ಈ ಶುಕ್ರವಾರವೇ ಜೊತೆ ಜೊತೆಯಲಿ ವೈಂಡ್‌ಅಪ್, ಮೇಘಾ ಶೆಟ್ಟಿ ಈ ಬಗ್ಗೆ ಏನಂತಾರೆ?

Published : May 17, 2023, 11:08 AM IST
ಈ ಶುಕ್ರವಾರವೇ ಜೊತೆ ಜೊತೆಯಲಿ ವೈಂಡ್‌ಅಪ್, ಮೇಘಾ ಶೆಟ್ಟಿ ಈ ಬಗ್ಗೆ ಏನಂತಾರೆ?

ಸಾರಾಂಶ

ಜೀ ಕನ್ನಡದ ಜನಪ್ರಿಯ ಸೀರಿಯಲ್ ಜೊತೆಜೊತೆಯಲಿ ಈ ಶುಕ್ರವಾರವೇ ವೈಂಡ್‌ಅಪ್ ಆಗ್ತಿದೆ. ಈ ಸೀರಿಯಲ್‌ನ ಅನು ಸಿರಿಮನೆ ಪಾತ್ರದಲ್ಲಿ ಮಿಂಚಿದ ಮೇಘಾ ಶೆಟ್ಟಿ ಈ ಬಗ್ಗೆ ಏನಂತಾರೆ?  

ಜೀ ಕನ್ನಡದ ಬಲು ಜನಪ್ರಿಯ ಸೀರಿಯಲ್ 'ಜೊತೆ ಜೊತೆಯಲಿ'. ಆರಂಭದಲ್ಲಿ ಈ ಸೀರಿಯಲ್‌ನ ಅನಿರುದ್ಧ ಹಾಗೂ ಮೇಘಾ ಶೆಟ್ಟಿ ಜೋಡಿ ಸಖತ್ ಫೇಮಸ್ ಆಗಿತ್ತು. ಈ ಸೀರಿಯಲ್ ವಿವಾದ ಕೇಂದ್ರವೂ ಆಗಿತ್ತು. ಇದೀಗ ಈ ಸೀರಿಯಲ್ ವೈಂಡ್‌ಅಪ್‌ ಆಗ್ತಿದೆ. ಈ ಶುಕ್ರವಾರವೇ ಕೊನೆಯ ಸಂಚಿಕೆ ಪ್ರಸಾರ ಆಗುತ್ತಿದೆ. ಎರಡು ದಿನಗಳ ಹಿಂದೆಯೇ ಶೂಟಿಂಗ್ ಕಂಪ್ಲೀಟ್ ಆಗಿದೆ. ನಾಲ್ಕು ವರ್ಷಗಳ ಈ ಮಹಾ ಕಥೆಗೆ ಈ ಶುಕ್ರವಾರ ಕೊನೆಯ ತೆರೆ ಬೀಳಲಿದೆ. ಅನು ಸಿರಿಮನೆ ಹಾಗೂ ಆರ್ಯವರ್ಧನ್ ಮತ್ತೆ ಪ್ರೇಮದಲ್ಲಿ ಒಂದಾಗುವುದರೊಂದಿಗೆ ಈ ಕಥೆ ಮುಕ್ತಾಯಗೊಳ್ಳಲಿದೆ. ಶುರುವಿನಲ್ಲಿ ನಂಬರ್ 1 ಸೀರಿಯಲ್ ಆಗಿ ಗುರುತಿಸಿಕೊಂಡಿದ್ದ ಜೊತೆ ಜೊತೆಯಲಿ ಅನೇಕ ಕಾಲದವರೆಗೆ ಅದೇ ರೇಟಿಂಗ್ ಮೈಂಟೇನ್ ಮಾಡಿದ್ದು, ಟಾಪ್ ಐದರೊಳಗೆ ಒಂದು ಸೀರಿಯಲ್ ಆಗಿ ಗುರುತಿಸಿಕೊಂಡಿದ್ದು ಸಣ್ಣ ವಿಚಾರ ಏನಲ್ಲ. ಆದರೆ ಒಂದು ಹಂತದಲ್ಲಿ ಈ ಸೀರಿಯಲ್ ಟಿಆರ್‌ಪಿ ಗಣನೀಯವಾಗಿ ಕುಸಿದಿತ್ತು. ಅದರಲ್ಲೂ ಅನಿರುದ್ಧ ಬಿಟ್ಟ ಮೇಲೆ ಸೀರಿಯಲ್ ಬಗ್ಗೆ ನೆಗೆಟಿವ್ ಕಮೆಂಟ್‌ಗಳೇ ಕೇಳಿ ಬರುತ್ತಿದ್ದವು.

