ಡಿವೋರ್ಸ್​ ಬಳಿಕ ಕೋರ್ಟ್​ನಲ್ಲಿ ನಿವೇದಿತಾರ ಕೈಹಿಡಿದು ಬಂದದ್ದೇಕೆ? ಕಾರಣ ಕೊಟ್ಟ ಚಂದನ್​ ಶೆಟ್ಟಿ

Published : Jul 15, 2024, 03:55 PM IST
ಡಿವೋರ್ಸ್​ ಬಳಿಕ ಕೋರ್ಟ್​ನಲ್ಲಿ ನಿವೇದಿತಾರ ಕೈಹಿಡಿದು ಬಂದದ್ದೇಕೆ? ಕಾರಣ ಕೊಟ್ಟ ಚಂದನ್​ ಶೆಟ್ಟಿ

ಸಾರಾಂಶ

ಡಿವೋರ್ಸ್​ ಬಳಿಕ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಕೈಕೈಹಿಡಿದು ಕೋರ್ಟ್​ ಹಾಲ್​ನಿಂದ ಹೊರಕ್ಕೆ ಬಂದಿದ್ದೇಕೆ? ಕಾರಣ ಹೇಳಿದ ಚಂದನ್​  ಶೆಟ್ಟಿ.   

ಗಾಯಕ ಚಂದನ್​ ಶೆಟ್ಟಿ ಮತ್ತು ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಡಿವೋರ್ಸ್​ ಆಗಿ ಒಂದೂವರೆ ತಿಂಗಳಾಗಿದೆ. ಗಲಾಟೆ, ಗದ್ದಲ, ಕೂಗಾಟ, ಕಿರುಚಾಟ, ಮಾಧ್ಯಮಗಳ ಮುಂದೆ ಬಂದು ಪರಸ್ಪರ ಆರೋಪ... ಹೀಗೆ ಏನೂ ಇಲ್ಲದೇ ಯಾರಿಗೂ ತಿಳಿಯದಂತೆ ಫ್ರೆಂಡ್ಲಿ ಡಿವೋರ್ಸ್​ ಎನ್ನುವ ರೀತಿಯಲ್ಲಿ ವಿಚ್ಛೇದನ ಮಾಡಿಕೊಂಡ ದಂಪತಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು. ಪರಸ್ಪರ ಆರೋಪ- ಪ್ರತ್ಯಾರೋಪ ಮಾಡದೇ, ಡಿವೋರ್ಸ್​ಗೆ ನಿಜವಾದ ಕಾರಣವನ್ನೂ ಎಲ್ಲಿಯೂ ಬಹಿರಂಗಪಡಿಸದೇ, ಕೇವಲ ಇಬ್ಬರ ನಡುವೆ ಅಂಡರ್​ಸ್ಟ್ಯಾಂಡಿಂಗ್​ ಇರಲಿಲ್ಲ ಎಂದಷ್ಟೇ ಹೇಳುವ ಮೂಲಕ ಮೌನದಿಂದಲೇ ವಿಚ್ಛೇದನ ಪಡೆದ ಈ ದಂಪತಿ ಒಂದು ರೀತಿಯಲ್ಲಿ ಎಲ್ಲರಿಗೂ ಮಾದರಿ ಕೂಡ ಆಗಿದ್ದಾರೆ.

ಅದೇ  ಇನ್ನೊಂದೆಡೆ, ಅತ್ತ ನಿವೇದಿತಾ ತಮ್ಮ ಎಂದಿನ ರೀಲ್ಸ್​ ಮುಂದುವರೆಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ. ಮುಂಚಿಗಿಂತಲೂ ಇನ್ನೂ ಸೆಕ್ಸಿಯಾಗಿ ರೀಲ್ಸ್​ ಮಾಡುವ ಮೂಲಕ ಬೇರೆ ರೀತಿಯಲ್ಲಿ ಟ್ರೋಲ್​ಗೂ ಒಳಗಾಗುತ್ತಿದ್ದಾರೆ. ಜೊತೆಗೆ ಚಂದನ್​ ಶೆಟ್ಟಿಯಂಥ ಗಂಡನನ್ನು ಬಿಟ್ಟಿರುವುದಕ್ಕೆ ನಿವೇದಿತಾನೇ ಕಾರಣ ಎಂಬ ಅರ್ಥದಲ್ಲಿ ಸಾಕಷ್ಟು ಟೀಕೆಗಳನ್ನೂ ಮಾಡಲಾಗುತ್ತಿದೆ. ಅದೇ ಇನ್ನೊಂದೆಡೆ ಚಂದನ್​ ಶೆಟ್ಟಿಯವರು ತಮ್ಮ ಸಿನಿ ಪಯಣದತ್ತ ಗಮನ ಹರಿಸಿದ್ದಾರೆ. ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಇದರಲ್ಲಿ ತಮ್ಮ ಭವಿಷ್ಯ ಅಡಗಿದೆ ಎಂದು ಚಂದನ್​ ಹೇಳಿಕೊಂಡಿದ್ದಾರೆ.

