'ಕೋಟಿ' ಚಿತ್ರದ ನಟಿ ಮೋಕ್ಷಾ ಕುಶಾಲ್ ಒಂದು ವಾರ ಸ್ನಾನ ಮಾಡಲ್ವಂತೆ. ಸುದೀಪ್ ಮುಂದೆ ಅವರು ಕೊಟ್ಟ ಕಾರಣ ಏನು?
ಕೊಡಗಿನ ಬೆಡಗಿ ನಟಿ ಮೋಕ್ಷಾ ಕುಶಾಲ್ (Moksha Kushal) ಇದೀಗ ಕೋಟಿ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಪ್ರೊಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ನಿರ್ದೇಶಿಸುತ್ತಿರುವ ಮತ್ತು ನಟ ರಾಕ್ಷಸ ಡಾಲಿ ಧನಂಜಯ್ ನಟಿಸುತ್ತಿರುವ ಚಿತ್ರ ಇದಾಗಿದೆ. ಕೆಲವು ಕನ್ನಡ ಸಿನಿಮಾಗಳಲ್ಲಿ, ಶಾರ್ಟ್ ಫಿಲಂಗಳು, ಫೀಚರ್ ಫಿಲಂ ಮತ್ತು ಜಾಹೀರಾತುಗಳಲ್ಲಿ ಈಗಾಗಲೇ ನಟಿಸಿರುವ ಮೋಕ್ಷಾ ಅವರು ಇದೀಗ ಕೋಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಿಪುರಾಣ (Adipurana) ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಬೆಡಗಿ, ನವರತ್ನ, ಮೋಡ ಕವಿದ ವಾತಾವರಣ ಸಿನಿಮಾಗಳಲ್ಲಿ ಇದಾಗಲೇ ನಟಿಸಿದ್ದು, ಕೋಟಿಯಲ್ಲಿ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ.
ಇದೀಗ ಕಲರ್ಸ್ ಕನ್ನಡ ವೇದಿಕೆಯಲ್ಲಿ ನಟಿ ಇನ್ನೊಂದು ವಾರ ಸ್ನಾನ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ! ಅಷ್ಟಕ್ಕೂ ನಟಿ ಹೀಗೇಕೆ ಹೇಳಿದರು ಎಂದರೆ ಮತ್ತಿನ್ನೇನೂ ಅಲ್ಲ... ಕೋಟಿ ಚಿತ್ರದ ಪ್ರೊಮೋಷನ್ಗಾಗಿ ಕಲರ್ಸ್ ಕನ್ನಡ ವೇದಿಕೆಯಲ್ಲಿ ಕೋಟಿ ನಮನ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕೆ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿದ್ದರು. ಈ ಸಮಯದಲ್ಲಿ ಕೋಟಿ ನಾಯಕಿ ಮೋಕ್ಷಾ ಅವರನ್ನು ವೇದಿಕೆಯ ಮೇಲೆ ಕರೆಯಲಾಗಿದೆ. ಮೋಕ್ಷಾ ಬನ್ನಿ ಎಂದು ಸುದೀಪ್ ಹೇಳುತ್ತಿದ್ದಂತೆಯೇ ಮೋಕ್ಷಾ ಅವರು, ಇದಾಗಲೇ ನಿಮ್ಮನ್ನು ನೋಡಿ ನರ್ವಸ್ ಆಗಿದ್ದೇನೆ. ನನ್ನ ಹೆಸರನ್ನು ಕರಿಯಬೇಡಿ ಎಂದಿದ್ದಾರೆ. ನಂತರ ಸುದೀಪ್ ಅವರಲ್ಲಿ ಹ್ಯಾಂಡ್ಷೇಕ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವಯಸ್ಸಲ್ಲೂ ಬೇಕಿತ್ತಾ ಇದೆಲ್ಲಾ ಅನ್ನೋರಿಗೇ ಸವಾಲೆಸೆದು ರಾಜಾ ರಾಣಿ ವೇದಿಕೆ ಮೇಲೆ ರೀಲ್ಸ್ ಜೋಡಿ!