'ಆ ನಾಲ್ಕು ವರ್ಷ ಈ ಸೀರಿಯಲ್‌ನಲ್ಲಿ ನಟಿಸಿದ್ದು ಮರೆಯಲಾಗದ ಅನುಭವ. ಈ ಸೀರಿಯಲ್‌ನ ಮೊದಲ ಶಾಟ್‌ನಲ್ಲೂ ನಾನಿದ್ದೆ. ಕೊನೆಯ ಶಾಟ್‌ ಸಹ ನನ್ನದೇ. ಬಹುಶಃ ಕಲಾವಿದೆಯೊಬ್ಬಳಿಗೆ ಇಂಥ ಅವಕಾಶ ಸಿಗೋದು ಅಪರೂಪದಲ್ಲಿ ಅಪರೂಪ' ಅಂತ ಮೇಘಾ ಶೆಟ್ಟಿ ತಿಳಿಸಿದ್ದಾರೆ. ಎರಡು ದಿನದ ಹಿಂದೆ ಅವರ ಭಾಗದ ಶೂಟಿಂಗ್‌ ಮುಕ್ತಾಯವಾಗಿದೆ. ಇದೇ ಮೇ ೧೯ಕ್ಕೆ ಸೀರಿಯಲ್‌ನ ಕೊನೆಯ ಎಪಿಸೋಡ್ ಪ್ರಸಾರವಾಗಲಿದೆ. 'ಇನ್ನೂ ಸೀರಿಯಲ್ ಗುಂಗಿನಲ್ಲಿದ್ದೇನೆ. ಇದು ಮುಗಿದ ಮೇಲೆ ಸಿನಿಮಾ ಬಗ್ಗೆ ಯೋಚಿಸುತ್ತೇನೆ. ಒಳ್ಳೊಳ್ಳೆ ಸ್ಕ್ರಿಪ್ಟ್‌ ಗಳು ಬರುತ್ತಿವೆ. ಶೀಘ್ರ ಸಿನಿಮಾ ಬಗ್ಗೆ ಅಪ್‌ಡೇಟ್ ಮಾಡುತ್ತೇನೆ' ಅಂತ ಮೇಘಾ ಶೆಟ್ಟಿ ಹೇಳುತ್ತಾರೆ. ಯಾವುದೋ ಕ್ಷೇತ್ರದತ್ತ ಹೋಗಬೇಕು ಅನ್ನೋ ಗುರಿಯಲ್ಲಿದ್ದ ತನಗೆ ಈ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿದ್ದು, ಆ ಬಳಿಕ ಅನು ಸಿರಿಮನೆ ಪಾತ್ರ ತಂದುಕೊಟ್ಟ ಜನಪ್ರಿಯತೆ ಈ ಎಲ್ಲದರ ಬಗ್ಗೆ ಅಚ್ಚರಿ ಇದೆ, ಖುಷಿಯೂ ಇದೆ. ಆಕಸ್ಮಿಕವಾಗಿ ಬಂದ ಅವಕಾಶ ಬದುಕಿನ ಗತಿಯನ್ನೇ ಬದಲಿಸಿದೆ ಅಂತ ಮೇಘಾ ಹೇಳ್ತಾರೆ.

