?

'ಶೋನಲ್ಲಿ ಭಾಗವಹಿಸಲು ಉಮರ್ ಸ್ಪರ್ಧಿಯಾಗಿ ಬಂದಿದ್ದು ವೈದ್ಯನಾಗಿ ಅಲ್ಲ. ನಾನು ಟಾಸ್ಕ್ ಮಾಡುವ ವೇಳೆ ಗಾಯಗೊಂಡಾಗ ಉಮರ್ ನನಗೆ ತುಂಬಾನೇ ಸಹಾಯ ಮಾಡಿದ್ದಾರೆ. ನನ್ನ ಬೆನ್ನಿಗೇ ಬಲವಾದ ಪೆಟ್ಟು ಬಿದ್ದಿತ್ತು, ಉಮರ್ ಚಿಕಿತ್ಸೆ ನೀಡಿದ ನಂತರ ನಾನು ಚೇತರಿಸಿಕೊಂಡೆ. ಆತ ಎಂದೂ ನನ್ನ ರೂಟ್ಸ್‌ ಮರೆತು ವರ್ತಿಸಿಲ್ಲ,' ಎಂದು ರಾಜೀವ್ ಹೇಳಿದ್ದಾರೆ.

'ವೈದ್ಯನಾಗಿದ್ದ ಮಾತ್ರಕ್ಕೆ ಕೋಪ ಬರುವುದಿಲ್ಲ, ಎಂದು ಹೇಗೆ ಹೇಳುತ್ತಿರಾ? ಮನುಷ್ಯ ಅಂದ ಮೇಲೆ ಅವರಿಗೂ ಸಾವಿರಾರು ಭಾವನೆಗಳು ಇರುತ್ತವೆ. ನಾವು ಮನೆಯಿಂದ ಹೊರ ಬಂದ ನಂತರ ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡೆವು. ಏಕೆಂದರೆ ಮನೆಯಲ್ಲಿ ನಾವು ಎಲ್ಲಾ ಶ್ರಮವನ್ನು ಹಾಕಿ ಸುಸ್ತಾಗಿದ್ದೆವು. ನಮ್ಮ ಸೀಸನ್‌ನಲ್ಲಿ ನಾವು ಸಾಕಷ್ಟು ಬಾರಿ ಜಗಳ ಕೂಡ ಆಗಿದೆ. ಆಗ ಸಲ್ಮಾನ್ ಸರ್ ಒಂದು ಮಾತು ಹೇಳಿದ್ದರು. ಯಾವುದಾದರೂ ಒಂದು ರೀತಿಯಲ್ಲಿ ಎಲ್ಲರೂ ಎಲ್ಲರನ್ನೂ ನೂಕಿದ್ದೀರಾ. ಹೀಗೆ ನೋಡಿದರೆ ನಾವು ಎಲ್ಲರನ್ನೂ ಎಲಿಮಿನೇಟ್ ಮಾಡಬೇಕು. ಈ ಸೀಸನ್‌ಗೂ ಅದೇ ನ್ಯಾಯ ಇರಬೇಕಿತ್ತು. ಈ ಜನರ ಜೊತೆ ಆತ ಸ್ಪರ್ಧಿ ಅಗರಬಾರದಿತ್ತು. ಬದಲಿಗೆ ವೈದ್ಯನಾಗಿರಬೇಕಿತ್ತು, ಅಷ್ಟು ಸಹಾಯ ಮಾಡಿದ್ದಾರೆ,' ಎಂದು ಹಿಮಾಂಶಿ ಹೇಳಿದ್ದಾರೆ.

click me!