ಹಳೆ ಚಾರು ವಾಪಸ್ ಬಂದ್ಲಾ? ರಾಮಾಚಾರಿ ಗ್ರಹಚಾರ ಕೆಟ್ಟಿದೆ ಎಂದ ನೆಟ್ಟಿಗರು

By Vaishnavi ChandrashekarFirst Published Apr 19, 2023, 11:35 AM IST
Highlights

ರಾಮಾಚಾರಿ ಮೇಲೆ ಪ್ರೀತಿ ಕಡಿಮೆ ಆಗಿ ದ್ವೇಷ ಕಟ್ಟಲು ಮುಂದಾದ ಚಾರು. ಮದುವೆ ಮುರಿಯಲು ಕಾರಣವೇನು?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಣ್ಣು ಕಳೆದುಕೊಂಡ ಚಾರುಗೆ ಬಾಳು ಕೊಡಲು ಮುಂದಾದ ರಾಮಚಾರಿ ಈಗ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ. ಮನೆಯಲ್ಲಿ ಮದುವೆ ಮಾಡಿಕೊಂಡು ಬಂದಿರುವ ಅಣ್ಣನ ಪರಿಸ್ಥಿತಿ ನೋಡಿ ಫುಲ್ ಶಾಕ್ ಆಗಿದ್ದಾನೆ ಚಾರಿ. ಮದುವೆ ಮುರಿಯುವ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾಳಾ ಚಾರು? 

ಕಣ್ಣಿಲ್ಲದೆ ನನ್ನ ಜೀವನ ಹೇಗೆ ಎಂದು ಯೋಚನೆ ಮಾಡುತ್ತಿದ್ದ ಚಾರುಗೆ ಬೆಟ್ಟದ ಮೇಲೆ ತಾಳಿ ಕಟ್ಟಿ ಗಂಡ ಅನ್ನೋ ಪಟ್ಟ ತೆಗೆದುಕೊಂಡ ರಾಮಚಾರಿ ಮನೆಯವರಿಂದ ಈ ಸತ್ಯವನ್ನು ಮುಚ್ಚಿಟ್ಟಿದ್ದಾರೆ. ಇದ್ದಕ್ಕಿದ್ದಂತೆ ಮದುವೆ ಮಾಡಿಕೊಂಡು ಹೆಂಡತಿಯನ್ನು ಕರೆದುಕೊಂಡು ಬಂದಿರುವ ಅಣ್ಣ ಕೋದಂಡ ಪರಿಸ್ಥಿತಿ ನೋಡಿ ಶಾಕ್ ಆಗಿದ್ದಾರೆ. ಮನಸ್ಸಿಲ್ಲದಿದ್ದರೂ ಒತ್ತಾಯದಿಂದ ವೈಶಾಖಾರನ್ನು ಸೊಸೆಯಾಗಿ ಸ್ವೀಕರಿಸಿದ್ದಾರೆ. ಕುಟುಂಬಕ್ಕೆ ಮೊದಲ ಆಧ್ಯತೆ ನೀಡುವ ರಾಮಚಾರಿ ಮದುವೆ ಮುರಿಯಲು ಮುಂದಾಗಿದ್ದಾರೆ. ಆದರೆ ಚಾರು ಕೇಳುವ ಪ್ರಶ್ನೆಗೆ ಉತ್ತರ ಇದ್ಯಾ? 

Latest Videos

ಚಾರುನ ಎತ್ಕೊಂಡು ದೇವಸ್ಥಾನದ ಮೆಟ್ಟಿಲೇರ್ತಾನ ರಾಮಾಚಾರಿ : ಮದ್ವೆ ಗುಟ್ಟು ರಟ್ಟಾಗುತ್ತಾ?

'ಗಂಭಿರವಾಗಿರುವ ರಾಮಚಾರಿ ನನಗೆ ಇಷ್ಟ ಆಗುವುದಿಲ್ಲ. ಗಂಡನನ್ನು ಮರೆಯುವುದಕ್ಕೆ ಇಷ್ಟವಿಲ್ಲ. ನನ್ನ ಕುತ್ತಿಗೆಗೆ ತಾಳಿ ಕಟ್ಟಿರುವುದು ಯಾಕೆ? ಗಂಡ- ಹೆಂಡತಿ ಆಗುವುದಕ್ಕೆ ಯಾವ ಸಂದರ್ಭನೂ ಅಲ್ಲ ಕಾರಣನೂ ಅಲ್ಲ ಅದು ಋಣಕ್ಕೆ. ತಾಳಿ ಸಂಬಂಧ ಮುಗಿಯುವ ಋಣ ಅಲ್ಲ ಜನ್ಮ ಜನ್ಮಕ್ಕೂ ಆಗುವ ಅನುಭಂದ. ನಿನಗೆ ಇಷ್ಟ ಬಂದ ಹಾಗೆ ಬೇಕು ಬೇಡ ಅನ್ನೋಕೆ ಆಗಲ್ಲ. ಒಂದು ಸಲ ತಾಳಿ ಕಟ್ಟಿದ ಮೇಲೆ ಮುಗಿಯಿತ್ತು' ಎಂದು ಚಾರು ಪ್ರಶ್ನೆ ಮಾಡಿದ್ದಾರೆ.

