ಡಾರ್ಲಿಂಗ್‌ ಜೊತೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ತನಿಷಾ ಕುಪ್ಪಂಡ; ಅಶ್ಲೀಲ ಕಾಮೆಂಟ್ ವೈರಲ್

Published : Jul 15, 2024, 02:47 PM IST
ಡಾರ್ಲಿಂಗ್‌ ಜೊತೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ತನಿಷಾ ಕುಪ್ಪಂಡ; ಅಶ್ಲೀಲ ಕಾಮೆಂಟ್ ವೈರಲ್

ಸಾರಾಂಶ

ಸಹೋದರನ ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ ತನಿಷಾ ಕುಪ್ಪಂಡ.....

ಕನ್ನಡ ಬೆಳ್ಳಿ ತೆರೆ ಮತ್ತು ಕಿರುತೆರೆ ಜನಪ್ರಿಯ ನಟಿ ತನಿಷಾ ಕುಪ್ಪಂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಯೂಟ್ಯೂಬರ್‌ ಜೊತೆ ನಡೆದ ವೈರಲ್ ಸಂದರ್ಶನ ನಂತರ ಬಿಗ್ ಬಾಸ್ ಸೀಸನ್‌10ರಲ್ಲಿ ಸ್ಪರ್ಧಿಸಿದ್ದರು. ತುಂಬಾ ರಗಡ್ ರಫ್ ಆಂಡ್ ತಫ್‌ ವ್ಯಕ್ತಿತ್ವ ವೀಕ್ಷಕರಿಗೆ ಸಖತ್ ಇಷ್ಟವಾಯ್ತು. ಅಲ್ಲದೆ ವರ್ತೂರ್ ಸಂತೋಷ್‌ ನೋವಿನಲ್ಲಿ ಇದ್ದಾಗ ತನಿಷಾ ಸಪೋರ್ಟ್ ಮಾಡಿದ ರೀತಿ ಆಕೆ ಒಳ್ಳೆ ಗುಣವನ್ನು ಮೆಚ್ಚಿದ್ದರು. ಹೀಗಾಗಿ ವರ್ತೂರ್ ಕರೆಯುತ್ತಿದ್ದ ಬೆಂಕಿ ಹೆಸರಿನಿಂದಲೇ ಆಕೆಯನ್ನು ಕರೆಯಲು ಶುರು ಮಾಡಿದ್ದರು. 

ವೈರಲ್ ಪೋಸ್ಟ್‌:

ಈಜುಕೊಳದಲ್ಲಿ ಹುಡುಗನೊಟ್ಟಿಗೆ ಸ್ವಿಮ್ಮಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ತನಿಷಾ ಅಪ್ಲೋಡ್ ಮಾಡಿದ್ದಾರೆ. 'ಹ್ಯಾಪಿ ಬರ್ತಡೇ ಡಾರ್ಲಿಂಗ್. ಖುಷಿಯಾಗಿರು ಹಾಗೂ ನಿನಗೆ ಎಲ್ಲರ ಪ್ರೀತಿ, ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿ ಸಿಗಲಿ. ಲವ್ ಯು ಸೋ ಮಚ್ ಅಪ್ಪು. ಮೊದೆಲು ಎಲ್ಲರೂ ತಮ್ಮ ಅಂತಿದ್ರು ಈವಾಗ ಅಣ್ಣ ಅಂತಿದ್ದಾರೆ. ಸ್ವಲ್ಪ ಕಮ್ಮಿ ಕಿತ್ತಾಡು. ಇಷ್ಟೇ ಲೈಫು. ಸಾಕು ಅಲ್ವಾ.....ಈ ವರ್ಷ ಚೆನ್ನಾಗಿರಲಿ' ಎಂದು ತನಿಷಾ ಬರೆದುಕೊಂಡಿದ್ದಾರೆ.

'ನಿನಗಾಗಿ' ಸೀರಿಯಲ್‌ನಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ; ಕೂದಲ ಕಲರ್‌ ನೋಡಿ ನೆಟ್ಟಿಗರು ಶಾಕ್

ಅಕ್ಕ ತಮ್ಮ ಆಗಿ ಇಷ್ಟು ಅಸಭ್ಯವಾಗಿ ವರ್ತಿಸಬಾರದು, ಸರಿಯಾಗಿ ಬಟ್ಟೆ ಧರಿಸಬೇಕು, ಪೋಸ್ಟ್ ಮಾಡುವ ಮುನ್ನ ಸಾಕಷ್ಟು ಯೋಚನೆ ಮಾಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಆಶ್ಲೀಲ ಕಾಮೆಂಟ್‌ಗಳು ಬಂದಿದ್ದು.. ಓದಿದ್ದರೆ ಬೇಸರ ಆಗುತ್ತದೆ. ದಯವಿಟ್ಟು ಹೀಗೆ ಕಾಮೆಂಟ್ ಮಾಡಬೇಡಿ ಸಂಬಂಧಗಳಿಗೆ ಕೆಟ್ಟ ಹೆಸರು ಕಟ್ಟಬೇಡಿ ಎಂದು ತನಿಷಾ ಫ್ಯಾನ್ಸ್ ಮನವಿ ಮಾಡಿಕೊಂಡಿದ್ದಾರೆ. 

ನಟಿಯರಿಗೆ ತೆರೆ ಮೇಲೆ ಅತಿ ಹೆಚ್ಚು ಕಿಸ್ ಕೊಟ್ಟ ಇಮ್ರಾನ್; ಹೆಂಡತಿ ಸಿಟ್ಟು ಕಮ್ಮಿ ಅಗೋದೆ ಕೈಗೆ ಈ ಗಿಫ್ಟ್ ಕೊಟ್ಮೇಲೆ!

ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ತನಿಷಾ ತಮ್ಮದೇ ಜ್ಯೂವೆಲರಿ ಶಾಪ್ ಓಪನ್ ಮಾಡಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳನ್ನು ಕರೆಸಿ ಅದ್ಧೂರಿ ಓಪನಿಂಗ್ ಮಾಡಿದ್ದಾರೆ. ಇದರ ಜೊತೆ ಅಪ್ಪು ಕಿಚನ್‌ ಎಂದ ಹೋಟೆಲ್ ಕೂಡ ಹೊಂದಿದ್ದಾರೆ. ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿದ್ದು ಸದ್ಯ ಯಾವ ಪ್ರಾಜೆಕ್ಟ್‌ ಅನೌನ್ಸ್‌ ಮಾಡಿಲ್ಲ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