ತ್ರಿಪುರ ಸುಂದರಿ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ಹರ್ಷ, ರಾಶಿ

ಎಲ್ಲವನ್ನೂ ದೇವರ ಸನ್ನಿಧಾನಕ್ಕೆ ಬಿಟ್ಟ ಅನು ಸಿರಿಮನೆಯನ್ನ ಕೊನೆಗೂ ದೇವರೇ ಆರ್ಯವರ್ಧನನ ಜೊತೆ ಸೇರಿಸಿ ಆಶೀರ್ವಾದ ಮಾಡುವ ರೀತಿಯಲ್ಲಿ ಸೀರಿಯಲ್ ವೈಂಡ್ ಅಪ್(Windup) ಆಗಲಿದೆ. ಇಪ್ಪತ್ತರ ಹರೆಯದ ಅನು ಸಿರಿಮನೆ, ನಲವತ್ತು ದಾಟಿದ ಮಧ್ಯ ವಯಸ್ಕ ಆರ್ಯವರ್ಧನ ಜೊತೆಗಿನ ಪ್ರೀತಿ(Love), ಪ್ರೇಮ, ವಿರಹ, ವಿರಸ, ಅಗಲಿಕೆ ಇತ್ಯಾದಿಗಳಿಂದ ತಿರುವು ಮೇಲೆ ತಿರುವು(Twist) ಪಡೆಯುತ್ತಿದ್ದ ಈ ಸೀರಿಯಲ್ ಸಾವಿರ ಎಪಿಸೋಡ್ ದಾಖಲಿಸುವ ಉದ್ದೇಶ ಹೊಂದಿತ್ತು. ಆದರೆ ಟಿಆರ್ ಪಿ ಕುಸಿತ, ವೀಕ್ಷಕರ ನೆಗೆಟಿವ್ ಅಭಿಪ್ರಾಯ, ಇನ್ನೂ ಕೆಲವು ಕಾರಣಗಳಿಂದ ಅಂದುಕೊಂಡ ಗುರಿ ಸಾಧಿಸೋದು ಸಾಧ್ಯವಾಗಿರಲಿಲ್ಲ. ಆದರೆ ನಾಲ್ಕು ವರ್ಷ ಒಂದು ಸೀರಿಯಲ್ ರನ್ ಆಗೋದು ಸಣ್ಣ ಮಾತಲ್ಲ. ಇದಕ್ಕೆ ಈ ಸೀರಿಯಲ್ ಟೀಮ್‌ ಅನ್ನು ಅಭಿನಂದಿಸಲೇ ಬೇಕು.

ಮೇ 22 ರಿಂದ ಜೊತೆ ಜೊತೆಯಲಿ ಸೀರಿಯಲ್ ಜಾಗದಲ್ಲಿ ಸೌಭಾಗ್ಯವತಿ ಭವ ಅನ್ನುವ ಹೊಸ ಸೀರಿಯಲ್ ಪ್ರಸಾರವಾಗಲಿದೆ. ಮದುವೆ, ಕನ್‌ಫ್ಯೂಶನ್‌(Confusion), ಲಗ್ನಪತ್ರಿಕೆಯಲ್ಲಿ ಬದಲಾಗೋ ವಧೂವರರ ಹೆಸರು, ಬದಲಾದವರೇ ಒಂದಾಗುವ ವಿಚಿತ್ರ ಘಟನೆಗಳ ಸುತ್ತ ಈ ಹೊಸ ಸೀರಿಯಲ್ ಇದೆ. ನಮ್ಮನೆ ಯುವರಾಣಿ ಸೀರಿಯಲ್ ಖ್ಯಾತಿಯ ಸಾಕೇತ್ ಹೀರೋ, ಇದೊಂದು ಡಬಿಂಗ್(Dubbing) ಸೀರಿಯಲ್. ತೆಲುಗಿಂದ ಡಬ್ ಆಗಿರೋ ಈ ಸೀರಿಯಲ್ ಯಾವ ರೀತಿ ವೀಕ್ಷಕರನ್ನು ರಂಜಿಸುವುದೋ ಕಾದು ನೋಡಬೇಕಿದೆ.

ರಾಧಿಕಾ ಸೀರಿಯಲ್‌ಗೆ ಬಂದ ಹೊಸ ನಾಯಕಿ ಇವರೇ ನೋಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ
Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್