ಪತ್ನಿಯನ್ನು ಯಾಮಾರಿಸೋದು ಹೇಗೆಂದು ನಟ ಲೋಕೇಶ್ ಟಿಪ್ಸ್​​! ಹೇಗಿದೆ ಪ್ಲ್ಯಾನ್​ ಕೇಳ್ತಿದೆ ತಾರಾ ಜೋಡಿ

By Suchethana D  |  First Published Jun 7, 2024, 1:54 PM IST


ರಾಜಾ ರಾಣಿ ರೀಲೋಡೆಡ್​ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿರೋ ನಟ ಲೋಕೇಶ್ ಬಸವಟ್ಟಿ ಪತ್ನಿ  ರಚನಾ ದಶರಥ ಅವರನ್ನು ಯಾಮಾರಿಸಿದ್ದು ಹೀಗೆ...  
 


ಪತ್ನಿಯನ್ನು ಯಾಮಾರಿಸೋದು ಅಷ್ಟು ಸುಲಭದ ಕೆಲಸವಲ್ಲ ಎಂದು ಮದುವೆಯಾದ ಪ್ರತಿ ಪುರುಷನಿಗೂ ಗೊತ್ತು ಬಿಡಿ. ಆದರೂ ಏನೇನೋ ಧೈರ್ಯ ಮಾಡಿ ಹೆಂಡತಿಯನ್ನು ಯಾಮಾರಿಸೋಕೆ ನೋಡುತ್ತಾರೆ. ಅದರಲ್ಲಿಯೂ ಷಾಪಿಂಗ್​ ವಿಷ್ಯ ಬಂದರಂತೂ ಹಲವು ಮಹಿಳೆಯರದ್ದು ಮುಗಿದೇ ಹೋಯ್ತು ಕಥೆ. ಮಹಿಳೆಯರಿಗೂ ಷಾಪಿಂಗ್​ಗೂ ಅದೇನೋ ಬಿಡಲಾರದ ನಂಟು. ತಮಗಾಗಿ ಅಲ್ಲದಿದ್ದರೂ ಮನೆಯವರಿಗಾಗಿಯಾದರೂ ಒಂದಿಷ್ಟು ಷಾಪಿಂಗ್​ ಮಾಡುವ ಹಂಬಲ ಹಲವು ಮಹಿಳೆಯರದ್ದು. ತಾವು ದುಡಿಯುತ್ತಿದ್ದರೂ ಷಾಪಿಂಗ್​ನಲ್ಲಿ ಗಂಡನ ಹಣ ಖರ್ಚು ಮಾಡಿಸುವುದು ಎಂದರೆ ಇನ್ನಿಲ್ಲದ ಖುಷಿ. ಇದೇ ಕಾರಣಕ್ಕೆ ಪತ್ನಿಯನ್ನು ಒಮ್ಮೆ ಷಾಪಿಂಗ್​ಗೆ ಕರೆದುಕೊಂಡು ಹೋಗೋದು ಎಂದರೆ ಗಂಡಸರಿಗೆ ಢವಢವ.

ಇದೀಗ ಕಿರುತೆರೆ ನಟ ಲೋಕೇಶ್ ಬಸವಟ್ಟಿ ಅವರು ತಮ್ಮ ಪತ್ನಿ, ನಟಿ ರಚನಾ ದಶರಥ ಅವರನ್ನು ಹೇಗೆ ಯಾಮಾರಿಸಿದ್ರು ಎನ್ನೋ ವಿಡಿಯೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​  ಮಾಡಿದೆ. ರಾಜಾ ರಾಣಿ ರೀಲೋಡೆಡ್​ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದೆ ಈ ಜೋಡಿ. ನೀವು ನಿಮ್ಮ ಹೆಂಡ್ತಿಯನ್ನು ಯಾಮಾರಿಸೋಕೆ ಏನ್​ ಮಾಡ್ತೀರಿ ಹೇಳಿ ಎಂದು ಇದರಲ್ಲಿ ಕೇಳಲಾಗಿದೆ. ಅಷ್ಟಕ್ಕೂ ಇದರಲ್ಲಿ ಲೋಕೇಶ್​ ಅವರು ಪತ್ನಿಯ ಜೊತೆ ಹೊರಗಡೆ ಕಾಲಿಟ್ಟಾಗ, ಬಟ್ಟೆಗೆ ಇಷ್ಟು, ಬ್ಯೂಟಿ ಪ್ರಾಡೆಕ್ಟ್​ಗೆ ಇಷ್ಟು, ಅದಕ್ಕೆ ಇಷ್ಟು, ಇದಕ್ಕೆ ಇಷ್ಟು ಎಂಬೆಲ್ಲಾ ಖರ್ಚು ಕಾಣಿಸುತ್ತದೆ. ಅದಕ್ಕಾಗಿ ಲೋಕೇಶ್​ ಅವರು ಒಂದು ಪ್ಲ್ಯಾನ್​ ಮಾಡ್ತಾರೆ. ಅದರ ಪ್ರಕಾರ ಅವರು ಪತ್ನಿಯನ್ನು ಮನೆಯಲ್ಲಿಯೇ ಬಿಟ್ಟು ಹೊರಗಡೆ ಹೋಗ್ತಾರೆ. ಅಷ್ಟೇ. ತಮಾಷೆಯ ಈ ವಿಡಿಯೋಗೆ ಇದಾಗಲೇ ನೂರಾರು ಮಂದಿ ಕಮೆಂಟ್​ ಮಾಡಿದ್ದಾರೆ. ಅಂದಹಾಗೆ ನಿಮ್ಮ ಅನುಭವನೂ ಹಂಚಿಕೊಳ್ಳಿ ಎಂದು ವಾಹಿನಿ ಹೇಳಿದೆ.

