ಸೊಂಟದ ವಿಷ್ಯ ಬೇಡವೋ ಶಿಷ್ಯ, ಅದು ಯಾರದ್ದೇ ಆಗಿರಲಿ ಎಂದು 'ರಾಮಾಚಾರಿ'ಗೆ ಟಿಪ್ಸ್‌ ಕೊಟ್ಟ ನೆಟ್ಟಿಗರು!

Published : Nov 16, 2023, 06:39 PM ISTUpdated : Nov 16, 2023, 06:42 PM IST
ಸೊಂಟದ ವಿಷ್ಯ ಬೇಡವೋ ಶಿಷ್ಯ, ಅದು ಯಾರದ್ದೇ ಆಗಿರಲಿ ಎಂದು 'ರಾಮಾಚಾರಿ'ಗೆ ಟಿಪ್ಸ್‌ ಕೊಟ್ಟ ನೆಟ್ಟಿಗರು!

ಸಾರಾಂಶ

ವೈಶಾಖಾಳನ್ನು ಅಲ್ಲಿ ನೋಡಿ ಅಚ್ಚರಿಗೊಂಡ ರಾಮಾಚಾರಿ ತಾಯಿ 'ಅಲ್ಲ ವೈಶಾಖಾ, 2-3 ದಿನ ತವರುಮನೆಗೆ ಹೋಗ್ತೀನಿ ಅಂದಿದ್ದೆ' ಎನ್ನಲು 'ಅದಾ ಅತ್ತೆ, ನಾನು ಹೋಗೋಕೇನೋ ಹೋಗ್ಬಿಟ್ಟೆ, ಆದ್ರೆ ಮಾವ ಕಣ್ಮುಂದೆ ಬಂದ್ಬಿಟ್ರು, ಅದಕ್ಕೇ ಓಡೋಡಿ ಬಂದೆ' ಎನ್ನಲು ಮಾವನಿಗೆ ಮನಸ್ಸಿನಲ್ಲೇ ಕೋಪ ಉಕ್ಕೇರುವುದು. ಅವಳ ಮಾವನಿಗೆ ಅವಳ ದುಷ್ಟ ಬುದ್ಧಿ ಬಗ್ಗೆ ಗೊತ್ತಿದೆ, ಸದ್ಯಕ್ಕೆ ಮಾತು ಬಾರದೇ ಹೇಳಲಾರ ಅಷ್ಟೇ.

ಚಾರು ಹರಕೆಯಿಂದ ಮಾವನಿಗೆ ಕೈ ಬಂದಿದೆ. ಈ ಕಾರಣಕ್ಕೆ ರಾಮಾಚಾರಿ ತಾಯಿ, ಅಜ್ಜಿ ಸೇರಿದಂತೆ ಮನೆಯಲ್ಲಿ ಎಲ್ಲರೂ ಸಖತ್ ಖುಷಿಯಾಗಿದ್ದಾರೆ. ಆದರೆ, ರಾಮಾಚಾರಿ ಅತ್ತೆಯ ಮಗಳು ವೈಶಾಖಾಗೆ ಮಾತ್ರ ಬೇಸರವಾಗಿದೆ. ತನ್ನ ಪ್ಲಾನ್ ಎಲ್ಲಾ ಉಲ್ಟಾ ಆಯ್ತಲ್ಲಾ ಎಂದು ವೈಶಾಖಾಗೆ ಫುಲ್ ಮೂಡ ಆಫ್ ಆಗಿದೆ. ಆದರೆ, ಡ್ರಾಮಾ ಮಾಡುತ್ತ ಮತ್ತೆ ಮನೆಯೊಳಗೆ ಬಂದ ಆಕೆ, 'ಹಾಗಾದ್ರೆ, ಮಾವಂಗೆ ಮಾತು ಬರ್ಲಿಲ್ವಾ?' ಎಂದು ಕೇಳುತ್ತಾಲೆ. ಅದಕ್ಕೆ ಅವಳ ಅತ್ತೆ 'ಇಲ್ಲ, ಸದ್ಯ ಕೈ ಮಾತ್ರ ಬಂದಿದೆ' ಎನ್ನಲು ವೈಶಾಖಾ 'ಸದ್ಯ ಬಚಾವಾದೆ' ಎಂದು ಒಳಗೊಳಗೇ ಹೇಳಿಕೊಂಡು ಖುಷಿಯಾಗುತ್ತಾಳೆ. 