ಸುದೀಪ್ ಅವರು ಹ್ಯಾಂಡ್ಷೇಕ್ ಮಾಡುತ್ತಿದ್ದಂತೆಯೇ, ಆ್ಯಂಕರ್ ಅಕುಲ್ ಬಾಲಾಜಿಯವರು ಹಗ್ ಮಾಡಿ ಎಂದಿದ್ದಾರೆ. ಅಲ್ಲಿ ಒಂದಿಷ್ಟು ತಮಾಷೆ ನಡೆದಿದೆ. ನಂತರ ಎಲ್ಲರೂ ಫೋರ್ಸ್ ಮಾಡ್ತಾರಂತ ಹಗ್ ಮಾಡುತ್ತಿದ್ದೇನೆ ಎನ್ನುತ್ತಲೇ ನಟಿ ಮೋಕ್ಷಾ ಸುದೀಪ್ ಅವರನ್ನು ಹಗ್ ಮಾಡಿದ್ದಾರೆ. ಸುದೀಪ್ ಅವರನ್ನು ಅಪ್ಪಿಕೊಂಡ ಹಿನ್ನೆಲೆಯಲ್ಲಿ ನಟಿ ತಮಾಷೆಗಾಗಿ ಇನ್ನೊಂದು ವಾರ ನಾನು ಸ್ನಾನ ಮಾಡುವುದಿಲ್ಲ ಎಂದಿದ್ದಾರೆ ಅಷ್ಟೇ. ಆಗ ನಟಿಯ ಕಾಲೆಳೆದ ಅಕುಲ್ ಅವರು ಇವತ್ತು ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಇದು ತಮಾಷೆಗಾಗಿ ನಟಿ ಹೇಳಿದ್ದು.
ನಂತರ ಸುದೀಪ್ ಅವರಲ್ಲಿ ಮೋಕ್ಷಾ ನಿಮ್ಮ ತೇಜಸ್ಸಿನಿಂದಾಗಿ ಸೂಪರ್ಸ್ಟಾರ್ ಫೀಲಿಂಗ್ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸುದೀಪ್ ಅವರು ನನಗೆ ನಿಜವಾಗ್ಲೂ ಗೊತ್ತಿಲ್ಲ. ಎಲ್ಲರೂ ಹಾಗೇ ಹೇಳುತ್ತಾರೆ. ಅವರು ಹೇಳಿದಾಗ ನಾನು ನಗುತ್ತೇನೆ ಅಷ್ಟೇ ಅಂದಿದ್ದಾರೆ. ಇನ್ನು ಮೋಕ್ಷಾ ಕುರಿತು ಹೇಳುವುದಾದರೆ, ಕೊಡಗಿನಲ್ಲೇ ಹುಟ್ಟಿ ಬೆಳೆದ ಮೋಕ್ಷಾ, ಸದ್ಯ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ಇಂಜಿನಿಯರಿಂಗ್ ಪದವೀಧರೆ. ಬಾಲ್ಯದಿಂದಲೇ ನಟನೆ ಕಡೆಗೆ ಒಲವು ಹೆಚ್ಚಂತೆ, ಹಾಗಾಗಿ, ಶಾರ್ಟ್ ಸಿನಿಮಾ, ಫೀಚರ್ ಫಿಲಂಗಳಲ್ಲಿ ಅಭಿನಯಿಸುತ್ತಾ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕೋಟಿ ಚಿತ್ರದಲ್ಲಿ ಮೋಕ್ಷಾ ನವಮಿ ಎಂಬ ಚಾರ್ಟೆಡ್ ಅಕೌಂಟೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದು ಪಕ್ಕದ್ಮನೆ ಹುಡುಗಿಯಂತೆ ತುಂಬಾ ಸರಳವಾದ ಪಾತ್ರವಂತೆ. ಸದಾ ಚಟುವಟಿಕೆಯಿಂದ ಕೂಡಿರುವ ಆ ಬಬ್ಲಿ ಪಾತ್ರ ಇದಾಗಿದೆ. ಈ ಪಾತ್ರ ನನಗೆ ಬಹಳ ಹಿಡಿಸಿತು, ಅದರಲ್ಲೂ ಧನಂಜಯ್ (Doly Dhananjay) ಜೊತೆ ನಟಿಸುವ ಅವಕಾಶ ಸಿಕ್ಕಿರೋದು ಬಹಳ ಖುಷಿ, ಯಾಕಂದ್ರೆ ನಾನು ಅವರ ದೊಡ್ಡ ಅಭಿಮಾನಿ ಎನ್ನುತ್ತಾರೆ ಮೋಕ್ಷ.
ಅತ್ತೆ- ಸೊಸೆ ಜಗಳ ಪರಿಹಾರಕ್ಕೆ ಔಷಧವೇನು? ನಟ ಜಗ್ಗೇಶ್, ರಮೇಶ್ ಪರಿಹಾರ ವರ್ಕ್ಔಟ್ ಆಗತ್ತಾ?