ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡಿದ್ದ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರು ಅಪ್ಪ-ಅಮ್ಮ ಆಗ್ತಿದ್ದಾರಾ? ವೈದ್ಯಕೀಯ ಫಲಿತಾಂಶಕ್ಕೆ ಕಾತರ!
ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್ ಸುದ್ದಿಯಲ್ಲಿದ್ದಾರೆ. ಈ ಸಲದ ಬಿಗ್ ಬಾಸ್ ಉಳಿದ ಸೀಸನ್ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ ಕಾರಣ ಇವರಿಬ್ಬರ ಕಚ್ಚಾಟ. ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾ-ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ವಿಕ್ಕಿ ಜೈನ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೆ, ಅತ್ತ ಇಂಟರ್ನೆಟ್ ಬಳಕೆದಾರರು ಕಿಡಿ ಕಾರಿದ್ದರು.
ರೀಲ್ ಲೈಫ್‌ನಲ್ಲಿ ಸಖತ್ ಬಾಂಡಿಂಗ್ ಇರೋ ಜೋಡಿಯೆಂದು ಗುರುತಿಸಿಕೊಂಡಿದ್ದ ಈ ಕಪಲ್ ಬಿಗ್‌ಬಾಸ್ ಮನೆಯೊಳಗೆ ಕಿತ್ತಾಡಿಕೊಳ್ಳುತ್ತಿದ್ದುದರಿಂದ ಬಿಗ್ ಬಾಸ್ ಮನೆಯಿಂದ ಹೊರ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅಷ್ಟಕ್ಕೂ ಬಿಗ್‌ಬಾಸ್ ಮನೆಯಲ್ಲಿ ಏನೇ ಆದರೂ ಅದರಲ್ಲಿ ಹೆಚ್ಚಿನ ಪಾಲು ಪೂರ್ವ ನಿಗದಿತ ಅರ್ಥಾತ್ ಸ್ಕ್ರಿಪ್ಟೆಡ್ ಎನ್ನುವ ಸತ್ಯ ಬಹುತೇಕ ಪ್ರೇಕ್ಷಕರಿಗೆ ಅರ್ಥವಾಗಿದೆ. ಅದೇನೇ ಇದ್ದರೂ, ಇಲ್ಲಿ ಈ ದಂಪತಿಯ ಕಿತ್ತಾಟ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿತ್ತು. ಬಿಗ್‌ಬಾಸ್ ಮನೆಯಲ್ಲಿ ಪತಿ ಹತ್ತಿರವೇ ಇದ್ದರೂ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ಅಂಕಿತಾ ಕಣ್ಣೀರು ಹಾಕಿದ್ದರು. ನಾನು ಯಾಕೆ ಇಲ್ಲಿ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ನನಗೆ ಗೊತ್ತಾಗುತ್ತಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆ ಇದ್ದಿಯ. ಆದರೆ ನನ್ನ ಜೊತೆ ಮಾತ್ರ ಇಲ್ಲ. ಅದನ್ನು ನಾನು ಫೀಲ್ ಮಾಡುತ್ತಿದ್ದೇನೆ ಎಂದು ಪ್ರೇಕ್ಷಕರ ಎದುರು ಕಣ್ಣೀರು ಇಟ್ಟಿದ್ದರು.
ಇವೆಲ್ಲಾ ಡ್ರಾಮಾಗಳ ನಡುವೆಯೇ ಈಗ ಸ್ವೀಟ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನೆಂದರೆ ಅಂಕಿತಾ ಅವರು ಗರ್ಭಿಣಿ ಇರಬಹುದು ಎಂದು ಊಹಿಸಲಾಗುತ್ತಿದೆ. ಇದರ ಪ್ರೊಮೋ ಒಂದು ರಿಲೀಸ್ ಆಗಿದ್ದು, ಬಹುಶಃ ಅಂಕಿತಾ ಗರ್ಭಿಣಿ ಎನ್ನಲಾಗುತ್ತಿದೆ. ಅಂಕಿತಾ ಅವರು, ತಮಗೆ ಹುಳಿ ತಿನಬೇಕೆಂದು ಅನಿಸುತ್ತಿದೆ ಎಂದಿದ್ದಾರೆ. ಅದರ ಜೊತೆಗೆ ಈ ಬಾರಿ ತಮಗೆ ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದು, ಬಹುಶಃ ಆಕೆ ಗರ್ಭಿಣಿ ಎಂದು ಈ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗ್ತಿದೆ. ಅಷ್ಟೇ ಅಲ್ಲದೇ, ಕುಟುಂಬ ಸದಸ್ಯರು ಆಕೆಯೊಂದಿಗೆ ಗರ್ಭಧಾರಣೆಯ ಬಗ್ಗೆ ಮಾತನಾಡುತ್ತಿರುವುದನ್ನೂ ಪ್ರೊಮೋದಲ್ಲಿ ಕೇಳಬಹುದು.
ಈಗ ರಿಲೀಸ್ ಆಗಿರುವ ಪ್ರೊಮೋದಲ್ಲಿ ಅಂಕಿತಾ ಅವರು, ನಾನು ಸುಳ್ಳು ಹೇಳುತ್ತಿಲ್ಲ. ಏನೋ ಸಮಸ್ಯೆ ಆಗುತ್ತಿದೆ ಎನ್ನಿಸ್ತಿದೆ. ಹುಳಿ ತಿನ್ಬೇಕು ಅನಿಷ್ತಿದೆ. ನನಗೆ ತುಂಬಾ ಭಯವಾಗ್ತಿದೆ ಎಂದಿದ್ದಾರೆ. ಇದರ ಜೊತೆ ಗರ್ಭಧಾರಣೆಯ ಬಗ್ಗೆ ಮಾತನಾಡಿರುವ ಅವರು, ತಾವು ಗರ್ಭಿಣಿ ಹೌದೋ ಅಲ್ಲವೋ ಎಂದು ತಿಳಿಯಲು ಮೂತ್ರ ಪರೀಕ್ಷೆ ಮಾಡಿಸುವ ಬಗ್ಗೆ ಹೇಳಿದ್ದಾರೆ. ಒಟ್ಟಿನಲ್ಲಿ ಏನೋ ಗೊಂದ; ಆಗ್ತಿದೆ ಎಂದಿದ್ದಾರೆ. ಅದಾದ ಬಳಿಕ ವೈದ್ಯಕೀಯ ಪರೀಕ್ಷೆಯೂ ನಡೆದಿದ್ದು, ಅದರ ಫಲಿತಾಂಶಕ್ಕೆ ಕಾಯಲಾಗುತ್ತಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಅಂಕಿತಾ ಅವರು ಗರ್ಭಿಣಿಯಾಗಿದ್ದೇ ಹೌದಾದರೆ, ಬಿಗ್ಬಾಸ್ನ ಇತಿಹಾಸದಲ್ಲಿ ಇದೇ ಮೊದಲು ಈ ರೀತಿ ಆಗಿದ್ದು ಎಂದು ಹೇಳಲಾಗುತ್ತಿದೆ.
ಮಕ್ಕಳು ಬೇಕಂತ ಸೈಫ್ನ ಮದ್ವೆಯಾದೆ... ಇಲ್ಲದಿದ್ರೆ... ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಕರೀನಾ ಕಪೂರ್!