ವೈಶಾಖಾಳನ್ನು ಅಲ್ಲಿ ನೋಡಿ ಅಚ್ಚರಿಗೊಂಡ ರಾಮಾಚಾರಿ ತಾಯಿ 'ಅಲ್ಲ ವೈಶಾಖಾ, 2-3 ದಿನ ತವರುಮನೆಗೆ ಹೋಗ್ತೀನಿ ಅಂದಿದ್ದೆ' ಎನ್ನಲು 'ಅದಾ ಅತ್ತೆ, ನಾನು ಹೋಗೋಕೇನೋ ಹೋಗ್ಬಿಟ್ಟೆ, ಆದ್ರೆ ಮಾವ ಕಣ್ಮುಂದೆ ಬಂದ್ಬಿಟ್ರು, ಅದಕ್ಕೇ ಓಡೋಡಿ ಬಂದೆ' ಎನ್ನಲು ಮಾವನಿಗೆ ಮನಸ್ಸಿನಲ್ಲೇ ಕೋಪ ಉಕ್ಕೇರುವುದು. ಅವಳ ಮಾವನಿಗೆ ಅವಳ ದುಷ್ಟ ಬುದ್ಧಿ ಬಗ್ಗೆ ಗೊತ್ತಿದೆ, ಸದ್ಯಕ್ಕೆ ಮಾತು ಬಾರದೇ ಹೇಳಲಾರ ಅಷ್ಟೇ. ವೈಶಾಖಾಳನ್ನು ನೋಡಿ ಮಾವ ಉರಿದುಕೊಳ್ಳುತ್ತಿದ್ದರೆ, ವೈಶಾಖಾಗೆ 'ಸದ್ಯ ಮಾವನಿಗೆ ಮಾತು ಬಂದಿಲ್ಲ' ಎಂಬುದೇ ಸಖತ್ ಸಮಾಧಾನ. 'ನನಗೆ ಮಾತು ಬಂದ್ರೆ ನಿನ್ನ ಬಂಡವಾಳನೆಲ್ಲ ಮನೆಯವರ ಮುಂದೆ ಬಯಲು ಮಾಡ್ತೀನಿ' ಎಂದು ಮಾವ ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ. 

ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್; ಅನುಪಮ್ ಖೇರ್ ನಿರ್ದೇಶನದ ಚಿತ್ರದಲ್ಲಿ ನಟಿಸಲೇ ಇಲ್ಲ ಯಾಕೆ?

ಆದರೆ, ವೈಶಾಖಾ ಮಾಡಿರುವ ಕುತಂತ್ರದ ಬಗ್ಗೆ ಗೊತ್ತಿಲ್ಲದ ರಾಮಾಚಾರಿ ಮತ್ತು ಚಾರು ಮಾತ್ರ ತಮ್ಮ ಹರಕೆ ಫಲಿಸಿದ ಖುಷಿಯಲ್ಲೇ ಇದ್ದಾರೆ. ಮಂಚದ ಸಮೀಪಕ್ಕೆ ಹೋಗುವ ಚಾರು ಕುಳಿತುಕೊಳ್ಳಲು ಕಷ್ಟ ಪಡುತ್ತಾಳೆ, ಸೊಂಟದ ಬಳಿ ನೋವು ಎನ್ನುತ್ತಾಳೆ. ಅದನ್ನು ನೋಡಿ ರಾಮಾಚಾರಿ ಸೊಂಟದ ಬಳಿ ನೋಡಲು ಅಲ್ಲಿ, ಮಂಡಿಗಾಲು ಸೇವೆ ಮಾಡುವಾಗ ಹೊಟ್ಟೆಗೆ ಚುಚ್ಚಿರುವ ತೆಂಗಿನಕಾಯಿ ಚಿಪ್ಪಿನ ಚೂರು ಕಾಣಿಸುತ್ತದೆ. ಅದನ್ನು ತೆಗೆಯಲು ರಾಮಾಚಾರಿ ಪ್ರಯತ್ನಿಸಿದಾಗ ಚಾರುಗೆ ಕಚಗುಳಿ ಆಗಿ ಆಕೆ ಮೆಲ್ಲಗೇ ನಗತೊಡಗುತ್ತಾಳೆ. 

ಹೀಗೆ ಅಂತ ಗೊತ್ತಿದ್ದ್ರೆ ನಾನುಬಿಗ್ ಬಾಸ್‌ಗೆ ಹೋಗ್ತಾನೆ ಇರ್ಲಿಲ್ಲ; ರಕ್ಷಕ್ ಬುಲೆಟ್ ಹೇಳಿದ್ದು ಯಾರಿಗೆ, ಯಾಕೆ?

ಮೇಡಂ, ಯಾರಾದರೂ ಕೇಳಿಸಿಕೊಂಡು ಬಿಟ್ಟರೆ ಏನು ಗತಿ ಎಂದು ಹೇಳುವ ರಾಮಾಚಾರಿಗೆ ಚಾರು 'ಪರವಾಗಿಲ್ಲ, ಕಚಗುಳಿ ಆಗ್ತಿದೆ ರಾಮಾಚಾರಿ, ನಿಧಾನವಾಗಿ ತೆಗಿ' ಎನ್ನುವ ಚಾರು ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತ 'ರಾಮಾಚಾರಿ, ಟೇಕ್ ಯುವರ್ ಓನ್ ಟೈಮ್' ಎಂದು ಹೇಳಿ ನಗಲು ರಾಮಾಚಾರಿ ನಾಚಿಕೆಪಡುವನು.  ಚಾರು ಆ ಕ್ಷಣಗಳನ್ನು ಎಂಜಾಯ್ ಮಾಡುವಳು. ಇದೆಲ್ಲವೂ ಪ್ರಮೋದಲ್ಲಿದೆ. ಆದರೆ, ಕಥೆಯಲ್ಲಿ ಏನೇನೆಲ್ಲ ಇದೆ ಎಂಬುದನ್ನು ತಿಳಿಯಲು ಇಂದಿನ ಸಂಚಿಕೆ ನೋಡುಬೇಕಷ್ಟೇ. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.00ಕ್ಕೆ ರಾಮಾಚಾರಿ ಸೀರಿಯಲ್ ಪ್ರಸಾರವಾಗುತ್ತಿದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!