Tap to resize

Latest Videos

'ಕೋಟಿ' ಚಿತ್ರದ ನಾಯಕಿ ಮೋಕ್ಷಾ ಒಂದು ವಾರ ಸ್ನಾನ ಮಾಡಲ್ವಂತೆ- ನಟಿ ಕೊಟ್ಟ ಕಾರಣ ಹೀಗಿದೆ ನೋಡಿ...

ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಈ ಜೋಡಿ ಕಿರುತೆರೆ ಕಲಾವಿದರು. ರಚನಾ ಅವರು ಸ್ಯಾಂಡಲ್​ವುಡ್​ ನಟಿ ಕೂಡ. ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾರ್ವತಿ ಪರಮೇಶ್ವರ  ಸೇರಿದಂತೆ ಹಲವು ಸೀರಿಯಲ್ ನಟಿಸಿದ್ದಾರೆ ಲೋಕೇಶ್ ಬಸವಟ್ಟಿ. ಇವರ ಜೊತೆ ಕೆಲವು ಸೀರಿಯಲ್​ಗಳಲ್ಲಿ ಕಾಣಿಸಿಕೊಂಡವರು ರಚನಾ ದಶರಥ್​ ಅವರು. ಇವರಿಬ್ಬರ ಮದುವೆಯಾದಾಗ ಇದು ಲವ್​ ಮ್ಯಾರೇಜ್ ಎಂದೇ ಹೇಳಲಾಗಿತ್ತು. ಇದಕ್ಕೂ ಮುನ್ನ ಇವರು ಎಂಗೇಜ್​ಮೆಂಟ್​ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಆ ಸಂದರ್ಭದಲ್ಲಿ ಲವ್​ ವಿಷಯ ಬೆಳಕಿಗೆ ಬಂದಿತ್ತು. ಆದರೆ ಕೊನೆಗೆ ಜೋಡಿ ತಮ್ಮದು ಲವ್​ ಮ್ಯಾರೇಜ್​ ಅಲ್ಲ,  ಪಕ್ಕಾ ಅರೇಂಜ್ ಮ್ಯಾರೇಜ್ ಎಂದಿತ್ತು.

 `ಗೌರಿಪುರದ ಗಯ್ಯಾಳಿಗಳು’ ಎಂಬ ಸೀರಿಯಲ್‌ನಲ್ಲಿ ರಚನಾ ಮತ್ತು ಲೋಕೇಶ್ ಇಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ರಚನಾ ಅವರನ್ನು ನೋಡಿದ ಲೋಕೇಶ್​ ಅವರ ಪಾಲಕರಿಗೆ ಅವರ ನಡೆ, ನುಡಿ ಇಷ್ಟವಾಯ್ತಂತೆ. ಅವರೇ ಮದುವೆಯ ಪ್ರಸ್ತಾಪ ಇಟ್ಟಿದ್ದಾರೆ. ಆಗ ರಚನಾ ಅವರು, ತಮ್ಮಿಬ್ಬರ ಜಾತಿ ಬೇರೆ ಬೇರೆ ಎಂದಿದ್ದಾರೆ. ಅಷ್ಟಕ್ಕೂ  ರಚನಾ  ನೇಪಾಳಿ ಕುಟುಂಬದ ಹುಡುಗಿ, ಲೋಕೇಶ್​  ಲಿಂಗಾಯತರು. ಆದ್ದರಿಂದ ತಮ್ಮ ಕುಟುಂಬದ  ನಿರ್ಧಾರವೇ ಅಂತಿಮ ಎಂದಿದ್ದರು ರಚನಾ. ಅದಾದ ಬಳಿಕ ಎರಡೂ ಕುಟುಂಬಗಳ ಮಾತನಾಡಿ ಮದುವೆಗೆ ಒಪ್ಪಿಗೆ ನೀಡಿದ ಬಳಿಕ ಮದುವೆಯಾಗಿದ್ದಾರೆ.   2023 ಜನವರಿಯಲ್ಲಿ ಇವರ ಮದುವೆಯಾಗಿದ್ದು, ಇದೀಗ ಇಬ್ಬರೂ ಮಗುವಿನ ಪಾಲಕರಾಗಿದ್ದಾರೆ.  ರಚನಾ  ಮದುವೆ ನಂತರವೂ ಚಿತ್ರರಂಗದಲ್ಲಿ ಮುಂದುವರೆದಿದ್ದು,  `ಅಗ್ರಸೇನಾ’ ಮತ್ತು ಎಬಿ ಪಾಸಿಟಿವ್ ಚಿತ್ರಗಳಲ್ಲಿ ಪಾತ್ರ ಮಾಡಿದ್ದಾರೆ.  

ಅತ್ತೆ- ಸೊಸೆ ಜಗಳ ಪರಿಹಾರಕ್ಕೆ ಔಷಧವೇನು? ನಟ ಜಗ್ಗೇಶ್, ರಮೇಶ್​​ ಪರಿಹಾರ ವರ್ಕ್​ಔಟ್​ ಆಗತ್ತಾ?

click me!