
ಕಿರುತೆರೆಯ ಸ್ಟಾರ್ ಜೋಡಿ, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನಕ್ಕೆ ಮುಂದಾಗಿದ್ದು, ಕೋರ್ಟ್ ಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈಗ ಅಂದು ಈ ಜೋಡಿ ಮೈಸೂರು ಯುವ ದಸರಾದಲ್ಲಿ ಮಾಡಿದ ಆ ಒಂದು ತಪ್ಪು ಈಗ ಶಾಪವಾಗಿ ಬದಲಾಯ್ತಾ ಎಂದು ಪ್ರಶ್ನೆಗಳು ಹುಟ್ಟಿಕೊಂಡಿದೆ. ಅದಕ್ಕೆ ಕಾರಣವಿದೆ.
ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನದಲ್ಲಿ ಬಿರುಕು, ಡಿವೋರ್ಸ್‌ಗೆ ಅರ್ಜಿ ಹಾಕಿದ ಸೆಲೆಬ್ರೆಟಿ!
2019ರ ನವೆಂಬರ್ ನಲ್ಲಿ ಮೈಸೂರು ಯುವ ದಸರಾದ ವೇದಿಕೆಯಲ್ಲಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ರೀಲ್ಸ್ ಸ್ಟಾರ್ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ಸೋಷಿಯಲ್ ಮೀಡಿಯಾ ಮಾತ್ರವಲ್ಲ ಇಡೀ ಕರ್ನಾಟಕ ಈ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು. ಆಗ ವಿರೋಧ ವ್ಯಕ್ತಪಡಿಸಿದ್ದಕ್ಕೆ ನಿವೇದಿತಾ ಗೌಡ ಸ್ಪಷ್ಟನೆ ನೀಡಿ, ನಾನು ಯಾವತ್ತಿದ್ದರೂ ಚಂದನ್ ನನ್ನೇ ಮದುವೆಯಾಗುವುದು. I Love him so much. ಅವನು ಪ್ರಪೋಸ್ ಮಾಡಿದ್ದು ನನ್ನ ಕನಸಲ್ಲಿ ನಡೆದಂತಿದೆ. ಇದರಿಂದ ಇನ್ನೂ ಹೊರ ಬರಲು ಸಾಧ್ಯವಾಗಿಲ್ಲ. ನಾವು ವೇದಿಕೆ ಮೇಲೆ ಎಂಗೇಜ್ ಮೆಂಟ್ ಮಾಡಿಕೊಂಡಿಲ್ಲ. ಅವನು ಪ್ರಪೋಸ್ ಮಾಡ್ದ. ನಾನು ಒಪ್ಪಿಕೊಂಡಿದ್ದೇನೆ ಅಷ್ಟೇ’ ಎಂದು ಹೇಳಿ ಸಮರ್ಥನೆ ಮಾಡಿಕೊಂಡಿದ್ದರು. ಬಳಿಕ ವ್ಯಾಪಕ ವಿರೋಧದ ನಂತರ ಜನತೆಯ ಕ್ಷಮೆ ಕೇಳಿದ್ದರು.
ಬಿಗ್ ಬಾಸ್ ಟು ಡಿವೋರ್ಸ್..'ಬೊಂಬೆ..' ಬಾಳಿನಲ್ಲಿ ವಿಲನ್ ಆಗಿದ್ಯಾರು?
ಈ ಬಗ್ಗೆ ಆಂದಿನ ಸಚಿವರೊಬ್ಬರು ಕೆಂಡಾಮಂಡಲವಾಗಿದ್ದರು. ಇದು ಅಕ್ಷ್ಯಮ್ಮ ಅಪರಾಧ. ಯುವ ದಸರಾ ವೇದಿಕೆ ಚಾಮುಂಡೇಶ್ವರಿಯ ದೇವರ ಸನ್ನಿಧಿ. ಆ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ. ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದಿದ್ದರು.
ಬಿಗ್‌ಬಾಸ್ 5ರ ಕ್ಯೂಟ್ ಜೋಡಿಯೆಂದೇ ಖ್ಯಾತಿ ಪಡೆದಿದ್ದ ಈ ಜೋಡಿ ಟಾಪ್ 5 ರಲ್ಲಿ ಇತ್ತು. ಬಳಿಕ ಚಂದನ್ ಶೆಟ್ಟಿ ಆ ಸೀಸನ್ ವಿನ್ನರ್ ಆಗಿದ್ದರು. ಬಿಗ್‌ಬಾಸ್ ಮುಗಿದ ಬಳಿಕ ಪ್ರೀತಿಯಲ್ಲಿ ಬಿದ್ದ ಜೋಡಿ ಬಳಿಕ ಮೈಸೂರಿನಲ್ಲಿ ಅಕ್ಟೋಬರ್ 21, 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಫೆ. 26, 2020 ರಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿತ್ತು. ಇದೀಗ ಬರೋಬ್ಬರಿ ನಾಲ್ಕೂವರೆ ವರ್ಷಗಳ ನಂತರ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.