ಡಿವೋರ್ಸ್​ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್​ ಶೆಟ್ಟಿ

ಇವೆಲ್ಲವುಗಳ ನಡುವೆಯೇ, ಅಂದು ಡಿವೋರ್ಸ್​ ಪಡೆದ ಬಳಿಕ ಈ ಜೋಡಿ ಕೈಕೈ ಹಿಡಿದು ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ಡಿವೋರ್ಸ್​ ಪಡೆದದ್ದು ನಿಜವೋ ಹೌದೋ ಅಲ್ಲವೋ ಎಂಬ ರೀತಿಯಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದರು. ಆದರೆ ಅಂದು ತಾವು ಆ ರೀತಿ ಏಕೆ ಮಾಡಿದ್ದು ಎಂಬ ಬಗ್ಗೆ ಚಂದನ್​ ಶೆಟ್ಟಿ ಮಾಧ್ಯಮವೊಂದರಲ್ಲಿ ಈಗ ತಿಳಿಸಿದ್ದಾರೆ. ಮಾಜಿ ಪತ್ನಿಯ ಬಗ್ಗೆ ಚಂದನ್ ಅವರಿಗೆ ಇದ್ದ ಕಾಳಜಿ, ಅವರಾಡಿದ ಮಾತುಗಳಿಂದ ಫ್ಯಾನ್ಸ್​ ಭಾವುಕರಾಗಿದ್ದಾರೆ. ಅಷ್ಟಕ್ಕೂ ಅಂದು ಡಿವೋರ್ಸ್​ ಬಳಿಕ ಕೈಕೈ ಹಿಡಿದು ಬಂದದ್ದೇಕೆ ಎಂಬ ಕಾರಣವನ್ನು ಅವರು ಹೇಳಿದ್ದಾರೆ.  ಡಿವೋರ್ಸ್​ ಎನ್ನುವುದು ಎಲ್ಲರಂತೆಯೇ ನಮಗೂ ಏನೂ ಖುಷಿಯ ವಿಚಾರ ಆಗಿರಲಿಲ್ಲ. ಆದರೆ ಅನಿವಾರ್ಯ ಆಗಿರುವ ಕಾರಣ ವಿಚ್ಛೇದನ ಪಡೆಯಬೇಕಾಯಿತು. ಹಾಗಂತ ನಾಲ್ಕು ವರ್ಷ ನಾವು ನಡೆಸಿದ ಜೀವನ ಏನೂ ಸುಳ್ಳಲ್ಲ. ಡಿವೋರ್ಸ್​ ಪಡೆದೆ ಎನ್ನುವ ಕಾರಣಕ್ಕೆ ನಿವೇದಿತಾರನ್ನು ಅಂದು ಒಂಟಿಯಾಗಿ ಬಿಟ್ಟು ಬಿಡುವುದು ನನಗೆ ಇಷ್ಟ ಇರಲಿಲ್ಲ ಎಂದಿದ್ದಾರೆ.

'ನಿಮಗೆಲ್ಲಾ ಗೊತ್ತಿರುವಂತೆ ಅಂದು ನಾವಿಬ್ಬರೇ ಕೋರ್ಟ್​ಗೆ ಹೋಗಿದ್ದು, ಅವರ ಜೊತೆನೂ ಯಾರೂ ಬಂದಿರಲಿಲ್ಲ. ನಮ್ಮ ಡಿವೋರ್ಸ್​ ವಿಷಯ ಮಾಧ್ಯಮಗಳಿಗೆ ತಿಳಿಯುತ್ತಲೇ ಹತ್ತಾರು ಮೈಕ್​ಗಳು ನಮ್ಮ ಎದುರು ಬಂದು ನಿಂತವು. ಮೀಡಿಯಾದವರು ರಿಯಾಕ್ಷನ್​ ಕೇಳಲು ಶುರು ಮಾಡಿದರು. ಅಂಥ ಸಂದರ್ಭದಲ್ಲಿ ಒಂಟಿಯಾಗಿದ್ದ ನಿವೇದಿತಾ ಭಯ ಪಡುವುದು ಮಾಮೂಲಾಗಿತ್ತು. ಒಂದೇ ಸಮನೆ ಪ್ರಶ್ನೆಗಳ ಸುರಿಮಳೆ ಆಗುತ್ತಿದ್ದರೆ ಅದಕ್ಕೆ ಉತ್ತರಿಸುವುದು ಆಕೆಗೆ ಕಷ್ಟವಾಗುತ್ತಿತ್ತು. ಓರ್ವ ಹ್ಯೂಮನ್​ ಬೀಯಿಂಗ್​ ಆಗಿ ನಾನು ಆಕೆಯ ಕೈಹಿಡಿದುಕೊಂಡು ಬಂದೆ. ಒಂಟಿಯಾಗಿದ್ದ  ಆಕೆಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವುದು ನನ್ನ ಜವಾಬ್ದಾರಿಯಾಗಿತ್ತು. ಅದಕ್ಕಾಗಿಯೇ ಜೊತೆಯಾಗಿಯೇ ಬಂದೆ. ಅವರನ್ನು ಆಗ ರಕ್ಷಣೆ ಮಾಡುವುದು ನನ್ನ ಕರ್ತವ್ಯವಾಗಿತ್ತು' ಎಂದಿದ್ದಾರೆ. ಚಂದನ್​ ಶೆಟ್ಟಿ ನಿವೇದಿತಾ ಅವರನ್ನು ನಡೆಸಿಕೊಂಡ ಬಗೆ, ಅದಕ್ಕೆ ಅವರು ತಿಳಿಸಿರುವ ಕಾರಣದಿಂದ ಅಭಿಮಾನಿಗಳು ಭಾವುಕರಾಗಿದ್ದಾರೆ. 
 

ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಮ್ಮನನ್ನು ಪ್ರೀತಿಸಿ, ಅಣ್ಣನನ್ನು ಮದುವೆ ಆದಳು;‌ ಸೂರಜ್‌ ಸಿಂಗ್ Pavithra Bandhana Serial
ಶ್ರೀಮಂತರ ಮನೆಗೆ ಹೆಣ್ಣು ಮಕ್ಕಳನ್ನು ಸೊಸೆಯಾಗಿ ಕಳಿಸೋದೇ ಈ ತಾಯಿ ಗುರಿ; Gowri Kalyana Serial