Weekend With Ramesh: ಈ ವಾರ ಸಾಧಕರ ಕುರ್ಚಿಯಲ್ಲಿ ಮಂಡ್ಯ ರಮೇಶ್ ಮತ್ತು ಅವಿನಾಶ್ ಇಬ್ಬರು ಅತಿಥಿಗಳು ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿರುವ ಶೋಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಒಂದು. ರಮೇಶ್ ಅರವಿಂದ್ ನಡೆಸಿಕೊಡುವ ಈ ಶೋ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಸೀಸನ್ 5 ಪ್ರಾರಂಭವಾಗಿದ್ದು ಈಗಾಗಲೇ 5 ಅತಿಥಿಗಳು ವೀಕೆಂಡ್ ಕುರ್ಚಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಪ್ರಭುದೇವ, ಡಾ.ಮಂಜುನಾಥ್, ಹಿರಿಯ ನಟ ದತ್ತಣ್ಣ ಹಾಗೂ ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿ ಏರಿದ್ದಾರೆ. ಈ ಬಾರಿಯ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಜೀ ಕನ್ನಡ ವಾಹಾನಿ ಈ ಬಾರಿಯ ಅತಿಥಿ ಯಾರು ಎನ್ನುವುದನ್ನು ಬ್ಲರ್ ಫೋಟೋ ಮೂಲಕ ರಿವೀಲ್ ಮಾಡಿದೆ.
ಈ ವಾರ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವುದು ಒಬ್ಬರು ಫನ್ ಲವ್ವಿಂಗ್ ನಟನೆ ಮತ್ತೊಬ್ಬರದ್ದು ಖಡಕ್ ಅಭಿನಯ. ಹೀಗಂದ್ರೆ ಯಾರು ಅಂತೀರಾ ಮತ್ಯಾರು ಅಲ್ಲ ಖ್ಯಾತ ನಟ ಮಂಡ್ಯ ರಮೇಶ್ ಮತ್ತು ಅವಿನಾಶ್. ಹೌದು ಈ ವಾರ ವೀಕೆಂಡ್ ಕೆಂಪು ಕುರ್ಚಿಯಲ್ಲಿ ಖ್ಯಾತ ನಟರಾದ ಅವಿನಾಶ್ ಮತ್ತು ಮಂಡ್ಯ ರಮೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಸದ್ಯ ಝೀ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಅತಿಥಿಗಳ ಬ್ಲರ್ ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಇಬ್ಬರೂ ನಟರ ಹೆಸರನ್ನು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಹೆಂಡತಿ ಲಕ್ ತಂದುಕೊಡ್ತಾಳೆ; ಧನಂಜಯ್ ಮದುವೆ ಬಗ್ಗೆ ಶಿವಣ್ಣ ಹೇಳಿಕೆ ವೈರಲ್
ಮಂಡ್ಯ ರಮೇಶ್
ರಂಗಭೂಮಿ ಕಲಾವಿದರ ಮತ್ತು ಖ್ಯಾತ ಸಿನಿಮಾ ನಂಟ ಮಂಡ್ಯ ರಮೇಶ್ ಅವರನ್ನು ವೀಕೆಂಡ್ ಕಾರ್ಯಕ್ರಮದಲ್ಲಿ ನೋಡಲು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಂಗಭೂಮಿ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಮಂಡ್ಯ ರಮೇಶ್ 1995ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಶಿವರಾಜ್ ಕುಮಾರ್ ನಟನೆಯ ಜನುಮದ ಜೋಡಿ ಸಿನಿಮಾ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಿದರು. ಸಿನಿಮಾ ಜೊತೆಗೆ ರಂಗಭೂಮಿಯಲ್ಲೂ ಸಕ್ರೀಯರಾಗಿರುವ ಮಂಡ್ಯ ರಮೇಶ್ ನಟನ ಶಾಲೆಯನ್ನು ಪ್ರಾರಂಭಿಸಿದ್ದಾರೆ. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮಂಡ್ಯ ರಮೇಶ್ ಸಿನಿಮಾರಗಂದಲ್ಲೂ ದೊಡ್ಡ ಸಾಧನೆ ಮಾಡಿದ್ದಾರೆ. ಇಂಥ ಸಾಧಕರನ್ನು ಈ ಬಾರಿ ಕೆಂಪು ಕುರ್ಚಿಯಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
'ಧನಂಜಯ್ ಮುಗ್ಧ ಅಲ್ಲ ಸಿಕ್ಕಾಪಟ್ಟೆ ಪೋಲಿ' ಎಂದ ಕಾಂತಾರ ನಟಿ ಸಪ್ತಮಿ ಗೌಡ
ನಟ ಅವಿನಾಶ್
ನಟ ಅವಿನಾಶ್ ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಪೋಷಕ ನಟರಾಗಿ ಖ್ಯಾತಿಗಳಿಸಿರುವ ನಟ ಅವಿನಾಶ್ ಇಂದಿಗೂ ಅಷ್ಟೆ ಬೇಡಿಕೆಯ ನಟ. ರಂಗಭೂಮಿ ಮೂಲಕವೇ ವೃತ್ತಿ ಜೀವನ ಪ್ರಾರಂಭಿಸಿದ ಅವಿನಾಶ್ ಬಳಿಕ ಸಿನಿಮಾ ಕಡೆ ಮುಖ ಮಾಡಿದರು. 1986ರಲ್ಲಿ ಅವಿನಾಶ್ ಮಾವಳ್ಳಿ ಸರ್ಕಲ್ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ಈಗಲೂ ರಂಜಿಸುತ್ತಿದ್ದಾರೆ. ಸದ್ಯ ಅವನಾಶ್ ಅವರನ್ನು ವೀಕೆಂಡ್ ಕುರ್ಚಿಯಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.