
ದೀಪಾವಳಿ ಹಬ್ಬದ ಖುಷಿಗಾಗಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಮನೆಯಡುಗೆ ಕೊಟ್ಟು ಕಳಿಸಿದ್ದರು. ಇದೀಗ ಮನೆಯವರಿಂದ ಬಂದ ಪತ್ರಗಳನ್ನೂ ಕೊಡುತ್ತಿದ್ದಾರೆ. ಆದರೆ ಮನೆಯಡುಗೆ ತಿಂದಷ್ಟು ಸುಲಭವಾಗಿ ಪತ್ರಗಳು ಸ್ಪರ್ಧಿಗಳ ಕೈಗೆ ಸಿಗುತ್ತಿಲ್ಲ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್‌ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡುವುದಾಗಿ ಹೇಳಿದ್ದಾರೆ.
ಈಗಾಗಲೇ ವಿನಯ್ ಗೌಡ ಮತ್ತು ನಮ್ರತಾ ಮನೆಯಿಂದ ಬಂದ ಪತ್ರಗಳನ್ನು ಪಡದುಕೊಳ್ಳಲು ಯಶಸ್ವಿಯಾಗಿದ್ದಾರೆ. ಕೆಲವು ಸದಸ್ಯರು ಪತ್ರಗಳನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಇನ್ನುಳಿದ ಸದಸ್ಯರ ಅದೃಷ್ಟಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ. ಇಂದು ಬಿಗ್‌ಬಾಸ್ ಮನೆಯಲ್ಲಿ ಇನ್ನಷ್ಟು ಜನರಿಗೆ ಪತ್ರ ಪಡೆದುಕೊಳ್ಳಲು ಟಾಸ್ಕ್ ನೀಡಿದ್ದಾರೆ. ಟಾಸ್ಕ್ ಏನೋ ತುಂಬ ಸಿಂಪಲ್ ಆಗಿ ಕಾಣಿಸುತ್ತಿದೆ.
ಗುಂಡಣ್ಣನ ಕನಸು ನಿಜ ಆಗುವುದೇ, ನಿಜ ಆಗೋದಕ್ಕೆ ಶ್ರೇಷ್ಠ ಬಿಡುವಳೇ; ಭಾಗ್ಯಲಕ್ಷ್ಮೀಗೆ ಪಾನಿಪುರಿ ಯೋಗ ಇದ್ಯಾ?
ಕನ್‌ಫೆಷನ್ ರೂಮಲ್ಲಿ ಕೂತ ಇಬ್ಬರು, ಬಿಗ್‌ಬಾಸ್ ಮನೆಯ ಕುರಿತಾಗಿಯೇ ಕೇಳುವ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಪ್ರಶ್ನೆಗಳು ಎಷ್ಟು ಸರಳವಾಗಿವೆಯೆಂದರೆ, ಪ್ರತಿದಿನವೂ ಅದನ್ನು ನೋಡುತ್ತ, ಬಳಸುತ್ತಲೇ ಇದ್ದರೂ ಅದು ಸ್ಪರ್ಧಿಗಳ ಗಮನಕ್ಕೆ ಬಂದಿಲ್ಲ. ಹಾಗಾಗಿಯೇ ಉತ್ತರ ಕೊಡುವುದೂ ಕಷ್ಟವಾಗಿದೆ.ಆದರೆ, ಸ್ವಲ್ಪ ಎಚ್ಚರಿಕೆಯಿಂದ ಗಮನಿಸದರೆ ಉತ್ತರ ಕೊಡುವುದು ಕಷ್ಟವೇನೂ ಅಲ್ಲ ಎನ್ನಬಹುದು.
ಹೀಗೆ ಅಂತ ಗೊತ್ತಿದ್ದ್ರೆ ನಾನುಬಿಗ್ ಬಾಸ್‌ಗೆ ಹೋಗ್ತಾನೆ ಇರ್ಲಿಲ್ಲ; ರಕ್ಷಕ್ ಬುಲೆಟ್ ಹೇಳಿದ್ದು ಯಾರಿಗೆ, ಯಾಕೆ?
ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಯಾರು ಗೆಲ್ಲುತ್ತಾರೆ? ಯಾರ ಮನೆಯಿಂದ ಬಂದ ಪತ್ರ ಸ್ಪರ್ಧಿಗಳ ಕೈಸೇರುತ್ತದೆ? ಯಾರು ನಿರಾಸೆಯಲ್ಲಿ ಮುಳುಗಬೇಕಾಗುತ್ತದೆ? ಕಲರ್ಸ್ ಕನ್ನಡದ ಸಂಚಿಕೆ ಪ್ರಸಾರ ಹಾಗೂ ಜಿಯೋ ಸಿನಿಮಾ 24 ಗಂಟೆ ನೇರ ಪ್ರಸಾರದ ಮೂಲಕ ಯಾರು ಯಾರು ಮನೆಯಿಂದ ಬಂದ ಪತ್ರಗಳನ್ನು ಪಡೆಯಲು ಸಫಲರಾದರು ಎಂಬುದನ್ನು ವೀಕ್ಷಕರು ಮತ್ತು ಬಿಗ್ ಬಾಸ್ ಪ್ರಿಯರು ತಿಳಿಯಬಹುದು.
ಎಲ್ಲವನ್ನೂ ವೀಕ್ಷಿಸಲು'JioCinema'ದಲ್ಲಿ ಬಿಗ್‌ಬಾಸ್ ಕನ್ನಡ ವೀಕ್ಷಿಸುತ್ತಿರಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.