'ನೀನು ಧೈರ್ಯ ಮಾಡಿ ಮನೆಯವರ ಮುಂದೆ ನಿಂತುಕೊಂಡರೆ ನಮ್ಮ ಸಂಬಂಧ ಗಟ್ಟಿಯಾಗುತ್ತದೆ ಎಲ್ಲವೂ ಶುರುವಾಗುತ್ತದೆ. ಆಗ ನಾನು ನಿನ್ನ ಹೆಂಡತಿ ಆಗುತ್ತೀನಿ ನಿಮ್ಮ ಮನೆಯ ಸೊಸೆ ಅಗುತ್ತೀನಿ. ರಾಮಚಾರಿ ಜೀವನದಲ್ಲಿ ನನಗೆ ಜಾಗ ಕೊಟ್ಟಿಲ್ಲ ಅಂದ್ಮೇಲೆ 3 ಎಳೆ ಇರುವ ಜನಿವಾರ ಯಾಕೆ 6 ಎಳೆ ಆಯ್ತು? ಮೂರಕ್ಕೆ ಮೂರು ಎಳೆ ಸೇರಿಸಿಕೊಂಡಿದ್ದು ನನ್ನ ಕಾರಣಕ್ಕೆ. ಬಿಚ್ಚಿ ಬಿಸಾಡಲು ತಾಳಿ ಒಡವೆ ಮಾತ್ರವಲ್ಲ ಅದಕ್ಕೊಂದು ಬೆಲೆ ಇದೆ' ಎಂದು ಚಾರು ಹೇಳಿದ್ದಾರೆ. 

ರಾಮಾಚಾರಿ, ಸತ್ಯ ಹೇಳಿದ್ರೆ ಸಾಯ್ತೀನಿ ಅಂತಿದ್ದಾಳೆ ಚಾರು, ರಾಮಚಾರಿ ಏನ್ಮಾಡಬೇಕು ನೀವೇ ಹೇಳಿ?

ಚಾರು ಯಾವ ಮಾತಿಗೂ ರಾಮಚಾರಿ ಒಪ್ಪಿಕೊಳ್ಳಲು ರೆಡಿಯಾಗಿಲ್ಲ. ಆಫೀಸ್‌ನಲ್ಲಿ ಕೆಲಸದ ಬಗ್ಗೆ ಮಾತ್ರ ಮಾತನಾಡಬೇಕು ಮದುವೆ ಸಂಸಾರದ ಕಥೆ ಅಲ್ಲ ಒಂದು ವೇಳೆ ಗಂಡ ಗಂಡ ಅಂತ ಬಂದ್ರೆ ನಾನು ಆಫೀಸ್‌ನಿಂದ ಹೊರ ಕಳುಹಿಸಬೇಕಾಗುತ್ತದೆ ಎಂದು ಚಾರಿ ಹೇಳಿದ್ದರೂ ಚಾರು ಕೇಳುವುದಿಲ್ಲ. ಇಷ್ಟೆಲ್ಲಾ ಸೀನ್ ಆದ್ಮೇಲೆ ಸುಮ್ಮನೆ ಇರುವ ವ್ಯಕ್ತಿನೇ ಅಲ್ಲ ಚಾರು..ಹೀಗಾಗಿ ತಮ್ಮ ಹಳೆ ಹಠ ದ್ವೇಷ ಶುರು ಮಾಡಲು ಮುಂದಾಗಿದ್ದಾರೆ. 

ಚಾರು-ಚಾರಿ ಲವ್ ಸ್ಟೋರಿ ಅದ್ಬುತವಾಗಿತ್ತು ಅದನ್ನು ಕೆಲವು ತಿಂಗಳು ಮುಂದುವರೆಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಅಪರ್ಣ ಸ್ಥಾನಕ್ಕೆ ಬಂದಿರುವ ವೈಶಾಖಾ ಸ್ವಲ್ಪ ಕಡಿಮೆ ಎಕ್ಸಪ್ರೆಶನ್‌ ಕೊಡಲು ಹೇಳಿ. ಎಲ್ಲವೂ ಓವರ್ ಅಗಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ಹಂಚುಕೊಳ್ಳುತ್ತಿದ್ದಾರೆ.

 

click me!